For Quick Alerts
ALLOW NOTIFICATIONS  
For Daily Alerts

ಕೇರಳದಲ್ಲಿ ನೋರಾವೈರಸ್ ಪತ್ತೆ: ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

|

ಕೇರಳದಲ್ಲಿ ಇದೀಗ ನೋರಾವೈರಸ್‌ ಪತ್ತೆಯಾಗಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ನೋರಾವೈರಸ್‌ ಪತ್ತೆಯಾಗಿದ್ದು ಈ ರೋಗದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಮುನ್ನೆಚ್ಚರಿಕೆವಹಿಸಿದೆ.

ನೋರಾವೈರಸ್‌ ಎಂಬುವುದು ಪ್ರಾಣಿಗಳಿಂದ ಹರಡುವ ರೋಗವಾಗಿದೆ. ಕಲುಷಿತ ನೀರು ಹಾಗೂ ಆಹಾರದ ಮೂಲಕ ಹರಡುವುದು. ಈ ನೋರಾವೈರಸ್‌ ಅನ್ನು ಸರಿಯಾದ ಕ್ರಮಗಳನ್ನು ಅನುಸರಿಸುವುದು ಹಾಗೂ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ತಡೆಗಟ್ಟಬಹುದು.

ನೋರಾವೈರಸ್‌ ಯಾವ ರೀತಿ ಹರಡುತ್ತದೆ? ಈ ವೈರಸ್‌ ತಗುಲಿದಾಗ ಕಂಡು ಬರುವ ಲಕ್ಷಣಗಳೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂಬೆಲ್ಲಾ ಮಾಹಿತಿ ತಿಳಿಯೋಣ:

ನೋರಾವೈರಸ್‌ ಎಂದರೇನು?

ನೋರಾವೈರಸ್‌ ಎಂದರೇನು?

ನೋರಾ ವೈರಸ್ ಹೊಟ್ಟೆಗೆ ಸಂಬಂಧಿಸಿದ (gastrointestinal) ಕಾಯಿಲೆಯಾಗಿದೆ. ನೋರಾವೈರಸ್ ಆರೋಗ್ಯವಂತ ವ್ಯಕ್ತಿಯ ಮೇಲೆ ಏನೂ ಪರಿಣಾಮ ಬೀರಲ್ಲ. ಆದರೆ ವಯಸ್ಸಾದವರಿಗೆ ಹಾಗೂ ಮಕ್ಕಳಿಗೆ ಇದು ಅಪಾಯಕಾರಿಯಾಗಿದೆ.

ನೋರಾವೈರಸ್ ಲಕ್ಷಣಗಳೇನು?

ನೋರಾವೈರಸ್ ಲಕ್ಷಣಗಳೇನು?

* ತುಂಬಾ ಹೊಟ್ಟೆನೋವು

* ವಾಂತಿ

* ಬೇಧಿ

* ಸುಸ್ತು

* ಮೈ ಉಷ್ಣತೆ ಹೆಚ್ಚುವುದು

* ತಲೆನೋವು

* ಮೈಕೈ ನೋವು

* ತುಂಬಾ ವಾಂತಿ-ಬೇಧಿಯಾದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಹಾಗಾದರೆ ತೊಂದರೆಯಾಗುವುದು.

ನೋರಾ ವೈರಸ್ ಹೇಗೆ ಹರಡುವುದು?

ನೋರಾ ವೈರಸ್ ಹೇಗೆ ಹರಡುವುದು?

* ಸೋಂಕಿತ ವ್ಯಕ್ತಿಯ ಜೊತೆಗಿನ ನಿಕಟ ಸಂಪರ್ಕದಿಂದ ಹರಡುವುದು

* ಸೋಂಕಾಣು ಇರುವ ನೆಲವನ್ನು ಮುಟ್ಟವುದರಿಂದ ಹರಡುವುದು

* ಸೋಂಕಿತ ವ್ಯಕ್ತಿ ತಯಾರಿಸಿದ ಆಹಾರವನ್ನು ಸೇವಿಸಿದಾಗ

*ವಾಂತಿ ಮಾಡಿದಾಗ ಆ ದ್ರವದ ಹನಿ ಹಾರಿ ಅದು ಬಿದ್ದಿರುವ ಸ್ಥಳವನ್ನು ಮುಟ್ಟಿದಾಗ ಸೋಂಕು ಹರಡುವುದು.

ನೋರಾವೈರಸ್ ತಡೆಗಟ್ಟಲು ಇರುವ ಮಾರ್ಗಸೂಚಿಗಳೇನು?

ನೋರಾವೈರಸ್ ತಡೆಗಟ್ಟಲು ಇರುವ ಮಾರ್ಗಸೂಚಿಗಳೇನು?

* ಕೇರಳ ಸರ್ಕಾರ ಹರಡಿರುವ ಮಾರ್ಗಸೂಚಿ ಪ್ರಕಾರ ನೋರಾ ವೈರಸ್ ತಗುಲಿದ ವ್ಯಕ್ತಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಬೇಕು.

* ಸಾಕಷ್ಟು ನೀರು ಕುಡಿಯಬೇಕು.

*ORS ಕುಡಿಯಿರಿ

* ನೀರನ್ನು ಕುದಿಸಿ ಕುಡಿಯಬೇಕು.

* ಅನಾರೋಗ್ಯದ ಪ್ರಾಣಿಗಳನ್ನು ಆರೈಕೆ ಮಾಡುವವರು ಹೆಚ್ಚು ಸುರಕ್ಷತೆ ಕ್ರಮ ವಹಿಸಬೇಕು.

*ನೀರನ್ನು ಕ್ಲೋರಿನ್‌ ಬಳಸಿ ಶುದ್ಧೀಕರಿಸಬೇಕು.

* ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು.

* ಸಮುದ್ರಾಹಾರಗಳನ್ನು ತಿನ್ನಬಹುದು, ಆದರೆ ಅವುಗಳನ್ನು ಚೆನ್ನಾಗಿ ಬೇಯಿಸಿದ ನಂತರವಷ್ಟೆ ಸೇವಿಸಿ.

* ಹಾಳಾದ ಅಥವಾ ಹೊರಗಡೆ ತೆಗೆದಿಟ್ಟ ಆಹಾರವನ್ನು ಸೇವಿಸಬೇಡಿ.

English summary

Norovirus confirmed in Kerala’s Wayanad: Know Causes, Symptoms, Treatment in kannada

Norovirus confirmed in Kerala’s Wayanad: Know Causes, Symptoms, Treatment in kannada, Read on...
X
Desktop Bottom Promotion