For Quick Alerts
ALLOW NOTIFICATIONS  
For Daily Alerts

Black Fungus infection: ಏನಿದು ಬ್ಲ್ಯಾಕ್‌ ಫಂಗಸ್? ಮಧುಮೇಹಿಗಳು, ಐಸಿಯುವಿನಲ್ಲಿರುವವರಿಗೆ ಅಪಾಯಕಾರಿ ಹಾಕಿ?

|

ಯಾರಲ್ಲಿ ನಿಯಂತ್ರಣಕ್ಕೆ ಬಾರದ ಮಧುಮೇಹ ಸಮಸ್ಯೆ ಇದೆಯೋ, ಯಾರು ತುಂಬಾ ಸಮಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೋ ಅಂಥ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಕಂಡು ಬರುತ್ತಿದ್ದು ಇದಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಮಾರಣಾಂತಿಕವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.

ಈ ರೀತಿಯ ಸಮಸ್ಯೆ ಯಾರು ಗಂಭೀರ ಕಾಯಿಲೆ ಉಂಟಾಗಿ ವಾಯುವಲ್ಲಿನ ರೋಗಕಾರಕ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೋ ಅವರಲ್ಲಿ ಕಂಡು ಬರುತ್ತಿದೆ.

ಬ್ಲ್ಯಾಕ್ ಫಂಗಸ್ ಉಂಟಾದರೆ ವ್ಯಕ್ತಿಯ ಶ್ವಾಸಕೋಶಕ್ಕೆ ಹಾನಿಯುಂಟಾಗುವುದು, ಇದರಿಂದಾಗಿ ಸೋಂಕಿತ ವ್ಯಕ್ತಿ ಸ್ಥಿತಿ ಮತ್ತಷ್ಟು ಗಂಭೀರವಾಗುವುದು ಎಂದು ಐಸಿಎಂಆರ್ (Indian Council of Medical Research) ಎಂದು ಆಧಾರ ಸಹಿತ ಹೇಳಿದೆ.

ಬ್ಲ್ಯಾಕ್ ಫಂಗಸ್‌ನ ಲಕ್ಷಣಗಳಿವು

ಬ್ಲ್ಯಾಕ್ ಫಂಗಸ್‌ನ ಲಕ್ಷಣಗಳಿವು

* ಕಿವಿ ಹಾಗೂ ಮೂಗು ಕೆಂಪಾಗುವುದು ಹಾಗೂ ನೋವು

* ಜ್ವರ

* ತಲೆನೋವು

* ಕೆಮ್ಮು

* ಉಸಿರಾಟಕ್ಕೆ ತೊಂದರೆ

* ರಕ್ತ ವಾಂತಿ

* ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸ, ಒಂದು ರೀತಿಯ ಗೊಂದಲ

ಯಾವಾಗ ಬ್ಲ್ಯಾಕ್ ಫಂಗಸ್ ಇರಬಹುದು ಎಂದು ಸಂಶಯಿಸಬೇಕು?

ಯಾವಾಗ ಬ್ಲ್ಯಾಕ್ ಫಂಗಸ್ ಇರಬಹುದು ಎಂದು ಸಂಶಯಿಸಬೇಕು?

ಯಾವಾಗ ಕೋವಿಡ್‌ 19 ಸೋಂಕಿತರಿಗೆ ಮಧುಮೇಹದ ಸಮಸ್ಯೆ ಇರುತ್ತದೋ ಅಥವಾ ರೋಗ ನಿರೋಧಕ ಶಕ್ತಿ ಸಂಪೂರ್ಣ ಕುಂದಿರುವವರಲ್ಲಿ

ತಲೆನೋವು, ಮೂಗು ಕಟ್ಟುವುದು, ಮೂಗಿನಲ್ಲಿ ರಕ್ತ, ದವಡೆಯಲ್ಲಿ ನೋವು, ಒಂದು ಭಾಗ ಕೆನ್ನೆಯಲ್ಲಿ ನೋವು, ಊತ, ಮರಗಟ್ಟಿದ ಅನುಭವ, ಮೂಗಿನ ತುದಿಯಲ್ಲಿ ಕಪ್ಪುಬಣ್ಣ ಇವೆಲ್ಲಾ ಮ್ಯೂಕೋರ್ಮೈಕೋಸಿಸ್ ಆಗಿರಬಹುದು.

