For Quick Alerts
ALLOW NOTIFICATIONS  
For Daily Alerts

ಈ ಕಾಯಿಲೆಗಳು ಪುರುಷರಿಗೇ ಹೆಚ್ಚು ಕಾಡುವುದು

|

ಜೂನ್‌ 15ರಿಂದ 21ರವರೆಗೆ ಮೆನ್ ಹೆಲ್ತ್‌ ವೀಕ್‌ ಎಂದು ಆಚರಿಸಲಾಗುತ್ತದೆ. ಪುರುಷರಿಗೆ ಕಾಡುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ, ಪುರುಷರು ತಮ್ಮ ಆರೋಗ್ಯದ ಕಡೆ ಗಮನ ಹರಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ.

Men’s Health Week 2020: A List Of Health Risks Affecting Men

2020ರ ಮೆನ್‌ ಹೆಲ್ತ್‌ ವೀಕ್‌ ಥೀಮ್‌ ಎಂದರೆ ಟೇಕ್‌ ಆ್ಯಕ್ಷನ್ ಆನ್ ಕೋವಿಡ್-19(ಕೋವಿಡ್ ವಿರುದ್ಧ ಹೋರಾಡಿ) ಎಂಬುವುದಾಗಿದೆ. ಈ ವರ್ಷ ಕೋವಿಡ್ -19 ಎಂಬ ಮಾರಾಣಾಂತಿಕ ಕಾಯಿಲೆ ಇಡೀ ವಿಶ್ವವನ್ನೇ ನಲುಗಿಸಿದೆ. ಅದರಲ್ಲೂ ಈ ಮಾರಕ ಕಾಯಿಲೆಗೆ ಬಲಿಯಾದವರ ಸಂಖ್ಯೆಯಲ್ಲಿ ಪುರುಷರೇ ಹೆಚ್ಚಾಗಿದ್ದಾರೆ.

ಇನ್ನು ಕೆಲವೊಂದು ಕಾಯಿಲೆಗಳು ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚಾಗಿ ಕಾಡುತ್ತದೆ. ನಾವಿಲ್ಲಿ ಪುರುಷರನ್ನೇ ಅತೀ ಹೆಚ್ಚು ಕಾಡುವ ಕಾಯಿಲೆಗಳ ಬಗ್ಗೆ ಹೇಳಿದ್ದೇವೆ ನೋಡಿ:

ಪುರುಷರನ್ನೇ ಅತೀ ಹೆಚ್ಚು ಕಾಡುವ ಕಾಯಿಲೆಗಳಿವು:

1. ಹೃದಯ ಸಮಸ್ಯೆ

1. ಹೃದಯ ಸಮಸ್ಯೆ

ಅತೀ ಹೆಚ್ಚು ಜನರಿಗೆ ಕಾಡುತ್ತಿರುವ ಸಮಸ್ಯೆಯೆಂದರೆ ಹೃದಯ ಸಮಸ್ಯೆ. ಹೃದಯ ಸಮಸ್ಯೆ ಹಲವಾರು ರೀತಿಯಲ್ಲಿ ಉಂಟಾಗುತ್ತದೆ. ಹೃದಯ ಸಮಸ್ಯೆ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಕಾಡುವುದಾದರೂ ಇದು ಅತೀ ಹೆಚ್ಚಾಗಿ ಪುರುಷರಲ್ಲಿ ಕಂಡು ಬರುತ್ತದೆ. ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ದುಪ್ಪಟಾಗಿದೆ.

CDC ಪ್ರಕಾರ 45 ವಯಸ್ಸು ದಾಟಿದ ಪ್ರತೀ ನಾಲ್ಕು ಪುರುಷರಲ್ಲಿ ಒಬ್ಬರಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಾಣಿಸುತ್ತದೆ. ಹೃದಯಾಘಾತ, ಹೃದಯ ಸ್ತಂಭನ ಈ ರೀತಿಯ ಸಮಸ್ಯೆಗಳು ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ.

