For Quick Alerts
ALLOW NOTIFICATIONS  
For Daily Alerts

ರಕ್ತ ಹೀನತೆಯನ್ನು ನಿವಾರಿಸುವ ಮನೆಮದ್ದುಗಳಿವು

|

ವ್ಯಕ್ತಿಯ ದೇಹದಲ್ಲಿ ಕೆಂಪು ಮತ್ತು ಬಿಳಿ ಎಂಬ ಎರಡು ರೀತಿಯ ರಕ್ತ ಕಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆ ಆದಾಗ, ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದು. ಇದನ್ನು ರಕ್ತಹೀನತೆ ಎಂದು ಕರೆಯುತ್ತಾರೆ. ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸುವ ಮೂಲಕ, ವ್ಯಕ್ತಿಯ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡಬಹುದು.

ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದಾಗಿ, ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅನೇಕ ಗಂಭೀರ ಕಾಯಿಲೆಗಳು ವ್ಯಕ್ತಿಯನ್ನು ಸುತ್ತುವರಿಯಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಮನೆಮದ್ದುಗಳನ್ನ ತಿಳಿದುಕೊಳ್ಳುವುದು ಮುಖ್ಯ.

ಹಿಮೋಗ್ಲೋಬಿನ್ ಕೊರತೆಗೆ ಕಾರಣಗಳೇನು :

ಹಿಮೋಗ್ಲೋಬಿನ್ ಕೊರತೆಗೆ ಕಾರಣಗಳೇನು :

1. ಹೊಟ್ಟೆಗೆ ಸಂಬಂಧಿಸಿದ ಸೋಂಕುಗಳಿಂದ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದು.

2. ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಅಗತ್ಯ ಪ್ರಮಾಣದ ಕಬ್ಬಿಣ ಸಿಗದೇ ಇದ್ದಾಗ

3. ದೇಹದಿಂದ ಅಧಿಕ ಪ್ರಮಾಣದ ರಕ್ತಸ್ರಾವ ಆದಾಗ

4. ಗಂಭೀರ ಕಾಯಿಲೆಯಿಂದಾಗಿ ದೇಹದಲ್ಲಿ ರಕ್ತದ ಕೊರತೆ

ರಕ್ತದ ಕೊರತೆಯಾದಾಗ ಉಂಟಾಗುವ ಸಮಸ್ಯೆಗಳೇನು?:

ರಕ್ತದ ಕೊರತೆಯಾದಾಗ ಉಂಟಾಗುವ ಸಮಸ್ಯೆಗಳೇನು?:

1. ದೇಹ, ತಲೆ ಮತ್ತು ಎದೆಯಲ್ಲಿ ನೋವು

2. ರಕ್ತಹೀನತೆಯಿಂದ ಹೃದಯ,ಕಿಡ್ನಿ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳ ಉದ್ಭವ

3. ಸ್ನಾಯುವಿನ ದೌರ್ಬಲ್ಯ

4. ಚರ್ಮದ ಬಣ್ಣ ಬದಲಾವಣೆ

5. ಗಾಯಗಳು ಬೇಗನೆ ಗುಣವಾಗುವುದಿಲ್ಲ

6.ಮುಟ್ಟಿನ ಅವಧಿಗಳಲ್ಲಿ ಹೆಚ್ಚು ನೋವು

7. ಕೈಕಾಲುಗಳು ತಣ್ಣಗಾಗುವುದು

ಹಿಮೋಗ್ಲೋಬಿನ್ ಕೊರತೆ ಲಕ್ಷಣಗಳು ಹೀಗಿವೆ :

ಹಿಮೋಗ್ಲೋಬಿನ್ ಕೊರತೆ ಲಕ್ಷಣಗಳು ಹೀಗಿವೆ :

1. ಬೇಗ ಆಯಾಸ ಆಗುವುದು

2. ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು

3. ಪಾದದಡಿ ನೋವು

4. ಸ್ನಾಯು ನೋವು

ಈ ಮನೆಮದ್ದುಗಳು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತವೆ:

ಈ ಮನೆಮದ್ದುಗಳು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತವೆ:

1. ಒಂದು ಲೋಟ ನೀರಿಗೆ ನಿಂಬೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ, ಇದನ್ನು ಪ್ರತಿದಿನ ಕುಡಿಯುವುದರಿಂದ ದೇಹದಲ್ಲಿ ರಕ್ತ ವೇಗವಾಗಿ ಉತ್ಪಾದನೆ ಆಗುತ್ತದೆ.

2. ರಕ್ತಹೀನತೆಯ ಸಂದರ್ಭದಲ್ಲಿ, ಪಾಲಕ್ ಸೇವನೆಯು ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಇದರಲ್ಲಿ ವಿಟಮಿನ್ ಎ, ಸಿ, ಬಿ 9, ಕಬ್ಬಿಣ, ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಪಾಲಕ್ ಒಂದರ ಸೇವನೆಯು ದೇಹದಲ್ಲಿ ಕಬ್ಬಿಣವನ್ನು ಶೇಕಡಾ 20 ರಷ್ಟು ಹೆಚ್ಚಿಸುತ್ತದೆ.

3. ಟೊಮೆಟೊ ಸೇವಿಸುವುದರಿಂದ ದೇಹದಲ್ಲಿನ ರಕ್ತದ ಪ್ರಮಾಣವೂ ವೇಗವಾಗಿ ಹೆಚ್ಚಾಗುತ್ತದೆ. ಇದಕ್ಕಾಗಿ ಪ್ರತಿದಿನ ಒಂದು ಲೋಟ ಟೊಮೆಟೊ ರಸ ಅಥವಾ ಜ್ಯುಸ್ ಸೇವಿಸಿ.

4. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮೆಕ್ಕೆಜೋಳವನ್ನು ಸಹ ಸೇವಿಸಬಹುದು.

5. ಬೆಲ್ಲದೊಂದಿಗೆ ಕಡಲೆಕಾಯಿಯನ್ನು ಸೇರಿಸಿ ತಿನ್ನುವುದರಿಂದ ದೇಹದಲ್ಲಿನ ಕಬ್ಬಿಣದ ಕೊರತೆಯೂ ಕಡಿಮೆಯಾಗುವುದು.

Read more about: health ಆರೋಗ್ಯ
English summary

Natural Home Remedies for Iron Deficiency Anemia in Kannada

Here we talking about Natural Home Remedies for Iron Deficiency Anemia in Kannada, read on
Story first published: Tuesday, June 8, 2021, 17:51 [IST]
X
Desktop Bottom Promotion