For Quick Alerts
ALLOW NOTIFICATIONS  
For Daily Alerts

ಟಾಯ್ಲೆಟ್‌ನಲ್ಲಿ ಕೂತು ಮೊಬೈಲ್ ಬಳಸುವ ಅಭ್ಯಾಸ ನಿಮಗಿದ್ದರೆ ಹುಷಾರ್!

|

ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಅಭ್ಯಾಸ ಇದೆ. ಅದೇನಂದ್ರೆ, ಬಾತ್ ರೂಮ್ ಅಥವಾ ಟಾಯ್ಲೆಟ್ ಹೋಗುವಾಗ ಕೈಯಲ್ಲಿ ಮೊಬೈಲ್ ಕೊಂಡೊಯ್ಯುವುದು, ಗಂಟೆಗಟ್ಟಲೇ ಮೊಬೈಲ್ ಹಿಡಿದು ಅಲ್ಲೇ ಕಾಲಕಳೆಯುವುದು. ಆದರೆ ಈ ಅಭ್ಯಾಸ ಎಂತಹ ಸಮಸ್ಯೆಗೆ ಕಾರಣವಾಗುತ್ತದೆ ಗೊತ್ತಾ? ನೀವೇನೋ ಟೈಮ್ ಪಾಸ್‌ಗಾಗಿ ಮೊಬೈಲ್ ಹಿಡಿದುಕೊಂಡು ಹೋಗುತ್ತೀರಾ ಆದರೆ ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವವರಲ್ಲಿ ನೀವೂ ಒಬ್ಬರಾಗಿದ್ದರೆ, ಇಂದೇ ಆ ಅಭ್ಯಾಸ ಬಿಡಿ. ಯಾಕೆ ಬಿಡಬೇಕು ಎಂಬುದನ್ನು ನಾವಿಂದು ಹೇಳಲಿದ್ದೇವೆ.

ಬಾತ್‌ರೂಮ್ ಹೋಗುವಾಗ ಮೊಬೈಲ್ ಬಳಕೆ ಸಲ್ಲದು ಎಂಬುದಕ್ಕೆ ಕಾರಣವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ರೋಗಾಣುಗಳ ಅಪಾಯ:

ರೋಗಾಣುಗಳ ಅಪಾಯ:

ಮಲದಿಂದ ಬರುವ ಸಾಲ್ಮೋನೆಲ್ಲಾ, ಇ.ಕೋಲಿನಂತಹ ಸೂಕ್ಷ್ಮಜೀವಿಗಳು ನಿಮ್ಮ ಮೊಬೈಲ್‌ಗೆ ಅಂಟಿಕೊಳ್ಳುವ ಅಪಾಯವಿದೆ. ಈ ರೋಗಾಣುಗಳು ಮೊಬೈಲ್ ಮೂಲಕ ನಿಮ್ಮ ದೇಹ ಅಥವಾ ಮನೆಯ ಇತರ ಸದಸ್ಯರಿಗೂ ಹರಡಿ, ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮೊಬೈಲ್ ಕೊಂಡ್ಯೊಯದೇ ಇರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಮೂಲವ್ಯಾಧಿ ಅಪಾಯ:

ಮೂಲವ್ಯಾಧಿ ಅಪಾಯ:

ಟಾಯ್ಲೆಟ್‌ಗೆ ಮೊಬೈಲ್ ಹಿಡಿದುಕೊಂಡು ಹೋದಾಗ, ಟಾಯ್ಲೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ. ಅಂದರೆ ಕೂತಲ್ಲಿಯೇ ಹೆಚ್ಚುಕಾಲ ಕುಳಿತಿರುತ್ತೀರಿ. ಇದು ನಿಮ್ಮ ಗುದನಾಳದ ಮಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಮೂಲವ್ಯಾಧಿಗೆ ಕಾರಣವಾಗಬಹುದು.

ಜೀರ್ಣಾಂಗವ್ಯೂಹದ ಸಮಸ್ಯೆಗಳು:

ಜೀರ್ಣಾಂಗವ್ಯೂಹದ ಸಮಸ್ಯೆಗಳು:

ಟಾಯ್ಲೆಟ್‌ನಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳುವುದರಿಂದ ಗುದನಾಳದ ಮೇಲೆ ಒತ್ತಡ ಹೇರುವುದರಿಂದ ಈಗಾಗಲೇ ಇರುವ ಜೀರ್ಣಾಂಗವ್ಯೂಹದ ಸಮಸ್ಯೆಗಳು ಹೆಚ್ಚಾಗಬಹುದು.

