For Quick Alerts
ALLOW NOTIFICATIONS  
For Daily Alerts

ಹೆಣ್ಣಿನ ಮುಟ್ಟಿನ ಬಗ್ಗೆ ಪ್ರತಿಯೊಬ್ಬರು ತಿಳಿಯಲೇಬೇಕಾದ ಸತ್ಯಾಂಶಗಳಿವು

|

ಮುಟ್ಟು ಹೆಣ್ತನದ ಪ್ರತೀಕ, ದುರಂತವೆಂದರೆ ಕೆಲವರು ಋತುಚಕ್ರವನ್ನು ಮೈಲಿಗೆ, ಅಸಹ್ಯ ಎಂಬಂತೆ ನೋಡುತ್ತಾರೆ. ಮುಟ್ಟಾದ ಐದು ದಿನ ಮನೆಯ ಹೊರಗಡೆ ಅಥವಾ ಮನೆಯ ಸೀಮಿತ ಪ್ರದೇಶದಲ್ಲಿ ಓಡಾಡಲು ಅವಕಾಶ ನೀಡುತ್ತಾರೆ. ಆದರೆ ಇದಕ್ಕೆ ಯಾವ ಹೆಣ್ಣೂ ಮುಜುಗರ ಪಡುವ ಅಥವಾ ಅವರನ್ನು ದೂರ ಇಡುವ ಅವಶ್ಯಕತೆ ಇಲ್ಲ. ಇದು ಪ್ರಕೃತಿ ಸಹ ಕ್ರಿಯೆಯಾಗಿದ್ದು ಇದನ್ನು ಗೌರವಿಸಬೇಕು, ಅಂಥಾ ಹೆಣ್ಣನ್ನು ಹೆಚ್ಚು ಕಾಳಜಿ ಮಾಡಬೇಕು.

Menstruation period myths: Explaining the top myths about periods in Kannada

ಮುಟ್ಟಿನ ಬಗ್ಗೆ ಜನರಲ್ಲಿ ಇರುವ ಕೆಲವು ಮೂಢ ನಂಬಿಕೆಗಳು ಅಥವಾ ತಪ್ಪು ಕಲ್ಪನೆಗಳು ಯಾವುವು, ನಿಜವಾಗಿಯೂ ನಾವು ಅರಿಯಬೇಕಾಗಿರುವುದು ಏನು?, ಈ ಸತ್ಯ-ಮಿಥ್ಯಗಳ ಬಗ್ಗೆ ನಾವಿಂದು ಈ ಲೇಖನದಲ್ಲಿ ಚರ್ಚಿಲಿದ್ದೇವೆ.

