For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ವಿರುದ್ಧ ಜನರಲ್ಲಿ ಹೆಚ್ಚಿದೆ ರೋಗ ನಿರೋಧಕ ಶಕ್ತಿ: ತಜ್ಞರು

|

ಭಾರತದಲ್ಲಿ ಕೊರೊನಾ 2ನೇ ಅಲೆ ಕಡಿಮೆಯಾಗಿದೆ, ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ, ಜನರು ಸಭೆ-ಸಮಾರಂಭಗಳಿಗೆ ಸೇರುತ್ತಿದ್ದಾರೆ, ಮಾಲ್, ಶಾಪಿಂಗ್ ಅಂತ ಓಡಾಡುತ್ತಿದ್ದಾರೆ, ಈಗೀನ ಪರಿಸ್ಥಿತಿ ನೋಡುವಾಗ ಕೊರೊನಾ ಕಣ್ಮರೆಯಾಗುತ್ತಿದೆ ಎಂದು ಅನಿಸುವುದು, ಹಾಗಂತ ನಿರ್ಲಕ್ಷ್ಯ ತೋರುವಂತಿಲ್ಲ, ಏಕೆಂದರೆ ಮೂರನೇ ಅಲೆಯ ಆತಂಕ ಇದ್ದೇ ಇದೆ.

ಕೊರೊನಾ 2ನೇ ಅಲೆ ದೇಶಕ್ಕೆ, ಜನತೆಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿದೆ. ಆದ್ದರಿಂದ 3ನೇ ಅಲೆ ಎಂಬುವುದು ಬಾರದೇ ಇರಲಿ ಎಂಬುವುದೇ ಎಲ್ಲರ ಆಶಯವಾಗಿದೆ, 3ನೇ ಅಲೆ ತಡೆಗಟ್ಟಬೇಕೆಂದರೆ ಒಂದೋ ಹರ್ಡ್‌ ಇಮ್ಯೂನಿಟಿ ಉಂಟಾಗಬೇಕು, ಇಲ್ಲಾಂದ್ರೆ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಇದೀಗ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್‌ ಡ್ರೈವ್‌ ನಡೆಯುತ್ತಿರುವುದರಿಂದ ಕೊರೊನಾ ವಿರುದ್ಧ ಹೆಚ್ಚಿನ ಜನರಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗಿದೆ, ಲಸಿಕೆಯನ್ನು ಜನ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಲಸಿಕೆ ಕೇಂದ್ರಗಳಲ್ಲಿ ಉದ್ದದ ಕ್ಯೂ ನೋಡಬಹುದು, ಹಾಗಾಗಿ ಎಲ್ಲರಿಗೆ ಲಸಿಕೆ ಸಿಕ್ಕರೆ 3ನೇ ಅಲೆಯ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್ 19 ವಿರುದ್ಧ ಹೋರಾಡುವ ಸಾಮರ್ಥ್ಯ ಈಗ ಹೆಚ್ಚಿನವರಲ್ಲಿದೆ: ತಜ್ಞರು

ಕೋವಿಡ್ 19 ವಿರುದ್ಧ ಹೋರಾಡುವ ಸಾಮರ್ಥ್ಯ ಈಗ ಹೆಚ್ಚಿನವರಲ್ಲಿದೆ: ತಜ್ಞರು

ತಜ್ಞರ ಪ್ರಕಾರ ಯಾರು ಲಸಿಕೆ ಪಡೆದಿರುತ್ತಾರೋ ಅವರಲ್ಲಿ ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿದೆ. ಕೊರೊನಾ 2ನೇ ಅಲೆಗೆ ಡೆಲ್ಟಾ ಪ್ಲಸ್ ರೂಪಾಂತರ ಕಾರಣವಾಗಿತ್ತು, 3ನೇ ಅಲೆಗೆ ಡೆಲ್ಟಾ ಪ್ಲಸ್ ರೂಪಾಂತರ ಕಾರಣವಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ನಡುವೆ ದೊಡ್ಡ ವ್ಯತ್ಯಾಸವಿಲ್ಲದ ಕಾರಣ ಇದ್ದಕ್ಕಿದ್ದಂತೆ ಕೇಸ್‌ಗಳು ಹೆಚ್ಚಾಗುವ ಸಾಧ್ಯತೆ ಕಡಿಮೆ, ಆದರೆ ತುಂಬಾ ಅಪಾಯಕಾರಿ ರೂಪಾಂತರ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಜನರಲ್ಲಿ ನಿರ್ಲಕ್ಷ್ಯ ಹೆಚ್ಚಾಗಿದೆ

