For Quick Alerts
ALLOW NOTIFICATIONS  
For Daily Alerts

ಜಾಗ್ರತೆವಹಿಸದಿದ್ದರೆ ಒಮಿಕ್ರಾನ್‌ ಭಾರತದಲ್ಲಿ 3ನೇ ಅಲೆ ಸೃಷ್ಟಿಸಬಹುದು, ವಿಜ್ಞಾನಿಗಳ ಎಚ್ಚರಿಕೆ!

|

ಕೊರೊನಾವೈರಸ್‌ ಹೊಸ ರೂಪಾಂತರ ವಿಶ್ವಕ್ಕೆ ಆತಂಕವನ್ನು ತಂದೊಡ್ಡಿದೆ. ಡೆಲ್ಟಾಗಿಂತಲೂ 6 ಪಟ್ಟು ವೇಗವಾಗಿ ಹರಡುವ ಈ ವೈರಸ್‌ ಭಾರತದಲ್ಲೂ ಪತ್ತೆಯಾಗಿದ್ದು ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರ ಕೋವಿಡ್‌ ವರದಿ ನೆಗೆಟಿವ್ ಬಂದರೂ ಒಂದು ವಾರದವರೆಗೆ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.

ಆದರೆ ಈ ಒಮಿಕ್ರಾನ್‌ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆವಹಿಸದಿದ್ದರೆ ಭಾರತದಲ್ಲಿ ಕೊರೊನಾ 3ನೇ ಅಲೆಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ, ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ:

ಒಮಿಕ್ರಾನ್‌ ಇತರ ವೈರಸ್‌ಗಿಂತ ಭಿನ್ನವಾಗಿದ್ದು?

ಒಮಿಕ್ರಾನ್‌ ಇತರ ವೈರಸ್‌ಗಿಂತ ಭಿನ್ನವಾಗಿದ್ದು?

ಇದುವವರೆಗೆ ಕೊರೊನಾವೈರಸ್‌ನ ಅನೇಕ ರೂಪಾಂತರ ತಳಿಗಳಾಗಿವೆ, ಅವುಗಲ್ಲಿ ಹೆಚ್ಚು ಅಪಾರಿಯಾಗಿದಿದ್ದದು ಡೆಲ್ಟಾ. ಭಾರತದಲ್ಲಿ ಕೊರೊನಾ 2ನೇ ಅಲೆಗೆ ಡೆಲ್ಟಾ ವೈರಸ್‌ ಕಾರಣವಾಗಿತ್ತು. ಈ ವೈರಸ್‌ನಿಂದ ಸಾವಿರಾರು ಸಂಖ್ಯೆಯಲ್ಲಿ ಸಾವು ಸಂಭವಿಸಿತ್ತು. ಜನರು ಲಸಿಕೆ ಪಡೆಯುತ್ತಿರುವುದರಿಂದ ಡೆಲ್ಟಾ ವೈರಸ್‌ ಮಟ್ಟ ಹಾಕಲು ಸಾಧ್ಯವಾಯಿತು. ಈ ಒಮಿಕ್ರಾನ್ ಇದುವರೆಗೆ ಮಾರಾಣಾಂತಿಕವಾಗಿಲ್ಲ, ಆದರೆ ವೇಗವಾಗಿ ಹರಡುತ್ತಿದೆ. ತುಂಬಾ ಅಧಿಕ ಜನರಿಗೆ ಹರಡಿದರೆ ಸಾವು- ನೋವಿನ ಸಂರ್ಕಯೆ ಹೆಚ್ಚಬಹುದು, ಆದ್ದರಿಂದ ಒಮಿಕ್ರಾನ್‌ ತಡೆಟಗಟ್ದಿದ್ದರೆ ಭಾರತದಲ್ಲಿ 3ನೇ ಅಲೆಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

CSIR (nstitute of Genomics and Integrative Biology) ನಿರ್ದೇಶಕ ಅನುರಾಗ್‌ ಅಗರ್‌ವಾಲ್‌ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ 'ಈ ಹೊಸ ರೂಪಾಂತರ ವೈರಸ್‌ ತಗುಲಿ ರೋಗ ನಿರೋಧಕ ಶಕ್ತಿ ಸಂಪೂರ್ಣ ಕಡಿಮೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ ' ಎಂದು ಹೇಳಿದ್ದಾರೆ.