ವಿರಾಮ ಸಿಗದೇ ಹೋಗಬಹುದು:

ವಿರಾಮ ಸಿಗದೇ ಹೋಗಬಹುದು:

ಕೆಲವರು ಟಾಯ್ಲೆಟ್‌ಗೆ ಮೊಬೈಲ್ ತೆಗೆದುಕೊಂಡು ಹೋಗವುದು ಸಮಯ ವ್ಯರ್ಥವಾಗಬಾರದೆಂಬ ಉದ್ದೇಶದಿಂದ. ಅಲ್ಲಿಗೂ ಮೊಬೈಲ್ ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮಗೆ ವಿರಾಮ ಸಿಗದೇ ಹೋಗಬಹುದು. ಒತ್ತಡ ಹೆಚ್ಚಾಗಬಹುದು.

ಸಮಯ ವ್ಯರ್ಥ ಆಗುವುದು:

ಸಮಯ ವ್ಯರ್ಥ ಆಗುವುದು:

ನೀವು ಬೆಳಗ್ಗೆ ಎದ್ದು,ಫೋನ್ ಹಿಡಿದು ಟಾಯ್ಲೆಟ್ ಹೊಕ್ಕರೆ, ಸಮಯ ಹೋಗಿದ್ದೇ ಗೊತ್ತಾಗಲ್ಲ. ಸೋಶಿಯಲ್ ಮೀಡಿಯಾದೊಳಗೆ ಹೊಕ್ಕಿ, ಹೊರ ಬರುವಷ್ಟರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗಿರುತ್ತದೆ. ಆದ್ದರಿಂದ ಮೊಬೈಲ್ ಹೊರಗಿಡುವುದೇ ಉತ್ತಮ,.

ನಿಮ್ಮನ್ನು ವ್ಯಸನಿಯಾಗಿಸಬಹುದು:

ನಿಮ್ಮನ್ನು ವ್ಯಸನಿಯಾಗಿಸಬಹುದು:

ಹೌದು, ಯಾವುದೇ ವಿಚಾರವಾದರೂ ಪದೇ ಪದೇ ಮಾಡುತ್ತಿದ್ದರೆ, ಅದಕ್ಕೆ ಅಂಡಿಕೊಳ್ಳುತ್ತೇವೆ. ಹಾಗೆಯೇ ಈ ಫೋನ್ ಕೂಡ.. ಪ್ರತಿದಿನ ಮೊಬೈಲ್ ಹಿಡಿದೇ ಟಾಯ್ಲೆಟ್ ಹೋಗುತ್ತಿದ್ದರೆ, ಅದೇ ಅಭ್ಯಾಸ ಆಗಬಹುದು. ಮುಂದೆ ಮೊಬೈಲ್ ಇಲ್ಲದೇ, ಟಾಯ್ಲೆಟ್ ಹೋಗಲು ಆಗದೇ ಇರಬಹುದು. ಇಂತಹ ಪರಿಸ್ಥಿತಿಗೆ ನೀವೂ ಒಳಗಾಗಬಾರದೆಂದರೆ ಮೊಬೈಲ್ ಬಿಡುವುದು ಉತ್ತಮ.

ಟಾಯ್ಲೆಟ್ ಗೆ ಬೀಳುವ ಸಾಧ್ಯತೆ:

ಟಾಯ್ಲೆಟ್ ಗೆ ಬೀಳುವ ಸಾಧ್ಯತೆ:

ಇದು ಬಹಳ ವಿರಳವಾಗಿದ್ದರೂ, ಸಾಧ್ಯತೆ ಅಂತೂ ಖಂಡಿತಾ ಇದೆ. ಯಾವುದೋ ಆಲೋಚನೆಯಲ್ಲಿ ಅಥವಾ ಕೈತಪ್ಪಿ ಮೊಬೈಲ್ ಟಾಯ್ಲೆಟಿಗೆ ಬೀಳಬಹುದು. ಆದ್ದರಿಂದ ಎಚ್ಚರವಾಗಿರುವುದು ಉತ್ತಮ.

Read more about: health ಆರೋಗ್ಯ
English summary

Reasons You Shouldn’t Carry Your Phone to the Toilet in Kannada

Here we talking about Reasons You Shouldn’t Carry Your Phone to the Toilet in Kannada, read on
X