For Quick Alerts
ALLOW NOTIFICATIONS  
For Daily Alerts

ಕಾಫಿಯ ವಿಚಾರದಲ್ಲಿ ಮಾಡುವ ಈ ತಪ್ಪುಗಳು ಮೆದುಳಿಗೆ ತರಬಹುದು ಕುತ್ತು!

|

ಕಾಫಿ ಸೇವನೆಗೆ ಸಂಬಂಧಿಸಿದಂತೆ, ನಮ್ಮಲ್ಲಿ ಸಾಕಷ್ಟು ವಿರೋಧಾಭಾಸಗಳಿವೆ. ವಿಜ್ಞಾನದ ಪ್ರಕಾರ, ಕಾಫಿ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದ್ದರೂ, ಇದು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಕಾಫಿ ನಿಮಗೆ ಎಚ್ಚರವಾಗಿರಲು ಸಹಾಯ ಮಾಡುವುದಲ್ಲದೇ, ನಿಮ್ಮ ಮನಸ್ಥಿತಿ, ಏಕಾಗ್ರತೆಯ ಮಟ್ಟವನ್ನು ಸುಧಾರಿಸಿ, ಮೆದುಳಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ಆದರೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು ಲಭ್ಯವಾಗುವುದು, ಕಾಫಿಯನ್ನು ಸರಿಯಾಗಿ ಕುದಿಸಿದರೆ ಮಾತ್ರ. ಹಾಗಾದರೆ ಉತ್ತಮ ಆರೋಗ್ಯಕ್ಕಾಗಿ ಕಾಫಿಯನ್ನು ಹೇಗೆ ತಯಾರಿಸಬೇಕು? ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ.

ನಿಮ್ಮ ಮೆದುಳಿಗೆ ಕಾಫಿ ಹೇಗೆ ಪ್ರಯೋಜನಕಾರಿ?:

ನಿಮ್ಮ ಮೆದುಳಿಗೆ ಕಾಫಿ ಹೇಗೆ ಪ್ರಯೋಜನಕಾರಿ?:

ಕಾಫಿಯು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಕೆಫೀನ್ ಅನ್ನು ಹೊಂದಿದ್ದು, ಇದು ನಿಮ್ಮ ನರಗಳನ್ನು ಸದಾ ಎಚ್ಚರವಾಗಿರುವಂತೆ ಮಾಡುತ್ತದೆ. ಜೊತೆಗೆ ಈ ಕೆಫೀನ್ ಬೇಗನೇ ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ನಿಮ್ಮ ಮನಸ್ಥಿತಿ, ಗಮನ, ಕಲಿಕಾ ಸಾಮರ್ಥ್ಯ, ಪ್ರತಿಕ್ರಿಯೆ ಸಮಯ ಮತ್ತು ಇತರ ಮಾನಸಿಕ ಕಾರ್ಯಗಳನ್ನು ಸುಧಾರಿಸಬಹುದು. ಆದರೆ ಈ ಪ್ರಯೋಜನಗಳು ನೀವು ಮಾಡುವ ಕೆಲವು ತಪ್ಪುಗಳಿಂದ ಕಡಿಮೆಯಾಗಬಹುದು. ಅವುಗಳಾವುವು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗೆ ನೋಡಿ.

ಕಾಫಿಯ ಪ್ರಯೋಜನ ಕಡಿಮೆ ಮಾಡುವ ತಪ್ಪುಗಳು:

ಕಾಫಿಯ ಪ್ರಯೋಜನ ಕಡಿಮೆ ಮಾಡುವ ತಪ್ಪುಗಳು:

ಅತಿಯಾದ ಸೇವನೆ:

