For Quick Alerts
ALLOW NOTIFICATIONS  
For Daily Alerts

ಪುರುಷರ ವೀರ್ಯಾಣು ಕೊರತೆ, ಬಂಜೆತನಕ್ಕೆ 10 ಕಾರಣಗಳು

|

ಪುರಷರ ಬಂಜೆತನ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಜೀವನ ಪದ್ಧತಿ, ಒತ್ತಡ, ಆಹಾರ, ವ್ಯಾಯಾಮದ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಪುರುಷರಲ್ಲಿ ವೀರ್ಯಾಣು ಸಮಸ್ಯೆ ತಲೆದೂರುತ್ತಿದೆ. ವೀರ್ಯಾಣು ಕೊರೆತೆ ಇದ್ದಲ್ಲಿ ಗರ್ಭಧಾರಣೆಯಾಗಲು ಸಾಧ್ಯವಿಲ್ಲ. ಅಧ್ಯಯನದ ಪ್ರಕಾರ 10 ದಂಪತಿಗಳ ಪೈಕಿ 1 ದಂಪತಿ ವೀರ್ಯಾಣು ಕೊರತೆಯಿಂದ ಗರ್ಭಧಾರಣೆಯಾಗುತ್ತಿಲ್ಲ ಅನ್ನೋ ವರದಿ ಬಹಿರಂಗವಾಗಿದೆ. ಗರ್ಭಧಾರಣೆಗೆ ಪ್ರತಿ ಸ್ಖಲನದಲ್ಲಿ ಕನಿಷ್ಠ 40,000 ವೀರ್ಯಾಣು ಇರಲೇಬೇಕು.

Low Sperm Count

ಹೆಚ್ಚಾಗಿ ಯುವಕರಲ್ಲಿ, ಅದರಲ್ಲೂ 30ರ ಆಸುಪಾಸಿನ ಯುವಕರಲ್ಲಿ ವೀರ್ಯಾಣು ಕೊರತೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಅನುಚಿತ ಜೀವನಶೈಲಿ. ಕೆಲವರಲ್ಲಿ ಜನ್ಮದಲ್ಲಿ ಈ ದೋಷ ಇರುತ್ತವೆ, ಇನ್ನು ಕೆಲವರದಲ್ಲಿ ಗಂಭೀರ ರೋಗಗಳಿಂದಲೂ ವೀರ್ಯಾಣು ಕೊರತೆ ಕಂಡುಬರುವ ಸಾಧ್ಯತೆ ಇದೆ. ಆದರೆ ಹೆಚ್ಚಿನವರ ಅನಾರೋಗ್ಯಕರ ಜೀವನ ಪದ್ಧತಿಯೇ ಈ ವೀರ್ಯಾಣು ಕೊರತೆಗೆ ಕಾರಣವಾಗಿದೆ.

ಗಂಭೀರ ಕಾಯಿಲೆಗಳು, ಹುಟ್ಟಿನಲ್ಲಿನ ದೋಷ ಹಾಗೂ ಇತರ ಔಷದಿಗಳ ಅಡ್ಡ ಪರಿಣಾಮ ಹೊರತು ಪಡಿಸಿ ಪುರುಷರಲ್ಲಿನ ವೀರ್ಯಾಣು ಕೊರತೆಗೆ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಒಬೆಸಿಟಿ

