For Quick Alerts
ALLOW NOTIFICATIONS  
For Daily Alerts

Mental Health: ಅತಿಯಾಗಿ ಯೋಚನೆ ಮಾಡುವುದರಿಂದ ಹೀಗೂ ಆಗಬಹುದು ಗೊತ್ತಾ..?

|

ಕೆಲವೊಮ್ಮೆ ನಾವು ಆಗಿ ಹೋದ ಘಟನೆಗಳ ಬಗ್ಗೆ ಆಗಲಿ, ಮುಂದೆ ನಡೆಯಬೇಕಾದ ಕೆಲಸ ಕಾರ್ಯಗಳ ಬಗ್ಗೆ ಆಗಲಿ ಹೆಚ್ಚು ಯೋಚನೆ ಮಾಡುತ್ತೇವೆ. ಕೆಲವೊಮ್ಮೆ ಯೋಚನೆಗಳಲ್ಲೇ ಮುಳುಗಿಹೋಗಿ, ಎಲ್ಲವನ್ನೂ ಮರೆತುಬಿಡುತ್ತೇವೆ. ಆದರೆ ಅತಿಯಾಗಿ ಯೋಚಿಸುವುದೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಕೆಲವೊಮ್ಮೆ ಯೋಚನೆ ಮಾಡಿ ತಲೆಹೋಳಾದಂತೆ ಅನಿಸುವುದು ಇದೇ ಕಾರಣಕ್ಕೂ ಆಗಿರಬಹುದು. ಮನಸ್ಸಿಗಾಗುವ ಒತ್ತಡ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದಾದರೂ ಹೇಗೆ, ಅದನ್ನು ನಿಲ್ಲಿಸುವುದು ಹೇಗೆ ಎನ್ನುವ ಡಿಟೇಲ್ಸ್‌ ಇಲ್ಲಿದೆ ನೋಡಿ.

ನಾವು ತೆಗೆದುಕೊಳ್ಳಬೇಕಾದ ದೊಡ್ಡ ನಿರ್ಧಾರ ಅಥವಾ ನಾವು ವ್ಯವಹರಿಸಲು ಪ್ರಯತ್ನಿಸುತ್ತಿರುವ ಸಮಸ್ಯೆಯಿರುವಾಗ ನಾವು ಹೆಚ್ಚು ಯೋಚಿಸುತ್ತೇವೆ. ಅತಿಯಾಗಿ ಯೋಚಿಸುವುದು ಪುನರಾವರ್ತಿತ ಮತ್ತು ಅನುತ್ಪಾದಕ ಚಿಂತನೆಯ ಪ್ರಕ್ರಿಯೆಯ ಮಾದರಿಯಾಗಿದೆ. ನಿಜ ಹೇಳುವುದಾದರೆ ಎಲ್ಲರೂ ಕೆಲವೊಮ್ಮೆ ಅತಿಯಾಗಿ ಯೋಚಿಸುತ್ತೇವೆ. ಪ್ರತಿ ದಿನದ ಜಂಜಾಟದ ಬುದುಕಿನಲ್ಲಿ ಯೋಚನೆಗೆ ಇಳಿಯದವರು ಯಾರಿಲ್ಲ ಹೇಳಿ. ಯಾವುದೇ ವಿಚಾರವಾಗಲಿ ಅದನ್ನು ಬಗೆಹರಿಸುವ ದೃಷ್ಟಿಯಿಂದಲೋ ಅದಕ್ಕೆ ಸೂಕ್ತ ಕಾರಣವನ್ನು ಕಂಡುಹಿಡಿಯುವ ಉದ್ದೇಶದಿದಮಲೋ ಇದು ನಮಗೆ ಸಮಸ್ಯೆಗಳ ನ್ನು ಬಗೆಹರಿಸುವಂತಹ ದಾರಿಯಾಗಿ ಕಂಡರೂ, ನಾವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವ ಮನಸ್ಸಿನ ಬಗ್ಗೆ ಗಮನ ಹರಿಸುವುದಿಲ್ಲ.