ತಾತ್ತ್ವಿಕವಾಗಿ, ಒಬ್ಬ ವ್ಯಕ್ತಿಯು ದಿನಕ್ಕೆ 2 ಕಪ್‌ಗಳಿಗಿಂತ ಹೆಚ್ಚು ಕಾಫಿಯನ್ನು ಕುಡಿಯಬಾರದು. ಇಷ್ಟು ಪ್ರಮಾಣದ ಕೆಫೀನ್ ನಿಮಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಇದನ್ನು ಮೀರಿ ಹೋದರೆ, ಹೊಟ್ಟೆ ನೋವು, ಸೆಳೆತ, ರಕ್ತದ ಆಮ್ಲ ಮಟ್ಟ ಹೆಚ್ಚುವುದು, ಅನಿಯಮಿತ ಅಥವಾ ವೇಗವಾದ ಹೃದಯ ಬಡಿತ ಮತ್ತು ಹೃದಯಕ್ಕೆ ರಕ್ತದ ಹರಿವು ಕಡಿಮೆ ಮೊದಲಾದವುಗಳಿಗೆ ಕಾರಣವಾಗಬಹುದು. ಕಾಲಾನಂತರದಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಆಯಸ್ಸನ್ನು ಕಡಿಮೆ ಮಾಡಬಹುದು. ಜೊತೆಗೆ ನಿಮ್ಮಲ್ಲಿ ಆತಂಕ, ನಿದ್ರಾಹೀನತೆಯ ಮಟ್ಟವನ್ನು ಹೆಚ್ಚಿಸಬಹುದು.

ಅತಿಯಾಗಿ ಸಕ್ಕರೆ ಸೇರಿಸುವುದು:

ಅತಿಯಾಗಿ ಸಕ್ಕರೆ ಸೇರಿಸುವುದು:

ಸಂಸ್ಕರಿಸಿದ ಸಕ್ಕರೆಯು ಕೇವಲ ಕ್ಯಾಲೋರಿ ಹೊಂದಿದ್ದು, ಶೂನ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಕಾಫಿಗೆ ನೀವು ಈಗಾಗಲೇ ವ್ಯಸನಿಯಾಗಿದ್ದು, ಅದಕ್ಕೆ ಸಂಸ್ಕರಿಸಿದ ಸಕ್ಕರೆಯನ್ನು ಬಳಸುತ್ತಿದ್ದರೆ, ಆಗ ಹೆಚ್ಚು ಹಾನಿಕಾರಕವಾಗುತ್ತವೆ. ಅತಿಯಾದ ಸಕ್ಕರೆ ಸೇವನೆಯು ಶಕ್ತಿಯ ಕುಸಿತಕ್ಕೆ ಕಾರಣವಾಗಬಹುದು, ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸಲೂಬಹುದು. ಆದ್ದರಿಂದ ಕಡಿಮೆ ಸಕ್ಕರೆಯನ್ನು ಸೇವಿಸಲು ಪ್ರಯತ್ನಿಸಿ, ಸಾಧ್ಯವಾದರೆ ಅದನ್ನು ಬೆಲ್ಲಕ್ಕೆ ಬದಲಾಯಿಸಿ. ದಾಲ್ಚಿನ್ನಿ ಪುಡಿಯನ್ನು ಸೇರಿಸುವುದರಿಂದಲೂ ಕಾಫಿಗೆ ಸಿಹಿ ನೀಡಬಹುದು.

ಮಧ್ಯಾಹ್ನ 2 ಗಂಟೆಯ ನಂತರ ಕಾಫಿ ಕುಡಿಯುವುದು:

ಮಧ್ಯಾಹ್ನ 2 ಗಂಟೆಯ ನಂತರ ಕಾಫಿ ಕುಡಿಯುವುದು:

