For Quick Alerts
ALLOW NOTIFICATIONS  
For Daily Alerts

ಅಧಿಕ ರಕ್ತಸ್ರಾವವೇ? ಈ ಕಾರಣಗಳಲ್ಲಿ ಒಂದಾಗಿರಬಹುದು

|

ತಿಂಗಳು ಮುಟ್ಟಾದಾಗ ಮೊದಲು ಒಂದು ಮೂರು ದಿನ ರಕ್ತಸ್ರಾವ ಅಧಿಕವಿದ್ದು ನಂತರ ಕಡಿಮೆಯಾಗುವುದು. ಆದರೆ ಕೆಲವರಿಗೆ ವಿಪರೀತ ರಕ್ತಸ್ರಾವ ಕಂಡು ಬರುತ್ತದೆ. ಗಂಟೆಗೊಮ್ಮೆ ಅಥವಾ ಎರಡು-ಮೂರು ಗಂಟೆಗೊಮ್ಮೆ ಪ್ಯಾಡ್‌ ಬದಲಾಯಿಸಬೇಕಾಗುತ್ತದೆ. ಈ ರೀತಿಯ ರಕ್ತಸ್ರಾವ ಸಹಜವಲ್ಲ, ಇದರಿಂದ ರಕ್ತಹೀನತೆ ಕೂಡ ಉಂಟಾಗಬಹುದು.

ಅತ್ಯಧಿಕ ರಕ್ತಸ್ರಾವಕ್ಕೆ ಅನೇಕ ಕಾರಣಗಳಿವೆ. ಪೆಲ್ವಿಕ್‌ನಲ್ಲಿ ಸಮಸ್ಯೆ ಅಥವಾ ಥೈರಾಯ್ಡ್, ಕಿಡ್ನಿ ಅಥವಾ ಲಿವರ್‌ ಸಮಸ್ಯೆ ಇದ್ದರೂ ಅಧಿಕ ರಕ್ತಸ್ರಾವ ಉಂಟಾಗುವುದು.

ಸಾಮಾನ್ಯವಾಗಿ ಈ ಸಮಸ್ಯೆಗಳಿದ್ದರೆ ಅಧಿಕ ರಕ್ತಸ್ರಾವ ಕಂಡು ಬರುವುದು. ಆದ್ದರಿಂದ ಸಹಜಕ್ಕಿಂತ ಅಧಿಕ ರಕ್ತಸ್ರಾವ ಇದೆ ಎಂದರೆ ನಿರ್ಲಕ್ಷ್ಯ ಮಾಡಲೇಬೇಡಿ.

1.ಎಂಡೋಮೆಟ್ರೋಸಿಸ್ (ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆ)

1.ಎಂಡೋಮೆಟ್ರೋಸಿಸ್ (ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆ)

ಎಮಡೋಮೆಟ್ರೋಸಿಸ್ ನರ ಗರ್ಭಾಶಯದ ಹೊರಗಡೆ ಬೆಳೆಯುತ್ತದೆ. ಇದು ಸಂತಾನೋತ್ಪತ್ತಿ ಅಂಗವಾದ ಗರ್ಭಕೋಶ ಹಾಗೂ ಫಾಲೋಪಿಯನ್ ಟ್ಯೂಬ್‌ಗೆ ಅಂಟಿಕೊಂಡಿರುತ್ತದೆ. ಎಮಡೋಮೆಟ್ರೋಸಿಸ್‌ನಿಂದಾಗಿ ಅತ್ಯಧಿಕ ರಕ್ತಸ್ರಾವ ಉಂಟಾಗುವುದು. ಇದರಿಂದ ಬಂಜೆತನ, ಮಿಲನ ಕ್ರಿಯೆ ನಡೆಸುವಾಗ ನೋವು, ಕಿಬ್ಬೊಟ್ಟೆ ಹಾಗೂ ಸೊಂಟನೋವು ಕಂಡು ಬರುತ್ತದೆ. ಈ ರೀತಿಯ ಸಮಸ್ಯೆ 25-40 ವಯಸ್ಸು ಪ್ರಾಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