1. ಅತಿಯಾದ ಯೋಚನೆಗಳಿಗೆ ಇವೇ ಕಾರಣಗಳು

1. ಅತಿಯಾದ ಯೋಚನೆಗಳಿಗೆ ಇವೇ ಕಾರಣಗಳು

ಕೆಲವೊಮ್ಮೆ ನಮ್ಮ ಕೆಲಸಗಳ ಬಗ್ಗೆ ಅತಿಯಾಗಿ ಯೋಚಿಸುತ್ತೇವೆ, ಅದ್ಯಾಕೆ ಹೀಗಾಯ್ತು, ಹೀಗೆ ಮಾಡಿದ್ದಿದ್ದರೆ ಸರಿಯಾಗ್ತಿತ್ತೋ ಏನೋ, ಇದರ ಬದಲು ಏನು ಮಾಡಬಹುದಿತ್ತು ಎನ್ನುವ ಹಿಂದೆ ಆಗಿ ಹೋದ ಘಟನೆಗಳ ಬಗ್ಗೆ ಚಿಂತಿಸುತ್ತೇವೆ. ಮುಂದೆ ಅದು ತಪ್ಪಾಗದೇ ಇರಲು ಯೋಚನೆ ಮಾಡುವುದು ಸೂಕ್ತವೆಂದು ತೋರುತ್ತದೆ. ಆದರೆ ನಮ್ಮ ನಿಯಂತ್ರಣದಲ್ಲಿ ಇಲ್ಲದ ಆಗಿ ಹೋದ ವಿಷಯಗಳ ಬಗ್ಗೆ ಇತರರು ಮಾತಾಡಿಕೊಂಡಾಗ ನಾವು ಅತಿಯಾಗಿ ಯೋಚಿಸುತ್ತೇವೆ.

ಕೆಲವೊಮ್ಮೆ ಭವಿಷ್ಯದಲ್ಲಿ ಏನಾಗಬಹುದೋ ಎನ್ನುವುದನ್ನು ಚಿಂತಿಸುತ್ತೇವೆ. ಮುಂದೆ ಹೇಗಿರಬಹುದು ಎನ್ನುವುದರ ಕುರಿತಾಗಿ ನಾವೇ ಕೆಲವೊಮ್ಮೆ ಋಣಾತ್ಮಕವಾಗಿ ಕಲ್ಪಸಿಕೊಂಡು, ಊಹೆಗಳನ್ನು ಮಾಡುತ್ತೇವೆ. ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯಗಳ ಬಗ್ಗೆ ಯೋಚಿಸುತ್ತೇವೆ. ''ಇಂಟರ್‌ವ್ಯೂವ್‌ನಲ್ಲಿ ಸೆಲೆಕ್ಟ್‌ ಆಗದಿದ್ದರೆ ಏನು ಮಾಡೋದಪ್ಪಾ'', ''ಆಗಬೇಕೆಂದಿರುವ ಕೆಲಸ ಸಮಯಕ್ಕೆ ಸರಿಯಾಗಿ ಆಗದಿದ್ದರೆ..? ಸಮಸ್ಯೆಗಳು ಕಾಣಿಸಿಕೊಂಡರೆ ಎಂದು ನಮಗೆ ನಾವೇ ಪ್ರಶ್ನೆಗಳನ್ನು ಹಾಕಿಕೊಂಡು, ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಈ ರೀತಿಯ ಅತಿಯಾದ ಆಲೋಚನೆಗಳು ನಮ್ಮ ಮನಸ್ಸಿನ ಮೇಲೆ ಒತ್ತಡ ಹೇರುವಂತೆ ಮಾಡುವುದು ನಾವೇನೇ. ಅದರ ಬದಲಾಗಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಬಹುದಲ್ಲವೇ, ಎನ್ನುವ ಯೋಚನೆ ಮಾಡುವುದಿಲ್ಲ.

