For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ಲಾಕ್‌ಡೌನ್ ಎಫೆಕ್ಟ್: ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದ 85,000 ಜನರಿಗೆ ಬಂದಿದೆ ಏಡ್ಸ್!

|

ಕೋವಿಡ್‌ 19 ಲಾಕ್‌ಡೌನ್‌ ಮನುಷ್ಯರ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರಿದೆ. ಬೇರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಕೆಲವರಿಗೆ ಒಬೆಸಿಟಿ, ಬಿಪಿ, ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾಯ್ತು. ನಿಯಮಿತ ವ್ಯಾಯಾಮ ಇಲ್ಲದಿರುವುದರಿಂದ ಸಮಸ್ಯೆ ಹೆಚ್ಚಾಗಿತ್ತು. ಆದರೆ ಈಗ ಅಧ್ಯಯನದಲ್ಲಿ ಬರೀ ಈ ರೀತಿಯ ಸಮಸ್ಯೆಗಳಷ್ಟೇ ಅಲ್ಲ ಲೈಂಗಿಕ ಕಾಯಿಲೆಯಾದ ಏಡ್ಸ್ ಕೂಡ ಹೆಚ್ಚಾಗಿದೆ ಎಂಬ ಅಂಶ ತಿಳಿದು ಬಂದಿದೆ.

ಕೋವಿಡ್‌ 19 ಲಾಕ್‌ಡೌನ್‌ ಮನುಷ್ಯರ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರಿದೆ. ಬೇರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಕೆಲವರಿಗೆ ಒಬೆಸಿಟಿ, ಬಿಪಿ, ಕೊಲೆಸ್ಟ್ರಾಲ್‌ ಸಮಸ್ಯೆ ಹೆಚ್ಚಾಯ್ತು. ನಿಯಮಿತ ವ್ಯಾಯಾಮ ಇಲ್ಲದಿರುವುದರಿಂದ ಸಮಸ್ಯೆ ಹೆಚ್ಚಾಗಿತ್ತು. ಆದರೆ ಈಗ ಅಧ್ಯಯನದಲ್ಲಿ ಬರೀ ಈ ರೀತಿಯ ಸಮಸ್ಯೆಗಳಷ್ಟೇ ಅಲ್ಲ ಲೈಂಗಿಕ ಕಾಯಿಲೆಯಾದ ಏಡ್ಸ್ ಕೂಡ ಹೆಚ್ಚಾಗಿದೆ ಎಂಬ ಅಂಶ ತಿಳಿದು ಬಂದಿದೆ. ಲಾಕ್‌ಡೌನ್‌ ವೇಳೆ ಕೆಲವರು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ದೇಶದಲ್ಲಿ ಲೈಂಗಿಕ ಸೋಂಕು ಹೆಚ್ಚಿದೆ ಎಂಬ ಆಘಾತಕಾರಿ ವಿಷಯ ತಿಳಿದು ಬಂದಿದೆ. ಸುಮಾರು 85,000 ಜನರಿಗೆ ಲೈಂಗಿಕ ಸೋಂಕು ತಗುಲಿದೆಯಂತೆ. ಅದರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ, ಅಲ್ಲಿಯ 10, 498 ಜನರಿಗೆ ಏಡ್ಸ್ ರೋಗ ತಗುಲಿದೆ. ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಸುಮಾರು 9,521 ಜನರಿಗೆ ಲೈಂಗಿಕ ಸೋಂಕು ತಗುಲಿದೆ. ಕರ್ನಾಟಕದಲ್ಲಿ 8,947 ಜನರಿಗೆ ಹೆಚ್‌ಐವಿ ವೈರಸ್‌ ತಗುಲಿದೆ. ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ 3, 037 ಮತ್ತು 2,757 ಕೇಸ್‌ಗಳು ಕಂಡು ಬಂದಿರುವುದಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿದೆ. ಅಫೀಷಿಯಲ್‌ ಡಾಟಾ ಪ್ರಕಾರ ಭಾರತದಲ್ಲಿ ಕಳೆದ 10 ವರ್ಷಗಳಿಂದ ಸುಮಾರು 17 ಲಕ್ಷ ಏಡ್ಸ್ ಸೋಂಕಿತರಿದ್ದಾರೆ, ಏಡ್ಸ್‌ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿತ್ತು. ಆದರೆ ಲಾಕ್‌ಡೌನ್‌ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಏಡ್ಸ್‌ ರೋಗಿಗಳು ಹೆಚ್ಚಾಗಿದ್ದಾರೆ. 2020ರ ಅಂಕಿ ಅಂಶದ ಪ್ರಕಾರ 23, 18, 731 ಏಡ್ಸ್‌ ಸೋಂಕಿತರಿದ್ದಾರೆ. ಅದರಲ್ಲಿ 81,430 ಮಕ್ಕಳಿದ್ದಾರೆ. ಹೆಚ್‌ಐವಿ ವೈರಸ್‌ ಮನುಷ್ಯನ ಶರೀರವನ್ನು ಸೇರಿದಾಗ ಅದು ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುತ್ತೆ. ಹೆಚ್‌ಐವಿ ಸೋಂಕು ಅನೇಕ ರೀತಿಯಲ್ಲಿ ಹರಡುತ್ತದೆ. ಲೈಂಗಿ ವ್ಯಕ್ತಿಗೆ ಬಳಸಿದ ಸೂಜಿಯನ್ನು ಬಳಸುವುದರಿಂದ, ಹೆಚ್ಐವಿ ವ್ಯಕ್ತಿಯ ರಕ್ತವನ್ನು ದಾನ ಪಡೆದಾಗ(ಈ ರೀತಿಯಾಗಲ್ಲ, ಪರೀಕ್ಷೆ ಮಾಡಿ ನೀಡಲಾಗುತ್ತಿದೆ), ತಾಯಿಯಿಂದ ಮಗುವಿಗೆ ಹರಡುತ್ತದೆ. ಬಹುಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಹೆಚ್ಐವಿ ವೈರಸ್‌ ಹರಡುತ್ತದೆ.

