For Quick Alerts
ALLOW NOTIFICATIONS  
For Daily Alerts

ಎಷ್ಟೇ ಪ್ರಯತ್ನಿಸಿದರೂ ಸೊಂಟದ ಬೊಜ್ಜು ಕರಗದಿರಲು ಇದೇ ಕಾರಣ

|

ಹೊಟ್ಟೆ ಬೊಜ್ಜು ಒಂಥರಾ ಹಠಮಾರಿ ಬೊಜ್ಜೇ ಸರಿ. ಏಕೆಂದರೆ ಇದನ್ನು ಕರಗಿಸುವುದು ಸುಲಭದ ಕೆಲಸವಲ್ಲ. ಬೊಜ್ಜು ಬರುವುದು ಮಾತ್ರ ಗೊತ್ತೇ ಆಗುವುದಿಲ್ಲ, ಅದೇ ಬೊಜ್ಜು ಬಂದ ಮೇಲೆ ಹೋಗಿಸಲು ಡಯಟ್, ವ್ಯಾಯಾಮ ನಾನಾ ಕಸರತ್ತು ಮಾಡಬೇಕು.

ಕೆಲವೊಮ್ಮೆ ಏನೇ ಮಾಡಿದರೂ ಹೊಟ್ಟೆ ಬೊಜ್ಜು ಕರಗುವುದಿಲ್ಲ. ಆಹಾರ ಕ್ರಮ ಪಾಲಿಸುತ್ತೀರಿ, ವ್ಯಾಯಾಮ ಮಾಡುತ್ತೀರಿ ಆದರೂ ಹೊಟ್ಟೆ ಗಾತ್ರ ಮಾತ್ರ ಹಾಗೆಯೇ ಇರುತ್ತದೆ, ಇದಕ್ಕೆ ಕಾರಣವೇನೆಂದು ನೋಡುವುದಾದರೆ ನೀವು ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದೇ ಆಗಿದೆ.

ಮಾನಸಿಕ ಒತ್ತಡ ಎನ್ನುವುದು ಮನಸ್ಸು, ಶರೀರ ಹಾಳು ಮಾಡುವುದು ಮಾತ್ರವಲ್ಲ, ಮೈತೂಕ ಕೂಡ ಹೆಚ್ಚಿಸುತ್ತೆ, ಅದರಲ್ಲೂ ಸೊಂಟದ ಸುತ್ತಲಿನ ಗಾತ್ರ ಹೆಚ್ಚಿಸುತ್ತೆ, ಮಾನಸಿಕ ಒತ್ತಡ ಹೆಚ್ಚಾದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತೆ, ಇದು ಸೊಂಟದ ಸುತ್ತ ಬೊಜ್ಜು ಬೆಳೆಯಲು ಕಾರಣವಾಗಿದೆ.

ಮಾನಸಿಕ ಒತ್ತಡ, ಅತಿಯಾಗಿ ಚಿಂತೆ ಮಾಡುವುದು ಇವೆಲ್ಲಾ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆಗ ಬಿಡುಗಡೆಯಾಗುವ ಕಾರ್ಟಿಸೋಲ್ ಹಾರ್ಮೋನ್ ತೂಕ ಹೆಚ್ಚಿಸುತ್ತದೆ.

ಕಾರ್ಟಿಸೋಲ್ ಹಾರ್ಮೋನ್

ಕಾರ್ಟಿಸೋಲ್ ಹಾರ್ಮೋನ್

ಕಾರ್ಟಿಸೋಲ್‌ ಎನ್ನುವುದು ಮಾನಸಿಕ ಒತ್ತಡದ ಹಾರ್ಮೋನ್‌ ಆಗಿದ್ದು, ಇದು ಅಡ್ರೀನಲ್ ಗ್ರಂಥಿಯಿಂದ ವಿಭಿಜಿಸಲ್ಪಡುತ್ತದೆ. ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಈ ಹಾರ್ಮೋನ್‌ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಈ ಹಾರ್ಮೋನ್‌ ಶಕ್ತಿಗಾಗಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಉತ್ಪಾದಿಸಿ ಇನ್ಸುಲಿನ್ ಬಿಡುಗಡೆ ಮಾಡಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುವ ಕಾರ್ಯ ಮಾಡುತ್ತದೆ. ಈ ಪ್ರಕ್ರಿಯೆಯಿಂದಾಗಿ ಹಸಿವು ಉಂಟಾಗುತ್ತದೆ.

ಈ ಹಾರ್ಮೋನ್‌ ಸೊಂಟದ ಸುತ್ತಲಿನ ಕೊಬ್ಬು ಹೆಚ್ಚಿಸಲು ಹೇಗೆ ಕಾರಣವಾಗುತ್ತೆ?

ಈ ಹಾರ್ಮೋನ್‌ ಸೊಂಟದ ಸುತ್ತಲಿನ ಕೊಬ್ಬು ಹೆಚ್ಚಿಸಲು ಹೇಗೆ ಕಾರಣವಾಗುತ್ತೆ?

