For Quick Alerts
ALLOW NOTIFICATIONS  
For Daily Alerts

ಚಹಾ ಜೊತೆ ಎಂದಿಗೂ ಇಂಥಾ ಆಹಾರಗಳನ್ನು ಸೇವಿಸಬೇಡಿ

|

ಕೆಲವು ಆಹಾರಗಳ ಮಿಶ್ರಣ ದೇಹಕ್ಕೆ ತುಂಬಾನೆ ಹಾನಿಕಾರಕ. ಎರಡು ವಿರುದ್ಧ ರೀತಿಯ ಆಹಾರಗಳನ್ನು ಒಟ್ಟಾಗಿ ಸೇವನೆ ಮಾಡುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ.

ಅಂಥಾ ತದ್ವಿರುದ್ಧ ಆಹಾರಗಳ ಸಾಲಿಗೆ ಚಹಾ ಹಾಗೂ ಉಪ್ಪು ಖಾರ ಸೇರುತ್ತದೆ. ನೀವು ಚಹಾ ಸೇವಿಸುವ ಸಮಯದಲ್ಲಿ ಉಪ್ಪಿನ ಪದಾರ್ಥಗಳನ್ನು ಸೇವಿಸುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು. ಏಕೆಂದರೆ ಇದು ನಿಮ್ಮ ಜೀರ್ಣಕ್ರಿಯೆ, ಹೊಟ್ಟೆನೋವು, ಅಲರ್ಜಿ ಸೇರಿಂದತೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಸಾಮಾನ್ಯವಾಗಿ ಬಹುತೇಕರಿಗೆ ಸಂಜೆಯ ಹೊತ್ತು ಚಹಾ ಜೊತೆಗೆ ಉಪ್ಪಿನ ತಿಂಡಿಗಳನ್ನು ಸೇವಿಸುವ ಅಭ್ಯಾಸ ಇರುತ್ತದೆ. ಆದರೆ ಇದು ಎಲ್ಲರಿಗೂ ಅಲ್ಲದಿದ್ದರೂ ಕೆಲವರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾವೆಲ್ಲಾ ಆರೋಗ್ಯ ಸಮಸ್ಯೆ ಮುಂದೆ ನೋಡೋಣ:

 ಹೊಟ್ಟೆ ತಿರುಚುವಿಕೆ, ಕಿರಿಕಿರಿಯ ಸಮಸ್ಯೆ ಉಂಟಾಗುತ್ತದೆ

ಹೊಟ್ಟೆ ತಿರುಚುವಿಕೆ, ಕಿರಿಕಿರಿಯ ಸಮಸ್ಯೆ ಉಂಟಾಗುತ್ತದೆ

ಹಾಲಿನ ಉತ್ಪನ್ನಗಳೊಂದಿಗೆ ಉಪ್ಪಿನ ಪದಾರ್ಥಗಳನ್ನು ತಿನ್ನುವುದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಉಪ್ಪಿನ ಪದಾರ್ಥಗಳಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಇರುತ್ತವೆ. ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದರೊಂದಿಗೆ ಚಹಾ ಸೇವನೆಯು ಹೊಟ್ಟೆಯಲ್ಲಿ ತಿರುಚುವಿಕೆ, ವಾಕರಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ.

ಅಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ

ಅಸಿಡಿಟಿ ಸಮಸ್ಯೆ ಹೆಚ್ಚಿಸುತ್ತದೆ

ಬಹುತೇಕ ಡ್ರೈಫ್ರೂಟ್ಸ್‌ಗಳಲ್ಲಿ ಉಪ್ಪನ್ನು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ಚಹಾದೊಂದಿಗೆ ಸೇವಿಸಲೇಬಾರದು. ಖಾರ ಮತ್ತು ಉಪ್ಪಿನ ಡ್ರೈಫ್ರೂಟ್ಸ್‌ಗಳೊಂದಿಗೆ ಚಹಾವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆಗಳು

ಜೀರ್ಣಕ್ರಿಯೆ ಸಮಸ್ಯೆಗಳು

ಚಹಾದೊಂದಿಗೆ ಹುಳಿ ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ಚಹಾದೊಂದಿಗೆ ಉಪ್ಪು, ಸಿಹಿ ಮತ್ತು ಹುಳಿ ತಿನ್ನವುದು ಕೆಲವರಿಗೆ ಹಾನಿಕಾರಕ, ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಚಹಾ ಜೊತೆ ಅರಿಶಿನ, ಖಾರ ತಪ್ಪಿಸಿ

ಚಹಾ ಜೊತೆ ಅರಿಶಿನ, ಖಾರ ತಪ್ಪಿಸಿ

ಚಹಾದೊಂದಿಗೆ ಅರಿಶಿನ, ಖಾರವನ್ನು ತಿನ್ನುವುದನ್ನು ತಪ್ಪಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸುವ ಸಮಸ್ಯೆಯನ್ನು ಹೆಚ್ಚಿಸುತ್ತದೆ.

English summary

Never Combine These Foods With Tea

Here we are discussing about Never Combine These Foods With Tea. Read more.
X
Desktop Bottom Promotion