* ಹಲ್ಲು ನೀವು, ಹಲ್ಲುಗಳು ಸಡಿಲವಾಗುವುದು, ದವಡೆ ನೋವು

* ಕಣ್ಣುಗಳು ಮಂಜಾಗುವುದು, ನೋವು, ಜ್ವರ, ತ್ವಚೆಯಲ್ಲಿ ಊತ, ರಕ್ತ ಹೆಪ್ಪುಗಟ್ಟುವುದು

*ಎದೆ ನೋವು, ಉಸಿರಾಟದಲ್ಲಿ ತೊಂದರೆ, ಶ್ವಾಸಕೋಶದಲ್ಲಿ ನೀರು ತುಂಬುವುದು, ಕೆಮ್ಮುವಾಗ ರಕ್ತ ಬರುವುದು

ಮ್ಯೂಕೋರ್ಮೈಕೋಸಿಸ್ ಅಪಾಯಗಳು

ಮ್ಯೂಕೋರ್ಮೈಕೋಸಿಸ್ ಅಪಾಯಗಳು

ಸ್ಟಿರಾಯ್ಡ್ ನೀಡಿ ಮಧುಮೇಹ ಹಾಗೂ ಇಮ್ಯೂನೋಸಪ್ರೆಸ್ಸೆನ್ ಕಂಟ್ರೋಲ್ ಮಾಡೋಕೆ ಆಗಲ್ಲ ಅಲ್ಲದೆ ತುಂಬಾ ಸಮಯ ಐಸಿಯುವಿನಲ್ಲಿ ಇರಬೇಕಾಗುವುದು.

ಮ್ಯೂಕೋರ್ಮೈಕೋಸಿಸ್ ತಡೆಗಟ್ಟುವುದು ಹೇಗೆ?

ಮ್ಯೂಕೋರ್ಮೈಕೋಸಿಸ್ ತಡೆಗಟ್ಟುವುದು ಹೇಗೆ?

* ನೀವು ದೂಳಿನ ಪ್ರದೇಶದಲ್ಲಿ ಓಡಾಡುವಾಗ ಮಾಸ್ಕ್ ಧರಿಸಬೇಕು.

* ಮಣ್ಣಿನಲ್ಲಿ ಕೆಲಸ ಮಾಡುವಾಗ ಶೂ ಧರಿಸಬೇಕು, ಉದ್ದ ತೋಳಿನ ಬಟ್ಟೆ ಹಾಗೂ ಪ್ಯಾಂಟ್ ಧರಿಸಬೇಕು.

* ಮೈಯುಜ್ಜಿ ಸ್ನಾನ ಮಾಡಿ ಸ್ವಚ್ಛತೆ ಕಡೆ ಗಮನ ಹರಿಸಬೇಕು.

ಈ ಸಮಸ್ಯೆಯನ್ನು ಮಧುಮೇಹ ನಿಯಂತ್ರಿಸುವ ಮೂಲಕ, ಸ್ಟಿರಾಯ್ಡ್ ಕಡಿಮೆ ತೆಗೆದುಕೊಳ್ಳುವ ಮೂಲಕ, ಇಮ್ಯೂನೋಮೋಡ್ಯೂಲೇಟಿಂಗ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸುವ ಮೂಲಕ ತಡೆಗಟ್ಟಬಹುದು.

ಏನು ಮಾಡಬೇಕು?

ಏನು ಮಾಡಬೇಕು?

* hyperglycemia ಅಂದ್ರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ನಿಯಂತ್ರಿಸಬೇಕು.

