For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!

|

ಕೊರೊನಾ ನಂತರ ಇದೀಗ ಮಂಕಿಪಾಕ್ಸ್‌ ವಿಶ್ವದಲ್ಲಿ ತಲ್ಲಣವುಂಟುಮಾಡಿದೆ. ಅದರಲ್ಲೂ ಈ ಮಂಕಿಪಾಕ್ಸ್‌ ಲೈಂಗಿಕ ಸಂಪರ್ಕದ ಮೂಲಕ ಹರಡುತ್ತೆ ಎನ್ನಲಾಗುತ್ತಿದೆ. ಆದರೆ ಮಂಕಿಪಾಕ್ಸ್‌ ಲೈಂಗಿಕವಾಗಿ ಹರಡುವ ರೋಗವೇ..? ಅಲ್ಲವೇ ಎನ್ನುವುದನ್ನು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಇದರ ನಡುವೆ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ ಮಂಕಿಪಾಕ್ಸ್‌ನಿಂದ ಚೇತರಿಸಿಕೊಂಡ ನಂತರವೂ ಹಲವು ವಾರಗಳವರೆಗೆ ವೀರ್ಯದಲ್ಲಿ ಸಾಂಕ್ರಾಮಿಕ ವೈರಸ್‌ ಇರುತ್ತದೆ ಎಂದು ತೋರಿಸಿದೆ.

ಮಂಕಿಪಾಕ್ಸ್‌ ಕೇವಲ ಲೈಂಗಿಕ ಸಂಪರ್ಕದ ಮೂಲಕ ಹರಡುವ ರೋಗವಲ್ಲ. ಇದು ಗಾಯಗಳು, ದೇಹದ ದ್ರವಗಳು, ಉಸಿರಾಟದ ಹನಿ ಮತ್ತು ಹಾಸಿಗೆಯಂತಹ ವಸ್ತುಗಳ ನಿಕಟ ಸಂಪರ್ಕದಿಂದಲೂ ಇತರರಿಗೆ ಹರಡಬಹುದು. ಅಧ್ಯಯನವೂ ಇದು ಲೋಳೆಪೊರೆಯ ನಿಕಟ ಸಂಪರ್ಕದ ಮೂಲಕ ಅಥವಾ ಸಾಂಕ್ರಾಮಿಕ ವೈರಸ್‌ ಚರ್ಮದ ಮೂಲಕವೂ ಅಥವಾ ದೀರ್ಘಾವಧಿಯವರೆಗೂ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರೂ ಹರಡಬಹುದು ಎಂದು ತೋರಿಸಿದೆ. ಆದರೆ ಮಂಕಿಪಾಕ್ಸ್‌ ವೈರಸ್‌ ಜನನಾಂಗದ ದ್ರವಗಳ ಮೂಲಕ ಲೈಂಗಿಕ ಸಂಪರ್ಕದಿಂದ ಹರಡುತ್ತದೆಯೇ ಎನ್ನುವುದು ತನಿಖೆಯ ಹಂತದಲ್ಲೇ ಉಳಿದಿದೆ ಎಂದು ಇಟಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಫಾರ್ ಇನ್ಫೆಕ್ಷಿಯಸ್ ಡಿಸೀಸ್ 'ಲಝಾರೊ ಸ್ಪಲ್ಲಂಜಾನಿ' (IRCCS) ಲ್ಯಾಬೋರೇಟರಿ ಆಫ್ ವೈರಾಲಜಿಯ ಸಂಶೋಧಕ ಫ್ರಾನ್ಸೆಸ್ಕಾ ಕೊಲಾವಿಟಾ ಹೇಳಿದ್ದಾರೆ.

