Just In
- 1 hr ago
Mental Health: ಅತಿಯಾಗಿ ಯೋಚನೆ ಮಾಡುವುದರಿಂದ ಹೀಗೂ ಆಗಬಹುದು ಗೊತ್ತಾ..?
- 3 hrs ago
ಈ 4 ರಾಶಿಯವರನ್ನು ಜನ ಸುಲಭವಾಗಿ ಯಾಮಾರಿಸುತ್ತಾರೆ...ನೀವು ಈ ರಾಶಿಯವರೇ? ಹುಷಾರು ಕಣ್ರಿ!
- 5 hrs ago
ಓವರ್ಆ್ಯಕ್ಟಿವ್ ಬ್ಲಾಡರ್ ಸಮಸ್ಯೆಗೆ ಯಾವ ಆಹಾರ ಹಾಗೂ ಪಾನೀಯ ಒಳ್ಳೆಯದು?
- 9 hrs ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಸೇರಿದಂತೆ ಈ ರಾಶಿಯ ಉದ್ಯೋಗಿಗಳಿಗೆ ಉತ್ತಮ ದಿನ
Don't Miss
- Sports
ಕೊಹ್ಲಿ ಮಾಡುತ್ತಿದ್ದ ಈ ತಪ್ಪನ್ನು ಡು ಪ್ಲೆಸಿಸ್ ಮಾಡಲಿಲ್ಲ ಹೀಗಾಗಿ ಆರ್ಸಿಬಿ ಯಶಸ್ಸು ಕಂಡಿದೆ ಎಂದ ಸೆಹ್ವಾಗ್!
- News
ರಾಷ್ಟ್ರಪತಿ, ರಾಜ್ಯಸಭೆ ಚುನಾವಣೆ: ಬಿಜೆಪಿ ಸರಣಿ ಸಭೆ
- Finance
ವಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್
- Movies
ಜೇನುಗೂಡು: ನಡುಕೋಟೆ ಮನೆಯಲ್ಲಿ ಭಾಸ್ಕರ್: ಡಾಕ್ಟರ್ ಮನೆಯಲ್ಲಿ ಶುಭಾಗ್ನಿ ಕಾಟ!
- Automobiles
ತಮ್ಮ ಹೆಸರಿನ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರಿನ ಚಿತ್ರ ಹಂಚಿಕೊಂಡ ಭಾರತ್ ಪೇ ಮಾಜಿ ಎಂಡಿ
- Education
KCET 2022 Application Correction : ಅರ್ಜಿ ತಿದ್ದುಪಡಿಗೆ ಇಂದು ಕೊನೆಯ ದಿನ
- Technology
ನೀವು ಬಳಸಬಹುದಾದ ಅತ್ಯುತ್ತಮ ಪಾಸ್ವರ್ಡ್ ಮ್ಯಾನೇಜರ್ಗಳ ವಿವರ ಇಲ್ಲಿದೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಣ್ಣು ತುರಿಕೆಗೆ ಈ ಮನೆ ಮದ್ದುಗಳು ಶೀಘ್ರ ಶಮನಕಾರಿ
ಕಣ್ಣುಗಳು ಮನುಷ್ಯನಿಗೆ ಹೊರಗಿನ ಸೌಂದರ್ಯವನ್ನು ತೋರಿಸಿಕೊಡುವುದು ಮಾತ್ರವಲ್ಲದೆ, ಆತನ ದೈನಂದಿನ ಚಟುವಟಿಕೆಯಲ್ಲಿ ಜೀವನಪೂರ್ತಿ ಜತೆಯಾಗಿ ಕೆಲಸ ಮಾಡುವುದು. ಕಣ್ಣುಗಳು ಇಲ್ಲದೆ ಹೋದರೆ ಆಗ ಖಂಡಿತವಾಗಿಯೂ ಜೀವನ ಸುಗಮವಾಗಿರಲ್ಲ. ಕಣ್ಣುಗಳು ಕೆಲವೊಮ್ಮೆ ಹೊರಗಿನ ಧೂಳು, ಕಲುಷಿತ ವಾತಾವರಣಕ್ಕೀಡಾಗಿ ಸಮಸ್ಯೆಗೆ ಗುರಿಯಾಗುವುದು. ಇದರಿಂದಾಗಿ ಕಣ್ಣುಗಳಿಗೆ ಹಾನಿ ಮತ್ತು ಕಿರಿಕಿರಿ ಉಂಟಾಗುವುದು.
ಕಣ್ಣುಗಳಲ್ಲಿ ತುರಿಕೆ ಮತ್ತು ಕಿರಿಕಿರಿಯು ಕೆಲವರಿಗೆ ಸಾಮಾನ್ಯವೆನ್ನುವಂತಾಗಿದೆ. ಇದಕ್ಕೆ ನೀವು ಕೆಲವು ಮನೆಮದ್ದುಗಳನ್ನು ಹುಡುಕುತ್ತಿದ್ದರೆ ಆಗ ಖಂಡಿತವಾಗಿಯೂ ಈ ಲೇಖನವನ್ನು ಓದಲೇಬೇಕು. ಯಾಕೆಂದರೆ ನಾವು ನಿಮಗೆ ಈ ಲೇಖನದಲ್ಲಿ ತುರಿಕೆ ಉಂಟು ಮಾಡುವ ಕಣ್ಣುಗಳಿಗೆ ಕೆಲವೊಂದು ಮನೆಮದ್ದುಗಳನ್ನು ತಿಳಿಸಿಕೊಡಲಿದ್ದೇವೆ.
ತುರಿಕೆಯಂಟು ಮಾಡುವ ಕಣ್ಣುಗಳಿಗೆ ಕೆಲವು ಮನೆಮದ್ದುಗಳು.