2. ಶ್ವಾಶಕೋಶದ ಕ್ಯಾನ್ಸರ್

2. ಶ್ವಾಶಕೋಶದ ಕ್ಯಾನ್ಸರ್

ಧೂಮಪಾನಿಗಳಲ್ಲಿ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್‌ ಉಂಟಾಗುವುದು, ಇದು ಧೂಮಪಾನ ಮಾಡದವರಲ್ಲೂ ಕಂಡು ಬರುತ್ತದೆ ಆದರೆ ಶ್ವಾಶಕೋಶದ ಕ್ಯಾನ್ಸರ್ ಅಪಾಯ ಸಿಗರೇಟ್, ತಂಬಾಕು ಸೇವನೆ ಮಾಡುವವರಿಗೆ ಹೆಚ್ಚು. ಭಾರತದಲ್ಲಿ ಇತರ ಕಾಯಿಲೆಗಳಿಂದ ಸಾಯುತ್ತಿರುವ ಪುರುಷರಿಗಿಂತ ಶ್ವಾಶಕೋಶದ ಕ್ಯಾನ್ಸರ್‌ಗೆ ಬಲಿಯಾಗುವವರ ಸಂಖ್ಯೆಯೇ ಹೆಚ್ಚು.

ಶ್ವಾಶಕೋಶದ ಕ್ಯಾನ್ಸರ್‌ ಧೂಮಪಾನಿಗಳಿಗೆ ಮಾತ್ರವಲ್ಲ, ಧೂಮಪಾನಿಗಳು ಎಳೆದು ಬಿಟ್ಟ ಹೊಗೆಯನ್ನು ಸೇವಿಸುವುದರಿಂದಲೂ ಬರುತ್ತದೆ, ಅಲ್ಲದೆ ವಾಯು ಮಾಲಿನ್ಯ, ಇನ್ನು ಕೆಲವೊಂದು ಫ್ಯಾಕ್ಟರಿ ಕೆಲಸ ಮಾಡುವುದು, ಮೆಕ್ಯಾನಿಕ್ ಕೆಲಸ ಮಾಡುವುದು ಇವುಗಳಿಂದಲೂ ಶ್ವಾಶಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು.

3. ಪ್ರೋಸ್ಟೇಟ್ ಕ್ಯಾನ್ಸರ್

3. ಪ್ರೋಸ್ಟೇಟ್ ಕ್ಯಾನ್ಸರ್

ಶ್ವಾಶಕೋಶದ ಕ್ಯಾನ್ಸರ್ ಬಳಿಕ ಪುರುಷರು ಅತೀ ಹೆಚ್ಚು ಬಲಿಯಾಗುತ್ತಿರುವುದು ಪ್ರೋಸ್ಟೇಟ್‌ ಕ್ಯಾನ್ಸರ್. ಇದನ್ನು ಮೊದಲನೇ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಗುಣ ಪಡಿಸುವುದು ಸುಲಭ, ಆದರೆ ಈ ಕ್ಯಾನ್ಸರ್‌ ಉಲ್ಭಣವಾಗುವವರೆಗೆ ಕೆಲವೊಮ್ಮೆ ಇದರ ಲಕ್ಷಣಗಳೇ ಕಂಡು ಬರುವುದಿಲ್ಲ. 40 ವರ್ಷದ ಬಳಿಕ ಪುರುಷರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಇಂಥ ಅಪಾಯ ತಪ್ಪಿಸಬಹುದು.

 4. ಸ್ಟ್ರೋಕ್/ಪಾರ್ಶ್ವವಾಯು

4. ಸ್ಟ್ರೋಕ್/ಪಾರ್ಶ್ವವಾಯು

ಹೃದಯ ಸಮಸ್ಯೆ, ಕೊಲೆಸ್ಟ್ರಾಲ್ ಸಮಸ್ಯೆ , ಅಪಧಮನಿಗಳು ಬ್ಲಾಕ್‌ ಆಗುವುದು ಈ ರೀತಿ ಉಂಟಾದಾಗ ಸ್ಟ್ರೋಕ್ ಉಂಟಾಗುವುದು. ಸ್ಟ್ರೋಕ್‌ ತೀವ್ರತ ಭಿನ್ನವಾಗಿರುತ್ತದೆ, ಕೆಲವೊಮ್ಮೆ ಮೈಲ್ಡ್ ಆಗಿ ಕಾಣಸಿದರೆ ಕೆಲವರಗೆ ಗಂಭೀರವಾಗಿ ಸಾವು ಕೂಡ ಸಂಭವಿಸಬಹುದು.