ಪ್ರತಿ ಬಾರಿಯೂ ಅದೇ ಆಲೋಚನೆಗಳು ಪುನರಾವರ್ತನೆಯಾಗುತ್ತವೆ. ಸಮಸ್ಯೆ ಅಥವಾ ಸಮಸ್ಯೆಯ ಬಗ್ಗೆ ಮೆಲುಕು ಹಾಕುವುದು ಉತ್ತಮವಲ್ಲ. ನಮ್ಮ ತಪ್ಪುಗಳು, ಯಾವುದೇ ನ್ಯೂನತೆಗಳು ಅಥವಾ ಸಮಸ್ಯೆಯ ಬಗ್ಗೆ ಆಲೋಚನೆಗಳು ನಮ್ಮನ್ನು ಒತ್ತಡಕ್ಕೀಡುಮಾಡಬಹುದು. ಅತಿಯಾಗಿ ಯೋಚಿಸುವುದು ನಿಮ್ಮ ದೈನಂದಿನ ಜೀವನದಲ್ಲಿ ಏರುಪೇರನ್ನು ತರಬಹುದು. ಹೇಗೆಂದರೆ ಅತಿಯಾದ ಯೋಚನೆಯಲ್ಲಿ ಮುಳುಗಿ, ನಾವು ಆಗಬೇಕಾದ ಕಾರ್ಯಗಳ ಬಗ್ಗೆ ಗಮನವನ್ನು ಹರಿಸುವುದಿಲ್ಲ. ಇದೂ ಒಂದು ಸಮಸ್ಯೆಗೆ ಕಾರಣವಾಗಬಹುದು. ಆಲೋಚನೆಗಳನ್ನು ಮನಸ್ಸಿಗೆ ಹೇರದಿರುವುದು ಬಹಳ ಕಷ್ಟ. ಸುಮ್ಮನೆ ಕುಳಿತಾಗ, ಬಸ್ಸಿನಲ್ಲಿ ಓಡಾಡೋವಾಗಲಾದರೂ ಯೋಚನೆ ಮಾಡದೆ ಬಿಡುವವರು ನಾವಲ್ಲ. ಅತಿಯಾದ ಆಲೋಚನೆ ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

2. ಯಾಕೆ ಅತಿಯಾಗಿ ಯೋಚಿಸುತ್ತೇವೆ ಗೊತ್ತಾ..?

2. ಯಾಕೆ ಅತಿಯಾಗಿ ಯೋಚಿಸುತ್ತೇವೆ ಗೊತ್ತಾ..?

ನಮ್ಮ ಆಲೋಚನಾ ಸಾಮರ್ಥ್ಯವು ಮಾನವರಾಗಿ ನಾವು ಹೊಂದಿರುವ ದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ. ಸವಾಲುಗಳನ್ನು ಎದುರಿಸಿದಾಗ ಅಥವಾ ಯೋಜಿಸುವ ಅಗತ್ಯವಿದ್ದಾಗ, ಪರಿಹಾರಗಳನ್ನು ಕಂಡುಹಿಡಿಯಲು ನಾವು ನಮ್ಮ ಆಲೋಚನಾ ಸಾಮರ್ಥ್ಯವನ್ನು ಬಳಸುತ್ತೇವೆ.ಸಮಸ್ಯೆಯ ಬಗ್ಗೆ ಕಠಿಣವಾಗಿ ಯೋಚಿಸುವುದು ಅದನ್ನು ಎದುರಿಸಲು ಮಾರ್ಗಗಳೊಂದಿಗೆ ಬರಲು ನಮಗೆ ಸಹಾಯ ಮಾಡುತ್ತದೆ ಎಂದು ನಾವಂದುಕೊಂಡಿರುತ್ತೇವೆ.