ಮಿಥ್ಯ 1: ಋತುಚಕ್ರದ ಪ್ರತಿ ತಿಂಗಳು ನಿಗದಿತ ದಿನದಂತೆ ಆಗುತ್ತದೆ

ಮಿಥ್ಯ 1: ಋತುಚಕ್ರದ ಪ್ರತಿ ತಿಂಗಳು ನಿಗದಿತ ದಿನದಂತೆ ಆಗುತ್ತದೆ

ಸತ್ಯ: ಖಂಡಿತ ಇಲ್ಲ. ಋತುಚಕ್ರವು ಮುಂದಿನ ಅಂಡೋತ್ಪತ್ತಿ ಅವಧಿಯ ಪ್ರಾರಂಭ ಮತ್ತು ಅಂತ್ಯದ ಸಂಪೂರ್ಣ ಚಕ್ರವಾಗಿದೆ. ಇದು ಸುಮಾರು 28 ದಿನಗಳ ಅಂತರದ ಅವಧಿಯಲ್ಲಿ ನಡೆಯುತ್ತದೆ. ಈ 28 ದಿನಗಳ ಲೆಕ್ಕಾಚಾರವು ಕೇವಲ ಸರಾಸರಿ ಅಷ್ಟೇ ಹೊರತು ಇಷ್ಟೇ ದಿನಗಳ ಅಂತರ ಎಲ್ಲಾ ಮಹಿಳೆಯರಲ್ಲೂ ಇರುವುದಿಲ್ಲ. ಇದು ಹೆಣ್ಣಿನಿಂದ ಹೆಣ್ಣಿಗೆ ದಿನಗಳ ಬದಲಾವಣೆ ಹೆಚ್ಚು ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಆಗುವ ರಕ್ತಸ್ರಾವವನ್ನು ಮತ್ತೊಂದು ಪದದಲ್ಲಿ ಮುಟ್ಟು ಎಂದು ಕರೆಯಲಾಗುತ್ತದೆ. ಋತುಚಕ್ರಕ್ಕೆ ಇರುವ ದಿನಗಳ ಅಂತರ 29 ರಿಂದ 35 ದಿನಗಳ ನಡುವೆ ಯಾವುದೇ ಅವಧಿಯಲ್ಲಿ ಸಹ ಮುಟ್ಟು ಆಗಬಹುದು. ಆದರೆ ಕೆಲವು ಮಹಿಳೆಯರಲ್ಲಿ ಮಾತ್ರ 28 ದಿನಗಳಿಗೂ ಕಡಿಮೆ ಅಂತರದಲ್ಲೇ ಮುಟ್ಟು ಆಗಬಹುದು. ಇದಕ್ಕೆ ಕಾರಣ ಅತಿಯಾದ ಪ್ರಯಾಣ, ತೂಕ ಇಳಿಕೆ ಅಥವಾ ಅತಿಯಾದ ತೂಕ, ಮಾನಸಿಕವಾಗಿ ಆಗುವ ಏರುಪೇರುಗಳು, ಔಷಧಿ ಮತ್ತು ಹಾರ್ಮೋನುಗಳು ಹೀಗೆ ಹತ್ತು ಹಲವು ಕಾರಣಗಳಿಂದ ಕೆಲವು ಮಹಿಳೆಯರಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತಗೊಳ್ಳುತ್ತವೆ.

ಮಿಥ್ಯ 2: ಮುಟ್ಟಿನ ಅವಧಿಯ ಹರಿವು ಕೊಳಕು ರಕ್ತವನ್ನು ಹೊರಗೆ ಎಸೆಯುವುದು

ಮಿಥ್ಯ 2: ಮುಟ್ಟಿನ ಅವಧಿಯ ಹರಿವು ಕೊಳಕು ರಕ್ತವನ್ನು ಹೊರಗೆ ಎಸೆಯುವುದು

ಸತ್ಯ: ಮೊದಲಿಗೆ ಹೆಣ್ಣಿನ ದೇಹದಲ್ಲಿ 'ಮುಟ್ಟಿನ ರಕ್ತ' ಹೇಗೆ ರಚನೆ ಆಗುತ್ತದೆ ಎಂಬುದನ್ನು ತಿಳಿಯೋಣ. ನಮ್ಮ ತಾಯಿಯ ದೇಹದಲ್ಲಿ ಮುಟ್ಟಿನ ರಕ್ತದ ಕಣಗಳು ಇಲ್ಲವಾಗಿದ್ದರೆ ನಮ್ಮ ತಾಯಂದಿರು ನಾವು ಹುಟ್ಟುವವರೆಗೂ ನಮ್ಮನ್ನು ಒಂಬತ್ತು ತಿಂಗಳು ಹೊರಲು ಸಾಧ್ಯವಾಗುತ್ತಿರಲಿಲ್ಲ. ಹೇಗೆ ಎಂಬುದು ಇಲ್ಲಿದೆ:

ಮಹಿಳೆಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಾಗಿ ಒಂದು ಅವಧಿ ಮುಟ್ಟು ಸಂಭವಿಸುತ್ತದೆ. ಅಂಡಾಶಯಗಳು ಸ್ತ್ರೀ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಅನ್ನು ಬಿಡುಗಡೆ ಮಾಡಲು ದೇಹಕ್ಕೆ ರಾಸಾಯನಿಕಗಳ ಮೂಲಕ ಸಂದೇಶಗಳನ್ನು ಕಳುಹಿಸುತ್ತವೆ, ಅದು ಗರ್ಭಾಶಯದ (ಗರ್ಭ) ಒಳಪದರವನ್ನು ನಿರ್ಮಿಸಲು ಕಾರಣವಾಗುತ್ತದೆ. ಈ ಅಂತರ್ನಿರ್ಮಿತ ಒಳಪದರವು ಈಗ ಫಲವತ್ತಾದ ಮೊಟ್ಟೆಯನ್ನು ಸುರಕ್ಷಿತವಾಗಿಡಲು ಮತ್ತು ಅಭಿವೃದ್ಧಿಪಡಿಸಲು ಸಿದ್ಧವಾಗಿದೆ. ಈ ಒಳಪದರಲ್ಲಿ ಫಲವತ್ತಾದ ಮೊಟ್ಟೆ ಇಲ್ಲದಿದ್ದಾಗ ಒಳಪದರವು ಒಡೆದು ರಕ್ತಸ್ರಾವವಾಗುತ್ತದೆ. ಮಹಿಳೆ ಗರ್ಭಿಣಿಯಾಗಿದ್ದರೆ ಮತ್ತು ಗರ್ಭಾಶಯದೊಳಗಿನ ಮಗುವಿನ ಬೆಳವಣಿಗೆಯನ್ನು ರಕ್ಷಿಸಲು ಒಳಪದರ ಹಾಗೆಯೇ ಇರುತ್ತದೆ. ಇಲ್ಲವಾದಲ್ಲಿ ಹೆಣ್ಣಿನಲ್ಲಿ ಮಾಸಿಕ ಋತುಸ್ರಾವವಾಗುತ್ತದೆ.

ಮಿಥ್ಯ 3: ಅವಳ ಮಾನಸಿಕ ಸ್ಥಿತಿ ಸೂಕ್ಷ್ಮವಾಗಿರುತ್ತದೆ

ಮಿಥ್ಯ 3: ಅವಳ ಮಾನಸಿಕ ಸ್ಥಿತಿ ಸೂಕ್ಷ್ಮವಾಗಿರುತ್ತದೆ

ಸತ್ಯ: ಮುಟ್ಟಿನ ಸಮಯದಲ್ಲಿ ಇವರ ಮನಸ್ಥಿತಿ ಸೂಕ್ಷ್ಮವಾಗಿರುತ್ತದೆ, ಈ ಸಮಯದಲ್ಲಿ ಮಹಿಳೆಯರಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಎರಡು ಕಾರ್ಮೋನುಗಳು ಬಿಡುಗಡೆಯಾಗುತ್ತದೆ. ಹ್ಯಾಪಿ ಹಾರ್ಮೋನ್ ಎನ್ನುವ ಈಸ್ಟ್ರೊಜೆನ್ ಕೆಳಮುಖವಾಗಿ ಸಾಗುತ್ತದೆ, ಆದರೆ ಆಕೆಯ ಮೆದುಳಿಗೆ ಸಂಬಂಧಿಸಿದ ಪ್ರೊಜೆಸ್ಟರಾನ್ ಮೇಲ್ಮುಖವಾಗಿ ಸಾಗುತ್ತದೆ. ಇದು ಆಕ್ರಮಣಶೀಲತೆ, ಕೋಪ, ಭಯ, ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಈ ಹಾರ್ಮೋನುಗಳ ಬದಲಾವಣೆಯು ನಮ್ಮ ಮನಸ್ಸು ಹಾಗೂ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಮನ್ಯವಾಗಿ ಇರಲು ಪ್ರಯತ್ನಿಸುತ್ತಾರೆ, ಆದರೂ ಇವರಿಗೆ ಮುಟ್ಟಿನ ವಿಚಾರವಾಗಿ ರೇಗಿಸುವುದು, ನಮ್ಮ ನಡವಳಿಕೆಯಲ್ಲಿ ಬದಲಾಗುವುದು, ನಿಮಗೆ ಇಷ್ಟವಿಲ್ಲದ ಸಮಯ ಎಂದು ಕಿಚಾಯಿಸುವುದು ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ನೋವುಂಟು ಮಾಡುತ್ತದೆ ನೆನಪಿರಲಿ.