ಕಾಫಿ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಸುಸ್ತಾದಾಗ ತಕ್ಷಣದ ಶಕ್ತಿ ಮತ್ತು ಚೈತನ್ಯಕ್ಕಾಗಿ ಒಂದು ಕಪ್ ಕಾಫಿಯನ್ನು ಕುಡಿಯುವುತ್ತೇವೆ. ಆದರೆ ನಿಮ್ಮ ಮಧ್ಯಾಹ್ನದ ಊಟದ ನಂತರ ಇದನ್ನು ಕುಡಿಯುವುದರಿಂದ ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು ಮತ್ತು ತಡರಾತ್ರಿಯವರೆಗೂ ಎಚ್ಚರವಾಗಿಯುವಂತೆ ಮಾಡಬಹುದು. ನಿದ್ರಾಹೀನತೆಯು ನಿಮ್ಮ ಆರೋಗ್ಯದ ಮೇಲೆ ಹಲವಾರು ಅಡ್ಡ ಪರಿಣಾಮಗಳನ್ನು ಉಂಟುಮಾಡಿ, ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಊಟದ ನಂತರ ಕಾಫಿ ಕುಡಿಯಲು ಬಯಸಿದರೆ ಡೆಕಾಫ್ ಸೇವಿಸಿ. ನಿಮ್ಮ ಸಾಮಾನ್ಯ ಕಪ್ ಕಾಫಿಗೆ ಹೋಲಿಸಿದರೆ ಕಡಿಮೆ ಕೆಫೀನ್ ಅನ್ನು ಹೊಂದಿರುತ್ತದೆ.

FAQ's
  • ಮೆದುಳಿನ ಆರೋಗ್ಯಕ್ಕೆ ಯಾವ ವಿಧದ ಕಾಫಿ ಉತ್ತಮ?

    ಯಾವ ಕಾಫಿ ಬೀಜಗಳಲ್ಲಿ ಫೆನಿಲಿಂಡೇನ್ಸ್ ಅಂಶ ಹೆಚ್ಚಿದೆಯೋ, ಆ ಕಾಫಿ ಮೆದುಳಿಗೆ ಉತ್ತಮ. ಕಾಫಿ ಬೀಜಗಳನ್ನು ಹೆಚ್ಚು ಕಾಲ ಹುರಿಯುವುದರಿಂದ ಫೆನಿಲಿಂಡೇನ್ಸ್ ಅಂಶ ಹೆಚ್ಚಾಗುತ್ತದೆ. ಆದ್ದರಿಂದ ಚೆನ್ನಾಗಿ ಹುರಿದ ಡಾರ್ಕ್ ಕಾಫಿ ಬೀಜಗಳಿಂದ ತಯಾರಾದ ಕಾಫಿಯಲ್ಲಿ ಹೆಚ್ಚು ಸಂರಕ್ಷಣಾತ್ಮಕ ಗುಣವಿದೆ. ಕಾಫಿ ಇದಕ್ಕೆ ಉತ್ತಮ ಆಯ್ಕೆ.

  • ಕಾಫಿ ಕುಡಿಯುವುದರಿಂದ ಬುದ್ಧಿವಂತಿಕೆ ಹೆಚ್ಚಾಗುತ್ತಾ?

    ಖಂಡಿತ ಇಲ್ಲ, ಕಾಫಿ ಕುಡಿಯುವುದರಿಂದ ಬುದ್ಧಿವಂತಿಕೆ ಹೆಚ್ಚಾಗುವುದಿಲ್ಲ. ಆದರೆ, ಇದು ನೀವು ವಿಷಯಗಳನ್ನು ಅಥವಾ ಕೌಶಲ್ಯಗಳನ್ನು ಕಲಿಯಲು ಬೇಗ ಕಲಿಯಲು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಲ್ಲಿರುವ ಕೆಫೀನ್ ನಿಮ್ಮಲ್ಲಿ ಉತ್ಸಾಹವನ್ನು ಹೆಚ್ಚಿಸಿ, ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುವುದು.

English summary

Right Way to Brew your Cup of Coffee Correctly to Improve Brain Health in Kannada

There is a lot of contradiction among health experts regarding the consumption of caffeine. As per science, drinking coffee has several health benefits. At the same time, there is no denying that it has the potential to cause negative impacts on our health. Here we talking about Right way to brew your cup of coffee correctly to Improve Brain Health in Kannada, read on
X
Desktop Bottom Promotion