ರೋಗದಿಂದ ಗುಣಮುಖರಾದರೂ ವೀರ್ಯದಲ್ಲಿರುತ್ತೆ ವೈರಸ್

ರೋಗದಿಂದ ಗುಣಮುಖರಾದರೂ ವೀರ್ಯದಲ್ಲಿರುತ್ತೆ ವೈರಸ್

ವ್ಯಕ್ತಿಯಲ್ಲಿ ರೋಗಲಕ್ಷಣಗಳು ಪ್ರಾರಂಭವಾದ ವಾರಗಳವರೆಗೆ ಸೋಂಕಿತ ರೋಗಿಗಳ ವೀರ್ಯದಲ್ಲಿ ಮಂಕಿಪಾಕ್ಸ್‌ ವೈರಸ್‌ನ ಡಿಎನ್‌ಎ ದೀರ್ಘಕಾಲದವರೆಗೂ ಇರುತ್ತದೆ ಎಂದು ಇವರ ಸಂಶೋಧನೆಯಲ್ಲಿ ಕಂಡುಬಂದಿದೆ. ಮೇ ತಿಂಗಳ ಮೊದಲ ಎರಡು ವಾರದಲ್ಲಿ ಆಸ್ಟ್ರಿಯಾದಲ್ಲಿ ಪ್ರಯಾಣಿಸಿದ 39ವರ್ಷದ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡ 5 ರಿಂ 19 ದಿನಗಳ ನಂತರ ಸಂಗ್ರಹಿಸಿದ ವೀರ್ಯದ ಮಾದರಿಯಲ್ಲಿ ವೈರಸ್‌ ಇರುವುದಾಗಿ ಇವರ ಸಂಶೋಧನಾ ತಂಡವು ಪತ್ತೆಹಚ್ಚಿದೆ. ಈ ಸೋಂಕಿಗೊಳಗಾಗದ ವ್ಯಕ್ತಿಯು ಹಲವಾರು ಪುರುಷ ಸಂಗಾತಿಗಳೊಂದಿಗೆ ಕಾಂಡೋಮ್‌ ರಹಿತ ಲೈಂಗಿಕ ಸಂಪರ್ಕವನ್ನು ಹೊಂದಿದ್ದರು ಎನ್ನುವುದಾಗಿ ಇವರ ಸಂಶೋಧನೆಯು ವರದಿ ಮಾಡಿದೆ.

ರೋಗದ ಲಕ್ಷಣಗಳು

ರೋಗದ ಲಕ್ಷಣಗಳು

ಸಂಶೋಧನೆಗೆ ಬಳಸಿಕೊಂಡ ವ್ಯಕ್ತಿಯನ್ನು ರೋಗಲಕ್ಷಣಗಳು ಕಾಣಿಸಿಕೊಂಡ ಐದು ದಿನಗಳ ನಂತರವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಲಕ್ಷಣಗಳಲ್ಲಿ ಜ್ವರ, ಗುದ ಪ್ರದೇಶದಲ್ಲಿ ಅಲರ್ಜಿ ದದ್ದು ಮಾತ್ರವಲ್ಲ ತಲೆ, ಎದೆ, ಕಾಲುಗಳು, ತೋಳು, ಕೈಗಳು ಮತ್ತು ಶಿಶ್ನದ ಮೇಲೆಯೂ ಇದೇ ರೀತಿಯ ದದ್ದು ಕಾಣಿಸಿಕೊಂಡಿತ್ತು. ವ್ಯಕ್ತಿಯು ಬಾಲ್ಯದಲ್ಲಿ ಸಿಡುಬು ಲಸಿಕೆಯ ಒಂದು ಡೋಸ್‌ ಹಾಕಿಸಿಕೊಂಡಿರುವುದಾಗಿ, ಪ್ರಸ್ತುತ ಮಂಕಿಪಾಕ್ಸ್‌ಗೆ ಯಾವುದೇ ಚಿಕಿತ್ಸೆಯನ್ನು ಪಡೆದಿಲ್ಲ ಎನ್ನುವುದಾಗಿ ಇವರ ಸಂಶೋಧನೆಯು ವಿವರಿಸಿದೆ.

