For Quick Alerts
ALLOW NOTIFICATIONS  
For Daily Alerts

11ಕ್ಕೂ ಅಧಿಕ ದೇಶಗಳಲ್ಲಿ ಮಂಕಿಪಾಕ್ಸ್‌ ಆತಂಕ: ಈ ರೋಗದ ಲಕ್ಷಣಗಳೇನು? ಭಾರತದಲ್ಲಿಯೂ ಕಾಣಿಸಿದೆಯೇ?

|

ಇದೀಗ 11ಕ್ಕೂ ಅಧಿಕ ದೇಶಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಮಂಕಿಪಾಕ್ಸ್‌ ಬಲು ಅಪರೂಪದ ಕಾಯಿಲೆ ಮಂಕಿಪಾಕ್ಸ್‌. ಈ ಕಾಯಿಲೆ ತುಂಬಾ ಗಂಭೀರವಾಗುವ ಸಾಧ್ಯತೆ ಇದೆ. ಈ ಮಂಕಿಪಾಕ್ಸ್‌ ಅನ್ನು ಸಾಮೂಹಿಕ ಸ್ಮಾಲ್‌ಪಾಕ್ಸ್ ಲಸಿಕೆ ನೀಡುವುದರ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

Monkeypox

ಕೋವಿಡ್‌ 19 ಬಳಿಕ ಈಗ ಒಂದೆಲ್ಲಾ ಒಂದು ವೈರಸ್‌ ಬರುತ್ತಲೇ ಇದೆ, ಇದೀಗ ಮಂಕಿ ವೈರಸ್‌ ಎಂಬುವುದು ಶುರುವಾಗಿದೆ. ಈ ಮಂಕಿ ವೈರಸ್‌ ಎಂದರೇನು? ಇದು ಹೇಗೆ ಹರಡುತ್ತದೆ, ಇದಕ್ಕೆ ಚಿಕಿತ್ಸೆಯೇನು ಎಂಬೆಲ್ಲಾ ಮಾಹಿತಿ ಇಲ್ಲಿದೆ:

ಮಂಕಿಪಾಕ್ಸ್ ಎಂದರೇನು?

ಮಂಕಿಪಾಕ್ಸ್ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ (WHO)ಮಂಕಿ ವೈರಸ್‌ ಎಂಬುವುದು ಜೂನೋಟಿಕ್‌ ಕಾಯಿಲೆಯಾಗಿದೆ. ಇದು ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಹರಡುತ್ತಿದೆ. ಇದು ಪ್ರಮುಖವಾಗಿ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಈ ಕಾಯಿಲೆ ಪಶ್ಚಿಮ ಆಫ್ರಿಕಾದಲ್ಲಿ ಕಂಡು ಬರುತ್ತಿತ್ತು. ಇದೀಗ ಯುಕೆ, ಪೋರ್ಚುಗಲ್‌, ಸ್ಪೇನ್, ಯುಎಸ್‌, ಇಟಲಿ, ಸ್ವೀಡೆನ್‌,ಆಸ್ಟ್ರೇಲಿಯಾ, ಕೆನಡಾ ಈ ದೇಶಗಳಲ್ಲಿ ಕಂಡು ಬಂದಿದೆ. ಭಾರತದಲ್ಲಿ ಈ ಮಂಕಿ ವೈರಸ್‌ ಇದುವರೆಗೆ ಭಾರತದಲ್ಲಿ ಕಂಡು ಬಂದಿಲ್ಲ.

 ಮಂಕಿಪಾಕ್ಸ್‌ ಹೇಗೆ ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತದೆ?

ಮಂಕಿಪಾಕ್ಸ್‌ ಹೇಗೆ ಒಬ್ಬರಿಂದ ಒಬ್ಬರಿಗೆ ಹೇಗೆ ಹರಡುತ್ತದೆ?

* ಮಂಕಿಪಾಕ್ಸ್‌ ಪ್ರಾಣಿಗಳಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅದು ಪ್ರಾಣಿಯಿಂದ ಮನುಷ್ಯರಿಗೆ ಹೇಗೆ ಹರಡುವುದು ಎಂದು ನೋಡುವುದಾದರೆ ಸೋಂಕು ತಗುಲಿರುವ ಪ್ರಾಣಿಯ ಮಾಂಸವನ್ನು ಸರಿಯಾಗಿ ಬೇಯಿಸಿ ತಿನ್ನದಿದ್ದರೆ ಬರುತ್ತದೆ.

* ಸೋಂಕು ಇರುವ ವ್ಯಕ್ತಿಯ ಡ್ರಾಪ್‌ಲೆಟ್ಸ್‌ ಮೂಲಕ ಹರಡುವುದು ಅಥವಾ ತುಂಬಾ ಹೊತ್ತು ಎದುರು-ಬದುರು ನಿಂತರೂ ಬರುತ್ತದೆ.

* ತಾಯಿಗೆ ಸೋಂಕು ಇದ್ದರೆ ಮಗುವಿಗೆ ಹರಡುವುದು.

