For Quick Alerts
ALLOW NOTIFICATIONS  
For Daily Alerts

ಏನಿದು ರಿಫ್ಟ್ ವ್ಯಾಲಿ ಫೀವರ್? ಅಪಾಯಕಾರಿಯಾದ ಈ ಕಾಯಿಲೆಯ ಲಕ್ಷಣಗಳೇನು?

|

ಕೊರೊನಾ ಎಂಬ ಮಹಾಮಾರಿ ಒಮ್ಮೆ ಕಡಿಮೆಯಾದರೆ ಕೆಲವೇ ದಿನಗಳಲ್ಲಿ ಮತ್ತೆ ಹೆಚ್ಚಾಗುವುದು ಕಂಡು ಬರುತ್ತಿದೆ. ಭಾರತದಲ್ಲಿ ಕೊರೊನಾ ಇಳಿಮುಖವಾಗಿದ್ದರೂ ಅದರ ಬಗ್ಗೆ ಅಸಡ್ಡೆ ತೋರುವಂತಿಲ್ಲ. ಚೀನಾ ಈ ಮಹಾಮಾರಿ ಹೊಡೆತಕ್ಕೆ ನಲುಗಿ ಹೋಗಿದೆ. ಕೊರೊನಾ ಮಾತ್ರವಲ್ಲ ಇನ್ನಿತರ ಕಾಯಿಲೆಗಳು ವಿಶ್ವಕ್ಕೆ ಕಂಟವಾಗಿ ಕಾಡಲಾರಂಭಿಸಿದೆ. ಅರಲ್ಲೊಂದು ಇತ್ತೀಚೆಗೆ ಪತ್ತೆಯಾದ ಭಯಾನಕ ರಿಫ್ಟ್ ವ್ಯಾಲಿ ಫೀವರ್ (RVF).

ಯುಎಸ್‌ನ ವಾಷಿಂಗ್‌ಟನ್‌ ಯೂನಿವರ್ಸಿಟಿ ಈ ಅಪಾಯಕಾರಿಯಾದ ಕಾಯಿಲೆಯನ್ನು ಪತ್ತೆ ಹಚ್ಚಿದೆ, ಈ ವೈರಸ್‌ ಹೇಗೆ ಮನುಷ್ಯನಿಗೆ ಕಂಟಕವಾಗಿದೆ ಎಂಬುವುದನ್ನು ವಿವರಿಸಿದ್ದಾರೆ. ಈ ಸಂಶೋಧನೆಯಲ್ಲಿ ಭಾರತದ ಕಾಶ್ಮೀರದ ಡಾ. ಸಫ್ದೇರ್ ಗನೈ ವಿಜ್ಞಾನಿ ಕೂಡ ಇದ್ದಾರೆ.

ರಿಫ್ಟ್ ವ್ಯಾಲಿ ಫೀವರ್ ಎಂದರೇನು?

ರಿಫ್ಟ್ ವ್ಯಾಲಿ ಫೀವರ್ ಎಂದರೇನು?

ರಿಫ್ಟ್ ವ್ಯಾಲಿ ಫೀವರ್‌ ಎಂಬುವುದು ಬ್ಯಾಕ್ಟಿರಿಯಾ ಕಾಯಿಲೆಯಾಗಿದ್ದು ಆಫ್ರಿಕಾದ ಸಹರಾ ಮರುಭೂಮಿಯ ಸುತ್ತು ಮುತ್ತವಿರುವ ಪ್ರದೇಶದ ಕರು,ಕುರಿ, ಆಡು, ಒಂಟೆ ಮುಂತಾದ ಪ್ರಾಣಿಗಳಲ್ಲಿ ಕಂಡು ಬಂದಿತ್ತು. ಸೋಂಕು ತಗುಲಿದ ಪ್ರಾಣಿಗಳ ರಕ್ತ ಅಥವಾ ದೇಹದ ದ್ರವ(ಮಲ, ಮೂತ್ರ) ಅಥವಾ ಆ ಪ್ರಾಣಿಗೆ ಕಚ್ಚಿದ ಸೊಳ್ಳೆ ಮನುಷ್ಯನನ್ನು ಕಚ್ಚಿದರೆ ಮನುಷ್ಯರಿಗೆ ಹರಡುವುದು.

