For Quick Alerts
ALLOW NOTIFICATIONS  
For Daily Alerts

ಋತುಸ್ರಾವದಲ್ಲಿ ಶುಚಿತ್ವ: ಸ್ಯಾನಿಟರಿ ಪ್ಯಾಡ್‌ಗಳ ಬಳಕೆ, ಡಿಸ್‌ಪೋಸ್‌ ಹೇಗಿರಬೇಕು?

|

ಮುಟ್ಟು ಅಥವಾ ಋತುಸ್ರಾವ ಎನ್ನುವುದು ಹೆಣ್ಮಕ್ಕಳ ದೇಹದಲ್ಲಿ ಉಂಟಾಗುವ ಒಂದು ನೈಸರ್ಗಿಕ ಪ್ರಕ್ರಿಯೆ. ಹೆಣ್ಣು ಹದಿಯರೆಯದ ವಯಸ್ಸಿಗೆ ಬಂದಾಗ ಮೈನೆರೆಯುತ್ತಾಳೆ ನಂತರ ಮೆನೋಪಾಸ್‌ ಹಂತಕ್ಕೆ ಬರುವವರೆಗೆ ಪ್ರತಿ ತಿಂಗಳು ಋತುಸ್ರಾವವಾಗುವುದು ಸಹಜವಾದ ಪ್ರಕ್ರಿಯೆ.

Menstrual Hygiene: Use Of Sanitary Pads And Disposal

ಆದರೆ ಅದನ್ನು ಅಸಹ್ಯವಾಗಿ ನೋಡುವ ಪ್ರವೃತ್ತಿ ಇಂದಿಗೂ ನಮ್ಮಲ್ಲಿದೆ. ಮುಟ್ಟಾದ ಹೆಣ್ಣು ಅಶುದ್ಧಳು, ಅವಳನ್ನು ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂದು ಆಕೆಯನ್ನು ಆ ದಿನಗಳಲ್ಲಿ ಮನೆಯಿಂದ ಹೊರಗಡೆ ಒಂದು ಪುಟ್ಟ ಕೋಣೆಯಲ್ಲಿ ಕೂರಿಸುವ ಅಸಹ್ಯ ಪ್ರವೃತ್ತಿ ಇಂದಿಗೂ ಕೆಲವು ಕಡೆ ಇದೆ. ಎಷ್ಟೋ ಹೆಣ್ಣು ಮಕ್ಕಳು ಈ ಅಸಹ್ಯ ಪದ್ಧತಿಗೆ ಜಿಗುಪ್ಸೆಗೊಂಡು ತಮ್ಮ ಪ್ರಾಯದಲ್ಲಿಯೇ ಗರ್ಭಕೋಶವನ್ನು ತೆಗೆದಿರುವ ಎಷ್ಟೋ ನಿದರ್ಶನಗಳಿವೆ.

ಹೆಣ್ಣಿಗೆ ಋತುಸ್ರಾವವೇ ಇಲ್ಲದಿದ್ದರೆ ಈ ಜಗತ್ತು ಹೇಗೆ ಮುಂದುವರೆಯಲು ಸಾಧ್ಯ? ಮಗು ಹುಟ್ಟುವುದಾದರೂ ಹೇಗೆ? ಆಕೆಯ ಮುಟ್ಟೇ ಅಲ್ಲವೇ ಒಂದು ಮಗು ರೂಪುಗೊಳ್ಳಲು ಬೇಕಾಗಿರುವುದು, ಹೀಗಿದ್ದರೂ ಕೆಲವು ಕಡೆ ಆ ದಿನಗಳು ಹೆಣ್ಣಿಗೆ ನರಕ ಸದೃಶವಾಗಿದೆ.