3. ಅತಿಯಾದ ಯೋಚನೆಗೆ ಕಡಿವಾಣ ಹಾಕುವ ವಿಧಾನ

3. ಅತಿಯಾದ ಯೋಚನೆಗೆ ಕಡಿವಾಣ ಹಾಕುವ ವಿಧಾನ

ಅತಿಯಾದ ಆಲೋಚನೆಯ ಬಗ್ಗೆ ಕೆಲವು ಸಕಾರಾತ್ಮಕ ನಂಬಿಕೆಗಳನ್ನು ನಾವು ಹಿಡಿದಿಟ್ಟುಕೊಳ್ಳುತ್ತೇವೆ ಅದು ಅಭ್ಯಾಸದಿಂದ ಹೊರಬರಲು ಕಷ್ಟವಾಗುತ್ತದೆ ನಾವು ಅತಿಯಾಗಿ ಯೋಚಿಸಿದಾಗ, ನಾವು ನಿಯಂತ್ರಣ ಮತ್ತು ಆತ್ಮವಿಶ್ವಾಸ ಅನುಭವಿಸುತ್ತೇವೆ. ಇದು ನಮಗೆ ಸಮಸ್ಯೆಯನ್ನು ಪರಿಹರಿಸುವ ಅರ್ಥವನ್ನು ನೀಡುತ್ತದೆ. ಇದು ಅಲ್ಪಾವಧಿಯಲ್ಲಿ ಆತಂಕವನ್ನು ಕಡಿಮೆ ಮಾಡುವಂತಹ "ಸುರಕ್ಷತಾ ನಡವಳಿಕೆ" ಆಗಿರಬಹುದು. ಆದರೆ ನಮ್ಮ ಆಲೋಚನೆಗಳು ನಕಾರಾತ್ಮಕವಾಗಿದ್ದರೆ ಅದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

4. ಯೋಚನೆಯನ್ನು ಹೆಚ್ಚಿಸುವ ಅಂಶಗಳನ್ನು ಪರಿಗಣಿಸಿ

4. ಯೋಚನೆಯನ್ನು ಹೆಚ್ಚಿಸುವ ಅಂಶಗಳನ್ನು ಪರಿಗಣಿಸಿ

ಯಾವ ಯೋಚನೆಗೂ ನಿರ್ದಿಷ್ಟ ಕಾರಣವಂತು ಇದ್ದೇ ಇರುತ್ತದೆ, ನಿಮ್ಮನ್ನು ಅತಿಯಾಗಿ ಯೋಚಿಸುವಂತೆ ಮಾಡುವ ವಿಷಯ ಯಾವುದು ಎನ್ನುವುದನ್ನು ಗಮನಿಸಿ. ಈ ಅರಿವು ನಿಮ್ಮ ಅತಿಯಾದ ಚಿಂತನೆಯ ಮಾದರಿಯ ಮೇಲೆ ಹಿಡಿತವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಇದೇ ರೀತಿಯ ಒತ್ತಡಗಳನ್ನು ಎದುರಿಸುವಾಗ ಆರೋಗ್ಯಕರ ನಿಭಾಯಿಸುವ ಕಾರ್ಯವಿಧಾನಗಳನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ.

5. ನಿಮ್ಮ ಆಲೋಚನೆಗಳಿಗೇ ಸವಾಲು ಹಾಕಿ

5. ನಿಮ್ಮ ಆಲೋಚನೆಗಳಿಗೇ ಸವಾಲು ಹಾಕಿ

ನಿಮ್ಮ ಆಲೋಚನೆಗಳು ಕಾರ್ಯಪ್ರವೃತ್ತವಾದಾಗ ಅದು ನಿಮಗೆ ಸಹಾಯಕವಾಗಿದೆಯೇ, ಸಹಾಯಕವಾಗಿಲ್ಲವೇ ಎನ್ನುವುದನ್ನು ನಿಮಗೆ ನೀವೆ ಪ್ರಶ್ನೆ ಹಾಕಿಕೊಳ್ಳಿ. ಈ ರೀತಿಯಾಗಿ ಯೋಚನೆ ಮಾಡುವುದು ಸರಿಯೇ ಎನ್ನುವುದನ್ನು ಅರಿತುಕೊಳ್ಳಿ. ಇದು ಆಲೋಚನೆಯ ಸಮಸ್ಯೆಯನ್ನು ತಂದೊಡ್ಡುವ ವಿಷಯವನ್ನು ಬಗೆಹರಿಸಲು ಸಹಾಯ ಮಾಡುತ್ತದೆ. ಅದು ವರ್ಕ್ಔಟ್‌ ಆಗದಿದ್ದಲ್ಲಿ, ಹೋಗಲಿ ಬಿಡಿ ಎಂದು ವರ್ತಮಾನದ ವಿಷಯಗಳ ಬಗ್ಗೆ ಮನಸ್ಸು ಬದಲಾಯಿಸಿ.

