For Quick Alerts
ALLOW NOTIFICATIONS  
For Daily Alerts

ಅಧ್ಯಯನ: ಆಗ್ನೇಯ ಏಷ್ಯಾದಲ್ಲಿ ಆತಂಕಕಾರಿ ರೀತಿಯಲ್ಲಿ ಮಲೇರಿಯಾ ಔಷಧಗಳು ವಿಫಲವಾಗುತ್ತಿವೆ!

|

ಆಗ್ನೇಯ ಏಷ್ಯಾದಲ್ಲಿ ಮಲೇರಿಯಾ ಪರಾವಲಂಬಿ ಔಷಧ ನಿರೋಧಕ ತಳಿಗಳು ಆತಂಕಕಾರಿ ರೀತಿಯಲ್ಲಿ ಅಥವಾ ದರದಲ್ಲಿ ವಿಫಲತೆಯನ್ನು ಹೊಂದುತ್ತಿವೆ. ಸಂಶೋಧಕರ ಪ್ರಕಾರ ಅದರ ಬಗ್ಗೆ ಎರಡು ರೀತಿಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಒಂದು ಯಾದೃಚ್ಛಿಕ ಪ್ರಯೋಗದ ಆಧಾರದ ಮೇಲೆ ಹಾಗೂ ಇನ್ನೊಂದು ಆನುವಂಶಿಕ ಅಧ್ಯಯನಗಳ ಆಧಾರದ ಮೇಲೆ. ಈ ವಿಷಯದ ಕುರಿತು ಈಗ ವೈದ್ಯಕೀಯ ಜರ್ನಲ್ "ದಿ ಲ್ಯಾನ್‍ಸೆಟ್"ಅಲ್ಲಿ ಬಿಡುಗಡೆ ಮಾಡಲಾಗಿದೆ. ಇದರೊಟ್ಟಿಗೆ ಈ ಔಷಧದ ನಿರೋಧಕತೆಯು ಜಗತ್ತಿನಾದ್ಯಂತ ಹರಡಬಹುದು ಎಂಬ ಆತಂಕವಿದೆ ಎನ್ನಲಾಗುತ್ತಿದೆ.

Malaria Drugs

ಈ ರೀತಿಯ ಬೆಳವಣಿಗೆ ಹಾಗೂ ಪರಿಣಾಮಗಳನ್ನು ಪರಿಗಣಿಸಿದ ಜಾಗತಿಕ ಆರೋಗ್ಯ ಅಧಿಕಾರಿಗಳು ಸಾಕಷ್ಟು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಅವರು ನೋಡಿದ ಮೊದಲ ಭೀಕರವಾದ ಮಾದರಿಯಾಗಿದೆ. ಈ ಪ್ರದೇಶದಲ್ಲಿ ಹೊರ ಬಂದ ಪ್ರತಿರೋಧವು 20ನೇ ಶತಮಾನದ ಮಧ್ಯದಿಂದ ಹಿಂದಿನ ಮಲೇರಿಯಾ ಔಷಧಗಳನ್ನು ಅವನತಿಗೊಳಿಸುತ್ತಿದೆ.

ಬ್ಯಾಂಕಾಕ್‍ನ ಮಹಿಡೋಲ್ ಆಕ್ಸ್‍ಫರ್ಡ್ ಟ್ರಾಫಿಕಲ್ ಮೆಡಿಸಿನ್ ರಿಸರ್ಚ್ ಯುನೀಟ್ ಅಲ್ಲಿ ಸಂಶೋಧಕರು ಮತ್ತು ಯಾದೃಚ್ಛಿಕ ಪ್ರಯೋಗದ ಬಗ್ಗೆ ವರದಿ ಮಾಡುವ ಪ್ರಮುಖ ಲೇಖಕರಾದ ಅರ್ಜೆನ್ ಡೊಂಡೋರ್ಪ್ ಹೇಳುವ ಪ್ರಕಾರ "ಆಂಟಿಮಲೇರಿಯಾ ಔಷಧವು ಪ್ರಪಂಚದ ಆಯಾ ಭಾಗದಲ್ಲಿ ಮೊದಲು ಪ್ರಾರಂಭಿಸಲಾಗುತ್ತದೆ." ಈ ಹಿಂದೆ ಕ್ಲೋರೊಕ್ವಿನ್ ಪ್ರತಿರೋಧವು ಹುಟ್ಟಿಕೊಂಡಿತು. ನಂತರದ ಪೀಳಿಗೆಯಲ್ಲಿ ಆಂಟಿಮಲೇರಿಯಾಗಳಾದ ಸಲ್ಫಾಡ್ ಡಾಕ್ಸಿನ್ ಪಿರಿಮೆಥಮೈನ್ ಎನ್ನುವುದು ಹುಟ್ಟುಕೊಂಡಿತು. ಈಗ ಆರ್ಟೆಮಿಸಿನಿನ್ ಎನ್ನುವ ಪ್ರತಿರೋಧಕವನ್ನು ಮೊದಲ ಬಾರಿಗೆ ಪಶ್ಚಿಮ ಕಾಂಬೋಡಿಯಾದಲ್ಲಿ ಕಂಡುಹಿಡಿಯಲಾಗಿದೆ.