2. IUDs (ಕಾಪರ್ಟಿ)

2. IUDs (ಕಾಪರ್ಟಿ)

ಇದೊಂದು T ಶೇಪ್‌ನ ಸಾಧನವಾಗಿದ್ದು ಇದನ್ನು ಗರ್ಭನಿರೋಧಕವಾಗಿ ಬಳಸಲಾಗುವುದು. ಕೆಲವೊಂದು IUDsನಲ್ಲಿ ಹಾರ್ಮೋನ್ಸ್ ಇರುತ್ತವೆ, ಕೆಲವೊಂದಕ್ಕೆ ಇರುವುದಿಲ್ಲ. ಹಾರ್ಮೋನ್ಸ್ ಇಲ್ಲದಿರುವ IUDs ಕೆಲವೊಮ್ಮೆ ಅಧಿಕ ರಕ್ತಸ್ರಾವಕ್ಕೆ ಕಾರಣವಾಗುತ್ತೆ, ಅಲ್ಲದೆ ಇದರಿಂದಾಗಿ ಮಿಲನಕ್ರಿಯೆ ನಡೆಸುವಾಗ ನೋವು ಉಂಟಾಗುವುದು. ಗರ್ಭನಿರೋಧಕ ಧರಿಸಿದ ಮೇಲೆ ನಿಮಗೆ ಅಧಿಕ ರಕ್ತಸ್ರಾವ ಉಂಟಾಗಿದ್ದರೆ ವೈದ್ಯರನ್ನು ಕಂಡು ಸಲಹೆ ಪಡೆಯಿರಿ.

 3. ಯೂಟ್ರೈನ್ ಫಿಬೋರೈಡ್ಸ್

3. ಯೂಟ್ರೈನ್ ಫಿಬೋರೈಡ್ಸ್

ಇದು ಗರ್ಭಾಶಯದ ಸ್ನಾಯುಗಳಲ್ಲಿ ಬರುವ ಬೆಳವಣಿಗೆಯಾಗಿದೆ. ಈ ಚಿಕ್ಕ ಗಡ್ಡೆಗಳು ಗರ್ಭಾಶಯ ಒಳಗೆ ಅಥವಾ ಹೊರಗಡೆ ಬೆಳೆಯಬಹುದು. ಆದರೆ ಇವು ಕ್ಯಾನ್ಸರ್ ಗಡ್ಡೆಗಳಲ್ಲ. ಈ ರೀತಿಯಾದಾಗ ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವ, ಸೊಂಟ ನೋವು, ಮೂತ್ರ ವಿಸರ್ಜನೆಗೆ ತೊಂದರೆ, ಮಲಬದ್ಧತೆ ಮುಂತಾದ ಸಮಸ್ಯೆ ಕಂಡು ಬರುವುದು. ಈ ರೀತಿಯ ಸಮಸ್ಯೆ 30ರ ಪ್ರಾಯದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

4. ಯೂಟ್ರೈನ್ ಪಾಲಿಪ್ಸ್

4. ಯೂಟ್ರೈನ್ ಪಾಲಿಪ್ಸ್

ಯೂಟ್ರೈನ್ ಪಾಲಿಪ್ಸ್ ಎನ್ನುವುದು ಎಂಡೋಮೆಟ್ರಿಯಮ್‌ನಲ್ಲಿ ಬೆಳೆಯುವ ಗಡ್ಡೆಯಾಗಿದೆ. ಇದು ಕ್ಯಾನ್ಸರ್‌ ಗಡ್ಡೆಗಳಾಗಿರಬಹುದು ಅಥವಾ ಕ್ಯಾನ್ಸರ್‌ನ ಮುಂಚಿತ ಸೂಚನೆಯಾಗಿದೆ. ಈ ರೀತಿಯಾದಾಗ ಅನಿಯಮಿತ ಮುಟ್ಟಿನ ಸಮಸ್ಯೆ ಅಂದ್ರೆ ತಿಂಗಳಿನಲ್ಲಿ 2 ಬಾರಿ ಮುಟ್ಟಾಗುವುದು ಈ ರೀತಿಯ ತೊಂದರೆ ಕಾಣಿಸುವುದು. ಈ ರೀತಿಯ ಸಮಸ್ಯೆ ಮೆನೋಪಾಸ್ ಹಂತದಲ್ಲಿ ಕಂಡು ಬರಬಹುದು.

5.ಹಾರ್ಮೋನ್ ಅಸಮತೋಲನ

5.ಹಾರ್ಮೋನ್ ಅಸಮತೋಲನ

ಇನ್ನು ಹಾರ್ಮೋನ್‌ ಅಸಮತೋಲನ ಇದ್ದಾಗ ಕೂಡ ಅತ್ಯಧಿಕ ರಕ್ತಸ್ರಾವ ಉಂಟಾಗುತ್ತದೆ. ಆದ್ದರಿಂದ ತುಂಬಾ ರಕ್ತಸ್ರಾವ ಇದ್ದರೆ ನೀವು ವೈದ್ಯರನ್ನು ಕಂಡು ಪರಿಶೀಲಿಸಿ.