ಒಬೆಸಿಟಿ

ಆಧುನಿಕ ಜೀವನ, ನಗರೀಕರಣದಲ್ಲಿನ ಉದ್ಯೋಗ(ಕಂಪ್ಯೂಟರ್‌ನಲ್ಲಿ ಕುಳಿತಲ್ಲೇ ಮಾಡುವ ಕೆಲಸ)ಸ ವ್ಯಾಯಾಮ ರಹಿತ ಜೀವನಗಳಿಂದ ಒಬೆಸಿಟಿ ಸಮಸ್ಯೆ ಕಂಡುಬರುತ್ತಿದೆ. ಹೆಚ್ಚಿನ ಆರೋಗ್ಯ ಸಮಸ್ಯೆಗಳ ಮೂಲ ಒಬೆಸಿಟಿ. ಪುರುಷರ ವೀರ್ಯಾಣು ಕೊರೆತೆಗೂ ಒಬೆಸಿಟಿ ಮುಖ್ಯ ಕಾರಣ. ಮಹಿಳೆಯರಲ್ಲಿ ಹಾರ್ಮೋನ್ ಉತ್ಪತ್ತಿ ಕಡಿಮೆಯಾದರೆ, ಪುರುಷರಲ್ಲಿ ವೀರ್ಯಾಣು ಕೊರೆತೆ ಸಮಸ್ಯೆ ತಲೆದೋರುತ್ತದೆ.

ಮದ್ಯಪಾನ

ಮದ್ಯಪಾನ

ಮದ್ಯಾನ ಪುರಷರ ಬಂಜೆತನಕ್ಕೆ ಕಾರಣವಾಗಲಿದೆ. ಮದ್ಯಪಾನ ಮಾಡುವುದರಿಂದ ಪುರಷರಲ್ಲಿ ವೀರ್ಯಾಣು ನಿಗಧಿ ಪ್ರಮಾಣದಲ್ಲಿ ಉತ್ಪಾದನೆಯಾಗುವುದಿಲ್ಲ. ಮದ್ಯ ಸೇವೆನಯಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಮದ್ಯ ದೇಹದಲ್ಲಿನ ಸತುವನ್ನು ಹೀರಿಕೊಳ್ಳಲಿದೆ. ದೇಹಲ್ಲಿ ಸತುವಿನ ಅಂಶಕಡಿಮೆಯಾದರೆ ವೀರ್ಯಾಣು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಡ್ರಗ್ ಬಳಕೆ

ಡ್ರಗ್ ಬಳಕೆ

ಯುವ ಜನಾಂಗ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಕಡೆಗೆ ಆಕರ್ಷಿತರಾಗುತ್ತಿರುವುದು ಕೂಡ ಪುರುಷರ ಬಂಜೆತನಕ್ಕೆ ಕಾರಣವಾಗಿದೆ. ಡ್ರಗ್ಸ್ ಬಳಕೆಯಿಂದ ನಿಗದಿತ ಪ್ರಮಾಣದಲ್ಲಿ ವೀರ್ಯಾಣು ಉತ್ಪಾದನೆಯಾಗುವುದಿಲ್ಲ, ಇಷ್ಟೇ ಅಲ್ಲ ದೇಹದಲ್ಲಿನ ವೀರ್ಯಾಣು ಶಕ್ತಿ ಕಳೆದುಕೊಳ್ಳಲಿದೆ. . ಹೆಚ್ಚಿನ ಡ್ರಗ್ಸ್ ವ್ಯಸನಿಗಳಿಗೆ DNA ಸಮಸ್ಯೆ ಕೂಡ ಎದುರಾಗಲಿದೆ.

ಒತ್ತಡ

ಒತ್ತಡ

ನಗರೀಕರಣದ ಉದ್ಯೋಗ ಒತ್ತಡದಿಂದ ಮುಕ್ತವಾಗಿಲ್ಲ. ಕೆಲಸದಲ್ಲಿನ ಹೆಚ್ಚಿನ ಒತ್ತಡದಿಂದ ಆತ್ಮಹತ್ಯೆಗೂ ಯತ್ನಿಸಿದ ಊದಾಹರಣೆಗಳು ಸಾಕಷ್ಟಿವೆ. ಕೆಲಸದಲ್ಲಿನ ಒತ್ತಡ, ಕೌಟುಂಬಿಕ ಒತ್ತಡ ಸೇರಿದಂತೆ ಒತ್ತಡದ ಪರಿಣಾಮ ಪುರಷರಲ್ಲಿ ವೀರ್ಯಾಣು ಸಮಸ್ಸೆಯಾಗುತ್ತಿದೆ. ಹಾರ್ಮೋನ್ ಉತ್ಪಾದನೆ ಕುಂಠಿತಗೊಂಡು ವೀರ್ಯಾಣು ಕೊರೆತೆಯಾಗುತ್ತಿದೆ. ಅಧ್ಯಯನದ ಪ್ರಕಾರ ಮಾನಸಿಕ ಒತ್ತಡ ಪುರುಷರ ವೀರ್ಯಾಣು ಉತ್ಪಾದನೆಗೆ ತೊಡಕಾಗಿದೆ.