ಜನರಲ್ಲಿ ನಿರ್ಲಕ್ಷ್ಯ ಹೆಚ್ಚಾಗಿದೆ

ಕೊರೊನಾ ಬಂದಾಗ ಎಚ್ಚರಿಕೆವಹಿಸುತ್ತಿದ್ದ ಜನರು ಕೊರೊನಾ ಕೇಸ್‌ಗಳು ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ನಿರ್ಲಕ್ಷ್ಯ ತೋರುತ್ತಿದ್ದಾರೆ, ಜನಸಂದಣೆ ಇರುವ ಕಡೆ ಓಡಾಡುವಾಗ ಮಾಸ್ಕ್ ಧರಿಸಲ್ಲ, ಕೆಲವರು ಬಟ್ಟೆ ಮಾಸ್ಕ್‌ ಧರಿಸುತ್ತಿದ್ದಾರೆ, ಬಟ್ಟೆ ಮಾಸ್ಕ್‌ಗಳು ವೈರಸ್‌ ಅನ್ನು ಸಂಪೂರ್ಣವಾಗಿ ತಡೆಗಟ್ಟಲು ಸಮರ್ಥವಲ್ಲ. ಕೈಗಳಿಗೆ ಸ್ಯಾನಿಟೈಸರ್ ಬಳಸುತ್ತಿಲ್ಲ, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ... ಈ ರೀತಿಯ ನಿರ್ಲಕ್ಷ್ಯವೇ 3ನೇ ಅಲೆಗೆ ಕಾರಣವಾಗಬಹುದು.

ಮುಂದಿನ ಮೂರು ತಿಂಗಳು ತುಂಬಾ ಎಚ್ಚರಿಕೆಯಿಂದ ಇರಬೇಕು

ಮುಂದಿನ ಮೂರು ತಿಂಗಳು ತುಂಬಾ ಎಚ್ಚರಿಕೆಯಿಂದ ಇರಬೇಕು

ಎರಡನೇ ಅಲೆಯ ಬಳಿಕ ದೇಶ ಅನ್‌ಲಾಕ್ ಆಗಿದೆ, ಜನರು ಓಡಾಟ ಹೆಚ್ಚಾಗಿದೆ, ಮುಂದಿನ ಮೂರು ತಿಂಗಳವರೆಗೆ ಪರಿಸ್ಥಿತಿಯನ್ನು ಗಮನಿಸಬೇಕು ಎಂದು ನೀತಿ ಆಯೋಗದ ಸದಸ್ಯ ಡಾ. ವಿ ಕೆ ಪೌಲ್‌ ದೆಹಲಿಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಪ್ರತಿಯೊಂದು ರಾಜ್ಯ ಸರ್ಕಾವೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.

ಕೊರೊನಾ ಸಂಪೂರ್ಣ ತಡೆಗಟ್ಟಲು ಜನರು ಮಾಡಬೇಕಾಗಿರುವುದೇನು?

ಕೊರೊನಾ ಸಂಪೂರ್ಣ ತಡೆಗಟ್ಟಲು ಜನರು ಮಾಡಬೇಕಾಗಿರುವುದೇನು?

* ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಪಾಲಿಸಿ

* ಮುಖಕ್ಕೆ ಮಾಸ್ಕ್‌ ಧರಿಸಿ, ಡಬಲ್ ಮಾಸ್ಕ್‌ ಧರಿಸಿದರೆ ಮತ್ತಷ್ಟು ಸುರಕ್ಷಿತ

* ಕೈಗಳಿಗೆ ಸ್ಯಾನಿಟೈಸರ್ ಬಳಸಿ

* ಮುಖ್ಯವಾಗಿ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿ

* 5 ವರ್ಷದ ಕೆಳಗಿನ ಮಕ್ಕಳಿಗೆ ಫ್ಲೂ ಲಸಿಕೆ ಹಾಕಿಸಿ

* ಅನಗ್ಯತವಾಗಿ ಓಡಾಡಬೇಡಿ

* ಸ್ವಲ್ಪ ಸಮಯದವರೆಗೆ ಸಭೆ-ಸಮಾರಂಭಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಡಿ.

English summary

Many People Have Better Immunity Against Covid-19; Experts

Many People have better immunity against Covid-19; Experts, read on...
Story first published: Tuesday, July 27, 2021, 13:44 [IST]
X
Desktop Bottom Promotion