ಇನ್ನು ಕೆಲವು ಕಡೆ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯದ ಬಗ್ಗೆ ಇನ್ನೂ ಅರಿವು ಮೂಡಿಲ್ಲ, ಹೆಣ್ಣು ಮಕ್ಕಳಿಗೆ ಇದರ ಬಗ್ಗೆ ಇನ್ನು ಅರಿವು ಮೂಡಬೇಕಾಗಿದೆ. ಮೇ 28 ಅನ್ನು ಈ ಕುರಿತು ಅರಿವು ಮೂಡಿಸಲು ಋತುಸ್ರಾವದಲ್ಲಿ ಶುಚಿತ್ವ ದಿನವನ್ನಾಗಿ ಆಚರಿಸಲಾಗುವುದು. ಮುಟ್ಟಿನ ಸಮಯದಲ್ಲಿ ಯಾವ ಪ್ಯಾಡ್‌ ಧರಿಸಿವುದು ಸೂಕ್ತ, ಬಳಸಿದ ಪ್ಯಾಡ್‌ ಅನ್ನು ಹೇಗೆ ಡಿಸ್‌ಪೋಸ್‌ ಮಾಡಬೇಕು ಎಂಬುವುದರ ಬಗ್ಗೆ ಇನ್ನೂ ತಿಳುವಳಿಕೆ ಮೂಡಬೇಕಾಗಿದೆ.

ಭಾರತದಲ್ಲಿ ಇನ್ನೂ ಪ್ಯಾಡ್‌ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ, ಇತರ ಒನಕಸಗಳ ಜೊತೆಗೆ ಇದನ್ನು ಹಾಕಲಾಗುತ್ತದೆ. ಇಲ್ಲಿ ನಾವು ಮುಟ್ಟಿನ ಸಮಯದಲ್ಲಿ ಆರೋಗ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಸ್ವಾಸ್ಥ್ಯ ಕ್ರಮಗಳ ಬಗ್ಗೆ ಹೇಳಿದ್ದೇವೆ. ಮೊದಲಿಗೆ ಆ ದಿನಗಳಲ್ಲಿ ಹೆಣ್ಣಕ್ಕಳು ಬಳಸುವ ಪ್ಯಾಡ್‌ಗಳ ಬಗ್ಗೆ ತಿಳಿಯೋಣ:

 1. ಬಟ್ಟೆ ಬಳಸುವುದು

1. ಬಟ್ಟೆ ಬಳಸುವುದು

ಇಂದಿಗೂ ನಮ್ಮಲ್ಲಿ ಅನೇಕರು ಮುಟ್ಟಿನ ದಿನಗಳಲ್ಲಿ ಬಟ್ಟೆಯನ್ನು ಪ್ಯಾಡ್‌ ಆಗಿ ಬಳಸುತ್ತಾರೆ. ಸ್ಯಾನಿಟೈಸರ್ ಪ್ಯಾಡ್‌ ಕೊಳ್ಳಲು ಅವರಿಗೆ ಆರ್ಥಿಕ ತೊಂದರೆ ಇರುತ್ತದೆ, ಹಾಗಾಗಿ ಬಟ್ಟೆಯನ್ನೇ ಪ್ಯಾಡ್‌ನಂತೆ ಬಳಸುತ್ತಾರೆ. ಆದರೆ ಸ್ವಚ್ಛತೆಯ ದೃಷ್ಟಿಯಿಂದ ಬಟ್ಟೆಯನ್ನು ಬಳಸುವುದು ಒಳ್ಳೆಯದಲ್ಲ. ಅದು ಶುಚಿಯಾಗಿರದಿದ್ದರೆ ಸೋಂಕು ಉಂಟಾಗುವುದು.

ಬಟ್ಟೆ ಬಳಸುವವರು ಅದನ್ನು ಒಗೆದು ಚೆನ್ನಾಗಿ ಒಣಗಿ, ಇಸ್ತ್ರಿ ಹಾಕಿ ಬಳಸುವುದು ಸೂಕ್ತ.