Malaria Drugs

ಆದರೆ ಇದರ ಮಹತ್ವವನ್ನು ಒತ್ತಿ ಹೇಳುವುದು ಕಷ್ಟ. ಈ ಆಧುನಿಕ ಯುಗದಲ್ಲಿರುವ ಮೆಕಾಂಗ್ ಡೆಲ್ವಾದಲ್ಲಿ ಮಲೇರಿಯಾಗಳಿಗೆ ಔಷಧಗಳನ್ನು ನೀಡುತ್ತಿದ್ದರೂ ಸಹ ಸಾವಿನ ಸಸುಳಿ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಸಂಕೀರ್ಣವಾಗಿದೆ. ಕೆಲವು ವಿಜ್ಞಾನಿಗಳು ಹಾಗೂ ತಜ್ಞರು ಅಭಿಪ್ರಾಯಿಸುವಂತೆ ಆ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮಲೇರಿಯಾಗಳಿವೆ. ಆದರೆ ಅವರಲ್ಲಿ ಇರುವ ನಿರೋಧಕ ಪರಾವಲಂಬಿಗಳು ಹೆಚ್ಚು ಪ್ರಭಲವಾಗಿಲ್ಲ. ನಿರೋಧಕ ಪರಾವಲಂಬಿಗಳು ಹೊರಹೊಮ್ಮಿದಾಗ ಅವು ಮಲೇರಿಯಾದ ಪ್ರಬಲವಾದ ತಡೆರಹಿತ ಒತ್ತಡದ ವಿರುದ್ಧ ಸ್ಪರ್ಧಿಸುತ್ತಿಲ್ಲ. ಬದಲಿಗೆ ಸುಲಭವಾಗಿ ಹರಡಲು ಸಮರ್ಥವಾಗಿದೆ.

Malaria Drugs

ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯು "ಮಲೇರಿಯಾ ರೋಗದ ಪ್ರಕರಣಗಳಿಗೆ ಆರ್ಟೆಮಿನಿಸ್ ಆಧಾರಿತ ಚಿಕಿತ್ಸೆಗಳನ್ನು ಅಥವಾ ಎಸಿಟಿಎಸ್ ಚಿಕಿತ್ಸೆ ನೀಡುವಂತೆ ಶಿಫಾರಸ್ಸು ಮಾಡಿದೆ. ಇವು ಸಾಮಾನ್ಯವಾಗಿ ಒಂದು ಮಾತ್ರೆಯ ಸಂಯೋಗವನ್ನು ಹೊಂದಿರುತ್ತವೆ. ಅದು ವೇಗವಾಗಿ ಕಾರ್ಯನಿರ್ವಹಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತದೆ. ಆದರೆ ಪ್ರಸ್ತುತ ಜಾಗತಿಕವಾಗಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವುದು. ಎಸಿಟಿಗಳಲ್ಲಿ ಒಂದು ಡೈಹೈಡ್ರೊ ಆರ್ಟೆಮಿನಿಸ್ ಪೈಪೆರಾಕ್ವಿನ್ ಒಳಗೊಂಡಿದೆ. ಆಗ್ನೇಯ ಏಷ್ಯಾದ ಡೊಂಡೋರ್ಪ್ ಅಲ್ಲಿ ಆರ್ಟೆಮಿನಿಸ್ ಸಂಯೋಗದ ಚಿಕಿತ್ಸೆಯು ವಿಫಲವಾಗುತ್ತಿದೆ ಎನ್ನಲಾಗುತ್ತಿದೆ.

