For Quick Alerts
ALLOW NOTIFICATIONS  
For Daily Alerts

ಆಯುರ್ವೇದ: ನವದುರ್ಗೆಯರ ಶಕ್ತಿ ಪಡೆದಿರುವ ಗಿಡಮೂಲಿಕೆಗಳಿವು

|

ಹಿಂದೂಗಳ ಸಡಗರದ ಹಬ್ಬ ನವರಾತ್ರಿ ಅಕ್ಟೋಬರ್ 15ರಿಂದ ಪ್ರಾರಂಭವಾಗುವುದು. ಈ ಒಂಭತ್ತು ದಿನಗಳಲ್ಲಿ ದುರ್ಗೆ ದೇವಿಯ ವಿವಿಧ ರೂಪಗಳನ್ನು ಆರಾಧಿಸಲಾಗುವುದು.

ದೇವಿ ದುರ್ಗೆಯನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು, ನೋವು, ದುಃಖ ದೂರಾಗಿ ಸಂತೋಷ, ನೆಮ್ಮದಿಯ ಬದುಕು ಬಾಳಬಹುದು. ದೇವಿಯ ಈ ಒಂಭತ್ತು ಅವತಾರಗಳಿಂದ ಬದುಕಿನಲ್ಲಿ ನಾವು ಕಲಿಯಬೇಕಾದ ಪಾಠಗಳೇನು ಎಂಬುವುದನ್ನು ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು.

ಮಾರ್ಕೆಂಡೇಯಾ ಪುರಾಣದಲ್ಲಿ ದುರ್ಗೆಯ ಗುಣಗಳನ್ನು ಹೋಲುವ 9 ಔಷಧೀಯ ಗಿಡಗಳ ಬಗ್ಗೆ ಹೇಳಲಾಗಿದೆ. ಈ ಔಷಧೀಯ ಗಿಡಗಳಿಗೆ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ.

1. ಅಳಲೆ:

1. ಅಳಲೆ:

ದುರ್ಗೆಯ ಮೊದಲಿನ ರೂಪವಾದ ಶೈಲ ಪುತ್ರಿಯನ್ನು ಅಳಲೆಗೆ (Harad) ಹೋಲಿಸಲಾಗಿದೆ. ಈ ಗಿಡವನ್ನು ಹಿಮಾವತಿ ಎಂದು ಕೂಡ ಕರೆಯಲಾಗುವುದು. ಇದು ಆಯುರ್ವೇದದ ಪ್ರಮುಖ ಔಷಧಿಯಾಗಿದೆ. ಇದು 7 ಬಗೆಯಲ್ಲಿ ದೊರೆಯುತ್ತದೆ. ಇದರ ಏಳೂ ಬಗೆಯೂ ಒಂದೊಂದು ವಿಶೇಷ ಔಷಧೀಯ ಗುಣವನ್ನು ಹೊಂದಿದೆ.

 2.ಬ್ರಾಹ್ಮಿ

2.ಬ್ರಾಹ್ಮಿ

ದೇವಿಯ ಎರಡನೇ ಅವತಾರ ಬ್ರಹ್ಮಚಾರಿಣಿ. ಬ್ರಾಹ್ಮಿ ಗಿಡಮೂಲಿಕೆ ಕೂಡ ಆಕೆಯಲ್ಲಿರುವ ಗುಣವನ್ನು ಹೊಂದಿದೆ. ಈ ಗಿಡಮೂಲಿಕೆ ದೇಹದಲ್ಲಿ ರಕ್ತಸಂಚಾರವನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತದೆ, ನೆನಪಿನ ಶಕ್ತಿ ಹೆಚ್ಚಿಸುತ್ತದೆ, ಶಕ್ತಿ ಹೆಚ್ಚಿಸುತ್ತದೆ ಅಲ್ಲದೆ ಧ್ವನಿ ಮೃದುವಾಗಲು ಇದನ್ನು ಬಳಸುತ್ತಾರೆ. ಸಂಗೀತಗಾರರು ಇದನ್ನು ತಿನ್ನುವುದರಿಂದ ಅವರ ಧ್ವನಿ ಮತ್ತಷ್ಟು ಮಧುರವಾಗುವುದು.

3. ಚಂದ್ರಾಸುರ

ಮೂರನೇ ದಿಇನ ಚಂದ್ರಘಂಟ ದೇವಿಯನ್ನು ಆರಾಧಿಸಲಾಗುವುದು. ಚಂದ್ರಾಸುರ ಅಥವಾ ಚಾಮಾಸುರ ಎಂಬ ಗಿಡ ಔಷಧೀಯ ಗುಣವನ್ನು ಹೊಂದಿದ್ದು, ಇದರ ಎಲೆಯನ್ನು ಸಾರು ಮಾಡಲಾಗುವುದು. ಇನ್ನು ಒಬೆಸಿಟಿ ಸಮಸ್ಯೆ ಕಡಿಮೆ ಮಾಡಲು ಇದನ್ನು ಬಳಸಲಾಗುವುದು.