* ಕೋವಿಡ್ 19ನಿಂದ ಚೇತರಿಸಿದ ಬಳಿಕ ಹಾಗೂ ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

* ಸ್ಟಿರಾಯ್ಡ್ ಅನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ.

* ಆಕ್ಸಿಜನ್ ಥೆರಪಿ ತೆಗೆದುಕೊಳ್ಳುವಾಗ ಶುದ್ಧ ನೀರನ್ನು ಬಳಸಿ.

* ಆ್ಯಂಟಿಬಯೋಟಿಕ್ಸ್ / ಆ್ಯಂಟಿಫಂಗಲ್ಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ.

ಏನು ಮಾಡಬಾರದು?

ಏನು ಮಾಡಬಾರದು?

* ನೀವು ಮ್ಯೂಕೋರ್ಮೈಕೋಸಿಸ್‌ನ ಪ್ರಾರಂಭದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ.

* ಸೈನಸಿಟಿಸ್ ಅಥವಾ ಕಟ್ಟಿದ ಮೂಗನ್ನು ನಿರ್ಲಕ್ಷ್ಯ ಮಾಡಬಾರದು, ಅದರಲ್ಲೂ ಕೋವಿಡ್ ಸೋಂಕು ಇರುವ ಸಮಯದಲ್ಲಿ ನಿರ್ಲಕ್ಷ್ಯ ಮಾಡಬಾರದು.

* ಈ ಸೋಂಕು ಪತ್ತೆಗೆ ಎಲ್ಲಾ ಚಿಕಿತ್ಸೆ ಮಾಡಿ.

* ಚಿಕಿತ್ಸೆಯನ್ನು ಆದಷ್ಟು ಬೇಗ ಪ್ರಾರಂಭಿಸಿ.

ಮ್ಯೂಕೋರ್ಮೈಕೋಸಿಸ್‌ ನಿಯಂತ್ರಿಸುವುದು ಹೇಗೆ?

ಮ್ಯೂಕೋರ್ಮೈಕೋಸಿಸ್‌ ನಿಯಂತ್ರಿಸುವುದು ಹೇಗೆ?

* ಮಧುಮೇಹವನ್ನು ನಿಯಂತ್ರಿಸಿ

* ಸ್ಟಿರಾಯ್ಡ್ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.

* ಇಮ್ಯೂನೋಮೋಡ್ಯೂಲೇಟಿಂಗ್ ಡ್ರಗ್‌ ತೆಗೆದುಕೊಳ್ಳಬೇಡಿ.

* ಯಾವುದೇ ಆ್ಯಂಟಿಫಂಗಲ್ ರೋಗನಿರೋಧಕ ತೆಗೆದುಕೊಳ್ಳಬೇಡಿ.

* ಗಾಯವನ್ನು ಒಣಗಿಸುವ ಚಿಕಿತ್ಸೆ ಪಡೆಯಬೇಕು

* ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು, ರೋಗ ಲಕ್ಷಣಗಳು ಉಲ್ಭಣವಾಗುತ್ತಿದೆಯೇ ಎಂದು ಗಮನಿಸುತ್ತಾ ಇರಬೇಕು.

ವೈದ್ಯಕೀಯ ಚಿಕಿತ್ಸೆ

* peripherally inserted central catheter ಅಳವಡಿಸಬೇಕು.

* ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.

* ಸಲೈನ್ IVಗಿಂತ ಮೊದಲು ಆಂಫೊಟೆರಿಸಿನ್ B ಅಳವಡಿಸಬೇಕು.

*ಆ್ಯಂಟಿಫಂಗಲ್ ಥೆರಪಿಯನ್ನು 4-6 ವಾರ ಮಾಡಬೇಕು.

English summary

Mucormycosis Or Black Fungus Infection Symptoms, Prevention, Dos and Don'ts for Covid 19 Patients in kannada

Mucormycosis or Black fungus infection Symptoms, Prevention, Dos and Don'ts for Covid 19 patients in kannada, read on..
X
Desktop Bottom Promotion