ಮಧುಮೇಹ

ಮಧುಮೇಹ

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಟೈಪ್ 2 ಮಧುಮೇಹ ಕೂಡ ಬಂಜೆತನಕ್ಕೆ ಕಾರಣವಾಗಿದೆ. ಮಧುಮೇಹದಿಂದ ಪುರುಷರಲ್ಲಿ ವೀರ್ಯಾಣುಗಳು ಕುಗ್ಗುವುದಿಲ್ಲ, ಆದರೆ ಅಂಡಾಣು ಜೊತೆ ಕೂಡುವ ಸಾಮರ್ಥ್ಯ ಕಡಿಮೆಯಾಗುವುದು. ಇದರಿಂದ ಮಕ್ಕಳಾಗದಿರುವ ಸಮಸ್ಯೆ ಹೆಚ್ಚು. ಮಧುಮೇಹಿಗಳಲ್ಲಿ ಟೆಸ್ಟೋಸ್ಟಿರೋನ್ ಪ್ರಮಾಣ ಕೂಡ ಕಡಿಮೆಯಾಗುವುದು ಎಂದು ಅಧ್ಯಯನಗಳು ಹೇಳುತ್ತಿದೆ. ಇದರಿಂದ ಕೂಡ ಬಂಜೆತನ ಉಂಟಾಗುವುದು.

ಬಿಗಿಯಾದ ಒಳ ಉಡುಪು

ಬಿಗಿಯಾದ ಒಳ ಉಡುಪು

ಅತಿ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಪುರುಷರಲ್ಲಿ ವೀರ್ಯಾಣು ಪ್ರಮಾಣ ಕುಗ್ಗಲಿದೆ. ಆಧುನಿಕ ಶೈಲಿಗೆ ಅನುಗುಣವಾಗಿ ಪುರುಷರ ತಮ್ಮ ವಸ್ತ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಇದರಲ್ಲಿ ಟೈಟ್ ಫಿಟ್(ಬಿಗಿಯಾದ ಉಡುಪು) ಧರಿಸಿ ತುಂಬಾ ಹೊತ್ತು ಇರುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಬಿಗಿಯಾದ ಒಳ ಉಡುಪಿನಿಂದ ಉಷ್ಣತೆ ಹೆಚ್ಚಾಗಲಿದೆ. ಇದರಿಂದ ಪುರುಷರ ವೀರ್ಯಾಣು ಉತ್ಪಾದನೆ ಕುಗ್ಗಲಿದೆ.

ಮೊಬೈಲ್ ಫೋನ್ ಬಳಕೆ

ಮೊಬೈಲ್ ಫೋನ್ ಬಳಕೆ

ಮೊಬೈಲ್ ಫೋನ್ ಜೀವನದ ಅಂಗವಾಗಿ ಮಾರ್ಪಟ್ಟಿದೆ. ಅತಿಯಾದ ಫೋನ್ ಬಳಕೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರತಿ ದಿನ 4 ಗಂಟೆಗೂ ಹೆಚ್ಚು ಸಮಯ ಮೊಬೈಲ್ ಫೋನ್ ಬಳಕೆ ಮಾಡಿದರೆ ಪುರುಷರಲ್ಲಿ ವೀರ್ಯಾಣು ಕೊರತೆಯಾಗಲಿದೆ. ಪುರಷರು ಹೆಚ್ಚಾಗಿ ಮೊಬೈಲ್ ಫೋನ್‌ಗಳನ್ನು ತಮ್ಮ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಫೋನ್ ರೇಡಿಯೇಶನ್‌ನಿಂದಾಗಿ ಪುರುಷರ ವೀರ್ಯಾಣು ಉತ್ಪಾದನೆ ಮೇಲೆ ಹೊಡೆತ ನೀಡಲಿದೆ.