2. ಸ್ಯಾನಿಟರಿ ಪ್ಯಾಡ್‌

2. ಸ್ಯಾನಿಟರಿ ಪ್ಯಾಡ್‌

ಅನೇಕ ಬಗೆಯ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಿದೆ. ಆದರೆ ಇವುಗಳಿಂದ ಪ್ರಕೃತಿಯಲ್ಲಿ ಕಸದ ರಾಶಿ ಹೆಚ್ಚಾಗುವುದು. ಇದನ್ನು ಬಳಸಿ ಅಲ್ಲಲ್ಲಿ ಬಿಸಾಡುವ ಬದಲು ಸರಿಯಾದ ರೀತಿಯಲ್ಲಿ ಡಿಸ್‌ಪೋಸ್‌ ಮಾಡಬೇಕು. ಈ ರೀತಿ ಡಿಸ್‌ಪೋಸ್‌ ಮಾಡುವ ವಿಧಾನ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಪರಿಸರಕ್ಕೆ ಮಾರಕ. ಈ ತ್ಯಾಜ್ಯವನ್ನು ಹೇಗೆ ಡಿಸ್‌ಪೋಸ್ ಮಾಡಬೇಕು ಎಂಬುವುದನನ್ನು ಮುಂದೆ ಹೇಳಿದ್ದೇವೆ ನೋಡಿ.

3. ಟ್ಯಾಂಪೂನ್

3. ಟ್ಯಾಂಪೂನ್

ಟ್ಯಾಂಪೂನ್‌ ಸ್ವಲ್ಪ ದುಬಾರಿ, ಇದು ಪರಿಸರಕ್ಕೂ ಪೂರಕವಲ್ಲ, ಸ್ಯಾನಿಟರಿ ಪ್ಯಾಡ್‌ಗಳಂತೆ ಇವುಗಳಿಂದ ಕೂಡ ಕಸ ಅಧಿಕವಾಗುವುದು. ಸಿಂಥೆಟಿಕ್‌ ಟ್ಯಾಂಪೂನ್‌ ಬದಲಿಗೆ ಸೀ ಸ್ಪಾಂಜ್ ಟ್ಯಾಂಪೂನ್ ಬಳಸುವುದರಿಂದ ಅದು ಮಣ್ಣಿನಲ್ಲಿ ಇದ್ದರೂ ಬೇಗ ಕರಗುವುದು.

4. ಮರುಬಳಕೆ ಮಾಡಬಹುದಾದ ಟ್ಯಾಂಪೂನ್

4. ಮರುಬಳಕೆ ಮಾಡಬಹುದಾದ ಟ್ಯಾಂಪೂನ್

ಈ ಟ್ಯಾಂಪೂನ್‌ಗಳನ್ನು ಸ್ವಚ್ಛ ಮಾಡಿ ಮತ್ತೆ ಬಳಸಬಹುದಾಗಿ. ಇದನ್ನು ಜನನೇಂದ್ರೀಯದ ಒಳಗೆ ಹಾಕಿದರೆ ಅದರಲ್ಲಿ ರಕ್ತ ಸಂಗ್ರಹವಾಗುವುದು, ಶೂಟಿಂಗ್, ಸ್ಪೋರ್ಟ್ಸ್‌ ಹೀಗೆ ಮನೆಯಿಂದ ಹೊರಗೆ ಇರುವಾಗ ಈ ಟ್ಯಾಂಪೂನ್‌ಗಳು ತುಂಬಾ ಸಹಕಾರಿ.

5. ಮೆನ್ಸ್ಟ್ರಲ್ ಕಪ್

5. ಮೆನ್ಸ್ಟ್ರಲ್ ಕಪ್

ಇವುಗಳನ್ನು ಬಳಸುವುದರಿಂದ ಪರಿಸರದಲ್ಲಿ ಅಧಿಕ ತ್ಯಾಜ್ಯ ಉಂಟಾಗುವುದನ್ನು ತಪ್ಪಿಸಬಹುದು ಹಾಗೂ ಸ್ಯಾನಿಟರಿ ಪ್ಯಾಡ್‌ಗೆ ಬೇಕಾಗುವಷ್ಟು ದುಡ್ಡು ಬೇಕಾಗಿಲ್ಲ, ಕೊಳ್ಳುವಾಗ ಸ್ವಲ್ಪ ದುಬಾರಿ ಅನಿಸದರೂ ಇದನ್ನು ಮರುಬಳಕೆ ಮಾಡಬಹುದು. ಇನ್ನು ಇದನ್ನು 10-12 ಗಂಟೆ ಧರಿಸಬಹುದು. ರಕ್ತ ಸ್ರಾವ ಅಧಿಕವಿದ್ದರೆ ಆರು ಗಂಟೆಗಳಿಗೊಮ್ಮೆ ಸ್ವಚ್ಛ ಮಾಡಿ. ಇದನ್ನು ಬಡ ಹೆಣ್ಣು ಮಕ್ಕಳು ಕೂಡ ಬಳಸಬಹುದಾಗಿದ್ದು ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್‌ಗೆ ಹಣ ಖರ್ಚು ಮಾಡಬೇಕಾಗಿಲ್ಲ.ಆದರೆ ಇದನ್ನು ಬಳಸುವವರು ಇದನ್ನು ಶುಚಿಯಾಗಿ ಇಡುವುದಕ್ಕೂ ಅಷ್ಟೇ ಗಮನ ನೀಡಬೇಕು.