4. ಕುಂಹಾರ

ಕೂಷ್ಮಾಂಡ ದೇವಿಯ ಹೆಸರಿನಲ್ಲಿರುವ ಗಿಡ ಮೂಲಿಕೆ ಇದಾಗಿದೆ. ಇದನ್ನು ತಿನ್ನುವುದರಿಂದ ದೇಹ ಬಲವಾಗುವುದು. ಇನ್ನು ಪುರುಷರಲ್ಲಿ ವೀರ್ಯಾಣು ಹೆಚ್ಚುವುದು. ಹೊಟ್ಟೆಯನ್ನು ಶುದ್ಧವಾಗಿಸುತ್ತೆ, ಮಾನಸಿಕ ಸ್ವಾಸ್ಥ್ಯ ಹೆಚ್ಚಿಸುವುದು, ಅಲ್ಲದೆ ಹೃದ್ರೋಗಿಗಳಿಗೂ ತುಂಬಾನೇ ಒಳ್ಳೆಯದು.

5. ಫ್ಲ್ಯಾಕ್ಸ್ ಸೀಡ್ ಅಥವಾ ಅಗಸೆ ಬೀಜ

5. ಫ್ಲ್ಯಾಕ್ಸ್ ಸೀಡ್ ಅಥವಾ ಅಗಸೆ ಬೀಜ

ಔಷಧೀಯ ಗುಣವಿರುವ ಈ ಬೀಜವನ್ನು ಸ್ಕಂದ ಮಾತೆಗೆ ಹೋಲಿಸಲಾಗಿದೆ. ಇದನ್ನು ತಿನ್ನುವುದರಿಂದ ವಾತ, ಪಿತ್ತ, ಕಫ ಇಂಥ ಸಮಸ್ಯೆ ದೂರಾಗುವುದು.

6. ಅಂಬಳಿಕಾ/ಅಂಬಿಕಾ

ಇದನ್ನು ಮಾತಾ ಕಾತ್ಯಾಯನಿಗೆ ಹೋಲಿಸಲಾಗಿದೆ. ಇದು ಹೊಟ್ಟೆಯಲ್ಲಿರುವ ಸಮಸ್ಯೆ, ಗಂಟೊಇನ ಸಮಸ್ಯೆ ಹೋಗಲಾಡಿಸುವ ಗುಣವನ್ನು ಹೊಂದಿದೆ.

7. ನಾಗ್ದನ್‌ (wormwood/Nagdaun)

ಈ ಔಷಧಿಯನ್ನು ಕಾಳರಾತ್ರಿಗೆ ಹೋಲಿಸಲಾಗಿದೆ. ಹೇಗೆ ಕಾಳರಾತ್ರಿ ಎಲ್ಲಾ ತೊಂದರೆಗಳನ್ನು ನೀಗಿಸುತ್ತಾಳೋ, ಅದೇ ರೀತಿ ನಾಗ್ದಾನ್ ಎಲ್ಲಾ ಬಗೆಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಯನ್ನು ಹೋಗಲಾಡಿಸುವುದು. ಇದಕ್ಕೆ ದೇಹದಲ್ಲಿರುವ ವಿಷವನ್ನು ತೆಗೆಯುವ ಸಾಮರ್ಥ್ಯ ಕೂಡ ಇದೆ.

8. ತುಳಸಿ

8. ತುಳಸಿ

ತುಳಸಿಯನ್ನು ಆಯುರ್ವೇದದಲ್ಲಿ ಮಹಾಗೌರಿಗೆ ಹೋಲಿಸಲಾಗಿದೆ. ಇದು ಕಫಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೋಲಾಡಿಸುವುದು. ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ.

9. ಶತಾವರಿ

9. ಶತಾವರಿ

ಶತಾವರಿಯನ್ನು ಸಿದ್ಧಿಧಾತ್ರಿಗೆ ಹೋಲಿಸಲಾಗಿದೆ. ಇದು ಮಾನಸಿಕ ಸ್ವಾಸ್ಥ್ಯ ಹೆಚ್ಚಿಸುತ್ತದೆ. ಪುರುಷರಲ್ಲಿ ವೀರ್ಯಾಣುಗಳ ವೃದ್ಧಿಗೆ ಸಹಕಾರಿ. ಇದನ್ನು ದಿನಾ ತಿಂದರೆ ರಕ್ತ ಶುದ್ಧವಾಗುವುದು.

English summary

Navratri 2021: 9 Kinds of Ayurvedic Medicines Related to the 9 Forms of Goddess Durga

Navratri 2021: 9 Kinds of Ayurvedic Medicines Related to the 9 Forms of Goddess Durga
X
Desktop Bottom Promotion