For Quick Alerts
ALLOW NOTIFICATIONS  
For Daily Alerts

ಈ ಸಮಸ್ಯೆ ಇರುವವರು ಗೋಡಂಬಿಯಿಂದ ದೂರ ಇರುವುದೇ ಒಳಿತು!

|

ಗೋಡಂಬಿ ಸೇವನೆ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಆದರೆ ಕೆಲವರಿಗೆ ಗೋಡಂಬಿ ಅಷ್ಟು ಉತ್ತಮವಲ್ಲ. ಇದರ ಸೇವನೆಯಿಂದ ಅವರ ಆರೋಗ್ಯದಲ್ಲಿ ಏರುಪೇರಾಗುವುದು. ಹಾಗಾದರೆ, ಯಾರೂ ಗೋಡಂಬಿ ತಿನ್ನಬಾರದು, ತಿಂದರೆ ಏನಾಗುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆದರೆ, ಗೋಡಂಬಿಯ ಆರೋಗ್ಯ ಪ್ರಯೋಜನಗಳನ್ನು ಮೊದಲು ನೋಡೋಣ:

ತೂಕ ನಷ್ಟಕ್ಕೆ ಒಳ್ಳೆಯದು:

ತೂಕ ನಷ್ಟಕ್ಕೆ ಒಳ್ಳೆಯದು:

ಗೋಡಂಬಿ ಬೀಜಗಳು ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳನ್ನು ಹೊಂದಿರುವುದರಿಂದ, ಹಸಿವನ್ನು ಕಡಿಮೆ ಮಾಡುತ್ತವೆ. ಯಾವಾಗಲೂ ಹೊಟ್ಟೆ ತುಂಬಿರುವುದರಿಂದ, ಆಗಾಗ ತಿನ್ನುವುದು ಕಡಿಮೆಯಾಗಿ, ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ.

ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವುದು:

ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವುದು:

ಗೋಡಂಬಿ LDL ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು, ಬೊಜ್ಜಿಗೆ ಕಾರಣವಾಗುವುದು. ಜೊತೆಗೆ ಗೋಡಂಬಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಎಚ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೃದಯಕ್ಕೆ ಉತ್ತಮ:

ಹೃದಯಕ್ಕೆ ಉತ್ತಮ:

ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ 2007 ರ ವಿಮರ್ಶೆಯ ಪ್ರಕಾರ, ವಾರಕ್ಕೆ ನಾಲ್ಕು ಬಾರಿ ಗೋಡಂಬಿಯನ್ನು ಸೇವಿಸುವ ಜನರಿಗೆ ಹೃದ್ರೋಗದ ಅಪಾಯವು 37% ಕಡಿಮೆಯಾಗಿದೆ ಎಂದು ಹೇಳಿದೆ.

ಜೀವಕೋಶದ ಹಾನಿಯನ್ನು ತಡೆಯುವುದು:

ಜೀವಕೋಶದ ಹಾನಿಯನ್ನು ತಡೆಯುವುದು:

ಗೋಡಂಬಿ ಬೀಜಗಳು ಉತ್ಕರ್ಷಣ ನಿರೋಧಕ ಅಂಶಕ್ಕೆ ಹೆಸರುವಾಸಿಯಾಗಿದೆ. ಅವು ದೇಹಕ್ಕೆ ಹಾನಿಯನ್ನುಂಟುಮಾಡುವ ಕೋಶಗಳನ್ನು ತಡೆದು, ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೆನಪಿಡಿ, ಹುರಿದ ಗೋಡಂಬಿಗಳು ಹಸಿಗೋಡಂಬಿಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿರುತ್ತವೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು:

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು:

ಗೋಡಂಬಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಅವು ರಕ್ತದಲ್ಲಿನ ಸಕ್ಕರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ದಿನಕ್ಕೆ ಎಷ್ಟು ಗೋಡಂಬಿ ತಿನ್ನಬಹುದು?:

ದಿನಕ್ಕೆ ಎಷ್ಟು ಗೋಡಂಬಿ ತಿನ್ನಬಹುದು?:

ಒಂದು ವರದಿಯ ಪ್ರಕಾರ ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಪ್ರತಿದಿನ 28.35 ಗ್ರಾಂ ಗೋಡಂಬಿಯನ್ನು ಸೇವಿಸಬೇಕು. ಇದು ಆರೋಗ್ಯಕ್ಕೆ ಉತ್ತಮ, ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ.

ಹಾಗಾದರೆ, ಗೋಡಂಬಿ ಸೇವನೆ ಯಾರಿಗೆ ಉತ್ತಮವಲ್ಲ?:

ಹಾಗಾದರೆ, ಗೋಡಂಬಿ ಸೇವನೆ ಯಾರಿಗೆ ಉತ್ತಮವಲ್ಲ?:

ಬೊಜ್ಜಿನ ವಿರುದ್ಧ ಹೋರಾಡಲು ಬಯಸುವವರು ಗೋಡಂಬಿ ತಿನ್ನುವುದನ್ನು ತಪ್ಪಿಸಬೇಕು ಏಕೆಂದರೆ ಅವುಗಳು ಕೊಬ್ಬು ಮತ್ತು ಕ್ಯಾಲೋರಿಗಳಿಂದ ತುಂಬಿರುತ್ತವೆ.

ನಟ್ಸ್ ಗಳ ಅಲರ್ಜಿ ಅವುಗಳಿಂದ ದೂರವಿರಬೇಕು. ನಿಮಗೆ ಅಲರ್ಜಿ ಇದ್ದರೆ, ಗೋಡಂಬಿ ತಿಂದ ನಂತರ ಅಸ್ವಸ್ಥರಾಗುತ್ತೀರಿ. ಜೊತೆಗೆ ಮಲಬದ್ಧತೆಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡ ಹೊಂದಿರುವವರು ಕಟ್ಟುನಿಟ್ಟಾಗಿ ಗೋಡಂಬಿಯಿಂದ ದೂರವಿಡರಬೇಕು.

ಮೂತ್ರಪಿಂಡದ ಸಮಸ್ಯೆ ಇರುವವರು ಗೋಡಂಬಿಯನ್ನು ದೂರವಿಡಬೇಕು. ಇಲ್ಲವಾದಲ್ಲಿ ಮೂತ್ರಪಿಂಡದ ಹಾನಿಯಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಏಕೆಂದರೆ ಅವುಗಳು ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುತ್ತವೆ.

ಅಮೈನೋ ಆಸಿಡ್ಗೆ ಸೂಕ್ಷ್ಮತೆ ಹೊಂದಿರುವವರು ತಿನ್ನಬಾರದು. ಏಕೆಂದರೆ, ಗೋಡಂಬಿಯು ಜ್ಯಾಮ್-ಪ್ಯಾಕ್ಡ್ ಅಮೈನೋ ಆಮ್ಲಗಳಾದ ಟೈರಮೈನ್ ಮತ್ತು ಫೆನೈಲೆಥೈಲಮೈನ್ ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಾದರೂ, ಅಮೈನೋ ಆಮ್ಲಗಳಿಗೆ ಸೆನ್ಸಿಟಿವ್ ಆಗಿರುವ ಜನರಲ್ಲಿ ತಲೆನೋವಿಗೆ ಕಾರಣವಾಗಬಹುದು.

English summary

People Who Should Strictly Avoid Eating Kaju/ Cashew in Kannada

Here we talking about People Who Should Strictly Avoid Eating Kaju/ Cashew in Kannada, read on
Story first published: Tuesday, November 30, 2021, 14:57 [IST]
X
Desktop Bottom Promotion