ಮಿಥ್ಯ 4: ಮಹಿಳೆಯರು ಹೆಚ್ಚು ನೋವು ಅನುಭವಿಸುತ್ತಾರೆ

ಮಿಥ್ಯ 4: ಮಹಿಳೆಯರು ಹೆಚ್ಚು ನೋವು ಅನುಭವಿಸುತ್ತಾರೆ

ಸತ್ಯ: ಮುಟ್ಟಿನ ಮೂರು ಅಥವಾ ಐದು ದಿನಗಳ ಅವಧಿಯಲ್ಲಿ ಮಹಿಳೆಯರು ಒಂದು ಹಂತದಲ್ಲಿ ಅನುಭವಿಸುವ ನೋವು ನಿಜ. ಕೆಲವರಿಗೆ ಹೆಚ್ಚು ನೋವು ಅಥವಾ ಅಸ್ವಸ್ಥತೆ ಅನಿಸದಿದ್ದರೂ, ಹಲವರಿಗೆ ಅತಿಯಾದ ನೋವು, ಸುಸ್ತು ಕಾಡುತ್ತದೆ. ಆದರೆ ಋತುಚಕ್ರದ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಎಲ್ಲವನ್ನು ಬಿಟ್ಟು ಸಾಕಷ್ಟುವಿಶ್ರಾಂತಿ ಪಡೆಯಬೇಕು ಎನಿಸುವುದಂತೂ ನಿಜ, ಇದರಿಂದ ನೋವು ಹಾಗೂ ಸೆಳೆತ ಕಡಿಮೆಯಾಗುತ್ತದೆ. ಈ ಸ್ಥಿತಿಗೆ ವೈದ್ಯಕೀಯವಾಗಿ 'ಡಿಸ್ಮೆನೊರಿಯಾ' ಎಂದು ಕರೆಯುತ್ತಾರೆ. ಮುಟ್ಟಿನ ಸಮಯದ ಹೆಣ್ಣಿನಲ್ಲಿ ಆಗುವ ಹಾರ್ಮೋನುಗಳ ಏರಿಳಿತದಿಂದ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತವೆ, ಹೆಚ್ಚು ಆತಂಕವನ್ನುಂಟು ಮಾಡುತ್ತವೆ ಮತ್ತು ಹಲವರು ನೋವನ್ನು ತಾಳಲಾರದೆ ಚೀರಾಡುತ್ತಾರೆ. ಈ ಕಾರಣಗಳಿಗಾಗಿಯೇ ಮನೆಯಲ್ಲಿ ಇಂಥಾ ದಿನಗಳಲ್ಲಿ ಸಾಕಷ್ಟು ವಿಶ್ರಾಂತಿ ನೀಡಬೇಕು ಅಥವಾ ಕಚೇರಿಯಲ್ಲಿ ಹೆಣ್ಣಿಗಾಗಿ ವಿಶೇಷ ಪ್ರತ್ಯೇಕ ಕೊಠಡಿ ಹೊಂದಿರಬೇಕು ಎಂದು ಹೇಳುತ್ತಾರೆ.

ಮಿಥ್ಯ 5: ಮುಟ್ಟಿನ ಅವಧಿಗಳಲ್ಲಿ ಮಹಿಳೆಯರು ಅಶುದ್ಧರಾಗಿರುತ್ತಾರೆ: ಪೂಜೆ ಮಾಡಬಾರದು, ಉಪ್ಪಿನಕಾಯಿ ಮುಟ್ಟಬಾರದು, ಏನೂ ಮಾಡದೆ ಪಕ್ಕಕ್ಕೆ ಕುಳಿತುಕೊಳ್ಳಬೇಕು

ಮಿಥ್ಯ 5: ಮುಟ್ಟಿನ ಅವಧಿಗಳಲ್ಲಿ ಮಹಿಳೆಯರು ಅಶುದ್ಧರಾಗಿರುತ್ತಾರೆ: ಪೂಜೆ ಮಾಡಬಾರದು, ಉಪ್ಪಿನಕಾಯಿ ಮುಟ್ಟಬಾರದು, ಏನೂ ಮಾಡದೆ ಪಕ್ಕಕ್ಕೆ ಕುಳಿತುಕೊಳ್ಳಬೇಕು