ನಮಗೆ ಟೆನ್ಷನ್ ಅಥವಾ ಮಾನಸಿಕ ಒತ್ತಡ ಹೆಚ್ಚಾದಾಗ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್‌ ಬಿಡುಗಡೆಯಾಗುತ್ತದೆ, ಆಗ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿ, ಸಕ್ಕರೆಯಂಶ ಕಡಿಮೆಯಾಗುವುದು. ಹೀಗಾದಾಗ ಕಾರ್ಬ್ಸ್ ಹಾಗೂ ಸಿಹಿ ಪದಾರ್ಥಗಳನ್ನು ತಿನ್ನುವ ಆಸೆ ಉಂಟಾಗುತ್ತದೆ. ಹೀಗೆ ಹೆಚ್ಚಾಗಿ ತಿನ್ನುವುದರಿಂದ ಸೊಂಟದ ಸುತ್ತ ಕೊಬ್ಬಿನಂಶ ಹೆಚ್ಚಾಗುವುದು.

ಅತ್ಯಧಿಕ ಕಾರ್ಟಿಸೋಲ್ ಉತ್ಪತ್ತಿ ಎಂಡೋಕ್ರೈನ್ ವ್ಯವಸ್ಥೆಯನ್ನೇ ಬದಲಾಯಿಸುತ್ತೆ, ಇದರಿಂದಾಗಿ ಹಸಿವು ಹೆಚ್ಚುವುದು.

ಸೊಂಟದ ಬೊಜ್ಜು ಒಳ್ಳೆಯದಲ್ಲ ಏಕೆ?

ಸೊಂಟದ ಬೊಜ್ಜು ಒಳ್ಳೆಯದಲ್ಲ ಏಕೆ?

ಕಾರ್ಟಿಸೋಲ್ ಉತ್ಪತ್ತಿ ಹೆಚ್ಚಾದಾಗ ದೇಹದ ಇತರ ಭಾಗಗಳಿಗಿಂತ ಸೊಂಟದ ಸುತ್ತಲಿನ ಬೊಜ್ಜು ಹೆಚ್ಚಾಗುತ್ತದೆ. ಸೊಂಟದ ಸುತ್ತಲಿನ ಕೊಬ್ಬಿನಂಶಕ್ಕೂ ಹೃದಯ ಸಂಬಂಧಿ ಸಮಸ್ಯೆಗೂ ಒಂದಕ್ಕೊಂದು ಲಿಂಕ್ ಇದೆ.

ದೇಹದ ಬಗ್ಗೆ ಹೇಳುವಾಗ ಸೇಬಿನಾ ಆಕಾರದ ದೇಹ ಮತ್ತು ಪಿಯರ್ ಆಕಾರದ ದೇಹದ ಎಂದು ಹೇಳಲಾಗುವುದು. ಸೇಬಿನಾಕಾದ ದೇಹ ಎಂದರೆ ಸೊಂಟದ ಬೊಜ್ಜು ಹೊಂದಿರುವ ದೇಹ. ಯಾರಿಗೆ ಸೊಂಟದ ಸುತ್ತ ಬೊಜ್ಜು ಇರುತ್ತದೋ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಬರುವುದು ಹೆಚ್ಚು.

 ಸೊಂಟದ ಸುತ್ತ ಬೊಜ್ಜು ಬೆಳೆಯದಂತೆ ತಡೆಯುವುದು ಹೇಗೆ?

ಸೊಂಟದ ಸುತ್ತ ಬೊಜ್ಜು ಬೆಳೆಯದಂತೆ ತಡೆಯುವುದು ಹೇಗೆ?

* ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಬೇಕು. ಯೋಗ, ಧ್ಯಾನ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.

* ದಿನದಲ್ಲಿ 8 ಗಂಟೆ ನಿದ್ದೆ ಮಾಡಿ.

* ಎಲ್ಲಾ ಕೆಲಸದ ಹೊರೆ ನೀವೊಬ್ಬರೆ ಹೊರಬೇಡಿ, ನಿಮ್ಮ ಕೆಲಸವನ್ನು ಹಂಚಿ. ಇದು ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.

* ನಿಮ್ಮ ಆಹಾರಕ್ರಮದ ಕಡೆ ಗಮನ ನೀಡಿ.

* ಕಾರ್ಬ್ಸ್ ಆಹಾರ ಮಿತಿಯಲ್ಲಿ ಸೇವಿಸಿ, ಪ್ರೊಟೀನ್ ಆಹಾರ ಹೆಚ್ಚಾಗಿ ತೆಗೆದುಕೊಳ್ಳಿ.

* ಸಾಕಷ್ಟು ವಿಟಮಿನ್ ಸಿ ಆಹಾರ ತೆಗೆದುಕೊಳ್ಳಿ.

English summary

Reasons You Can't Lose Belly Fat in Kannada

Belly fat not spoil body shape, it also dangerous for cardiovescular health, Here are reasons you can't lose belly fat, read on.
Story first published: Thursday, January 21, 2021, 16:34 [IST]
X
Desktop Bottom Promotion