6. ಆರೋಗ್ಯದ ಮೇಲೆ ಅತಿಯಾದ ಚಿಂತನೆಯ ಪರಿಣಾಮ

6. ಆರೋಗ್ಯದ ಮೇಲೆ ಅತಿಯಾದ ಚಿಂತನೆಯ ಪರಿಣಾಮ

ಮೊದಲೇ ಹೇಳಿದಂತೆ ಅತಿಯಾಗಿ ಯೋಚಿಸುವುದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಲವು ಋಣಾತ್ಮಕ ಪರಿಣಾಮಗಳನ್ನು ಬೀರಬಹುದು. ಅತಿಯಾಗಿ ಯೋಚಿಸುವುದು ನಿಮ್ಮ ದೈನಂದಿನ ಜೀವನವನ್ನು ಅಸ್ತವ್ಯಸ್ತ ಮಾಡಬಹುದು. ತಿಳಿಯಾಗಿದ್ದ ನೀರಿನಲ್ಲಿ ಕಲ್ಲೆಸೆದು ರಾಡಿ ಮಾಡಿದಂತೆಯೂ ಆಗಬಹುದು. ಉದಾಹರಣೆಗೆ ನೀವು ನಿಮ್ಮ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವಾಗ ನಿಮ್ಮ ಆಫೀಸ್‌ ಕೆಲಸಗಳು, ಬಾಸ್‌ನ ಒತ್ತಡ, ಕಿರಿಕಿರಿಗಳ ಬಗ್ಗೆ ಯೋಚನೆ ಮಾಡಿಕೊಂಡರೂ ಸಾಕೂ, ಸಂತಸವೆಲ್ಲಾ ಕಳೆದು ಮುಖ ಪೇಲವವಾಗುತ್ತದೆ. ನಾಳೆಯ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.

ಅತಿಯಾಗಿ ಯೋಚಿಸುವುದು ನಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳ ಮೇಲೆ ಪರಿಣಾಮ ಬೀರಬಹುದು ಏಕೆಂದರೆ ಅದು ನಮ್ಮನ್ನು ಸಮಸ್ಯೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಅಧ್ಯಯನದ ಪ್ರಕಾರ ಖಿನ್ನತೆಯಿರುವ ವ್ಯಕ್ತಿಗಳಲ್ಲಿ ಆಲೋಚನೆಯು ಋಣಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ. ಅತಿಯಾಗಿ ಯೋಚಿಸುವ ಪುನರಾವರ್ತಿತ ಮಾದರಿಗಳು ಆತಂಕ ಮತ್ತು ಖಿನ್ನತೆಯಂತಹ ಪರಿಸ್ಥಿತಿಗಳೊಂದಿಗೆ ಸಂಬಂಧ ಹೊಂದಿರಬಹುದು. ಅತಿಯಾದ ಆತಂಕವು ಸಾಮಾನ್ಯ ಆತಂಕದ ಅಸ್ವಸ್ಥತೆಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ, ಆದರೆ ಯಾವುದೋ ಯೋಚನೆಯಲ್ಲಿ ಮುಳುಗಿರುವುದು ಖಿನ್ನತೆಗೆ ಸಂಬಂಧಿಸಿರಬಹುದು. ಅತಿಯಾದ ಯೋಚನೆಗಳು ನಮ್ಮನ್ನು ಕಾಡಿದಾಗ ನಿದ್ದೆಯೂ ಬಳಿಗೆ ಸುಳಿಯದು.