ಸತ್ಯ: ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಮುಟ್ಟಿನ ಬಗ್ಗೆ ವೈಜ್ಞಾನಿಕವಾಗಿ ನಿಖರವಾದ ಮಾಹಿತಿ ಇರಲಿಲ್ಲ. ಆದ್ದರಿಂದ ನಮ್ಮ ಪೂರ್ವಜರು ಮುಟ್ಟಿನ ವಿಚಾರದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದರು. ಅಲ್ಲದೇ, ಸ್ಯಾನಿಟರಿ ಪ್ಯಾಡ್‌ಗಳು, ನೈರ್ಮಲ್ಯ ಸೌಲಭ್ಯಗಳು, ಗೌಪ್ಯತೆ ಇತ್ಯಾದಿಗಳ ವಿಚಾರಗಳ ಬಗ್ಗೆ ನಮ್ಮ ಮಹಿಳೆಯರಿಗೂ ಸಹ ಬಹಳ ಕಡಿಮೆ ಮಾಹಿತಿ ಇತ್ತು, ಸ್ಯಾನಿಟರಿ ಪ್ಯಾಡ್‌ ಸಹ ಈಗ ಹತ್ತಾರು ವರ್ಷಗಳಿಂದ ಬಳಕೆಗೆ ಬಂದಿದೆ ಅಷ್ಟೇ.

ಆಗೆಲ್ಲಾ ಬಟ್ಟೆಯನ್ನು ದಪ್ಪದಾಗಿ ಜೋಡಿಸಿ ಬಳಸಲಾಗುತ್ತಿತ್ತು. ಈ ವೇಳೆ ಮನೆಯ ಕೆಲಸಗಳನ್ನು ಮಾಡುವಾಗ ಸೋರಿಕೆಯಾದರೆ ಎಂಬ ಭಯ ಅವರನ್ನು ಕಾಡದಿರದು, ಹೆದರಿಕೊಂಡು ನಿಯಮಿತ ಮನೆಕೆಲಸ ಮಾಡಲು ಕಷ್ಟ. ಅಲ್ಲದೆ, ಸಾಬೂನಿನ ಕೊರತೆ, ಪ್ಯಾಡ್‌ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಎಲ್ಲವೂ ಕಷ್ಟಕರ. ಆದ್ದರಿಂದ ಮಹಿಳೆಯರು ಬಟ್ಟೆಯನ್ನು ತೊಳೆದು ಒಣಗಿಸಿ ಮತ್ತೆ ಮತ್ತೆ ಬಳಸುತ್ತಿದ್ದರು.

ಇನ್ನು ಈ ಸಮಯದಲ್ಲಿ ನೈರ್ಮಲ್ಯದ ಸಮಸ್ಯೆಯಿಂದ ಉಪ್ಪಿನಕಾಯಿ ಇತ್ಯಾದಿಗಳಂತಹ ಸಂರಕ್ಷಿತ ಆಹಾರವನ್ನು ಸ್ಪರ್ಶಿಸುವುದರಿಂದ (ಬೇಯಿಸಲು ಸಾಧ್ಯವಾಗದ್ದು) ಹಾಳಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ತಿಂಗಳಾದ್ಯಂತವರೆಗೆ ಮನೆಯ ಕೆಲಸಗಳನ್ನು ಮಾಡುವ ಮಹಿಳೆಯರಿಗೆ ಈ 4-5 ದಿನಗಳ ರಜಾದಿನವಾಗಿ ಮಾಡಬಹುದು ಎಂದು ನಮ್ಮ ಹಿಂದಿನ ಸಂಸ್ಕೃತಿಯು ಅವರಿಗೆ ಅವಕಾಶ ಮಾಡಿಕೊಟ್ಟಿತ್ತು. ನಿಧಾನವಾಗಿ, ವೈಜ್ಞಾನಿಕ ಅರಿವು ಹೆಚ್ಚಾದಂತೆ ಈ ಆಚರಣೆಗಳು ಧಾರ್ಮಿಕ ನಿರ್ಬಂಧಗಳು ಸಡಿಲಿಕೆ ಆಗಲು ಆರಂಭಿಸಿದವು.

English summary

Menstruation period myths: Explaining the top myths about periods in Kannada

Here we are discussing about Menstruation period myths: Explaining the top myths about periods in Kannada. Menstruation is not just a woman’s topic alone. All of us must realise it is a normal biological process of the female human body and not to be treated as if it were a shameful sin. Read more.
Story first published: Tuesday, June 1, 2021, 17:32 [IST]
X
Desktop Bottom Promotion