For Quick Alerts
ALLOW NOTIFICATIONS  
For Daily Alerts

ಕೋವಿಡ್ 19: ಹೋಂ ಐಸೋಲೇಷನ್‌ನಲ್ಲಿ ಇರುವವರು ಯಾವ ಔಷಧ ಸೇವಿಸಬೇಕು

|

ದೇಶದಲ್ಲಿ ಕೊರೊನಾ ಸೋಂಕು ಮಿತಿ ಮೀರಿದೆ, ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಜನರು ಬೆಡ್‌ ಸಿಗದೆ ಪರಿದಾಡುವ ಪರಿಸ್ಥಿತಿ ಬಂದಿದೆ. ಕೋವಿಡ್‌ 19 ಸೋಂಕಿತರಲ್ಲಿ ಅಧಿಕ ಜನರು ಮನೆಯಲ್ಲಿಯೇ ಹೋಂ ಐಸೋಲೇಟ್‌ ಆಗಿ ಔಷಧ ತೆಗೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಸ್ಥಿತಿ ಗಂಭೀರವಾಗುವವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುತ್ತಿದೆ. ಹೋಂ ಐಸೋಲೇಷನ್ ಇರುವವರು ಯಾವ-ಯಾವ ಔಷಧ ಸೇವಿಸಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DIRECTORATE OF HEALTH AND FAMILY WELFARE SERVICES ANANDARAO CIRCLE, BANGALORE) ಮಾರ್ಗ ಸೂಚಿಗಳನ್ನು ಪ್ರಕಟಿಸಿ.

ದೇಶದಲ್ಲಿ ಕೊರೊನಾ ಸೋಂಕು ಮಿತಿ ಮೀರಿದೆ, ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಜನರು ಬೆಡ್‌ ಸಿಗದೆ ಪರಿದಾಡುವ ಪರಿಸ್ಥಿತಿ ಬಂದಿದೆ. ಕೋವಿಡ್‌ 19 ಸೋಂಕಿತರಲ್ಲಿ ಅಧಿಕ ಜನರು ಮನೆಯಲ್ಲಿಯೇ ಹೋಂ ಐಸೋಲೇಟ್‌ ಆಗಿ ಔಷಧ ತೆಗೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಸ್ಥಿತಿ ಗಂಭೀರವಾಗುವವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುತ್ತಿದೆ. ಹೋಂ ಐಸೋಲೇಷನ್ ಇರುವವರು ಯಾವ-ಯಾವ ಔಷಧ ಸೇವಿಸಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DIRECTORATE OF HEALTH AND FAMILY WELFARE SERVICES ANANDARAO CIRCLE, BANGALORE) ಮಾರ್ಗ ಸೂಚಿಗಳನ್ನು ಪ್ರಕಟಿಸಿ.

ಹೋಂ ಐಸೋಲೇಷನ್‌ ಆಗಿರುವ ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ಯಾವ-ಯಾವ ಔಷಧ ತೆಗೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ ನೀವು ಈ ಔಷಧಗಳನ್ನು ನಿಮ್ಮ ವೈದ್ಯರ ಸಲಹೆಯನ್ನು ಪಡೆದ ಬಳಿಕವಷ್ಟೇ ಸೇವಿಸಬೇಕು.

ಔಷಧಗಳು

ಔಷಧಗಳು

1. ಕ್ಯಾಪ್ಸೂಲ್ ಡಾಕ್ಸಿಸೈಕ್ಲಿನ್100ಮಿಗ್ರಾಂ 1-0-1 (5 ದಿನ) (Cap. Doxycycline 100 mg 1-0-1 for 5 days)

ಸೂಚನೆ: ಗರ್ಭಿಣಿಯರು, ಎದೆ ಹಾಲುಣಿಸುವವರು ಹಾಗೂ 8 ವರ್ಷದ ಕೆಳಗಿನ ಮಕ್ಕಳಿಗೆ ನೀಡುವಂತಿಲ್ಲ.

2. ಇವರ್‌ಮೆಕ್ಟಿನ್ 12 ಮಿಗ್ರಾಂ ಮಾತ್ರೆ 1-0-0 (3 ದಿನ) (Tab Ivermectin 12 mg 1-0-0 for 3 days) (

ಸೂಚನೆ: ಈ ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಗರ್ಭಿಣಿಯರು, 2 ವರ್ಷದ ಕೆಳಗಿನ ಮಕ್ಕಳಿಗೆ ನೀಡುವಂತಿಲ್ಲ.

3. ಜಿಂಕ್‌ 50 ಮಿಗ್ರಾಂ ಮಾತ್ರೆ 0-1-0 (7 ದಿನ) (Tab Zinc 50 mg 0-1-0 for 7 days)

ಪ್ರಯೊಜನ: ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ

4. ವಿಟಮಿನ್ ಸಿ 500 ಮಿಗ್ರಾಂ ಮಾತ್ರೆ 1-1-1 (7 ದಿನ)(Tab Vitamin C 500 mg 1-1-1 for 7 days)

ಪ್ರಯೊಜನ: ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ

5. ಮಾತ್ರೆ-ಪ್ಯಾರಾಸಿಟಮೋಲ್ 500 ಮಿಗ್ರಾಂ SOS (Tab Paracetamol 500 mg SOS)

ಸೂಚನೆ: ಜ್ವರವಿದ್ದರೆ ತೆಗೆದುಕೊಳ್ಳಬಹುದು.