ಮಂಕಿಪಾಕ್ಸ್ ಹರಡುವಿಕೆ

ಮಂಕಿಪಾಕ್ಸ್ ಹರಡುವಿಕೆ

ಪ್ರಸ್ತುತ ಮಂಕಿಪಾಕ್ಸ್‌ ಲೈಂಗಿಕ ಸಂಪರ್ಕದ ಮೂಲಕವೂ ಹರಡಬಹುದು, ಇದರ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಈ ಸಂಶೋಧನೆ ಹೇಳುತ್ತದೆ. ತೀವ್ರ ಥರದ ವೈರಸ್‌ನಿಂದಲೂ ಮಾತ್ರವಲ್ಲ ಕಡಿಮೆ ಪ್ರಭಾವದ ವೈರಲ್‌ ಮಂಕಿಪಾಕ್ಸ್‌ನಿಂದಲೂ ವೀರ್ಯದಲ್ಲಿ ವೈರಸ್‌ಗಳು ಇರಬಹುದು. ಅಲ್ಲದೇ ಮಂಕಿಪಾಕ್ಸ್‌ ಪೀಡಿತನು ಹೆಚ್‌ಐವಿ ಸೋಂಕಿತನೂ ಆಗಿದ್ದಲ್ಲಿ ಈ ವೈರಸ್‌ ಹೆಚ್‌ಐವಿ ಸಂಬಂಧಿತ ದೀರ್ಘಕಾಲದ ಪ್ರತಿರಕ್ಷಣಾ ಅನಿಯಂತ್ರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿವರಿಸುತ್ತದೆ ಇವರ ಸಂಶೋಧನೆ.

ವೀರ್ಯದ ಮೂಲಕವೂ ಹರಡುತ್ತೆ ಹುಷಾರ್!

ವೀರ್ಯದ ಮೂಲಕವೂ ಹರಡುತ್ತೆ ಹುಷಾರ್!

ಮೂತ್ರ ಮತ್ತು ರಕ್ತದ ಮಾದರಿಗಳಲ್ಲಿ ಯಾವುದೇ ಮಂಕಿಪಾಕ್ಸ್‌ ವೈರಸ್‌ನ ಡಿಎನ್‌ಎ ಪತ್ತೆಯಾಗಿಲ್ಲ. ಆದರೆ ಹೆಚ್ಚಿನವರಲ್ಲಿ ವೀರ್ಯ ಪರೀಕ್ಷೆಯನ್ನು ಮಾಡಲು ಸಾಧ್ಯವಾಗದೇ ಇರುವುದರಿಂದ ವೀರ್ಯದಿಂದಲೇ ಹರಡುತ್ತದೆ ಎನ್ನುವುದನ್ನು ತೋರಿಸಲಾಗಿಲ್ಲ. ಈ ಸಂಶೋಧಕರ ತಂಡವು 14 ರೋಗಿಗಳಲ್ಲಿ 11ಜನರ ವೀರ್ಯದ ಮಾದರಿಗಳಲ್ಲಿ ಮಂಕಿಪಾಕ್ಸ್‌ ವೈರಸ್‌ ಡಿಎನ್‌ಎಯನ್ನು ಪತ್ತೆಹಚ್ಚಲಾಗಿದೆ. ಅಲ್ಲದೇ ಹೆಚ್‌ಐವಿ ಇರುವ ಇಬ್ಬರು ರೋಗಿಗಳಲ್ಲೂ ಈ ವೈರಸ್‌ ಇರುವುದಾಗಿ ಪತ್ತೆಹಚ್ಚಿದ್ದಾರೆ. ಈ ಮಂಕಿಪಾಕ್ಸ್‌ ಸೋಂಕು ಮತ್ತು ವೈರಸ್‌ ವೀರ್ಯದ ಮೂಲಕವೂ ಹರಡುತ್ತದೆ ಎನ್ನುವುದನ್ನು ತೋರಿಸಲು ಇನ್ನಷ್ಟು ಸಂಶೋಧನೆಗಳನ್ನು ಮಾಡಬೇಕಾಗಿದೆ ಎನ್ನುತ್ತಾರೆ ಈ ಸಂಶೋಧಕರು.

English summary

Monkeypox Can Persist in Semen Weeks After Recovery Shows New Study

Recent Study reveals monkeypox virus found in semen week after recovery in men, red on...
Story first published: Wednesday, August 10, 2022, 13:00 [IST]
X
Desktop Bottom Promotion