For Quick Alerts
ALLOW NOTIFICATIONS  
For Daily Alerts

ಏಪ್ರಿಲ್‌ನಿಂದ ಪ್ಯಾರಾಸಿಟಮೋಲ್‌ ಸೇರಿ 800 ಅವಶ್ಯಕ ಔಷಧಿಗಳ ಬೆಲೆ ಹೆಚ್ಚಳ

|

ಪ್ಯಾರಾಸಿಟಮೋಲ್‌ ಸೇರಿದಂತೆ ಅವಶ್ಯಕ ಔಷಧಿಗಳಿಗೆ ಶೇ. 10.7ರಷ್ಟು ಬೆಲೆ ಏರಿಕೆ ಮಾಡಿರುವುದಾಗಿ National Pharmaceutical Pricing Authority of India ಘೋಷಿಸಿದೆ.

Over 800 Essential Drugs and Medicines Prices to get expensive by 10% from April

ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸಲು ಬಳಸುತ್ತಿರುವ ಸುಮಾರು 800ಕ್ಕೂ ಅಧಿಕ ಔಷಧಿಗಳ ಬೆಲೆ ಏಪ್ರಿಲ್‌ನಿಂದ ಅಧಿಕವಾಗಲಿದೆ.

ಶೀತ, ಜ್ವರ, ಹೃದಯ ಸಂಬಂಧಿ ಸಮಸ್ಯೆ, ಅತ್ಯಧಿಕ ರಕ್ತದೊತ್ತಡ, ತ್ವಚೆ ಸಮಸ್ಯೆ, ರಕ್ತಹೀನತೆ ಇಂಥ ಸಾಮಾನ್ಯವಾಗಿ ಕಂಡು ಬರುತ್ತಿರುವ ಸಮಸ್ಯೆಗಳಿಗೆ ನೀಡಲಾಗುವ ಔಷಧಿಗಳ ಬೆಲೆ ಏರಿಕೆಯಾಗಿದೆ. ಪ್ಯಾರಾಸಿಟಮೋಲ್‌, ಹೈಡ್ರೋಕ್ಲೋರೈಡ್‌, ಫೆನೋಬಾರ್ಬಿಟೋನ್, ಫೆನಿಟೋಯಿನ್ ಸೋಡಿಯಂ, ಅಜಿತ್ರೊಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಹೀಗೆ ಅತೀ ಹೆಚಚು ಬಳಕೆಯಾಗುತ್ತಿರುವ ಔಷಧಿಗಳ ಬೆಲೆ ಏರಿಕೆಯಾಗಿದೆ.

ಈ ಔಷಧಿಗಳ ಹೋಲ್‌ಸೇಲ್‌ ಬೆಲೆ ಶೇ. 10.7ರಷ್ಟುಅಧಿಕವಾಗಿದ್ದು, ರೀಟೈಲ್‌ ಶಾಪ್‌ಗಳಲ್ಲಿ ಶೇ. 17ರಷ್ಟು ಬೆಲೆ ಏರಿಕೆಯಾಗಲಿದೆ.

ಪ್ಯಾರಾಸಿಟಮೋಲ್‌ ಮುಂತಾದ ಔಷಧಿಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. ಏಕೆಂದರೆ ಜ್ವರ, ಸೀತ, ಮೈಕೈ ನೋವು ಈ ರೀತಿಯ ಸಮಸ್ಯೆಗಳು ಸರ್ವೇ ಸಾಮಾನ್ಯ, ಇನ್ನು ಹೃದಯ ಸಂಬಂಧಿ ಸಮಸ್ಯೆಗಳೂ ಹೆಚ್ಚಿನವರಲ್ಲಿದೆ. ಅಗ್ಯತ ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ಇದೀಗ ಏಪ್ರಿಲ್ 1ರಿಂದ ಅವಶ್ಯಕ ಔಷಧಗಳ ಬೆಲೆಯೂ ಹೆಚ್ಚಲಿದೆ.

English summary

Over 800 Essential Drugs and Medicines Prices to get expensive by 10% from April

Over 800 Essential Drugs and Medicines Prices to get expensive by 10% from April
Story first published: Saturday, March 26, 2022, 16:49 [IST]
X
Desktop Bottom Promotion