For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್‌ಗೇ ಬಲಿಯಾದರೆ ಕೇರಳದ ವ್ಯಕ್ತಿ, ತಜ್ಞರು ಅಚ್ಚರಿ ವ್ಯಕ್ತ ಪಡಿಸಿರುವುದು ಏಕೆ?

|

ಏಷ್ಯಾದಲ್ಲಿಯೇ ಮಂಕಿಪಾಕ್ಸ್‌ಗೆ ಮೊದಲ ಬಲಿಯಾಗಿದೆ, ಅದೂ ಭಾರತದ ಕೇರಳದಲ್ಲಿ ಸಂಭವಿಸಿದೆ. ಈ ಸಾವು ಮಂಕಿಪಾಕ್ಸ್ ಕುರಿತು ಆತಂಕ ಹೆಚ್ಚಿಸಿದೆ.

ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಕೇರಳದಲ್ಲಾಗಿತ್ತು. ಯುಎಇಯಿಂದ ಬಂದಿದ್ದ ನಾಲ್ಕು ವ್ಯಕ್ತಿಗಳಲ್ಲಿ ಮಂಕಿವೈರಸ್‌ ಲಕ್ಷಣಗಳು ಕಂಡು ಬಂದಿದ್ದು, ಅವರಿಗೆ ಮಂಕಿಪಾಕ್ಸ್‌ ಇರುವುದು ಪರೀಕ್ಷೆಯಿಂದ ದೃಢಪಟ್ಟಿತ್ತು. ಅದರಲ್ಲೊಬ್ಬರು ಸಾವನ್ನಪ್ಪಿರುವುದು ತಜ್ಞರಿಗೆ ಅಚ್ಚರಿ ತಂದಿದೆ.

ಏಕೆ ಈ ಸಾವು ತಜ್ಞರಿಗೆ ಅಚ್ಚರಿ ತಂದಿದೆ, ಈ ಸಾವಿನ ಬಗ್ಗೆ ತಜ್ಞರು ಹೇಳುವುದಾದರೂ ಏನು ಎಂದು ನೋಡೋಣ ಬನ್ನಿ:

ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ

ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ

ಮಂಕಿಪಾಕ್ಸ್ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಂಡು ಬಂದಿದೆಯಾದರೂ ಇದರಿಂದ ಸಾವನ್ನಪ್ಪಿರುವವರ ಸಂಖ್ಯೆ ತುಂಬಾ ಕಡಿಮೆ, ಹಾಗಿರುವಾಗ ಭಾರತದಲ್ಲಿ ಮಂಕಿಪಾಕ್ಸ್ ಕಂಡು ಬಂದ ಕೆಲವೇ ದಿನಗಳಲ್ಲಿ ಆ ಕಾಯಿಲೆಗೆ ವ್ಯಕ್ತಿ ಬಲಿಯಾಗಿರುವುದು ತಜ್ಞರ ಅಚ್ಚರಿಗೆ ಕಾರಣವಾಗಿದೆ.

ಮಂಕಿಪಾಕ್ಸ್‌ನಿಂದ ವ್ಯಕ್ತಿಯ ಸಾವು ತೀವ್ರ ಚರ್ಚೆಗೆ ಕಾರಣವಾಗಿದೆ

ಮಂಕಿಪಾಕ್ಸ್‌ನಿಂದ ವ್ಯಕ್ತಿಯ ಸಾವು ತೀವ್ರ ಚರ್ಚೆಗೆ ಕಾರಣವಾಗಿದೆ

ಮಂಕಿಪಾಕ್ಸ್‌ನಿಂದ ವ್ಯಕ್ತಿ ಸಾವನ್ನಪ್ಪಿದ್ದು ಈ ವ್ಯಕ್ತಿ ಮಂಕಿಪಾಕ್ಸ್‌ ವೈರಸ್‌ನಿಂದಲೇ ಸಾವನ್ನಪ್ಪಿದ್ದಾರಾ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗೆ ಸಾವನ್ನಪ್ಪಿದ್ದಾರಾ ಎಂಬುವುದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕೇರಳದ ವ್ಯಕ್ತಿ ಮೆದುಳಿನ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ)ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ಆಫ್ರಿಕದಲ್ಲಿ ಸಾವನ್ನಪ್ಪಿದ ಇಬ್ಬರಲ್ಲೂ ಮೆದುಳಿನ ಎನ್ಸೆಫಾಲಿಟಿಸ್ ಕಂಡು ಬಂದಿತ್ತು.

ಭಾರತದಲ್ಲಿ ಮಂಕಿಪಾಕ್ಸ್‌ಗೆ ಬಲಿಯಾದರು ಎಂದು ಹೇಳಲಾಗುತ್ತಿರುವ ವ್ಯಕ್ತಿಯ ಸಾವಿನ ನಿಖರತೆ ಪೋಸ್ಟ್‌ಮಾರ್ಟಂ ರಿಪೋರ್ಟ್ ನಂತರವಷ್ಟೇ ತಿಳಿದು ಬರಲಿದೆ. ಇದುವರೆಗೆ ಮಂಕಿಪಾಕ್ಸ್ ಬಲಿಯಾದವರು 40 ವರ್ಷದೊಳಗಿನವರಾಗಿದ್ದಾರೆ.

