For Quick Alerts
ALLOW NOTIFICATIONS  
For Daily Alerts

ಈ ಆಹಾರಗಳನ್ನು ಸರಿಯಾಗಿ ಬೇಯಿಸದೇ ಅಥವಾ ಹಸಿ ತಿಂದರೆ, ಆರೋಗ್ಯಕ್ಕೆ ಡೇಂಜರ್!

|

ಆರೋಗ್ಯ ಚೆನ್ನಾಗಿರಬೇಕಾದ್ರೆ, ತರಕಾರಿ, ಸೊಪ್ಪು, ಮಾಂಸ ಸೇವನೆ ಅತ್ಯಗತ್ಯ. ಹಾಗಂತ ಅವುಗಳನ್ನು ಒಟ್ಟಾರೆ ಸೇವಿಸುವುದು ಸರಿಯಲ್ಲ. ಇದರಿಂದ ನಮಗೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ. ಆದ್ದರಿಂದ ಅವುಗಳನ್ನು ಚೆನ್ನಾಗಿ ತೊಳೆದು, ಬೇಯಿಸಿ ಸೇವಿಸಬೇಕು.

ನಾವು ದಿನನಿತ್ಯ ಜೀವನದಲ್ಲಿ ಬಳಸುವ ಕೆಲವು ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಬೇಯಿಸಬೇಕು. ಇಲ್ಲವಾದಲ್ಲಿ ನಮಗೇ ತಿಳಿಯದೇ ನಮ್ಮ ಆರೋಗ್ಯವನ್ನ ಕೆಡಿಸುತ್ತಿರುತ್ತವೆ. ಹಾಗಾದರೆ ಆ ಪದಾರ್ಥಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸರಿಯಾದ ರೀತಿಯಲ್ಲಿ ತಯಾರಿಸದೇ ಇದ್ದರೆ, ಆರೋಗ್ಯಕ್ಕೆ ಮಾರಕವಾಗುವ ಆಹಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಆಲೂಗಡ್ಡೆ:

ಆಲೂಗಡ್ಡೆ:

ಆಲೂಗಡ್ಡೆಯ ಮೇಲೆ ಮೊಗ್ಗುಗಳು ಅಥವಾ ಹಸಿರು ಕಲೆಗಳು ರೂಪುಗೊಳ್ಳಲು ಪ್ರಾರಂಭಿಸಿದರೆ, ಅವುಗಳನ್ನು ಸೇವಿಸಬೇಡಿ. ಇದು ಸೋಲನೈನ್ ಸೃಷ್ಟಿಗೆ ಕಾರಣವಾಗಿದ್ದು, ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ತಲೆನೋವು, ವಾಕರಿಕೆ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಇದು ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ತರಬಹುದು.

ಬದನೆ ಕಾಯಿ:

ಬದನೆ ಕಾಯಿ:

ಬದನೆಕಾಯಿಯನ್ನು ಎಂದಿಗೂ ಹಸಿ ತಿನ್ನಬಾರದು. ಇದಕ್ಕೆ ಕಾರಣವೇನೆಂದರೆ, ಇದರಲ್ಲಿ ಸೋಲನೈನ್ ಎಂಬ ಅಂಶವಿದ್ದು, ಆಲೂಗಡ್ಡೆಯಂತೆ ವಿಷಕಾರಿ ಪರಿಣಾಮವನ್ನು ಹೊಂದಿದೆ. ಜೊತೆಗೆ ಹಸಿಬದನೆಕಾಯಿ ಪೋಷಕಾಂಶ ದೇಹ ಸೇರುವುದನ್ನು ತಡೆಯುತ್ತದೆ. ಆದರೆ, ಎಲ್ಲರ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುವುದಿಲ್ಲ. ಅನೇಕ ಜನರು ಇದನ್ನು ಕಚ್ಚಾ ಅಥವಾ ಭಾಗಶಃ ಬೇಯಿಸಿ ಸೇವಿಸುತ್ತಾರೆ. ನಿಮಗೆ ಸೋಲನೈನ್ ಅಲರ್ಜಿ ಇದ್ದರೆ, ಜಠರಗರುಳಿನ ತೊಂದರೆಯನ್ನು ಎದುರಿಸಬಹುದು. ಆದ್ದರಿಂದ ಇದನ್ನು ಸೇವಿಸುವಾಗ ಜಾಗರೂಕರಾಗಿರಿ.