7. ಅತಿಯಾಗಿ ಯೋಚಿಸುವುದನ್ನು ಎದುರಿಸಲು ಕೆಲವು ಸಲಹೆಗಳು

7. ಅತಿಯಾಗಿ ಯೋಚಿಸುವುದನ್ನು ಎದುರಿಸಲು ಕೆಲವು ಸಲಹೆಗಳು

ನಮ್ಮ ಆಲೋಚನಾ ಪ್ರಕ್ರಿಯೆಗಳು ನಮ್ಮನ್ನು ಭೂತಕಾಲಕ್ಕೆ ಅಥವಾ ಭವಿಷ್ಯಕ್ಕೆ ಕೊಂಡೊಯ್ಯುವುದರಿಂದ, ನಮ್ಮ ಅರಿವನ್ನು ಪ್ರಸ್ತುತ ಕ್ಷಣಕ್ಕೆ ತರುವುದು ಮುಖ್ಯವಾಗಿದೆ. ನಮ್ಮ ಆಲೋಚನೆಗಳ ಬಗ್ಗೆ ತಿಳಿದಿರುವುದರಿಂದ ಅವುಗಳನ್ನು ನಿರ್ಣಯಿಸುವಂತಹ ದೃಷ್ಟಿಕೋನವು ಯೋಚನೆಯನ್ನು ನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಆಲೋಚನೆಗಳು ಭವಿಷ್ಯ ಬಗ್ಗೆ, ಪ್ರಸ್ತುತವೂ ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವಾಗ ಭವಿಷ್ಯದ ಅತಿಯಾಗಿ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ ಎನ್ನುವುದನ್ನು ಮನಗಾಣಬೇಕು. ಯಾಕೆಂದರೆ ಇಂದಿನ ಕಾಲದಲ್ಲಿ ನಾಳೆ ಏನಾಗುತ್ತದೆ ಎನ್ನುವ ಅರಿವು ಯಾರಿಗೂ ಇರುವುಇಲ್ಲ. ಹಾಗಿದ್ದ ಮೇಲೆ ನಾಳೆಯ ಬಗ್ಗೆ ಹೆಚ್ಚು ಚಿಂತಿಸುವುದರ ಫಲವೇನು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

8. ಚಿಂತೆ ಮಾಡಲು ಸಮಯ

8. ಚಿಂತೆ ಮಾಡಲು ಸಮಯ

ನೀವು ಹೆಚ್ಚು ಯೋಚನೆ ಮಾಡುತ್ತೀರಿ, ಪ್ರತಿಕ್ಷಣವೂ ಯೋಚನೆಯಲ್ಲೇ ಮುಳುಗಿ ಹೋಗುತ್ತಿದ್ದೀರಿ ಎಂದು ಭಾವಿಸಿದರೆ,, ನಿಮ್ಮ ಆಲೋಚನೆಗಳನ್ನು ಮುಂದೂಡಲು ಪ್ರಯತ್ನಿಸಿ. ಚಿಂತಿಸಲು ನಿರ್ದಿಷ್ಟ ಸಮಯ ಮತ್ತು ಸ್ಥಳವನ್ನು ಹೊಂದಿಸಿ. ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದಾಗಿ, ಆಲೋಚನೆಗಳ ಸುರುಳಿಯನ್ನು ಮುರಿಯಲು ಇದು ನಿಮಗೆ ಸಹಾಯ ಮಾಡುತ್ತದೆ. ಎರಡನೆಯದಾಗಿ, ನೀವು ನಿರ್ದಿಷ್ಟ ಸಮಯದಲ್ಲಿ ಆಲೋಚನೆಗಳನ್ನು ಮರುಪರಿಶೀಲಿಸಿದಾಗ, ನಿಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ನಿಮ್ಮ ಚಿಂತೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ನಿಮಗೆ ಸಾಧ್ಯವಾಗುತ್ತದೆ.

9. ಯೋಚನೆಯ ಬದಲಿಗೆ ಇನ್ನೇನಾದರೂ ಮಾಡಿ

9. ಯೋಚನೆಯ ಬದಲಿಗೆ ಇನ್ನೇನಾದರೂ ಮಾಡಿ

ನೀವು ಅತಿಯಾಗಿ ಯೋಚಿಸಿದಾಗ ಪ್ರಸ್ತುತ ನಡೆಯುತ್ತಿರುವ ವಿಷಯಗಳ ಬಗ್ಗೆ ನೀವು ಆಸಕ್ತಿ ಅಥವಾ ನಿಯಂತ್ರಣವನ್ನು ಕಳೆದುಕೊಳ್ಳುವ ಭಾವನೆಯನ್ನು ಅನುಭವಿಸಬಹುದು. ಶ್ರವಣ, ದೃಷ್ಟಿ, ಸ್ಪರ್ಶ, ರುಚಿ ಮತ್ತು ಅನುಭವದಂತಹ ಸಂವೇದನಾ ಅನುಭವಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮನ್ನು ವರ್ತಮಾನಕ್ಕೆ ಇಳಿಸಲು ಪ್ರಯತ್ನಿಸಿ. ಉದಾಹರಣೆಗೆ, ನಿಮ್ಮ ಸುತ್ತಲಿನ ಕೆಂಪು ಬಣ್ಣದಲ್ಲಿರುವ 5 ವಿಷಯಗಳನ್ನು ಗಮನಿಸಿ, ನಿಮ್ಮ ಸುತ್ತಲಿನ ಶಬ್ದಗಳನ್ನು ಕೇಳಿ, ಹುಳಿ ನಿಂಬೆ ರುಚಿ, ಅಥವಾ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ನಿಮ್ಮನ್ನು ನೀವು ಎಚ್ಚರಿಸುವುದು ಯೋಚನೆಗಳಿಗೆ ಕಡಿವಾಣ ಹಾಕುತ್ತದೆ.