* ಸೋಂಕು ಇರುವ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕದಿಂದ ಕೂಡ ಹರಡುತ್ತದೆ.

 ಮಂಕಿಪಾಕ್ಸ್‌ ಲಕ್ಷಣಗಳೇನು?

ಮಂಕಿಪಾಕ್ಸ್‌ ಲಕ್ಷಣಗಳೇನು?

* ಮಂಕಿಪಾಕ್ಸ್ ವೈರಸ್‌ ತಗುಲಿ 5-21 ದಿನಗಳಲ್ಲಿ ಲಕ್ಷಣಗಳು ಕಂಡು ಬರುವುದು.

* ಪ್ರಾರಂಭದಲ್ಲಿ ಸ್ಮಾಲ್‌ಪಾಕ್ಸ್ ರೀತಿ ಕಂಡು ಬರುವುದು, ಮಂಕಿಪಾಕ್ಸ್‌ನಲ್ಲಿ ಪ್ರಮುಖವಾಗಿ ದುಗ್ಧರಸ ಗ್ರಂಥಿಗಳಲ್ಲಿ ಊತ ಕಂಡು ಬರುವುದು. ಅದರಲ್ಲೂ ಕತ್ತಿನ ಸುತ್ತ ಊತ ಕಂಡು ಬರುವುದು.

* ಕತ್ತಿನ ಸುತ್ತ ಜ್ವರ ಕಾಣಿಸಿಕೊಂಡ 1-3 ದಿನಗಳಲ್ಲಿ ಗುಳ್ಳೆಗಳು ಕಂಡು ಬರುವುದು. ಅಂಗೈ, ಪಾದ, ಕಾಲುಗಳಲ್ಲಿ ಊತ ಕಂಡು ಬರುವುದು. ಈ ಕಾಯಿಲೆ ಸಾಮಾನ್ಯ 2-4 ವಾರಗಳ ಕಾಲ ಕಾಡುತ್ತದೆ.

ಮಂಕಿಪಾಕ್ಸ್‌ಗೆ ಲಸಿಕೆ ಇದೆಯೇ?

ಮಂಕಿಪಾಕ್ಸ್‌ಗಾಗಿಯೇ ಪ್ರತ್ಯೇಕ ಲಸಿಕೆ ಇಲ್ಲ. ಸ್ಮಾಲ್ಪಾಕ್ಸ್ ಲಸಿಕೆ ನೀಡಿದರೆ ಮಂಕಿಪಾಕ್ಸ್‌ ಶೇ.85ರಷ್ಟು ತಡೆಗಟ್ಟಬಹುದಾಗಿದೆ.

 ಮಂಕಿಪಾಕ್ಸ್‌ ಪತ್ತೆ ಹೇಗೆ?

ಮಂಕಿಪಾಕ್ಸ್‌ ಪತ್ತೆ ಹೇಗೆ?

ಸೋಂಕು ತಗುಲಿದ ವ್ಯಕ್ತಿಯ ಗುಳ್ಳೆಗಳಿಂದ ಸ್ಯಾಂಪಲ್ ತೆಗೆದು ಲ್ಯಾಬ್‌ಗೆ ಕಳುಹಿಸಿ ಕಂಡು ಹಿಡಿಯಲಾಗುವುದು.

ಮಂಕಿಪಾಕ್ಸ್‌ ತಗುಲಿದ ವ್ಯಕ್ತಿ ಹಾಗೂ ಅವರಿಗೆ ಚಿಕಿತ್ಸೆ ನೀಡುತ್ತಿರುವವರು PPE ಕಿಟ್‌ ಧರಿಸಿದರೆ ಸುರಕ್ಷಿತ.

ಕೈನ ಶುಚಿತ್ವ ಕಡೆಗೆ ತುಂಬಾ ಗಮನ ನೀಡಬೇಕು. ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ.

ಮಂಕಿಪಾಕ್ಸ್‌ ಸಾವಿನ ಸಂಖ್ಯೆ ಹೇಗಿದೆ?

ಸದ್ಯಕ್ಕೆ ಇದು ಹೆಚ್ಚೇನು ಅಪಾಯಕಾರಿಯಲ್ಲ. 100ರಲ್ಲಿ 1 ವ್ಯಕ್ತಿ ಸಾನ್ನಪ್ಪುತ್ತಿದ್ದಾರೆ. ಅದೂ ರೋಗ ಲಕ್ಷಣಗಳು ತುಂಬಾ ಗಂಭೀರವಾದರೆ ಮಾತ್ರ ಅಪಾಯಕಾರಿ.

English summary

Monkeypox: Causes, Symptoms, Treatment and Prevention and Vaccine Details in Kannada

Monkeypox, rare disease caused by the monkeypox virus. Know Monkeypox: Causes, Symptoms, Treatment and Prevention and Vaccine Details in Kannada,
Story first published: Saturday, May 21, 2022, 18:20 [IST]
X
Desktop Bottom Promotion