ಲಸಿಕೆ ಪಡೆಯದಿದ್ದರೆ ಕೂಡಲೇ ಪಡೆದುಕೊಳ್ಳಿ

ಲಸಿಕೆ ಪಡೆಯದಿದ್ದರೆ ಕೂಡಲೇ ಪಡೆದುಕೊಳ್ಳಿ

ಇದುವರೆಗೆ ಕೊರೊನಾ ಲಸಿಕೆ ಪಡೆಯದಿದ್ದರೆ ತಡಮಾಡದೆ ಕೊರೊನಾ ಲಸಿಕೆ ಪಡೆದು ಕೊಳ್ಳುವಂತೆಯೂ ಅನುರಾಗ್‌ ಅಗರ್‌ವಾಲ್‌ ಹೇಳಿದ್ದಾರೆ. ಏಕೆಂದರೆ ಈ ವೈರಸ್‌ನ ಕುರಿತು ಇದುವರೆಗೆ ಅಧ್ಯಯನ ಮಾಡಿದ್ದಲ್ಲಿ ತಿಳಿದು ಬಂದ ಅಂಶವೆಂದರೆ ಸೋಂಕು ತಗುಲಿ ಆಸ್ಪತ್ರೆ ಸೇರುತ್ತಿರುವವರಲ್ಲಿ ಲಸಿಕೆ ಪಡೆಯದವರ ಸಂಖ್ಯೆ ಅಧಿಕವಿದೆ. ಆದ್ದರಿಂದ ಕೊರೊನಾ ಲಸಿಕೆ ಪಡೆಯುವುದು ಒಳ್ಳೆಯದು.

ವೈದ್ಯಕೀಯ ಸಿಬ್ಬಂದಿಗಳು ಬೂಸ್ಟರ್‌ ತೆಗೆದುಕೊಂಡರೆ ಒಳ್ಳೆಯದು ಎಂಬುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಒಮಿಕ್ರಾನ್‌ ತುಂಬಾ ವೇಗವಾಗಿ ಹರಡುತ್ತಿದೆ ದಕ್ಷಿಣ ಆಫ್ರಿಕದಲ್ಲಿ ಒಮಿಕ್ರಾನ್‌ ಪತ್ತೆಯಾಗಿ ವಾರ ಕಳೆಯುವಷ್ಟರಲ್ಲಿ 30 ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ ಸೋಂಕು ಪತ್ತೆಯಾದವರ ಪ್ರಾಥಮಿಕ ಹಾಗೂ ದ್ವಿತೀಯಾ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್‌ ಮಾಡಿ, ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಎಚ್ಚರವಹಿಸಲಾಗಿದೆ.

ಒಮಿಕ್ರಾನ್‌ ಅಪಾಯ ಯಾರಿಗೆ ಕಡಿಮೆ?

ಒಮಿಕ್ರಾನ್‌ ಅಪಾಯ ಯಾರಿಗೆ ಕಡಿಮೆ?

ಒಮ್ಮೆ ಡೆಲ್ಟಾ ವೈರಸ್‌ ತಗುಲಿ ಚೇತರಿಸಿಕಂಡು, 2 ಡೋಸ್‌ ಕೊರೊನಾ ಲಸಿಕೆ ಪಡೆದವರಲ್ಲಿ ಈ ಸೋಂಕಿನ ಅಪಾಯ ಕಡಿಮೆ ಎಂದು ಅಧ್ಯಯನಗಳು ಹೇಳುತ್ತಿವೆ.