ಸೋರೆಕಾಯಿ:

ಸೋರೆಕಾಯಿ:

ಸೋರೆಕಾಯಿಯನ್ನು ಬೇಯಿಸಿದ ಮಾತ್ರ ತಿನ್ನಬೇಕು; ಇದನ್ನು ಹಸಿ ತಿನ್ನುವುದರಿಂದ ಜಠರಗರುಳಿನ ಸಮಸ್ಯೆ ಉಂಟಾಗಬಹುದು. ತಜ್ಞರ ಪ್ರಕಾರ, ಹಸಿ ತರಕಾರಿಗಳನ್ನು ತಿನ್ನುವುದರಿಂದ ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು ಉಂಟಾಗಬಹುದು. ಹುಣ್ಣುಗಳು, ಕೆಲವು ಸನ್ನಿವೇಶಗಳಲ್ಲಿ, ಬಹು-ಅಂಗ ಹಾನಿ ಕೂಡ ಸಂಭವಿಸಬಹುದು. ಆದ್ದರಿಂದ ಹಸಿ ಸೋರೆಕಾಯಿ ಜ್ಯೂಸ್ ಕುಡಿಯುವುದು ಮತ್ತು ಹಸಿ ಸೋರೆಕಾಯಿ ತಿನ್ನುವುದು ಎರಡೂ ಅತ್ಯಂತ ಅಪಾಯಕಾರಿ.

ರಾಜ್ಮಾ ಅಥವಾ ಕೆಂಪು ಅವರೆ:

ರಾಜ್ಮಾ ಅಥವಾ ಕೆಂಪು ಅವರೆ:

ಹಸಿ ತರಕಾರಿ-ಧಾನ್ಯಗಳು ಸೇವಿಸುವುದನ್ನು ಆರೋಗ್ಯಕರವೆಂದು ಪರಿಗಣಿಸಲಾಗಿದ್ದರೂ, ಅದರಿಂದ ಹಲವಾರು ಹಾನಿಕಾರಕ ಪರಿಣಾಮಗಳಿವೆ. ರಾಜ್ಮಾ ಅಂತಹ ಒಂದು ಆಹಾರ. ಇದು ಲೆಕ್ಟಿನ್ಗಳನ್ನು ಒಳಗೊಂಡಿದ್ದು, ನಿಮ್ಮ ಹೊಟ್ಟೆಯಲ್ಲಿನ ಕೋಶಗಳನ್ನು ನಾಶಪಡಿಸುವ ವಿಷವಾಗಿದೆ. ಆದ್ದರಿಂದ ಈ ಅಪಾಯಕಾರಿ ಜೀವಾಣು ಇಲ್ಲದೆ ಕೆಂಪು ಕಿಡ್ನಿ ಬೀನ್ಸ್ ಸೇವಿಸುವ ಏಕೈಕ ವಿಧಾನವೆಂದರೆ ತಿನ್ನುವ ಮೊದಲು ಕನಿಷ್ಠ ಐದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡುವುದು. ಇಲ್ಲದಿದ್ದರೆ, ನಿಮಗೆ ತೀವ್ರ ಅನಾರೋಗ್ಯ ಉಂಟಾಗಬಹುದು.

ಗೋಡಂಬಿ:

ಗೋಡಂಬಿ:

ಹಸಿ ಗೋಡಂಬಿ ಎಂದಿಗೂ ಒಳ್ಳೆಯದಲ್ಲ. ಅದರಲ್ಲಿರುವ ಉರುಶಿಯೋಲ್ ಎಂಬ ರಾಸಾಯನಿಕ ಇರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಬಹಳ ಹಾನಿಕಾರಕ. ಆದ್ದರಿಂದ ಹಸಿ ಗೋಡಂಬಿಯನ್ನು ಸೇವಿಸುವುದು ಮಾರಕವಾಗಬಹುದು. ವಿಶೇಷವಾಗಿ ಅಲರ್ಜಿ ಇರುವವರಿಗೆ. ಆದ್ದರಿಂದ, ನೀವು ಪ್ರಕೃತಿಯಲ್ಲಿ ಗೋಡಂಬಿಯನ್ನು ಕಂಡರೆ, ಅವುಗಳನ್ನು ತಿನ್ನಬೇಡಿ.

ಅವರೆಕಾಳು:

ಅವರೆಕಾಳು:

ಕೆಂಪು ಕಿಡ್ನಿ ಬೀನ್ಸ್ ಮಾತ್ರ ಅಪಾಯಕಾರಿ ಬೀನ್ ಅಲ್ಲ. ಈ ಅವರೆಕಾಳು ಸಹ ಸರಿಯಾಗಿ ಬೇಯಿಸದೇ ಇದ್ದರೆ, ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೇ. ಇದು ಲಿನಾಮರಿನ್ ಎಂಬ ರಾಸಾಯನಿಕ ಘಟಕವನ್ನು ಒಳಗೊಂಡಿದ್ದು, ಇದು ರಾಸಾಯನಿಕ ಹೈಡ್ರೋಜನ್ ಸೈನೈಡ್ ಆಗಿ ಪರಿವರ್ತನೆಯಾಗಬಹುದು. ಆದ್ದರಿಂದ ಅವರೆಕಾಳು ಅಷ್ಟೊಂದು ಸ್ನೇಹಪರವಾಗಿಲ್ಲ.

English summary

List of Common Foods that may be Deadly if not Cooked Properly or Eaten Raw

Here we talking about List of common foods that may be deadly if not cooked properly or eaten raw, read on
Story first published: Thursday, October 14, 2021, 17:07 [IST]
X
Desktop Bottom Promotion