For Quick Alerts
ALLOW NOTIFICATIONS  
For Daily Alerts

ಹೆಸರೇ ಇರದ ಈ ಮೆದುಳು ಸೋಂಕಿಗೆ ಕೆನಾಡದಲ್ಲಿ 6 ಮಂದಿ ಸಾವು

|

ವಿಶ್ವಾದ್ಯಂತ ಕೋವಿಡ್‌ ಸಾಂಕ್ರಾಮಿಕ ರೋಗದ ಅಲೆ ಅಬ್ಬರಿಸುತ್ತಿದೆ, ಭಾರತದಲ್ಲಿ ಈ ಮಾರಣಾಂತಿಕ ಕಾಯಿಲೆ ವಿಶ್ವವನ್ನೇ ಮೀರಿಸುವ ಮಟ್ಟಿಗೆ ಹಬ್ಬುತ್ತಿದೆs. ಆದರೆ ಇದರ ನಡುವೆಯೇ ಕೆನಾಡದಲ್ಲಿ ಮೆದುಳಿಗೆ ಸಂಬಂಧಿಸಿದ ಮತ್ತೊಂದು ಸೋಂಕಿನ ಭೀತಿ ಭುಗಿಲೆದ್ದಿದೆ.

Mysterious brain disease hit Canada, 48 cases reported so far

ಅಧಿಕೃತ ಮಾಹಿತಿಯ ಪ್ರಕಾರ, ಕೆನಡಾದ ನ್ಯೂ ಬ್ರನ್ಸ್ವಿಕ್‌ ಪ್ರಾಂತ್ಯದಲ್ಲಿ ಪತ್ತೆಯಾಗಿರುವ ಹೆಸರೇ ಇಲ್ಲದ ಈ ನಿಗೂಢವಾದ ಮೆದುಳು ಸೋಂಕಿಗೆ ಈವರೆಗೂ 48 ರೋಗಿಗಳು ತುತ್ತಾಗಿದ್ದಾರೆ, 6 ಜನರು ಹಾಗೂ 4 ಶ್ವಾನಗಳು ಮೃತಪಟ್ಟಿದ್ದಾರೆ. ಮೃತರು ದೇಹದಲ್ಲಿ ನೀಲಿ-ಹಸಿರು ಪಾಚಿಯಂತಿರುವ ಸೈನೋಬ್ಯಾಕ್ಟೀರಿಯ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸೋಂಕಿನ ಲಕ್ಷಣಗಳು

ಸೋಂಕಿನ ಲಕ್ಷಣಗಳು

ಸೋಂಕು ಕಾಣಿಸಿಕೊಂಡವರಲ್ಲಿ ಕೆಲವು ವಿಚಿತ್ರ ಲಕ್ಷಣಗಳು ಕಂಡುಬಂದಿದೆ. ಕನಸಿನಲ್ಲಿ ಸತ್ತವರು ಕಾಣಿಸಿಕೊಳ್ಳುವುದು, ಕೆಟ್ಟ ಭ್ರಮೆಗಳು, ಆತಂಕ, ನಿದ್ರಾಹೀನತೆ ಮತ್ತು ಅಂಗಗಳ ಅಪಸಾಮಾನ್ಯ ಕ್ರಿಯೆ ಸೇರಿದಂತೆ ಮಾನಸಿಕವಾಗಿ ಮನುಷ್ಯನಲ್ಲಿ ಭೀತಿ ಹುಟ್ಟಿಸುವಂಥ ರೋಗಲಕ್ಷಣಗಳನ್ನು ಈ ಸೋಂಕು ಹೊಂದಿದೆ.

ಸೋಂಕಿಗೆ ಕಾರಣ

ಸೋಂಕಿಗೆ ಕಾರಣ

ಸೋಂಕಿನ ಕಾರಣ ನಿಜಕ್ಕೂ ಭೀತಿಹುಟ್ಟಿಸುವಂತಿದೆ. ಮೊಬೈಲ್‌ ಪೋನ್‌ ಟವರ್‌ಗಳು ಹೊರಸೂಸುತ್ತಿರುವ ವಿಕಿರಣವೇ ಈ ಮೆದುಳು ಸೊಂಕು ಹರಡಲು ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಕೆಲವು ವಿಜ್ಞಾನಿಗಳು ಕೋವಿಡ್‌ ಲಸಿಕೆಯಿಂದಲೂ ಈ ಸೋಂಕು ಹರಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ವೈದ್ಯರ ಈ ಹೇಳಿಕೆಗಳಿಗೆ ಪು‍ಷ್ಠಿ ನೀಡುವಂಥ ಯಾವುದೇ ವೈಜ್ಞಾನಿಕ ಪುರಾವೆಗಳು ಇನ್ನೂ ಕಂಡುಬಂದಿಲ್ಲ, ಈ ಬಗ್ಗೆ ಇಂದಿಗೂ ನರವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ಮೆದುಳು ಸೋಂಕಿಗೆ ಈವರೆಗೂ 6 ಜನರ ಸಾವು

