For Quick Alerts
ALLOW NOTIFICATIONS  
For Daily Alerts

ಆ್ಯಕ್ಸಿಸ್ ಹೈಪರ್ಸೋಮ್ನಿಯಾ ಕಾಯಿಲೆ: ವರ್ಷದ 300 ದಿನಗಳು ನಿದ್ದೆಯಲ್ಲೇ ಕಳೆಯುವ ವ್ಯಕ್ತಿ

|

ನಿಮಗೆಲ್ಲಾ ಕುಂಭಕರ್ಣನ ಕತೆ ಗೊತ್ತಿರುತ್ತದೆ ಅಲ್ವಾ? ಇನ್ನು ಸ್ವಲ್ಪ ಅಧಿಕ ಹೊತ್ತು ನಿದ್ದೆ ಮಾಡುವವರನ್ನು ಮನೆಯಲ್ಲಿ 'ಎಷ್ಟು ಹೊತ್ತು ನಿದ್ದೆ ಮಾಡುತ್ತೀಯಾ? ಒಳ್ಳೆ.... ಕುಂಭಕರ್ಣನ ಹಾಗೆ' ಎಂದು ಬೈಯ್ಯುವುದೂ ಉಂಟು. ಕೆಲವರು ಇಂದು ಮಲಗಿದರೆ ಏಳಲು ನಾಳೆ ಮಧ್ಯಾಹ್ನವಾಗಬಹುದು, ಇನ್ನು ಕೆಲವರು ಎರಡು ದಿನ ಕೂಡ ನಿದ್ದೆ ಮಾಡುತ್ತಾರೆ ಆದರೆ ಇಲ್ಲೊಬ್ಬ ವ್ಯಕ್ತಿ ಥೇಟ್‌ ಕುಂಭಕರ್ಣನಂತೆಯೇ ವರ್ಷದ 300 ದಿನಗಳನ್ನು ನಿದ್ದೆಯಲ್ಲೇ ಕಳೆಯುತ್ತಾನಂತೆ.

Rajasthan man sleeps 300 days a year due to axis hypersomnia disorder; know causes, symptoms and treatment of this disease in Kannada

ಈ ಕುಂಭಕರ್ಣ ಇರುವುದು ರಾಜಸ್ಥಾನದ ನಾಗೌರ್‌ನಲ್ಲಿ. ಈತ ಒಮ್ಮೆ ಮಲಗಿದರೆ 25 ದಿನಗಳವರೆಗೆ ಗಾಢ ನಿದ್ದೆ ಮಾಡುತ್ತಾನಂತೆ. ಈತನ ಹೆಸರು ಪುರ್ಕಾರಂ, 23 ವರ್ಷಗಳಿಂದ ಈತನಿಗೆ ನಿದ್ದೆ ಮಾಡುವ ಕಾಯಿಲೆ ಇದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ ಆ್ಯಕ್ಸಿಸ್ ಹೈಪರ್ಸೋಮ್ನಿಯಾ ಎಂದು ಕರೆಯಲಾಗುವುದು.

42 ವರ್ಷದ ಪುರ್ಕಾರಂ ಕಳೆದ 25 ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಹೊರಗಡೆ ಕಾಣುವುದೇ ಬಲು ಅಪರೂಪ. ಮೊದ-ಮೊದಲಿಗೆ ಪುರ್ಕಾರಂ ತುಂಬಾ ಹೊತ್ತು ಮಲಗುತ್ತಿದ್ದಾಗ ಭಯಬಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆವಾಗ 15 ದಿನಗಳವರೆಗೆ ನಿದ್ದೆ ಮಾಡುತ್ತಿದ್ದರು. ವರ್ಷಗಳು ಕಳೆಯುತ್ತಿದ್ದಂತೆ ಅವರ ನಿದ್ದೆಯ ಸಮಯ ಕೂಡ ಹೆಚ್ಚಾಗುತ್ತೆ, ಈಗೀಗ 20-25 ದಿನದವರೆಗೆ ನಿದ್ದೆ ಮಾಡುತ್ತಿದ್ದಾರೆ.

ಈತ ನಿದ್ದೆ ಮಾಡುವಾಗ ಆತನನ್ನು ಸ್ನಾನ ಮಾಡಿಸುವುದು, ನಿದ್ದೆಯಲ್ಲೇ ತಿನಿಸುವುದು ಎಲ್ಲವನ್ನೂ ಮನೆಯವರೇ ಮಾಡಿಸಬೇಕಾಗುತ್ತದೆ. ನಮಗೆಲ್ಲಾ ನಿದ್ದೆ ಮಾಡಿ ಎದ್ದಾಗ ತುಂಬಾ ಆರಾಮ ಅನಿಸುವುದು, ಆದರೆ ಪುರ್ಕಾರಂಗೆ ತುಂಬಾ ದಿನಗಳ ನಿದ್ದೆ ಮಾಡುವುದರಿಂದ ತುಂಬಾ ಸುಸ್ತು ಅನಿಸುವುದು, ಅಲ್ಲದೆ ವಿಪರೀತ ತಲೆನೋವು ಇರುತ್ತದೆಯಂತೆ.

ಮಾಧ್ಯಮಗಳ ವರದಿ ಪ್ರಕಾರ ಪುರ್ಕಾರಂ ಪತ್ನಿ ಲಚ್ಮಿ ದೇವಿ ಹಾಗೂ ತಾಯಿ ಕಾನವರಿ ದೇವಿ ಮುಂದೆ ಈತನ ಆರೋಗ್ಯ ಸರಿ ಹೋಗಬಹುದು ಎಂಬ ನಿರೀಕ್ಷೆಯಿಂದ ಇದ್ದಾರೆ.

ಈ ಕಾಯಿಲೆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಆ್ಯಕ್ಸಿಸ್‌ ಹೈಪರ್‌ಸೋಮ್ನಿಯಾ ಎಂದರೇನು?

ಆ್ಯಕ್ಸಿಸ್‌ ಹೈಪರ್‌ಸೋಮ್ನಿಯಾ ಎಂದರೇನು?

ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಈ ಕಾಯಿಲೆ ಇರುವ ವ್ಯಕ್ತಿ ತುಂಬಾ ದಿನಗಳವರೆಗೆ ನಿದ್ದೆ ಮಾಡುತ್ತಾನೆ. ಮೆದುಳಿನಲ್ಲಿರುವ ಪ್ರೊಟೀನ್ TNF-alphaದಲ್ಲಿ ವ್ಯತ್ಯಾಸ ಉಂಟಾದಾಗ ಈ ಕಾಯಿಲೆ ಉಂಟಾಗುವುದು.

ಆ್ಯಕ್ಸಿಸ್‌ ಹೈಪರ್‌ಸೋಮ್ನಿಯಾ ಕಾಯಿಲೆಯು ಹೈಪರ್‌ಸೋಮ್ನಿಯಾ ಕಾಯಿಲೆಯ ವರ್ಗಕ್ಕೆ ಸೇರಿದ್ದಾಗಿದೆ. ಹೈಪರ್‌ಸೋಮ್ನಿಯಾ ಏನಾದರೂ ಆರೋಗ್ಯ ಸಮಸ್ಯೆಯಿದ್ದವರಲ್ಲಿ ಕಂಡು ಬಂದರೆ ಆಕ್ಸಿಸ್‌ ಹೈಪರ್‌ಸೋಮ್ನಿಯಾ ಇರುವ ವ್ಯಕ್ತಿಗೆ ಯಾವುದೇ ಕಾಯಿಲೆ ಇಲ್ಲದೆಯೂ ಇರಬಹುದು.

 ಆ್ಯಕ್ಸಿಸ್ ಹೈಪರ್‌ಸೋಮ್ನಿಯಾ ಕಂಡು ಹಿಡಿಯುವುದು ಹೇಗೆ?

ಆ್ಯಕ್ಸಿಸ್ ಹೈಪರ್‌ಸೋಮ್ನಿಯಾ ಕಂಡು ಹಿಡಿಯುವುದು ಹೇಗೆ?

* ವ್ಯಕ್ತಿ ವಿಪರೀತ ನಿದ್ದೆ ಮಾಡುತ್ತಿದ್ದರೆ ಈ ಕೆಳಗಿನ ಪರೀಕ್ಷೆಗಳ ಮೂಲಕ ಕಂಡು ಹಿಡಿಯಲಾಗುವುದು.

* ಎಪ್‌ವರ್ಥ್‌ ಸ್ಲೀಪಿನೆಸ್‌ ಸ್ಕೇಲ್‌ (ನಿಮ್ಮ ನಿದ್ದೆ ಪ್ರಮಾಣವನ್ನು ಅಳೆಯಲಾಗುವುದು)

* ಮಲ್ಟಿಪಲ್‌ ಸ್ಲೀಪ್‌ ಲೇಟೆನ್ಸಿ ಟೆಸ್ಟ್ ( ರೋಗಿಯನ್ನು ಹಗಲು ನಿದ್ದೆ ಮಾಡಿಸಿ ಈ ಪರೀಕ್ಷೆ ಮಾಡಲಾಗುವುದು)

* ಪಾಲಿಸೋಮ್ನೊಗ್ರಾಮ್‌ (ರೋಗಿ ಗಾಢ ನಿದ್ದೆಯಲ್ಲಿರುವಾಗ ಅವರ ಹೃದಯ ಬಡಿತ, ಆಕ್ಸಿಜನ್ ಲೆವ್, ಉಸಿರಾಟ ಇವೆಲ್ಲಾ ಪರೀಕ್ಷೆ ಮಾಡಲಾಗುವುದು)

* ಸ್ಲೀಪ್ ಡೈರಿ ( ಇದರಲ್ಲಿ ರೋಗಿ ಎಷ್ಟು ಹೊತ್ತು ನಿದ್ದೆ ಮಾಡುತ್ತಾರೆ ಎಂಬುವುದರ ಮಾಹಿತಿ ಪಡೆಯಲಾಗುವುದು)

ಕೊನೆಯದಾಗಿ

ಕೊನೆಯದಾಗಿ

ಆ್ಯಕ್ಸಿಸ್ ಹೈಪರ್‌ಸೋಮ್ನಿಯಾ ಅಥವಾ ಹೈಪರ್‌ಸೋಮ್ನಿಯಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗವಲ್ಲ. ಚಿಕಿತ್ಸೆ ಜೊತೆಗೆ ಗುಣಮಟ್ಟದ ಜೀವನಶೈಲಿ ಮೂಲಕ ಸಾಮಾನ್ಯ ಬದುಕಿಗೆ ಮರಳಬಹುದು. ಕೆಲವೇ ಕೆಲವರಿಗಷ್ಟೇ ಜೀವನಪೂರ್ತಿ ಕಾಡುವ ಸಮಸ್ಯೆಯಾಗಿದೆ.

English summary

Rajasthan man sleeps 300 days a year due to axis hypersomnia disorder; know causes, symptoms and treatment of this disease in Kannada

Rajasthan man sleeps 300 days a year due to axis hypersomnia disorder; know causes, symptoms and treatment of this disease in Kannada,
X
Desktop Bottom Promotion