6. ಬ್ಯಾಂಬೂ ಫೈಬರ್‌ ಪ್ಯಾಡ್ಸ್

6. ಬ್ಯಾಂಬೂ ಫೈಬರ್‌ ಪ್ಯಾಡ್ಸ್

ಇದನ್ನು ಮರು ಬಳಕೆ ಮಾಡಬಹುದಾಗಿದ್ದು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇದು ಮಣ್ಣಿನಲ್ಲಿ ಸುಲಭವಾಗಿ ಕರಗುತ್ತದೆ ಅಲ್ಲದೆ ಈ ಪ್ಯಾಡ್‌ ಆ್ಯಂಟಿಬ್ಯಾಕ್ಟಿರಿಯಾ ಗುಣ ಹೊಂದಿದೆ, ಇನ್ನು ಬೆಲೆಯೂ ದುಬಾರಿಯಲ್ಲ. ಮುಟ್ಟಿನ ಸಮಯದಲ್ಲಿ ತುರಿಕೆ, ಕಿರಿಕಿರಿ ಅನುಭವಿಸುತ್ತಿರುವವರು ಇದನ್ನು ಬಳಸಬಹುದು.

7. ಬನಾನ ಫೈಬರ್ ಪ್ಯಾಡ್‌

7. ಬನಾನ ಫೈಬರ್ ಪ್ಯಾಡ್‌

ಬಾಳೆ ದಿಂಡಿನ ನಾರಿನಿಂದ ಇದನ್ನು ತಯಾರಿಸಲಾಗುವುದು. ಇದು ಭಾರತದಲ್ಲಿ ಸಾಥಿ ಎಂಬ(Saathi) ಬ್ರ್ಯಾಂಡ್‌ನಲ್ಲಿ ಲಭ್ಯವಿದೆ. ಇನ್ನು ಹಳ್ಳಿಗಳಲ್ಲಿ ಸಗಣಿ, ಎಲೆಗಳು, ಮಣ್ಣು ಬಳಸಿ ಕೂಡ ಇದನ್ನು ಮಾಡುತ್ತಾರೆ. ಇದು ಮಣ್ಣಿನಲ್ಲಿ ಸುಲಭವಾಗಿ ಕರಗುವುದು.

 8.ವಾಟರ್‌ ಹೈಯಾಸಿನತ್ ಪ್ಯಾಡ್‌

8.ವಾಟರ್‌ ಹೈಯಾಸಿನತ್ ಪ್ಯಾಡ್‌

ಇದು ಜಾನಿ(Jani) ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇವುಗಳನ್ನು ಬಳಸಿ ಪರಿಸರಕ್ಕೆ ತ್ಯಾಜ್ಯ ಸೇರ್ಪಡೆಯಾಗುವುದನ್ನು ತಪ್ಪಿಸಬಹುದು.

ಪ್ಯಾಡ್‌ ಡಿಸ್‌ಪೋಸ್ ಮಾಡುವುದು ಹೇಗೆ?

ಪ್ಯಾಡ್‌ ಡಿಸ್‌ಪೋಸ್ ಮಾಡುವುದು ಹೇಗೆ?