10. ವಿಶ್ರಾಂತಿ ಮಾಡಿ

10. ವಿಶ್ರಾಂತಿ ಮಾಡಿ

ಅತಿಯಾಗಿ ಯೋಚಿಸುವುದು ನಿಮಗೆ ಆತಂಕವನ್ನುಂಟುಮಾಡುತ್ತದೆ ಮತ್ತು ಆತಂಕದ ಭಾವನೆಯು ಅತಿಯಾದ ಆಲೋಚನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿವಾರಿಸಲು. ದೀರ್ಘ ಉಸಿರಾಟ, ನಡಿಗೆಗೆ ಹೋಗುವುದು, ನಿಮ್ಮ ಸಾಕುಪ್ರಾಣಿಗಳೊಂದಿಗೆ ಆಟವಾಡುವುದು ಅಥವಾ ನಿಮ್ಮನ್ನು ಶಾಂತವಾಗಿ ಮತ್ತು ಆರಾಮವಾಗಿರುವಂತೆ ಮಾಡುವ ಯಾವುದೇ ಇತರ ಚಟುವಟಿಕೆಗಳಂತಹ ಕೆಲವು ವಿಶ್ರಾಂತಿ ತಂತ್ರಗಳಲ್ಲಿ ತೊಡಗಿಸಿಕೊಂಡಾಗ ಆಲೋಚನಾ ಪ್ರಕ್ರಿಯೆಯನ್ನು ಮುರಿಯಬಹುದು.

ಹೆಚ್ಚು ಯೋಚನೆ ಮಾಡಿ, ಒತ್ತಡಕ್ಕೆ ಸಿಲುಕಿದರೆ ನಿಮ್ಮ ಸಮಸ್ಯೆಯನ್ನು ಬಗೆಹರಿಸುವಂತಹ ಆಪ್ತಸಮಾಲೋಚಕರ ಸಲಹೆಯನ್ನು ಪಡೆಯಿರಿ. ಅತಿಯಾದ ಯೋಚನೆ ಉತ್ತಮವಲ್ಲ. ಅತಿಯಾದ ಆಲೋಚನೆಯಿಂದಲೇ ಮನಸ್ಸಿಗೆ ವಿಶ್ರಾಂತಿ ಇರದು, ಮನಸ್ಸಿಗೆ ವಿಶ್ರಾಂತಿ ಇಲ್ಲದಿದ್ದರೆ, ಒತ್ತಡವು ಆವರಿಸುತ್ತದೆ, ನಿದ್ದೆಕೆಟ್ಟು ಯೋಚನೆಯಲ್ಲೇ ಮುಳುಗಿರುತ್ತೇವೆ. ಇದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಉತ್ತಮವಲ್ಲ.ಯೋಚನೆ ಮಾಡಿ ಆದರೆ ಸಕಾರಾತ್ಮಕ ಯೋಚನೆಗಳು ಇರಲಿ. ಒತ್ತಡಮುಕ್ತ ಬದುಕಿಗೆ ಪೂರಕವಾಗಿರಲಿ.

English summary

Overthinking Causes, Effects and Tips to Avoid in Kannada

Here we are discussing about Overthinking Causes, Effects and Tips to Avoid in Kannada. Read more.
Story first published: Tuesday, May 24, 2022, 11:52 [IST]
X
Desktop Bottom Promotion