ಈ ಔಷಧವು ವಿಶ್ವದಲ್ಲಿಯೇ ಅತ್ಯಂತ ಭಾರವಾದ ಕಾಯಿಲೆಯಲ್ಲಿ ಒಂದಾದ ಮಲೇರಿಯಾಕ್ಕೆ ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ 200ದಶಲಕ್ಷಕ್ಕೂ ಹೆಚ್ಚು ಮಲೇರಿಯಾ ಪ್ರಕರಣಗಳು ಕಂಡುಬರುತ್ತವೆ. ಜೊತೆಗೆ 400,000ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾಯುತ್ತಾರೆ. ಆ ಪ್ರಕರಣಗಳು ಪ್ರಮುಖವಾಗಿ ಆಫ್ರಿಕಾದ ಮಕ್ಕಳಲ್ಲಿ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.

ಆಫ್ರಿಕಾ ಸೇರಿದಂತೆ ವಿವಿಧೆಡೆಯ ಮಲೇರಿಯಾ ಪ್ರಕರಣಗಳಿಗೆ ಆರ್ಟೆಮಿಸಿನಿನ್ ಕಾಂಬೋಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಔಷಧವು ಜಾಗತಿಕವಾಗಿ ಮಲೇರಿಯಾದಿಂದ ಉಂಟಾಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಇದರ ಪರಿಣಾಮಕಾರಿತ್ವವು ಹೇಗಿರುತ್ತದೆ ಎನ್ನುವುದು ಪ್ರಶ್ನಾರ್ಹವಾಗಿದೆ.

Malaria Drugs

ಮೆಕಾಂಗ್ ಪ್ರದೇಶದ ಅಧ್ಯಯನದ ಮಧ್ಯೆ ಡೊಂಡೋರ್ಪ್ ಸಾಂಪ್ರದಾಯಿಕವಾಗಿ ಎರಡು ಔಷಧಗಳಾದ ಆರ್ಟೆಮಿಸಿನಿನ್ ಕಾಂಬೊ ವಿರುದ್ಧ ಹೊಸ ಮೂರು ಔಷಧಗಳನ್ನು ಉಪಯೋಗಿಸಲಾಯಿತು ಅಥವಾ ಪ್ರಯೋಗ ಮಾಡಲಾಯಿತು. ಇವುಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮಲೇರಿಯಾದಿಂದ ಉಂಟಾಗುವ ಮರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಕಂಡು ಬಂದವು.

Malaria Drugs

ಇಷ್ಟೇ ಅಲ್ಲದೆ ಮೊದಲ ಸಾಲಿನ ಚಿಕಿತ್ಸೆಯೊಂದಿಗೆ ನಂಬಲಾಗದ ಹೆಚ್ಚಿನ ಚಿಕಿತ್ಸಾ ವೈಫಲ್ಯಗಳ ದರವನ್ನು ಗಮನಿಸಲಾಗಿದೆ. ಅಲ್ಲದೆ ಪ್ರಸ್ತುತವಾಗಿ ಬಳಸಲಾಗುತ್ತಿರುವ ಔಷಧವು ಕಳಪೆ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಧ್ಯಯನದ ಪ್ರಕಾರ ಅದು ಯಾವ ಭಾಗದಿಂದ ಉಂಟಾಗುತ್ತಿದೆ ಎನ್ನುವುದನ್ನು ಪರಿಶೀಲಿಸಬೇಕಿದೆ. ಜೊತೆಗೆ ಅದರ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಕಡ್ಡಾಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

English summary

Malaria Drugs Are Failing At An 'Alarming' Rate In Southeast Asia

Malaria drugs are failing at an "alarming" rate in Southeast Asia as drug-resistant strains of the malaria parasite emerge. That's the conclusion of researchers in two new reports — one based on a randomized trial and the other on a genetic study — that have just been released in the medical journal The Lancet. And there's concern that this drug resistance could spread around the globe. Global health officials get nervous when new strains of drug-resistant malaria turn up in Southeast Asia, because it's a dreaded pattern that they've seen before.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more