ಹಳ್ಳಿಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದ ಬಳಕೆ ಸುಡುವುದು ಅಥವಾ ಮಣ್ಣಿನಲ್ಲಿ ಹೂತು ಹಾಕುವುದು ಮಾಡುತ್ತಾರೆ. ಇನ್ನು ನಗರ ಪ್ರದೇಶದಲ್ಲಿ ಬಳಸಿದ ಸ್ಯಾನಿಟರಿ ಪ್ಯಾಡ್‌ ಅನ್ನು ಇತರ ಕಸಗಳ ಜೊತೆಗೆ ಹಾಕುವುದು ಅಥವಾ ಟಾಯ್ಲೆಟ್‌ನಲ್ಲಿ ಫ್ಲಷ್‌ ಮಾಡುವುದು ಮಾಡುವುದು ಮಾಡುತ್ತಾರೆ.

ಸ್ಯಾನಿಟರಿ ಪ್ಯಾಡ್‌ಗಳನ್ನು ಮಣ್ಣಿನಲ್ಲಿ ಹೂಳುವುದು, ಬಿಸಾಡುವುದು ಮಾಡಿದರೆ ಅದರಲ್ಲಿರುವ ಪ್ಲಾಸ್ಟಿಕ್‌ ಪರಿಸರಕ್ಕೆ ಮಾರಕ. ಇನ್ನು ಟಾಯ್ಲೆಟ್‌ನಲ್ಲಿ ಫ್ಲಷ್‌ ಮಾಡುವುದು ಮಾಡಿದರೆ ಇದರಿಂದ ಟಾಯ್ಲೆಟ್‌ನಲ್ಲಿ ನೀರು ಸರಿಯಾಗಿ ಹೋಗದೆ ಬ್ಲಾಕ್ ಆಗುವುದು.

ಏನು ಮಾಡಬೇಕು?

ಶಾಲೆಗಳಲ್ಲಿ, ಆಫೀಸ್‌ಗಳಲ್ಲಿ ಸ್ಯಾನಿಟರಿ ಪ್ಯಾಡ್‌ ಹಾಕಲೆಂದೇ ಪ್ರತ್ಯೇಕ ವ್ಯವಸ್ಥೆ ಇರಬೇಕು. ಸ್ಯಾನಿಟರಿ ಪ್ಯಾಡ್‌ ಹಾಕುವ ಮುನ್ನ ಅದನ್ನು ಟಿಶ್ಯೂ ಅಥವಾ ಪೇಪರ್‌ನಲ್ಲಿ ಸುತ್ತಿ ಹಾಕುವಂತೆ ಸಲಹೆಗಳನ್ನು ನೀಡಿ. ಸ್ಯಾನಿಟರಿ ಪ್ಯಾಡ್‌ಗಳನ್ನು ಅಲ್ಲಲ್ಲಿ ಬಿಸಾಡುವುದು, ಇತರ ಕಸಗಳ ಜೊತೆಗೆ ಹಾಕುವ ಬದಲು ಅದನ್ನು ಪ್ರತ್ಯೇಕವಾಗಿ ಹಾಕಿ ವಿಲೇವಾರಿ ಮಾಡುವ ವ್ಯವಸ್ಥೆ ಆಗಬೇಕು. ಇನ್ನು ಸ್ಯಾನಿಟೈಸರ್ ಸುಡಲು ಇನ್‌ಸೈನೇರೇಟರ್ ಬಳಸುವುದು ಸೂಕ್ತ. ಇದ 800°C ತಾಪದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಸುಟ್ಟು ಹಾಕುತ್ತದೆ ಹಾಗೂ ಅಷ್ಟೇನು ಹೊಗೆಯೂ ಉಂಟಾಗುವುದಿಲ್ಲ. ಶಾಲೆ, ಲೇಡಿಸ್ ಹಾಸ್ಟೆಲ್, ಆಫೀಸ್‌ಗಳಲ್ಲಿ ಇವುಗಳನ್ನು ಇಡುವುದು ಒಳ್ಳೆಯದು.

English summary

Menstrual Hygiene: Use Of Sanitary Pads And Disposal

Here are how to maintain menstrual hygiene, Environmental friendly Sanitary pads and proper disposal technique.
Story first published: Tuesday, May 26, 2020, 15:50 [IST]
X
Desktop Bottom Promotion