ಒಮಿಕ್ರಾನ್‌ ಸೋಂಕು ದೊಡ್ಡವರಿಗೆ ತಗುಲಿರುವಷ್ಟು ಪ್ರಮಾಣದಲ್ಲಿ ಮಕ್ಕಳಲ್ಲಿಯೂ ಕಂಡು ಬರುತ್ತಿರುವುದರಿಂದ ಎಚ್ಚರವಹಿಸಬೇಕಾಗಿದೆ.

ಒಮಿಕ್ರಾನ್‌ ರೂಪಾಂತರ ಬಗ್ಗೆ ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆಯಿಂದಿರಿ

ಒಮಿಕ್ರಾನ್‌ ರೂಪಾಂತರ ಬಗ್ಗೆ ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆಯಿಂದಿರಿ

* ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿ

* ಆಗಾಗ ಕೈಗಳನ್ನು ತೊಳೆಯಿರಿ

* ಇನ್ನೂ ಲಸಿಕೆ ಹಾಕಿಲ್ಲ ಎಂದಾದರೆ ಕೂಡಲೇ ಲಸಿಕೆ ಹಾಕಿಸಿ

* ಜನರ ಗುಂಪು ಇರುವ ಕಡೆ ಹೋಗಬೇಡಿ.

FAQ's
  • ಒಮಿಕ್ರಾನ್‌ ಕರೊನಾವೈರಸ್‌ ವೇಗವಾಗಿ ಹರಡುವುದೇ?

    ಒಮಿಕ್ರಾನ್‌ ವೈರಸ್‌ನ ಇಲ್ಲಿಯವರೆಗಿನ ಗುಣ ಲಕ್ಷಣಗಳನ್ನು ನೋಡಿದಾಗ ಇದು ಡೆಲ್ಟಾ ವೈರಸ್‌ಗಿಂತ ವೇಗವಾಗಿ ಹರಡುತ್ತಿದೆ.

  • ಒಮಿಕ್ರಾನ್‌ ಮಾರಾಣಾಂತಿಕವೇ?

    ಒಮಿಕ್ರಾನ್‌ ವೈರಸ್‌ ವೇಗವಾಗಿ ಹರಡುತ್ತಿದ್ದರೂ ಡೆಲ್ಟಾದಷ್ಟು ವೇಗವಾಗಿ ಹರಡುತ್ತಿಲ್ಲ. ಇಲ್ಲಿಯವರೆಗೆ ನಡೆಸಿದ ಅಧ್ಯಯನಗಳು ಒಮಿಕ್ರಾನ್‌ ಡೆಲ್ಟಾ ವೈರಸ್‌ನಷ್ಟು ಅಪಾಯಕಾರಿಯಲ್ಲ ಎಂದು ಹೇಳಿದೆ.

  • ಲಸಿಕಯಿಂದ ಒಮಿಕ್ರಾನ್ ತಡೆಗಟ್ಟಬಹುದೇ?

    ಲಸಿಕೆ ಈ ವೈರಸ್‌ ತಡೆಗಟ್ಟಬಹುದೇ, ಇಲ್ಲವೇ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ, ಇದರ ಕುರಿತು ಅಧ್ಯಯನಗಳು ನಡೆಯುತ್ತಿವೆ. ಒಮಿಕ್ರಾನ್‌ ವಿರುದ್ಧ ಲಸಿಕೆ ಅಷ್ಟು ಪರಿಣಾಮಕಾರಿಯಲ್ಲ, ಲಸಿಕೆ ಈ ವೈರಸ್‌ ತಡೆಗಟ್ಟುವಂತಾಗಲು ಕೆಲವೊಂದು ಅಧ್ಯಯನಗಳು ನಡೆಯುತ್ತಿವೆ.

English summary

Omicron Variant Has Potential To Create COVID Third Wave In India, Top Scientist Claim

Omicron Variant Has Potential To Create COVID Third Wave In India, Top Scientist Clai Has Potential To Create COVID Third Wave In India, Top Scientist Claim, read on...
Story first published: Saturday, December 4, 2021, 16:37 [IST]
X
Desktop Bottom Promotion