ಸ್ಟ್ರೋಕ್ ಲಕ್ಷಣಗಳು ಕಂಡು ಬಂದಾಗಲೇ ಚಿಕಿತ್ಸೆ ದೊರೆತರೆ ಗುಣ ಮುಖರಾಗುವ ಸಾಧ್ಯತೆ ಇದೆ, ತಡವಾದಷ್ಟು ವ್ಯಕ್ತಿ ಬದುಕಿದರೂ ಸ್ವತಃ ತನ್ನ ಕಾರ್ಯಗಳನ್ನು ಮಾಡಲು ಕಷ್ಟವಾಗಬಹುದು. ಎದೆಯಲ್ಲಿ ನೋವು, ವಿಪರೀತ ತಲೆನೋವು, ಬೆವರುವುದು, ಮಾತನಾಡಲು ಕಷ್ಟವಾಗುವುದು, ನಡೆದಾಡಲು ಕಷ್ಟವಾಗುವುದು, ತುಟಿ ಒಂದು ಕಡೆಗೆ ತಿರುಗುವುದು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಸ್ವಲ್ಪವೂ ತಡಮಾಡದೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಬೇಕು.

ಮಹಿಳೆರಿಗಿಂತ ಪುರುಷರಲ್ಲಿ ಸ್ಟ್ರೋಕ್ ಕಾಯಿಲೆ 1.25 ಅಧಿಕ ಪಟ್ಟು ಕಂಡು ಬರುತ್ತದೆ.

ಖಿನ್ನತೆ

ಖಿನ್ನತೆ

ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ, ಅದರಲ್ಲೂ ಭಾರತದಲ್ಲಿ ಖಿನ್ನತೆ ಅನುಭವಿಸುತ್ತಿರುವ ಸಂಖ್ಯೆ ಅಧಿಕ. ಶೇ. 20ರಷ್ಟು ಪುರುಷರು ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಶ್ವಾಶಕೋಶ ಕ್ಯಾನ್ಸರ್‌ನಿಂದ ಹಿಡಿದು ಖಿನ್ನತೆವರೆಗಿನ ಲಕ್ಷಣಗಳೆಂದರೆ ಕೆಮ್ಮು, ಅಸ್ತಮಾ, ನಿದ್ರಾ ಹೀನತೆ, ತೂಕ ಇಳಿಕೆ, ಎದೆಯಲ್ಲಿ ನೋವು ಹೀಗೆ ಆರೋಗ್ಯದಲ್ಲಿ ಅನೇಕ ತೊಂದರೆಗಳು ಕಂಡು ಬರುವುದು.

ಲಿವರ್ ಸಮಸ್ಯೆ

ಲಿವರ್ ಸಮಸ್ಯೆ

ಪುರುಷರಲ್ಲಿ ಲಿವರ್‌ ಸಮಸ್ಯೆ ಹೆಚ್ಚಾಗಿ ಕಂಡು ಬರಲು ಒಂದು ಪ್ರಮುಖ ಕಾರಣವೆಂದರೆ ಮದ್ಯಪಾನ ಮತ್ತು ತಂಬಾಕು ಸೇವನೆ. ಪುರುಷರಲ್ಲಿ ಮದ್ಯಪಾನ ಚಟ ಸ್ವಲ್ಪ ಅಧಿಕವೇ ಇರುವುದರಿಂದ ಲಿವರ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇನ್ನು ಅತ್ಯಧಿಕ ಮದ್ಯಪಾನ ಮಾಡುವುದರಿಂದ ಅನ್ನನಾಳದ ಕ್ಯಾನ್ಸರ್‌, ಕರುಳಿನ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡು ಬರುವುದು.