ಮಂಕಿಪಾಕ್ಸ್‌ ಸಾವಿನ ಸಂಖ್ಯೆ ತುಂಬಾ ಕಡಿಮೆ

ಮಂಕಿಪಾಕ್ಸ್‌ ಸಾವಿನ ಸಂಖ್ಯೆ ತುಂಬಾ ಕಡಿಮೆ

ವಿಶ್ವದಲ್ಲಿ ಮಂಕಿಪಾಕ್ಸ್ ಸಾವಿನ ಸಂಖ್ಯೆ ನೋಡಿದರೆ ತುಂಬಾ ಕಡಿಮೆಯಿದೆ. ಮಂಕಿಪಾಕ್ಸ್‌ ತಗುಲಿದ ಬಹುತೇಕ ವ್ಯಕ್ತಿಗಳು ಚೇತರಿಸಿಕೊಳ್ಳುತ್ತಿದ್ದಾರೆ, ತುಂಬಾ ಗಂಭೀರ ಸೋಂಕು ತಗುಲಿದವರು ಅಷ್ಟೇ ಸಾವನ್ನಪ್ಪಿದ್ದಾರೆ, ಬೇರೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಮಾತ್ರ ಸಾವನ್ನಪ್ಪುತ್ತಿದ್ದಾರೆ, ಆದ್ದರಿಂದ ಮಂಕಿಪಾಕ್ಸ್‌ಗೂ ಸಾವಿಗೂ ನೇರ ಸಂಬಂಧವಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಸಲಿಂಗಿಗಳಿಗೆ ಮಂಕಿಪಾಕ್ಸ್‌ ಬರುತ್ತಿದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ

ಸಲಿಂಗಿಗಳಿಗೆ ಮಂಕಿಪಾಕ್ಸ್‌ ಬರುತ್ತಿದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ

ಸಲಿಂಗಿಗಳಲ್ಲಿ ಅದರಲ್ಲೂ ಪುರುಷ-ಪುರುಷರೂ ಲೈಂಗಿಕ ಕ್ರಿಯೆ ಮಾಡಿದರೆ ಮಂಕಿಪಾಕ್ಸ್ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದಾಗಿ ಜನ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದರೂ ಚಿಕಿತ್ಸೆಗೆ ಬರುತ್ತಿಲ್ಲ. ಇದರಿಂದಾಗಿ ರೋಗ ಲಕ್ಷಣಗಳು ಗಂಭೀರವಾಗಿ ಸಾವನ್ನಪ್ಪುವ ಸಾಧ್ಯತೆ ಇದೆ, ಆದ್ದರಿಂದ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರು ಹೇಳುತ್ತಿದ್ದಾರೆ.

22 ವರ್ಷದ ಯುವಕ ಸಾವನ್ನಪ್ಪಿದ್ದಾನೆ

22 ವರ್ಷದ ಯುವಕ ಸಾವನ್ನಪ್ಪಿದ್ದಾನೆ

ಮಂಕಿಪಾಕ್ಸ್ ತಗುಲಿ ಸಾವನ್ನಪ್ಪಿರುವ ಕೇರಳದ ವ್ಯಕ್ತಿಗೆ ಕೇವಲ 22 ವರ್ಷ. ಆತನಿಗೆ ಇತರ ಆರೋಗ್ಯ ಸಮಸ್ಯೆಯೂ ಇತ್ತು, ಆದರೆ ಆತ ನಿಯಮಿತ ಚಿಕಿತ್ಸೆ ಪಡೆಯುತ್ತಿರಲಿಲ್ಲ ಎಂದು ಡಾ. ಎನ್‌ ಸುಲ್ಫಿ (MA state president) ಹೇಳಿದ್ದಾರೆ.

ದೇಶದಲ್ಲಿ ಹರಡುತ್ತಿದೆ ಮಂಕಿಪಾಕ್ಸ್

ದೇಶದಲ್ಲಿ ಮಂಕಿಪಾಕ್ಸ್ ನಿಧಾನಕ್ಕೆ ಹರಡುತ್ತಿದೆ, ಇದು ಹರಡದಂತೆ ಎಚ್ಚರವಹಿಸಿ. ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಿರಿ.

English summary

Monkeypox Death in Kerala Raises Concern and Isolates 20 Contacts, Surprises Experts

Monkeypox: Monkeypox Death in Kerala Raises Concern and Surprises Experts, These are main reason read on...
Story first published: Tuesday, August 2, 2022, 17:39 [IST]
X
Desktop Bottom Promotion