6. ಗರ್ಭಪಾತ

6. ಗರ್ಭಪಾತ

ತಿಂಗಳ ಮುಟ್ಟು ತಪ್ಪಿದಾಗ ನಂತರ ಇದ್ದಕ್ಕಿದ್ದಂತ ರಕ್ತಸ್ರಾವ ಕಂಡು ಬಂದರೆ ಅದು ಗರ್ಭಪಾತವಾಗಿರುತ್ತದೆ. ಈ ರೀತಿ ಉಂಟಾದಾಗ ಕೆಳ ಹೊಟ್ಟೆ ನೋವು ಕಂಡು ಬರುತ್ತದೆ. ಜೊತೆಗೆ ಅಧಿಕ ರಕ್ತಸ್ರಾವ ಇರುತ್ತದೆ.

7. ರಕ್ತಸ್ರಾವದ ಕಾಯಿಲೆ

7. ರಕ್ತಸ್ರಾವದ ಕಾಯಿಲೆ

ಬ್ಲೀಡಿಂಗ್‌ ಡಿಸಾರ್ಡರ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ, ಈ ಸಮಸ್ಯೆ ಇದ್ದರೆ ಗಾಯವಾದಾಗ, ಹೆರಿಗೆಯಾದಾಗ, ಸರ್ಜರಿಯಾದಾಗ ತುಂಬಾ ರಕ್ತಸ್ರಾವ ಉಂಟಾಗುವುದು.

8. ಯೂಟ್ರಸ್ ಸಮಸ್ಯೆಯಿದ್ದಾಗ ( Adenomyosis)

8. ಯೂಟ್ರಸ್ ಸಮಸ್ಯೆಯಿದ್ದಾಗ ( Adenomyosis)

ಈ ರೀತಿಯ ಸಮಸ್ಯೆಯಿದ್ದರೆ ಅಧಿಕ ರಕ್ತಸ್ರಾವ ಕಂಡು ಬರುವುದು. ಈ ರೀತಿಯ ಸಮಸ್ಯೆಯಿರುವವರಿಗೆ ಈಗಾಗಲೇ ಮಕ್ಕಳಿದ್ದರೆ ವೈದ್ಯರು ಯೂಟ್ರಸ್ ತೆಗೆಯುವಂತೆ ಸೂಚಿಸುತ್ತಾರೆ.

9. ಗರ್ಭಕೋಶದ ಕ್ಯಾನ್ಸರ್

9. ಗರ್ಭಕೋಶದ ಕ್ಯಾನ್ಸರ್

ಇನ್ನು ಗರ್ಭಕೋಶದ ಕ್ಯಾನ್ಸರ್ ಇದ್ದರೆ ಕೂಡ ಅತ್ಯಧಿಕ ರಕ್ತಸ್ರಾವ ಕಂಡು ಬರುವುದು. ಈ ಸಮಸ್ಯೆಯಿದ್ದರೆ ಹೊಟ್ಟೆ ಉಬ್ಬುವುದು, ಸೊಂಟ ನೋವು ಮುಂತಾದ ಸಮಸ್ಯೆ ಕಂಡು ಬರುವುದು.

10. ಕೆಲವೊಂದು ಔಷಧಿಗಳು

10. ಕೆಲವೊಂದು ಔಷಧಿಗಳು

ಕೆಲವೊಂದು ಔಷಧಿಗಳು ರಕ್ತವನ್ನು ತೆಳು ಮಾಡುತ್ತದೆ, ಆಗ ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವ ಉಂಟಾಗುವುದು. ನೀವು ಮತ್ಯಾವುದೋ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದು ಅಧಿಕ ರಕ್ತಸ್ರಾವ ಕಂಡು ಬಂದರೆ ನೀವು ವೈದ್ಯರಿಗೆ ತಿಳಿಸುವುದು ಒಳ್ಳೆಯದು.

English summary

Possible Causes of Heavy Menstrual Bleeding in Kannada

Here are possible causes of heavy menstual bleeding, read on...
Story first published: Wednesday, March 10, 2021, 15:10 [IST]
X
Desktop Bottom Promotion