For Quick Alerts
ALLOW NOTIFICATIONS  
For Daily Alerts

ರಾಜಾಸ್ಥಾನದಲ್ಲಿ ನಿಗೂಢ ಕಾಯಿಲೆಗೆ 7 ಮಕ್ಕಳ ಸಾವು: ಈ ಕಾಯಿಲೆಯ ಲಕ್ಷಣಗಳೇನು?

|

ವಿಚಿತ್ರವಾದ ಕಾಯಿಲೆಗೆ ರಾಜಾಸ್ಥಾನದ ಸಿರೋಹಿ ಜಿಲ್ಲೆಯ 7 ಮಕ್ಕಳು ಸಾವನ್ನಪ್ಪಿರುವುದು ದೇಶದಲ್ಲಿ ಆತಂಕ ಉಂಟು ಮಾಡಿದೆ. 2 ವರ್ಷದಿಂದ-14 ವರ್ಷದೊಳಗಿನ ಪ್ರಾಯದ ಮಕ್ಕಳು ಸಾವನ್ನಪ್ಪಿದ್ದು ಮೊದಲಿಗೆ ಜ್ವರ ಕಾಣಿಸಿಕೊಂಡಿತ್ತು, ನಂತರ ರೋಗ ಲಕ್ಷಣಗಳು ತೀವ್ರಗೊಂಡು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಅಷ್ಟೂ ಮಕ್ಕಳು ಫುಲಾಬಾಯ್‌ ಕೇದ ಮತ್ತು ಫುಲಾಬೆರ್‌ ಗ್ರಾಮಕ್ಕೆ ಸೇರಿದವರಾಗಿದ್ದರು.

Mysterious Disease Kills 7 Children In Rajastha

ಮಕ್ಕಳ ಸಾವಿಗೆ ಕಾರಣವೇನೆಂಬುವುದು ತಿಳಿದು ಬಂದಿಲ್ಲ, ಆದರೆ ಯಾವುದೋ ಅಪಾಯಕಾರಿಯಾದ ವೈರಸ್‌ನಿಂದಾಗಿ ಈ ರೀತಿಯಾಗಿರಬಹುದು ಎಂದು ಆರೋಗ್ಯ ಇಲಾಖೆಯ ಸಹ ನಿರ್ದೇಶಕ ಜಗೇಶ್ವರ್ ಪ್ರಸಾದ್ ಹೇಳಿದ್ದಾರೆ.

ಮಕ್ಕಳ ಸಾವಿಗೆ ಕಾರಣ ತಿಳಿಯಲು ಪ್ರಯತ್ನ

ಮಕ್ಕಳ ಸಾವಿಗೆ ಕಾರಣ ತಿಳಿಯಲು ಪ್ರಯತ್ನ

ಸಾವನ್ನಪ್ಪಿದ 7 ಮಕ್ಕಳಲ್ಲಿ 3 ಮಕ್ಕಳು ಅಲ್ಲಿಯ ಲೋಕಲ್ ಐಸ್‌ ಕ್ಯಾಂಡಿ ಸೇವಿಸಿದ್ದರು, ಆದರೆ ಫುಡ್‌ ಪಾಯಿಸನ್‌ ಇರಬಹುದೇ, ಇಲ್ಲವೇ ಎಂಬುವುದು ಕೂಡ ಇನ್ನಷ್ಟೇ ತಿಳಿಯಬೇಕಾಗಿದೆ. ಮಕ್ಕಳ ಮನೆಯನ್ನು ಹಾಗೂ ಸುತ್ತ-ಮುತ್ತಲಿನ ಪರಿಸರ, ಅವರು ಸೇವಿಸಿದ ಆಹಾರ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ವೈರಲ್‌ ಸೋಂಕು ಕಾರಣ ಇರಬಹುದೇ?

ವೈರಲ್‌ ಸೋಂಕು ಕಾರಣ ಇರಬಹುದೇ?