1. ಸೌತೆಕಾಯಿ ತುಂಡು
ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗುಣಗಳು ಇವೆ. ಇದು ಕಿರಿಕಿರಿ ಉಂಟು ಮಾಡುವ ಚರ್ಮಕ್ಕೆ ಶಮನ ನೀಡುವುದು ಮತ್ತು ಊತ ಕಡಿಮೆ ಮಾಡುವುದು. ಸೌತೆಕಾಯಿಯಲ್ಲಿ ಇರುವಂತಹ ಶಮನಕಾರಿ ಗುಣವು ತುರಿಕೆ ಉಂಟು ಮಾಡುವ ಕಣ್ಣುಗಳಿಗ ಪರಿಹಾರ ನೀಡುವುದು.
ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ.
ಕಣ್ಣು ಮುಚ್ಚಿಕೊಂಡು ಇದನ್ನು ಕಣ್ಣಿನ ಮೇಲಿಡಿ.
ಇದು ಬಿಸಿಯಾಗುವ ತನಕ ಕಣ್ಣುಗಳ ಮೇಲಿರಲಿ.
ದಿನಾಲೂ 1-2 ಸಲ ಹೀಗೆ ಮಾಡಿ.

2. ತಂಪು ಶಾಖ
ಕಣ್ಣುಗಳಿಗೆ ತಂಪು ಶಾಖ ನೀಡಿದರೆ ಅದರಿಂದ ಮೆಬೊಮಿಯನ್ ಗ್ರಂಥಿಯಲ್ಲಿ ಎಣ್ಣೆಯು ಉತ್ಪತ್ತಿ ಆಗಲು ನೆರವಾಗುವುದು. ಇದರಿಂದ ಕಿರಿಕಿರಿ ಮತ್ತು ತುರಿಕೆಗೆ ನೆರವಾಗುವುದು.
ಏನು ಮಾಡಬೇಕು?
ಕಣ್ಣಿನ ಸಮಸ್ಯೆಯ ಭಾಗಕ್ಕೆ ಐಸ್ ಪ್ಯಾಕ್ ಇಡಬೇಕು.
1-2 ನಿಮಿಷ ಇಟ್ಟು ಬಳಿಕ ತೆಗೆಯಿರಿ.
2-3 ಸಲ ಪುನರಾವರ್ತಿಸಿ.
ಇದನ್ನು ದಿನದಲ್ಲಿ ಕೆಲವು ಸಲ ಮಾಡಿ.

3. ಟೀ ಬ್ಯಾಗ್
ಕಣ್ಣು ಒಣಗಿದ್ದರೆ ಆಗ ಗ್ರೀನ್ ಟೀಯಲ್ಲಿ ಇರುವಂತಹ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್(ಇಜಿಸಿಜಿ) ಅಂಶವು ನೆರವಾಗುವುದು. ಗ್ರೀನ್ ಟೀ ಬ್ಯಾಗ್ ನ್ನು ಕಣ್ಣಿನ ಮೇಲಿಟ್ಟರೆ ಅದರಿಂದ ತುರಿಕೆ ಮತ್ತು ಒಣ ಕಣ್ಣುಗಳಿಗೆ ಪರಿಹಾರ ಸಿಗುವುದು.
ಏನು ಮಾಡಬೇಕು
ಚಾ ಮಾಡಲು ಬಳಸಿದ ಟೀ ಬ್ಯಾಗ್ ತೆಗೆದುಕೊಳ್ಳಿ.
ಇದನ್ನು 30 ನಿಮಿಷ ಕಾಲ ಫ್ರಿಡ್ಜ್ ನಲ್ಲಿ ಇಡಿ.
ಇದರ ಬಳಿಕ ಕಣ್ಣುಗಳ ಮೇಲೆ ಈ ಬ್ಯಾಗ್ ನ್ನು ಇಡಿ.
10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೆಗೆಯಿರಿ.
ಕಣ್ಣು ತುರಿಸುವ ವೇಳೆ ನೀವು ಹೀಗೆ ಮಾಡಬಹುದು.