6. ಮಾತ್ರೆ- ಪ್ಯಾಂಟೋಪ್ರಾಜೋಲೆ 40ಮಿಗ್ರಾಂ SOS (Tab Pantoprazole40 mg SOS)

ಸೂಚನೆ: ಅಗ್ಯತವಿದ್ದರೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.

7. ಮಾತ್ರೆ- ಸಿಟ್ರಿಜನ್ 10 ಮಿಗ್ರಾಂ SOS(Tab Cetrizine10 mg SOS)

ಸೂಚನೆ: ಶೀತವಿದ್ದರೆ ತೆಗೆದುಕೊಳ್ಳಬಹುದು.

8. ಆ್ಯಂಟಿಟ್ಯೂಸಿವ್ ಕಾಫ್‌ ಸಿರಪ್ SOS (Antitussive Cough Syrup SOS )

ಸೂಚನೆ: ಕೆಮ್ಮು ಇದ್ದರೆ ತೆಗೆದುಕೊಳ್ಳಿ

ವಿಶೇಷ ಸೂಚನೆ:

ವಿಶೇಷ ಸೂಚನೆ:

* ಈ ಎಲ್ಲಾ ಔಷಧಿಯನ್ನು ವೈದ್ಯರ ಸಲಹೆ ಪಡೆದ ಬಳಿಕವೇ ತೆಗೆದುಕೊಳ್ಳಬೇಕು.

*ECG ತೆಗೆದು ಅಗ್ಯತವಿರುವವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ನೀಡಲಾಗುವುದು.

* ಅಗ್ಯತವಿರುವವರಿಗೆ ಫೇವಿಪಿರಾವಿರ್‌ ಮಾತ್ರೆಯನ್ನು ತೆಗೆದುಕೊಳ್ಳಲು ವೈದ್ಯರು ಸೂಚಿಸಬಹುದು.

* Vitamin D 1000 IU 1-0-0 ಮಾತ್ರೆಯನ್ನು ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಬಹುದು.

* ಆಸ್ಪಿರಿನ್ 75ಮಿಗ್ರಾಂ 1-0-0 ತೆಗೆದುಕೊಳ್ಳಲು ವೈದ್ಯರು ಸೂಚಿಸಬಹುದು.

* ಇತರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ನಿಮ್ಮ ವೈದ್ಯರು ಸೂಚಿಸಿದ ಔಷಧ ತೆಗೆದುಕೊಳ್ಳಬಹುದು.

* ಮಕ್ಕಳಿಗೆ ಔಷಧಿಯನ್ನು ನೀಡುವಾಗ ಅವರ ದೇಹದ ತೂಕಕ್ಕೆ ಅನುಗುಣವಾಗಿ ಡೋಸೇಜ್ ನೀಡಬೇಕು.

* ಇನ್ನು ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಮುಂತಾದ ಸಮಸ್ಯೆಗೆ ಔಷಧ ತೆಗೆದುಕೊಳ್ಳುವವರು ಆ ಔಷಧಿಯನ್ನು ತೆಗೆದುಕೊಳ್ಳಬೇಕು.

ಇತರ ಸಲಹೆ

ಇತರ ಸಲಹೆ

* ಸೋಂಕಿತರು ಪ್ರತಿದಿನ ಆಗಾಗ ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು.

* ದಿನದಲ್ಲಿ ಎರಡು ಬಾರಿ ಹಬೆ ಅಥವಾ ಸ್ಟೀಮ್‌ ತೆಗೆದುಕೊಳ್ಳಿ.

* ದಿನದಲ್ಲಿ 8 ಲೋಟ ಬಿಸಿ ನೀರು ಸೇವಿಸಿ.

* ಕಷಾಯ ಮಾಡಿ ಕುಡಿಯುವುದು ಒಳ್ಳೆಯದು.

* ಸತುವಿನಂಶವಿರುವ ಆಹಾರ ಸೇವಿಸಿ.

* ಸೂಪ್ ಕುಡಿಯುವುದು ಕೂಡ ಬೇಗನೆ ಸುಸ್ತು ನಿವಾರಣೆಗೆ ಸಹಾಯ ಮಾಡುತ್ತೆ.

* ಚೆನ್ನಾಗಿ ನಿದ್ದೆ ಮಾಡಿ.

* ಆಕ್ಸಿಜನ್ ಲೆವಲ್ ಪರೀಕ್ಷಿಸುತ್ತಾ ಇರಿ.

ಧೈರ್ಯವಾಗಿರಿ

ಧೈರ್ಯವಾಗಿರಿ

* ನಿಮ್ಮ ವೈದ್ಯರು ಸೂಚಿಸಿರುವ ಸಲಹೆಯನ್ನು ತಪ್ಪದೇ ಪಾಲಿಸಿ.

* ರೋಗ ಲಕ್ಷಣಗಳು ಅಧಿಕವಾದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ.

ಭಯ ಪಡಬೇಡಿ, ಧೈರ್ಯವಾಗಿರಿ. ಔಷಧದಷ್ಟೇ ಮನಸ್ಸಿನ ಧೈರ್ಯ ಕೂಡ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.

English summary

Karnataka issues guidelines for Home Isolation of mild & asymptomatic COVID-19 patients

Karnataka Govt issues guidelines for Home Isolation of mild & asymptomatic COVID-19 patents. Read on.
X
Desktop Bottom Promotion