ಜೋಧ್‌ಪುರದ ಮಕ್ಕಳ ವಿಭಾಗದ ಮುಖ್ಯಸ್ಥ ಕುಲದೀಪ್‌ ಸಿಂಗ್‌ ವೈರಲ್‌ ಸೋಂಕು ಇರಬಹುದು ಎಂದು ಸಂಶಯಿಸಿದ್ದಾರೆ.

ಚಿಕ್ಕ ಶೀತ, ವೈರಲ್‌ ಸೋಂಕಿನ ಲಕ್ಷಣ ಸ್ವಲ್ಪ ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲು ಪೋಷಕರಿಗೆ ಸೂಚಿಸಿದ್ದಾರೆ.

ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು

ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು

ಮಕ್ಕಳಿಗೆ ಫ್ಲೂ, ಸಾಮಾನ್ಯ ಸೀತ, ಬ್ರಾಂಕಿಯೋಲೈಟಿಸ್, ದಡಾರ, ಚಿಕನ್‌ಪಾಕ್ಸ, ಹೆಪಟೈಟಿಸ್ ವೈರಲ್‌ ಸೋಂಕು ಮಕ್ಕಳಲ್ಲಿ ಕಂಡು ಬರುವುದು ಸರ್ವೇ ಸಾಮಾನ್ಯ. ಹವಾಮಾನ ಬದಲಾದಾಗ, ಕಾಲಮಾನ ಬದಲಾದಾಗ ವೈರಲ್‌ ಸೋಂಕು ಉಂಟಾಗುವುದು. ಶಾಲೆಗೆ ಹೋಗುವ ಮಕ್ಕಳಲ್ಲಿ ಈ ವೈರಲ್ ಸೋಂಕು ಹೆಚ್ಚಾಗಿ ಕಂಡು ಬರುವುದು. ಕಲುಷಿತ ನೀರು ಕುಡಿಯುವುದು, ಅನಾರೋಗ್ಯಕರ ಆಹಾರ ಸೇವನೆ ಈ ಎಲ್ಲಾ ಕಾರಣಗಳಿಂದ ಮಕ್ಕಳ ಆರೋಗ್ಯ ಹಾಳಾಗುತ್ತೆ.

ಡೆಂಗ್ಯೂ, ಟಾನ್ಸಿಲಿಟಿಸ್‌, ಸ್ಮಾಲ್‌ಪಾಕ್ಸ್, ಉಸಿರಾಟದ ತೊಂದರೆ, ಅಸ್ತಮಾ ಈ ರೀತಿಯ ಸಮಸ್ಯೆಗಳು ಕಂಡು ಬರುವುದು.

ಮಕ್ಕಳಿಗೆ ವೈರಲ್‌ ಸೋಂಕು ತಗುಲಿದಾಗ ಕಂಡು ಬರುವ ಲಕ್ಷಣಗಳು

* ಮೂಗು ಸೋರುವುದು, ಮೂಗು ಕಟ್ಟುವುದು

* ಗಂಟಲು ಕೆರೆತ

* ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು

* ಕೆಮ್ಮು, ಶೀತ

* ಚಳಿ, ಜ್ವರ

* ವಾಂತಿ, ಭೇದ

* ಕೆಮ್ಮು

* ಮೈಯಲ್ಲಿ ಗುಳ್ಳೆಗಳು ಏಳುವುದು

* ಕಿರಿಕಿರಿ ಮಾಡುವುದು

* ಮೈಕೈ ನೋವು

* ವಿಪರೀತ ಅಳು

ನಿಮ್ಮ ಮಗುವಿನಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದಾಗ ಔಷಧಿ ನೀಡಿ 48 ಗಂಟೆಯ ಒಳಗಾಗಿ ಸರಿ ಹೋಗದಿದ್ದರೆ ಮಕ್ಕಳ ತಜ್ಞರಿಗೆ ತೋರಿಸಿ.

English summary

Mysterious Disease Kills 7 Children In Rajasthan: Know Symptoms In Kids in Kannada

Mysterious Disease Kills 7 Children In Rajasthan: Know Symptoms In Kids in Kannada, Read on...
Story first published: Saturday, April 16, 2022, 19:12 [IST]
X
Desktop Bottom Promotion