For Quick Alerts
ALLOW NOTIFICATIONS  
For Daily Alerts

ಮಾವಿನ ಹಣ್ಣು ತಿಂದ ತಕ್ಷಣ ಈ 5 ಆಹಾರಗಳನ್ನು ಸೇವಿಸಲೇಬೇಡಿ

|

ಇದೀಗ ಮಾವಿನ ಹಣ್ಣಿನ ಸೀಸನ್‌. ಬೇಸಿಗೆಯಲ್ಲಿಯೇ ಮಾವಿನ ಹಣ್ಣು ದೊರೆಯಲು ಪ್ರಾರಂಭವಾಗುವುದಾದರೂ ಜುಲೈ-ಆಗಸ್ಟ್‌ವರೆಗೆ ಮಾವಿನಹಣ್ಣು ಸಿಗುತ್ತಿರುತ್ತದೆ. ಮಾವಿನ ಹಣ್ಣಿನ ರುಚಿ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಸುವಾಸನೆ ಜೊತೆಗೆ ಸ್ವಾದಿಷ್ಟಕರ ಮಾವಿನ ಹಣ್ಣನ್ನು ತಿನ್ನುವುದೇ ಮನಸ್ಸಿಗೆ ಆನಂದ.

mangoes side affects

ಆದರೆ ಮಳೆ ಶುರುವಾದಾಗ ಮಾವಿನ ಹಣ್ಣನ್ನು ತಿನ್ನಬೇಡಿ ಆರೋಗ್ಯ ಹೇಳುತ್ತೆ ಎಂದು ಕೆಲವರು ಹೇಳುತ್ತಾರೆ, ಹಾಗೇನಿಲ್ಲ ಸೀಸನ್‌ನಲ್ಲಿ ದೊರೆಯುವ ಎಲ್ಲಾ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಆದ್ದರಿಂದ ಸೀಸನ್‌ ಹಣ್ಣುಗಳನ್ನು ಯಾವುದೇ ಭಯಪಡದೆ ತಿನ್ನಿ.

ಆದರೆ ಮಾವಿನ ಹಣ್ಣು ಸೇವಿಸಿದ ಬಳಿಕ ಕೆಲವೊಂದು ಆಹಾರವನ್ನು ಸ್ವಲ್ಪ ಹೊತ್ತಿನವರೆಗೆ ಸೇವಿಸಬೇಡಿ, ಏಕೆಂದರೆ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ, ಆ ಆಹಾರಗಳು ಯಾವುದು ಎಂದು ನೋಡೋಣ ಬನ್ನಿ:

ನೀರು:

ನೀರು:

ನೀವು ಮಾವಿನ ಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ. ಮಾವಿನ ಹಣ್ಣು ತಿಂದ ಬಳಿಕ ತಕ್ಷಣ ನೀರು ಕುಡಿದರೆ ಅದರಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರಿಂದ ಹೊಟ್ಟೆ ಹಾಳಾಗಬಹುದು, ಹೊಟ್ಟೆ ಉಬ್ಬುವುದು, ಅಸಿಡಿಟಿ, ಈ ರೀತಿಯ ಸಮಸ್ಯೆ ಕಾಡಬಹುದು. ಆದ್ದರಿಂದ ಮಾವಿನ ಹಣ್ಣು ತಿಂದು ಒಂದು ಅರ್ಧ ಗಂಟೆ ಕಳೆದ ಮೇಲೆ ನೀರು ಕುಡಿಯಿರಿ.

ಮೊಸರು

ಮೊಸರು

ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ಹಾಕಿ, ಅದಕ್ಕೆ ಮಾವಿನ ಹಣ್ಣನ್ನು ಕತ್ತರಿಸಿ ಹಾಕಿ ತಿನ್ನುವುದು ಕೆಲವರಿಗೆ ತುಂಬಾ ಇಷ್ಟ. ಆದರೆ ಹಾಗೇ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಇದರಿಂದ ದೇಹದ ಉಷ್ಣತೆ ಹೆಚ್ಚಬಹುದು ಅಥವಾ ಶೀತವಾಗಬಹುದು, ಇನ್ನು ತ್ವಚೆ ಸಮಸ್ಯೆ, ಮತ್ತಿತರ ತೊಂದರೆಗಳು ಉಂಟಾಗಬಹುದು.

 ಹಾಗಾಲಕಾಯಿ

ಹಾಗಾಲಕಾಯಿ

ಮಾವಿನಹಣ್ಣು ತಿಂದ ಬಳಿಕ ಹಾಗಲಕಾಯಿ ತಿನ್ನಬೇಡಿ. ಇದರಿಂದ ಫುಡ್‌ ಅಲರ್ಜಿಯಾಗಬಹುದು. ಹೊಟ್ಟೆ ನೋವು, ವಾಂತಿ, ಉಸಿರಾಟದಲ್ಲಿ ತೊಂದರೆ ಈ ರೀತಿಯ ಸಮಸ್ಯೆ ಕಾಣಿಸಬಹುದು.

ಮಸಾಲೆ ಪದಾರ್ಥ:

ಮಸಾಲೆ ಪದಾರ್ಥ:

ಮಾವಿನ ಹಣ್ಣು ತಿಂದ ತಕ್ಷಣ ಖಾರ ಅಥವಾ ಮಸಾಲೆ ಹಾಕಿದ ಆಹಾರ ಸೇವಿಸಬೇಡಿ, ಇದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು.

ತಣ್ಣೀರು

ತಣ್ಣೀರು

ಮಾವಿನ ಹಣ್ಣು ತಿಂದ ಬಳಿಕ ಫ್ರಿಡ್ಜ್‌ ನೀರು ಕುಡಿಯಬೇಡಿ, ಇದರಿಂದ ಮಧುಮೇಹಿಗಳಿಗೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಬಹುದು. ಮಧುಮೇಹಿಗಳು ಮಾವಿನ ಹಣ್ಣನ್ನು ಮಿತಿಯಲ್ಲಿ ತಿನ್ನಿ. ತಿಂದ ಬಳಿಕ ಒಂದು ಕಡೆ ಕೂರದೆ ಸ್ವಲ್ಪ ವಾಕ್‌ ಮಾಡಿ.

English summary

Never consume these food items after eating mangoes in kannada

Never consume these food items after eating mangoes in kannada, Read on...
Story first published: Tuesday, June 21, 2022, 18:30 [IST]
X
Desktop Bottom Promotion