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ

ಭಾರತದಲ್ಲಿ ಬಿಸಿ ನೀರಿನ ಸ್ನಾನಕ್ಕೆ ವಿಶೇಷ ಪ್ರಾತನಿದ್ಯವಿದೆ. ಜ್ವರ, ಶೀತ ಸೇರಿದಂತೆ ಇತರ ಸಮಸ್ಯೆಗಳಿಂದ ದೂರವಿರಲೂ ಬಿಸಿ ನೀರಿನ ಸ್ನಾನದ ಮೊರೆ ಹೋಗುತ್ತಾರೆ. ಆದರೆ ಬಿಸಿ ನೀರಿನ ಸ್ನಾನ ಕೂಡ ಪುರುಷರ ವೀರ್ಯಾಣು ಕೊರತೆಗೆ ಕಾರಣವಾಗಲಿದೆ. 98 ಡಿಗ್ರಿಗೂ ಹೆಚ್ಚಿಗೆ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷರ ವೀರ್ಯಾಣು ಉತ್ಪಾದನೆ ಕಡಿಮೆಯಾಗಲಿದೆ.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಅತಿ ಹೆಚ್ಚು ಸೋಯಾ ಉತ್ಪನ್ನಗಳು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣು ಸಮಸ್ಯೆ ತಲೆದೋರುತ್ತಿದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಸೋಯಾ ಉತ್ಪನ್ನಗಳು ಪುರುಷರ ಹಾರ್ಮೋನ್ ಉತ್ಪತ್ತಿಯಲ್ಲಿ ಏರಿಳಿತ ಮಾಡುತ್ತವೆ. ಇದರಿಂದ ವೀರ್ಯಾಣು ಶಕ್ತಿ ಕುಂದಲಿದೆ. ಸೋಯಾ ಉತ್ಪನ್ನಗಳ ಸೇವನೆ ಪುರುಷರ ಬಂಜೆತನಕ್ಕೆ ಕಾರಣವಾಗಲಿದೆ.

ಸ್ಟಿರಾಯ್ಡ್

ಸ್ಟಿರಾಯ್ಡ್

ಬಾಡಿ ಬಿಲ್ಡ್‌ಗಾಗಿ ಕೆಲವರು ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುತ್ತಾರೆ. ಸ್ಟಿರಾಯ್ಡ್ ತೆಗೆದುಕೊಂಡಾಗ ದೇಹವು ನೋಡಲು ಕಟ್ಟುಮಸ್ತಾಗಿ ಕಾಣುವುದು. ಆದರೆ ಇದರಿಂದ ಆರೋಗ್ಯಕ್ಕೆ ಅಡ್ಡಪರಿಣಾಮ ಉಂಟಾಗುವುದು. ಯಾರು ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೋ ಅವರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಇದರಿಂದಲೂ ಪುರುಷರಲ್ಲಿ ಬಂಜೆತನ ಕಾಡುವುದು.

ಆರೋಗ್ಯಕರ ಜೀವನ ಶೈಲಿ, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ, ಯೋಗ ಮಾಡುವುದು, ದೈಹಿಕ ವ್ಯಯಾಮ ಮಾಡುವುದು, ಆರೋಗ್ಯರ ಆಹಾರ ಶೈಲಿ ಪಾಲಿಸಿದರೆ ಪುರುಷರಲ್ಲಿ ಸಂತಾನೋತ್ವತ್ತಿ ಸಾಮರ್ಥ್ಯ ಹೆಚ್ಚುವುದು.

English summary

Reasons That Cause Low Sperm Count

According to many studies, every 1 out of 10 couples suffer from fertility problems and the reason is low men sperm count. The facts state, to conceive the male partner has to release at least 40 million sperms per ejaculation
X
Desktop Bottom Promotion