ಶೀಘ್ರ ಸ್ಖಲನ

ಶೀಘ್ರ ಸ್ಖಲನ

ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಒತ್ತಡ ಇವೆಲ್ಲಾ ಪುರುಷರಲ್ಲಿ ಶೀಘ್ರ ಸ್ಖಲನಕ್ಕೆ ಪ್ರಮುಖ ಕಾರಣವಾಗಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಮೂರನೇ ಎರಡರಷ್ಟು ಪುರುಷರಿಗೆ ಹಾಗೂ 40 ಆಸುಪಾಸಿನವರಲ್ಲಿ ಶೇ. 39ರಷ್ಟು ಜನರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಇದು ಕೂಡ ಪುರುಷರಲ್ಲಿ ಖಿನ್ನತೆ ಕಾಡಲು ಒಂದು ಕಾರಣವಾಗಿದೆ.

ಇನ್ನು ಶೀಘ್ರ ಸ್ಖಲನ ಹೃದಯಾಘಾತದ ಮುನ್ಸೂಚನೆಯೂ ಹೌದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಧುಮೇಹ

ಮಧುಮೇಹ

ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದರೆ ಮಧುಮೇಹ ಸಮಸ್ಯೆ ಉಂಟಾಗುವುದು. ಇದನ್ನು ನಿಯಂತ್ರಣದಲ್ಲಿಡದಿದ್ದರೆ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ, ಸ್ಟ್ರೋಕ್, ದೃಷ್ಟಿದೋಷ ಮುಂತಾದ ತೊಂದರೆಗಳು ಉಂಟಾಗುವುದು.

ಇನ್ನು ಮಧುಮೇಹ ಇರುವ ಪುರುಷರಿಗೆ ಖಿನ್ನತೆ, ಸ್ನಾಯುಗಳು ಸಡಿಲವಾಗುವುದು, ಲೈಂಗಿಕ ನಿರಾಸಕ್ತಿ/ಅಸಾಮಾರ್ಥ್ಯ ಉಂಟಾಗುವುದು.

ಇನ್ನು ಅನಾರೋಗ್ಯಕರ ಜೀವನ ಶೈಲಿಯಿಂದ ಒಬೆಸಿಟಿ, ಕೊಲೆಸ್ಟ್ರಾಲ್ ಸಮಸ್ಯೆಯೂ ಹೆಚ್ಚಾಗಿ ಕಂಡು ಬರುತ್ತಿದೆ.

ಕೊನೆಯದಾಗಿ

ಕೊನೆಯದಾಗಿ

ಇವುಗಳಲ್ಲಿ ಕೆಲವೊಂದು ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ, ಆದರೆ ಆರೋಗ್ಯಕರ ಜೀವನಶೈಲಿ, ಆಹಾರಕ್ರಮ, ವ್ಯಾಯಾಮ ಇವುಗಳನ್ನು ಪಾಲಿಸುವುದರಿಂದ ಎಷ್ಟೋ ಸಮಸ್ಯೆ ತಡೆಗಟ್ಟಬಹುದು. ಇನ್ನು ಮಾನಸಿಕ ಒತ್ತಡ ಹೆಚ್ಚಾಗದಂತೆ ಎಚ್ಚರವಹಿಸಬೇಕು.

ಕಾಯಿಲೆ ಇಲ್ಲ ಅಂತ ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡಬೇಡಿ, ನಿಯಮಿತವಾಗಿ ಚೆಕಪ್ ಮಾಡಿಸಿ, ಇದರಿಂದ ಎಷ್ಟೋ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬಹುದು, ಫಿಟ್ನೆಸ್ ಕಡೆ ಗಮನ ನೀಡಿ.

Read more about: health men
English summary

Men’s Health Week 2020: A List Of Health Risks Affecting Men

From 15 to 21 June, Men's Health Week is observed to raise awareness on health issues affecting men and to attempt to get men to become aware of health problems they may have or could develop.
X
Desktop Bottom Promotion