For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತಲೆಯನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡಿರಲೇಬೇಕು, ಏಕೆ ಗೊತ್ತಾ?

|

ಚಳಿಗಾಲದಲ್ಲಿ ತಾಪಮಾನದ ಕುಸಿತದಿಂದಾಗಿ, ಶೀತ, ನೆಗಡಿ ಮತ್ತು ಜ್ವರ ಜನರನ್ನು ಕಾಡುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು. ಅದಕ್ಕಾಗಿಯೇ ಈ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯ ಚೆನ್ನಾಗಿರಲು ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

ಸರಿಯಾದ ಆಹಾರ ಸೇವನೆ, ವ್ಯಾಯಾಮ ಮಾಡುವುದು ಮತ್ತು ಬೆಚ್ಚಗಿನ ಬಟ್ಟೆ ಧರಿಸುವುದು ಶೀತದ ವಿರುದ್ಧ ರಕ್ಷಣೆ ನೀಡಲು ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ತಂತ್ರಗಳಾಗಿವೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದು. ಇದರಿಂದ ಏನು ಲಾಭ ಎಂದು ಯೋಚಿಸುತ್ತಿದ್ದೀರಾ? ಈ ಸ್ಟೋರಿ ನೋಡಿ.

ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದು ಏಕೆ ಮುಖ್ಯ?:

ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದು ಏಕೆ ಮುಖ್ಯ?:

ನೀವು ಹೊರಗೆ ಹೋಗುವಾಗ ಕ್ಯಾಪ್, ಸ್ಕಾರ್ಫ್ ಅಥವಾ ಮಫ್ಲರ್ ಆಯ್ಕೆ ಮಾಡಿಕೊಳ್ಳಿ, ಇದರಿಂದ ನಿಮ್ಮ ತಲೆಯನ್ನು ಮುಚ್ಚುವುದರಿಂದ, ಅನಾರೋಗ್ಯದ ಅಪಾಯವು ಅರ್ಧದಷ್ಟು ಕಡಿಮೆಯಾಗುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಶಾಖವನ್ನು ಸಂರಕ್ಷಣೆಯಾಗಿ, ನೀವು ಬೆಚ್ಚಗಿರುವಂತೆ ಮಾಡುತ್ತದೆ, ಜೊತೆಗೆ ಆರಾಮದಾಯಕವಾಗಿರುತ್ತದೆ. ನಿಮ್ಮ ನೆತ್ತಿಯು ಶೀತ ವಾತಾವರಣಕ್ಕೆ ತೆರೆದುಕೊಂಡಾಗ, ನೀವು ದೇಹದಿಂದ ಹೆಚ್ಚಿನ ಶಾಖವನ್ನು ಕಳೆದುಕೊಳ್ಳುತ್ತೀರಿ. ಜೊತೆಗೆ ಶೀತ ಮತ್ತು ಜ್ವರದ ಹೆಚ್ಚಿನ ಅಪಾಯವನ್ನು ಹೊಂದಿರುತ್ತೀರಿ. ನಿಮ್ಮ ನೆತ್ತಿಯನ್ನು ಬೆಚ್ಚಗಿಡುವುದು ನಿಮ್ಮ ದೇಹವನ್ನು ಬೆಚ್ಚಗಿಟ್ಟಷ್ಟೇ ಮುಖ್ಯ.

ತಲೆಯನ್ನು ಮುಚ್ಚಿಕೊಳ್ಳಲು ಇತರ ಕಾರಣಗಳು ಹೀಗಿವೆ:

ತಲೆಯನ್ನು ಮುಚ್ಚಿಕೊಳ್ಳಲು ಇತರ ಕಾರಣಗಳು ಹೀಗಿವೆ:

ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಕೂದಲನ್ನು ಆರೋಗ್ಯಕರವಾಗಿ ಮತ್ತು ಫ್ರಿಜ್ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಶೀತ ಮತ್ತು ಕಠಿಣವಾದ ಹವಾಮಾನವು ನಿಮ್ಮ ಕೂದಲಿನಿಂದ ಎಲ್ಲಾ ತೇವಾಂಶವನ್ನು ತೆಗೆದುಹಾಕಿ, ಒಣಗುವಂತೆ ಮಾಡುತ್ತದೆ. ಇದು ಮತ್ತಷ್ಟು ಒಡೆಯುವಿಕೆ ಮತ್ತು ಸೀಳು ತುದಿಗಳಿಗೆ ಕಾರಣವಾಗಬಹುದು. ಜೊತೆಗೆ ತಲೆಹೊಟ್ಟು ಅಪಾಯವನ್ನು ಹೆಚ್ಚಿಸುತ್ತದೆ. ಟೋಪಿಯನ್ನು ಧರಿಸುವುದರಿಂದ ನಿಮ್ಮ ನೆತ್ತಿಯ ತೇವಾಂಶವನ್ನು ಲಾಕ್ ಮಾಡುತ್ತದೆ, ಇದು ಆರೋಗ್ಯಕರ, ಫ್ರಿಜ್ ಮುಕ್ತ ಮತ್ತು ರೇಷ್ಮೆಯಂತೆ ಕಾಣುತ್ತದೆ. ಇದು ನಿಮ್ಮ ನೆತ್ತಿಯ ಶುಷ್ಕತೆ ಮತ್ತು ತುರಿಕೆಯನ್ನು ತಡೆಯುತ್ತದೆ.

ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಇತರ ಮಾರ್ಗಗಳು:

ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಇತರ ಮಾರ್ಗಗಳು:

ಚಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇತರ ಋತುಗಳಿಗೆ ಹೋಲಿಸಿದರೆ ಸಾಂಕ್ರಾಮಿಕ ರೋಗವು ಹೆಚ್ಚು ಸುಲಭವಾಗಿ ಹರಡುತ್ತದೆ. ಆದ್ದರಿಂದ, ಈ ಋತುವಿನಲ್ಲಿ ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಲು ನೀವು ಮಾಡಬಹುದಾದ ಕೆಲವು ಇತರ ವಿಷಯಗಳು ಇಲ್ಲಿವೆ:

ಕಾಲೋಚಿತ ಹಣ್ಣು-ತರಕಾರಿ ತಿನ್ನಿರಿ:

ನಿಮ್ಮ ಆಹಾರದಲ್ಲಿ ಆರೋಗ್ಯಕರ ಮತ್ತು ಕಾಲೋಚಿತವಾದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಅವು ಪೌಷ್ಠಿಕಾಂಶವನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಸಾಜ್:

ಬೆಚ್ಚಗಿನ ಎಣ್ಣೆಯಿಂದ ಸ್ನಾನ ಮಾಡುವ ಮೊದಲು ಮಸಾಜ್ ಮಾಡುವುದರಿಂದ ನಿಮ್ಮ ಚರ್ಮವನ್ನು ತೇವಾಂಶದಿಂದ ಇಡಲು ಮತ್ತು ಶಾಖವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ.

ವ್ಯಾಯಾಮ:

ವ್ಯಾಯಾಮವು ಚಯಾಪಚಯವನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ 30 ನಿಮಿಷಗಳ ಮಿತವಾದ ವ್ಯಾಯಾಮ ಕೂಡ ಆರೋಗ್ಯಕ್ಕೆ ಒಳ್ಳೆಯದು.

English summary

Reasons Why You Should Cover Your Head In Winters in Kannada

Here we talking about Reasons Why You Should Cover Your Head In Winters in Kannada, read on
Story first published: Wednesday, February 2, 2022, 16:31 [IST]
X
Desktop Bottom Promotion