For Quick Alerts
ALLOW NOTIFICATIONS  
For Daily Alerts

ಅತಿಯಾಗಿ ನಿದ್ದೆ ಮಾಡುವವರಿಗೆ ಮುಂದೆ ಎದುರಾಗಲಿದೆ ಈ ಆರೋಗ್ಯ ಸಮಸ್ಯೆಗಳು

|

ವಾರಪೂರ್ತಿ ದುಡಿಯುವ ಜನರು ಭಾನುವಾರಕ್ಕಾಗಿ ಕಾಯುತ್ತಿರುತ್ತಾರೆ. ಆ ಕಾಯುವಿಕೆ ಹಿಂದಿರುವ ಒಂದು ಕಾರಣವೆಂದರೆ ತಡವಾಗಿ ಏಳಬಹುದು ಎನ್ನುವುದು. ರಜೆ ಸಿಕ್ಕಾಗಲೆಲ್ಲ ನಿದ್ರಿಸಲು ಕಾಯುವವರು ಒಂದು ಕಡೆಯಾದರೆ, ಇನ್ನೂ ಕೆಲವರು ಬಾಲ್ಯದಿಂದಲೂ ತಡವಾಗಿಯೇ ಏಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಹೀಗೆ ಮಾಡುವುದು ಎಂತಹ ಸಮಸ್ಯೆಗೆ ಕಾರಣವಾಗುತ್ತಿದೆ ಗೊತ್ತಾ?

ಆರೋಗ್ಯವಂತ ಮನುಷ್ಯನಿಗೆ ಸುಮಾರು 6-8ಗಂಟೆಗಳ ಅವಧಿಯ ನಿದ್ದೆಯ ಅಗತ್ಯಿವಿರುತ್ತದೆ. ಇದಕ್ಕೂ ಮೀರಿ ನಿದ್ದೆ ಮಾಡುವ ಜನರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂಬುದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಲೇಖನದಲ್ಲಿ ಈ ಕುರಿತು ಮತ್ತಷ್ಟು ನೀಡಿದ್ದೇವೆ.

ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವವರು ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಧುಮೇಹ:

ಮಧುಮೇಹ:

ದೀರ್ಘಕಾಲ ನಿದ್ದೆ ಮಾಡುವುದರಿಂದ ವ್ಯಕ್ತಿಯ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಇದರಿಂದ ಆತನ ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯ ಅಧಿಕವಾಗಿದೆ. PLOS ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 9 ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಿಸುವುದು ವ್ಯಕ್ತಿಯ ದೇಹದಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಆದ್ದರಿಂದ ಇನ್ನು ಮೇಲೆ ಆದರೂ ನಿದ್ದೆ ಕಡಿಮೆ ಮಾಡಿ, ಸಾಧ್ಯವಾದಷ್ಟು ಚಟುವಟಿಕೆಗಳಲ್ಲಿ ಭಾಗವಹಿಸಿ.

ಹೃದ್ರೋಗಗಳು:

ಹೃದ್ರೋಗಗಳು:

ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚು ನಿದ್ರೆ ಮಾಡುವುದರಿಂದ ಹೃದಯದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಈ ಅಧ್ಯಯನದ ಪ್ರಕಾರ, 9 ರಿಂದ 11 ಗಂಟೆಗಳ ನಿದ್ದೆ ಮಾಡುವ ಮಹಿಳೆಯರು ಹೃದಯ ಕಾಯಿಲೆ ಪಡೆಯುವ ಸಾಧ್ಯತೆಗಳನ್ನು ಶೇಕಡಾ 38 ರಷ್ಟು ಹೊಂದಿದ್ದಾರೆ. ಆದ್ದರಿಂದ ಮಹಿಳೆಯರು ಈ ವಿಚಾರದಲ್ಲಿ ಜಾಗರೂಕರಾಗಿರಬೇಕು.

ಖಿನ್ನತೆಯ ಸಾಧ್ಯತೆಗಳು:

ಖಿನ್ನತೆಯ ಸಾಧ್ಯತೆಗಳು:

ಅತಿಯಾದ ನಿದ್ದೆ ಕೂಡ ಖಿನ್ನತೆಗೆ ಕಾರಣವಾಗಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು ಅಲ್ವಾ?, ಹೌದು, PLOS ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಅತಿಯಾಗಿ ಮಲಗುವುದು ಖಿನ್ನತೆಗೆ ಕಾರಣವಾಗಬಹುದು. ಇದು ಮಾತ್ರವಲ್ಲ, ದೀರ್ಘಕಾಲದವರೆಗೆ ಮಲಗುವುದರಿಂದ, ವ್ಯಕ್ತಿಯಲ್ಲಿ ಆಲಸ್ಯ ಅಥವಾ ಜಡತ್ವ ಹೆಚ್ಚಾಗುತ್ತದೆ. ಇದರಿಂದ ಅವರ ಮನಸ್ಸು ದೈನಂದಿನ ಕೆಲಸದಲ್ಲಿ ತೊಡಗಿಕೊಳ್ಳುವುದಿಲ್ಲ. ಇದು, ಹೆಚ್ಚಿನ ಸಮಸ್ಯೆಗೆ ಕಾರಣವಾಗಬಹುದು.

ಬೆನ್ನು ನೋವು:

ಬೆನ್ನು ನೋವು:

ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು, ಹೆಚ್ಚು ಹೊತ್ತು ಮಲಗಿದರೆ, ಅವರಿಗೆ ಬೆನ್ನು ನೋವು, ಕುತ್ತಿಗೆ, ಭುಜದ ನೋವಿನ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವಾಗ ನೋವುಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಆಗಾಗ ಎದ್ದು ತಿರುಗಾಡುತ್ತಿರಬೇಕು ಅಥವಾ ವ್ಯಾಯಾಮ ಮಾಡುತ್ತಿರಬೇಕು.

ಸ್ಥೂಲಕಾಯ ಅಥವಾ ಬೊಜ್ಜು:

ಸ್ಥೂಲಕಾಯ ಅಥವಾ ಬೊಜ್ಜು:

ದೀರ್ಘಕಾಲ ನಿದ್ರಿಸುವುದರಿಂದ, ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ವ್ಯಕ್ತಿಯು ತನ್ನ ಹೆಚ್ಚಿನ ಸಮಯವನ್ನು ತಿನ್ನುವುದು, ಕುಳಿತುಕೊಳ್ಳುವುದು ಅಥವಾ ಮಲಗುವುದರಲ್ಲಿ ಕಳೆಯುತ್ತಾನೆ. ಇದು ಮತ್ತಷ್ಟು ತೂಕ ಹೆಚ್ಚಾಗಲು ಮತ್ತು ಬೊಜ್ಜುಗೆ ಕಾರಣವಾಗುತ್ತದೆ. ಇದಷ್ಟೇ ಅಲ್ಲ, ಈ ಕಾರಣದಿಂದಾಗಿ ಜೀರ್ಣಕ್ರಿಯೆ ಪ್ರಕ್ರಿಯೆಯು ನಿಧಾನವಾಗಲು ಪ್ರಾರಂಭವಾಗಿ, ಮಲಬದ್ಧತೆಯ ಸಮಸ್ಯೆಗೆ ವ್ಯಕ್ತಿಯನ್ನು ಗುರಿ ಮಾಡುತ್ತದೆ.

English summary

Oversleeping: The Effects & Health Risks of Sleeping Too Much in Kannada

Here we talking about Oversleeping: The Effects & Health Risks of Sleeping Too Much in Kannada, read on
Story first published: Tuesday, August 3, 2021, 12:39 [IST]
X
Desktop Bottom Promotion