For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಈಗ ಕೊರೊನಾ ನಾಲ್ಕನೇ ಅಲೆ ಇಲ್ಲ ಎಂದ ICMR: ಏಕೆ? ಹಾಗಾದರೆ ಕೊರೊನಾ ಅಪಾಯವಿಲ್ಲವೇ?

|

ಭಾರತದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್‌ ಕೇಸ್‌ಗಳು ಹೆಚ್ಚಾಗುತ್ತಲೇ ಹೋಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಹೋದೆಯಾ ಪಿಶಾಕ್ಷಿ ಅಂದ್ರೆ ಬಂದೆಯಾ ಗವಾಕ್ಷಿ ಎಂಬಂತೆ ಕೊರೊನಾ ಹೋಯ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಬರುವುದನ್ನು ಕಳೆದ ಎರಡು ವರ್ಷಗಳಿಂದ ನೋಡುತ್ತಾ ಇದ್ದೇವೆ.

ಭಾರತದಲ್ಲಿ ಕೊರೊನಾ ಮೊದಲ ಅಲೆ ಹಾಗೂ 3ನೇ ಅಲೆ ಭಯಾನಕವಾಗಿರಲಿಲ್ಲ, ಆದರೆ ಎರಡನೇ ಅಲೆ ಬೀರಿದ ಭೀಕರತೆ ಯಾರೂ ಮರೆಯುವಂತಿಲ್ಲ. ಎಷ್ಟೋ ಜನರನ್ನು ಬಲಿ ತೆಗೆದುಕೊಂಡು ರಣಕೇಕೆ ಹಾಕಿತ್ತು, ಇದೀಗ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಜೊತೆಗೆ ಸಾವಿನ ಸಂಖ್ಯೆ ಏರುತ್ತಿದೆ. ಭಾನುವಾರ ಭಾರತದಲ್ಲಿ 3,324 ಕೇಸ್‌ಗಳು ವರದಿಯಾಗಿದೆ, 40 ಜನರು ಸಾವನ್ನಪ್ಪಿದ್ದಾರೆ.

ಹಾಗಾದರೆ ಭಾರತದಲ್ಲಿ ಕೊರೊನಾ 4ನೇ ಶುರುವಾಗಿದೆಯೇ? ಇದರ ಬಗ್ಗೆ ICMR (Indian Council of Medical Research) ಏನು ಹೇಳಿದೆ ಎಂದು ನೋಡೋಣ ಬನ್ನಿ:

 ICMR ಏನು ಹೇಳಿದೆ?

ICMR ಏನು ಹೇಳಿದೆ?

ಭಾರತದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ಸಾಮಾಜಿಕ ತಾಣದಲ್ಲಿ ತುಂಬಾನೇ ಟ್ರೆಂಡ್‌ ಆಗುತ್ತಿದೆ, ಇದಕ್ಕೆ ಪ್ರತಿಕ್ರಿಯಿಸಿರುವ ICMR ಸಹ ನಿರ್ದೇಶಕರಾಗಿರುವ ಡಾ. ಸಮೈರನ್‌ ಪಾಂಡ ಭಾರತದ ಕೆಲವು ಜಿಲ್ಲೆಗಳಲ್ಲಿ ಕೊರೊನಾದಲ್ಲಿ ಏರಿಕೆ ಉಂಟಾಗಿದೆ. ಆದರೆ ಭಾರತದ ಇತರ ಬಗೋಳಿಕ ಪ್ರದೇಶಕ್ಕೆ ಹೋಲಿಸಿದರೆ ಅದು ಬ್ಲಿಪ್‌ ಅಷ್ಟೇ ಅಂದರೆ ಕಡಿಮೆ ಸಂಖ್ಯೆಯಲ್ಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಇದು ನಾಲ್ಕನೇ ಅಲೆಯಲ್ಲ ಎಂದು ಹೇಳಲು ಕಾರಣವೇನು?

ಭಾರತದಲ್ಲಿ ಇದು ನಾಲ್ಕನೇ ಅಲೆಯಲ್ಲ ಎಂದು ಹೇಳಲು ಕಾರಣವೇನು?

* ಭಾರತದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಸಂಖ್ಯೆ ಕೆಲವು ಕಡೆಯಷ್ಟೇ ಕಂಡು ಬಂದಿದೆ.

* ಭಾರತದ ರಾಜ್ಯಗಳ ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಕೇಸ್‌ಗಳು ವರದಿಯಾಗುತ್ತಿವೆ, ಇಡೀ ರಾಜ್ಯದಲ್ಲಿ ಅಂಥ ಪರಿಸ್ಥಿತಿ ಉಂಟಾಗಿಲ್ಲ.

* ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ.

* ಇದುವರೆಗೆ ಯಾವುದೇ ಹೊಸ ವೈರಸ್‌ ಪತ್ತೆಯಾಗಿಲ್ಲ ಆದ್ದರಿಂದ ನಾಲ್ಕನೇ ಅಲೆ ಆಗಿಲ್ಲ.

 ಭಾರತದ ಯಾವ ರಾಜ್ಯಗಳಲ್ಲಿ ಕೊರೊನಾ ಕೇಸ್‌ಗಳು ಹೆಚ್ಚು ಕಂಡು ಬರುತ್ತಿವೆ:

ಭಾರತದ ಯಾವ ರಾಜ್ಯಗಳಲ್ಲಿ ಕೊರೊನಾ ಕೇಸ್‌ಗಳು ಹೆಚ್ಚು ಕಂಡು ಬರುತ್ತಿವೆ:

ಅಂಕಿ ಅಂಶದ ಪ್ರಕಾರ ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು ಇದರ ಜೊತೆಗೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ಕಂಡು ಬರುತ್ತಿದೆ.

ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಕೊರೊನಾ?

ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಕೊರೊನಾ?

ಈ ಬಾರಿ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಕಂಡು ಬರುತ್ತಿದೆ. ದೆಹಲಿ ಮುಂತಾದ ಕಡೆ ಶಾಲಾ ಮಕ್ಕಳಲ್ಲಿ ಕೊರೊನಾ ಕೇಸ್‌ ಹೆಚ್ಚಾಗಿ ಕಂಡು ಬಂದಿತ್ತು. ಇದೀಗ ಕೆಲವು ಶಾಲೆಗಳು ಮತ್ತೆ ಆನ್‌ಲೈನ್‌ ಶುರು ಮಾಡಿದ್ದಾರೆ.

ಮಕ್ಕಳಲ್ಲಿ ಕೊರೊನಾ ಹೆಚ್ಚಾಗಲು ಕಾಣವೇನು?

ಮಕ್ಕಳಲ್ಲಿ ಕೊರೊನಾ ಹೆಚ್ಚಾಗಲು ಕಾಣವೇನು?

ಎಲ್ಲಾ ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಲಾಗಿತ್ತು, ಯಾರೂ ಮಾಸ್ಕ್‌ ಧರಿಸುತ್ತಿರಲಿಲ್ಲ, ಈ ಕಾರಣದಿಂದಾಗಿ ಕೊರೊನಾ ಹರಡಿಕೆ ವೇಗವಾಗಿದೆ. ಹೆಚ್ಚಿನ ಮಕ್ಕಳು ಲಸಿಕೆ ತಗೊಂಡಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಕೊನೆಯದಾಗಿ: ಪೋಷಕರೇ ಈ ಸಮಯದಲ್ಲಿ ಆತಂಕ ಬೇಡ, ಕೊರೊನಾ ನಿಯಮಗಳ ನೀವೂ ಪಾಲಿಸಿ, ಮಕ್ಕಳಿಗೂ ಹೇಳಿಕೊಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

English summary

No COVID 4th Wave In India Right Now, only local surges so far: ICMR

coronavirus, covid 19, corona vaccine, ಕೊರೊನಾವೈರಸ್‌, ಕೋವಿಡ್‌ 19, ಕೊರೊನಾ ಲಸಿಕೆ
X
Desktop Bottom Promotion