ಮೆದುಳು ಸೋಂಕಿಗೆ ಈವರೆಗೂ 6 ಜನರ ಸಾವು

ಸುಮಾರು 6 ವರ್ಷಗಳ ಹಿಂದೆಯೇ ಕೆನಡಾದಲ್ಲಿ ಈ ಮೆದುಳು ರೋಗ ಹರಡಲು ಪ್ರಾರಂಭಿಸಿತ್ತು. ಈ ಸೋಂಕಿಗೆ ಹಲವರು ಒಳಗಾಗಿದ್ದು, ಅವರಲ್ಲಿ 6 ಮಂದಿ ಹಾಗೂ 4 ಶ್ವಾನಗಳು ಅಸುನೀಗಿದೆ ಎಂಬ ಮಾಹಿತಿಯನ್ನೂ ವಿಜ್ಞಾನಿಗಳು ಹೇಳಿದ್ದಾರೆ. ಈ ಸೋಂಕಿನ ಭೀತಿ ಕೆನಡಾದ ಜನರಲ್ಲಿ ಹೆಚ್ಚುತ್ತಿತ್ತು, ಆದರೆ ಈ ನಡುವೆ ಕಳೆದ ವರ್ಷದ ಕೋವಿಡ್‌ ಸಾಂಕ್ರಾಮಿಕ ವೈರಸ್ ಪ್ರಾರಂಭವಾಗಿತ್ತು, ಈ ಕಾರಣದಿಂದಾಗಿ ಜನರು ಮತ್ತು ಆರೋಗ್ಯ ಅಧಿಕಾರಿಗಳ ಗಮನ ಕೋವಿಡ್‌ ಸೋಂಕಿನ ಮೇಲೆಯೇ ಹೆಚ್ಚಾಯಿತು. ಕೊರೊನಾ ಭೀಕರತೆ ಮೆದುಳು ಸೋಂಕನ್ನು ಮರೆಮಾಚಿತು ಎನ್ನಬಹುದು, ಅದರೆ ಮೆದುಳು ಸೋಂಕು ಇಲ್ಲ ಎಂದಲ್ಲ.

ಪತ್ತೆಯಾಗದ ರೋಗದ ಮೂಲ

ಪತ್ತೆಯಾಗದ ರೋಗದ ಮೂಲ

ಮೆದುಳು ಸೋಂಕಿನ ಮೂಲ ಯಾವುದು ಎಂದು ಕೆನಾಡ ಜನರು ವೈದ್ಯಲೋಕವನ್ನು ಪ್ರಶ್ನಿಸುತ್ತಲೇ ಇದ್ದಾರೆ, ಆದರೆ ಇದಕ್ಕೆ ಇನ್ನೂ ಉತ್ತರ ದೊರಕಿಲ್ಲ. ಪರಿಸರದ ಮೂಲಕ ಹರಡುತ್ತಿದೆಯೇ, ಅನುವಂಶಿಕವೇ, ಮೀನು, ಮಾಂಸಗಳಂಥ ಶಾಖಾಹಾರಿ ಆಹಾರ ಇದಕ್ಕೆ ಕಾರಣವೇ? ಇದಾವುದೂ ಅಲ್ಲದಿದ್ದರೇ ಇದರ ಮೂಲ ಯಾವುದು ಎಂಬುದು ಜನರ ಗೊಂದಲವಾಗಿದೆ. ಈ ಸೋಂಕು 6 ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದ್ದರೂ ಈ ರೋಗದ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಲೇ ಇದೆ. ಇಷ್ಟು ಸಮಯದ ನಂತರವೂ ಈ ರೋಗದ ಮೂಲ ಪತ್ತೆಯಾಗದ ಕಾರಣ ಈ ರೋಗಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂಬುದು ವಿಜ್ಞಾನಿಗಳ ಹೇಳಿಕೆ.

ಮಾರ್ಚ್‌ನಲ್ಲಿ ಬಹಿರಂಗವಾದ ಸೋಂಕಿನ ಮಾಹಿತಿ

ಮಾರ್ಚ್‌ನಲ್ಲಿ ಬಹಿರಂಗವಾದ ಸೋಂಕಿನ ಮಾಹಿತಿ

ನಿಗೂಢವಾದ ಕಾಯಿಲೆಯ ಬಗ್ಗೆ ನ್ಯೂ ಬ್ರನ್ಸ್ವಿಕ್‌ನ ಮುಖ್ಯ ವೈದ್ಯಾಧಿಕಾರಿ ಮಾರ್ಚ್‌ನಲ್ಲಿ ಸಾರ್ವಜನಿಕವಾಗಿ ಮಾಹಿತಿ ನೀಡಿದ್ದಾರೆ. ಜಾಗತಿಕ ಸಾಂಕ್ರಾಮಿಕ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಇಡೀ ವೈದ್ಯಕೀಯ ಲೋಕವೇ ಸವಾಲಿನಲ್ಲಿದೆ, ಆದ್ದರಿಂದ ಈ ಬಗ್ಗೆ ಅಷ್ಟು ಸಂಶೋಧನೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇನ್ನೂ ಉತ್ತರಿಸಲಾಗದ ಸೋಂಕುಗಳು, ಮಾನಸಿಕ ಕಾಯಿಲೆಗಳು ಹೆಚ್ಚುತ್ತಲೇ ಇರುವುದಕ್ಕರ ಕೊರೊನಾ ವೈರಸ್‌ ಹಾಗೂ ಮೆದುಳು ಸೋಂಕು ಸಾಕ್ಷಿ. ನಾವು ಇನ್ನೂ ಸಾಕಷ್ಟು ಸಂಶೋಧನೆಗಳಲ್ಲಿ ಹಿಂದಿದ್ದೇವೆ ಎಂಬುದನ್ನು ಇದು ಸಾಬೀತುಡಿಸಿತ್ತದೆ, ಇದು ಜನರ ಆತಂಕಕ್ಕೂ ಕಾರಣವಾಗಿದೆ.

English summary

Mysterious brain disease hit Canada, 48 cases reported so far

Here we are going to discuss about Mysterious brain disease hit Canada, 48 cases reported so far. Read more.
Story first published: Monday, June 7, 2021, 14:58 [IST]
X
Desktop Bottom Promotion