For Quick Alerts
ALLOW NOTIFICATIONS  
For Daily Alerts

ಹೊಸ ಉಪ ಒಮಿಕ್ರಾನ್‌ ವೈರಸ್ ಮತ್ತಷ್ಟು ಅಪಾಯಕಾರಿಯಾಗಿದೆ: ಲ್ಯಾಬ್ ಸ್ಟಡಿ

|

ಒಮಿಕ್ರಾನ್ ಇನ್ನೇನು ಕಡಿಮೆಯಾಗುತ್ತಿದೆ ಅಷ್ಟರಲ್ಲಿ ಒಮಿಕ್ರಾನ್‌ನ ಉಪ ರೂಪಾಂತರ BA.2 ಕಾಣಿಸಿಕೊಂಡಿದ್ದು ಇದು ಒಮಿಕ್ರಾನ್‌ಗಿಂತ ಮತ್ತಷ್ಟು ವೇಗವಾಗಿ ಹರಡುವುದು ಮಾತ್ರವಲ್ಲ ಅನೇಕ ಕಾಯಿಲೆಗಳನ್ನು ತರುವುದು ಎಂದು ಲ್ಯಾಬ್‌ ಅಧ್ಯಯನದಿಂದ ತಿಳಿದು ಬಂದಿದೆ.

Lab study suggested that the Omicron subvariant BA.2 may cause severe disease

ಒಮಿಕ್ರಾನ್ ರೂಪಾಂತರ ವೇಗವಾಗಿ ಹರಡುವುದು

ವಿಶ್ವ ಆರೋಗ್ಯ ಸಂಸ್ಥೆ BA.1ಗಿಂತ BA.2 ರೂಪಾಂತರ ತುಂಬಾ ವೇಗವಾಗಿ ಹರಡುವುದು ಎಂದು ಹೇಳಿದೆ. ಆದರೆ ಇದರ ಅಪಾಯದ ಬಗ್ಗೆ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದು ಕೋವಿಡ್‌ 19 ಟೆಕ್ನಿಕಲ್ ಮುಖ್ಯಸ್ಥರಾದ ಮರಿಯಾ ವ್ಯಾನ್ ಕೆರ್ಖೋವಾ ಹೇಳಿದ್ದಾರೆ.

ಒಮಿಕ್ರಾನ್ ಉಪ ರೂಪಾಂತರ BA.2 ಈಗಾಗಲೇ ಯುಕೆ, ಡೆನ್ಮಾರ್ಕ್‌ ಮುಂತಾದ ದೇಶಗಳಲ್ಲಿ ಕಂಡು ಬಂದಿದೆ.

BA.2 ವೈರಸ್‌ BA.1ಗಿಂತ ಹೇಗೆ ಭಿನ್ನವಾಗಿದೆ?

BA.2 ವೈರಸ್‌ BA.1ಕ್ಕಿಂತ ತುಂಬಾನೇ ವ್ಯತ್ಯಾಸವಾಗಿದೆ. BA.2 ಉಪ ಒಮಿಕ್ರಾನ್‌ ವೈರಸ್‌ ಮೊದಲು ಪತ್ತೆಯಾದ ಒಮಿಕ್ರಾನ್‌ಗಿಂತ ವೇಗವಾಗಿ ಹರಡುತ್ತದೆ ಅಲ್ಲದೆ ಇದು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಒಮಿಕ್ರಾನ್‌ BA.1 ಶ್ವಾಸಕೋಶಕ್ಕೆ ದಾಳಿ ಮಾಡುತ್ತಿರಲಿಲ್ಲ ಆದರೆ BA.2 ಶ್ವಾಸಕೋಶಕ್ಕೆ ನೇರವಾಗಿ ದಾಳಿ ಮಾಡುವುದು.

ಲಸಿಕೆ ಪಡೆದವರಿಗೆ ಒಮಿಕ್ರಾನ್ BA.2 ಅಪಾಯವಿದೆಯೇ?

ಮೂಲ ಒಮಿಕ್ರಾನ್‌ನಂತೆಯೇ BA.2 ಕೂಡ ಯಾರ ದೇಹದ ರಕ್ತದಲ್ಲಿ antibodies ಇದೆಯೋ ಅಂದರೆ ಕೋವಿಡ್‌ 19 ವಿರುದ್ಧ ಲಸಿಕೆ ಪಡೆದಿದ್ದಾರೋ ಅವರಿಗೆ ತಗುಲುವುದಿಲ್ಲ, ಒಂದು ವೇಳೆ ಸೋಂಕು ತಗುಲಿದರೂ ರೋಗ ಲಕ್ಷಣಗಳು ಗಂಭೀರವಾಗಲ್ಲ.

ಅಲ್ಲದೆ ಈ ಮೊದಲು ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ರೋಗ ನಿರೋಕ ಶಕ್ತಿ ಹೆಚ್ಚಿಸಿಕೊಂಡವರಲ್ಲಿಯೂ ಈ ವೈರಸ್‌ ಹೆಚ್ಚು ಪರಿಣಾ ಬೀರಲ್ಲ.

English summary

Lab study suggested that the Omicron subvariant BA.2 may cause severe disease

Lab study suggested that the Omicron subvariant BA.2 may cause severe disease, read on
Story first published: Monday, February 21, 2022, 13:41 [IST]
X
Desktop Bottom Promotion