RVF ಗಂಭೀರ ಲಕ್ಷಣಗಳೇನು?

RVF ಗಂಭೀರ ಲಕ್ಷಣಗಳೇನು?

* ಜ್ವರ

* ಸುಸ್ತು

* ಬೆನ್ನು ನೋವು

* ಸುಸ್ತು

* ಕಣ್ಣು ನೋವು

* ರೋಗ ಸ್ಥಿತಿ ಗಂಭೀರವಾದರೆ ರಕ್ತಸ್ರಾವ, ಮೆದುಳಿನಲ್ಲಿ ಉರಿಯೂತ ಉಂಟಾಗುವುದು

RVF ಕಾಯಿಲೆಯ ಇತಿಹಾಸ

RVF ಪ್ರಾಣಿಗಳಲ್ಲಿ ಮೊದಲಿಗೆ 1910ರಲ್ಲಿ ಕೀನ್ಯಾದಲ್ಲಿ ಕಂಡು ಬಂದಿತ್ತು. 2000ನೇ ಇಸವಿಯಲ್ಲಿ ಸೌದಿ ಅರೇಬಿಯಾದಲ್ಲಿ ಕಂಡು ಬಂದಿತ್ತು, ನಂತರ ಯಮೆನ್‌ನಲ್ಲಿ ಕಂಡು ಬಂದಿದೆ.

RVF ಚಿಕಿತ್ಸೆಯೇನು?

RVF ಚಿಕಿತ್ಸೆಯೇನು?

RVF ಮನುಷ್ಯರಿಗೆ ಬಂದರೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಕೆಲವರಿಗೆ ರೋಗ ಲಕ್ಷಣಗಳು ಅಲ್ಪ ಪ್ರಮಾಣದಲ್ಲಿ ಇರುತ್ತದೆ, ಚಿಕಿತ್ಸೆಯ ಅಗ್ಯತವಿಲ್ಲ, ಇನ್ನು ಕೆಲವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು.

ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಹೇಗೆ?

* ಪ್ರಾಣಿಗಳಲ್ಲಿ ರೋಗ ಲಕ್ಷಣಗಳನ್ನು ಕಾಣಿಸಿಕೊಂಡರೆ ಅಂಥ ಪ್ರಾಣಿಯನ್ನು ಮುಟ್ಟಬೇಡಿ, ಅಲ್ಲದೆ ಅದರ ಸಮೀಪ ಹೋಗುವುದಾದರೆ ಸೂಕ್ತ ಮುನ್ನೆಚ್ಚರಿಕೆವಹಿಸಿ.

* ಮನುಷ್ಯರಲ್ಲಿ ಕಾಣಿಸಿಕೊಂಡರೆ ಬೇಗನೆ ಚಿಕಿತ್ಸೆ ಪಡೆಯುವ ಮೂಲಕ ರೋಗ ಹರಡುವುದನ್ನು ತಡೆಗಟ್ಟಬಹುದು.

2021ರಲ್ಲಿ ಆಫ್ರಿಕಾದಲ್ಲಿ 5130 ಜನರಲ್ಲಿ ಈ 1500 ಜನರು ಸಾವನ್ನಪ್ಪಿದ್ದರು. ಇದೀಗ ಯಮೆನ್‌ನಲ್ಲಿ ಮತ್ತೆ ಈ ಕಾಯಿಲೆ ಕಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

English summary

Rift Valley Fever: What is RVF? know about symptoms & treatment in Kannada

Rift Valley Fever: What is RVF? Here's all you need to know about symptoms & treatment in kannada Read on.
X
Desktop Bottom Promotion