ಲಾಕ್‌ಡೌನ್‌ ವೇಳೆ ಕೆಲವರು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ದೇಶದಲ್ಲಿ ಲೈಂಗಿಕ ಸೋಂಕು ಹೆಚ್ಚಿದೆ ಎಂಬ ಆಘಾತಕಾರಿ ವಿಷಯ ತಿಳಿದು ಬಂದಿದೆ. ಸುಮಾರು 85,000 ಜನರಿಗೆ ಲೈಂಗಿಕ ಸೋಂಕು ತಗುಲಿದೆಯಂತೆ. ಅದರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ, ಅಲ್ಲಿಯ 10, 498 ಜನರಿಗೆ ಏಡ್ಸ್ ರೋಗ ತಗುಲಿದೆ.

ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಸುಮಾರು 9,521 ಜನರಿಗೆ ಲೈಂಗಿಕ ಸೋಂಕು ತಗುಲಿದೆ. ಕರ್ನಾಟಕದಲ್ಲಿ 8,947 ಜನರಿಗೆ ಹೆಚ್‌ಐವಿ ವೈರಸ್‌ ತಗುಲಿದೆ. ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ 3, 037 ಮತ್ತು 2,757 ಕೇಸ್‌ಗಳು ಕಂಡು ಬಂದಿರುವುದಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿದೆ.

ಅಫೀಷಿಯಲ್‌ ಡಾಟಾ ಪ್ರಕಾರ ಭಾರತದಲ್ಲಿ ಕಳೆದ 10 ವರ್ಷಗಳಿಂದ ಸುಮಾರು 17 ಲಕ್ಷ ಏಡ್ಸ್ ಸೋಂಕಿತರಿದ್ದಾರೆ, ಏಡ್ಸ್‌ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿತ್ತು. ಆದರೆ ಲಾಕ್‌ಡೌನ್‌ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಏಡ್ಸ್‌ ರೋಗಿಗಳು ಹೆಚ್ಚಾಗಿದ್ದಾರೆ.

2020ರ ಅಂಕಿ ಅಂಶದ ಪ್ರಕಾರ 23, 18, 731 ಏಡ್ಸ್‌ ಸೋಂಕಿತರಿದ್ದಾರೆ. ಅದರಲ್ಲಿ 81,430 ಮಕ್ಕಳಿದ್ದಾರೆ.

ಹೆಚ್‌ಐವಿ ವೈರಸ್‌ ಮನುಷ್ಯನ ಶರೀರವನ್ನು ಸೇರಿದಾಗ ಅದು ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುತ್ತೆ. ಹೆಚ್‌ಐವಿ ಸೋಂಕು ಅನೇಕ ರೀತಿಯಲ್ಲಿ ಹರಡುತ್ತದೆ. ಲೈಂಗಿ ವ್ಯಕ್ತಿಗೆ ಬಳಸಿದ ಸೂಜಿಯನ್ನು ಬಳಸುವುದರಿಂದ, ಹೆಚ್ಐವಿ ವ್ಯಕ್ತಿಯ ರಕ್ತವನ್ನು ದಾನ ಪಡೆದಾಗ(ಈ ರೀತಿಯಾಗಲ್ಲ, ಪರೀಕ್ಷೆ ಮಾಡಿ ನೀಡಲಾಗುತ್ತಿದೆ), ತಾಯಿಯಿಂದ ಮಗುವಿಗೆ ಹರಡುತ್ತದೆ. ಬಹುಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಹೆಚ್ಐವಿ ವೈರಸ್‌ ಹರಡುತ್ತದೆ.

English summary

Over 85,000 Indians contracted HIV by unprotected intercourse during Covid-19 lockdown

Over 85,000 Indians contracted HIV by unprotected intercourse during Covid-19 lockdown, read on....
X
Desktop Bottom Promotion