4. ತಂಪಾದ ಹಾಲು
ತಣ್ಣಗಿನ ಹಾಲು ತಂಪು ಶಾಖ ನೀಡಲು ತುಂಬಾ ಒಳ್ಳೆಯದು. ಹಾಲನ್ನು ತುರಿಕೆ ಮತ್ತು ಊತ ಇರುವ ಕಣ್ಣುಗಳ ಮೇಲೆ ಹಚ್ಚಿಕೊಳ್ಳಬೇಕು.
ಏನು ಮಾಡಬೇಕು
ಹತ್ತಿ ಉಂಡೆಯನ್ನು ತಂಪಾದ ಹಾಲಿನಲ್ಲಿ ಅದ್ದಿಕೊಳ್ಳಿ.
ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಹತ್ತಿ ಉಂಡೆಯನ್ನು ಅದರ ಮೇಲಿಡಿ.
10 ನಿಮಿಷ ಹಾಗೆ ಬಿಡಿ ಮತ್ತು ಇದರ ಬಳಿಕ ತೆಗೆಯಿರಿ.
ದಿನದಲ್ಲಿ 2-3 ಸಲ ಹೀಗೆ ಮಾಡಿ.

5. ನೀರು
ನೀರು ಕಣ್ಣುಗಳನ್ನು ಶುಚಿಗೊಳಿಸುವುದು ಮತ್ತು ಕಿರಿಕಿರಿ ಶಮನ ಮಾಡುವುದು.
ಏನು ಮಾಡಬೇಕು
ತುರಿಕೆ ಉಂಟಾದ ವೇಳೆ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ.
ದಿನದಲ್ಲಿ 2-3 ಸಲ ಹೀಗೆ ಮಾಡಿ.

6. ಅಲೋವೆರಾ ಜ್ಯೂಸ್
ಅಲೋವೆರಾ ಕಣ್ಣುಗಳಲ್ಲಿನ ಉರಿಯೂತ ಕಡಿಮೆ ಮಾಡುವುದು. ಇದನ್ನು ಕಣ್ಣುಗಳಿಗೆ ಹಚ್ಚಿಕೊಂಡರೆ ಅದರಿಂದ ಕಣ್ಣುಗಳಲ್ಲಿನ ತುರಿಕೆ ಕಡಿಮೆ ಆಗುವುದು.
ಏನು ಮಾಡಬೇಕು
ಅಲೋವೆರಾ ಜ್ಯೂಸ್ ಮಾಡಿಕೊಳ್ಳಿ.
ಅದನ್ನು 30 ನಿಮಿಷ ಕಾಲ ಫ್ರಿಡ್ಜ್ ನಲ್ಲಿಡಿ.
ಈಗ ಇದರಲ್ಲಿ ಹತ್ತಿ ಉಂಡೆ ಮುಳುಗಿಸಿ.
ಅದನ್ನು ಕಣ್ಣುಗಳ ಮೇಲಿಡಿ.
10-15 ನಿಮಿಷ ಕಾಲ ಹಾಗೆ ಇಡಿ ಮತ್ತು ಬಳಿಕ ತೆಗೆಯಿರಿ.
ದಿನದಲ್ಲಿ ಹಲವಾರು ಸಲ ಹೀಗೆ ಮಾಡಿ.

7. ಹರಳೆಣ್ಣೆ
ಹರಳೆಣ್ಣೆಯು ಕಣ್ಣುಗಳಿಗೆ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡುವುದು. ಇದು ತುರಿಕೆ ಉಂಟು ಮಾಡುವ ಕಣ್ಣುಗಳಿಗೆ ಒಳ್ಳೆಯ ಪರಿಹಾರವಾಗಿದೆ.
ಏನು ಮಾಡಬೇಕು
ಹತ್ತಿ ಉಂಡೆಯನ್ನು ಹರಳೆಣ್ಣೆಯಲ್ಲಿ ಮುಳುಗಿಸಿ
ಹೆಚ್ಚಿನ ಎಣ್ಣೆ ಹಿಂಡಿಕೊಳ್ಳಿ ಮತ್ತು ಕಣ್ಣು ಮುಚ್ಚಿಕೊಂಡು ಅದರ ಮೇಲಿಡಿ.
15 ನಿಮಿಷ ಹಾಗೆ ಬಿಡಿ.
ಇದರ ಬಳಿಕ ತೆಗೆದು ಕಣ್ಣುಗಳನ್ನು ನೀರಿನಿಂದ ತೊಳೆಯಿರಿ.
ದಿನದಲ್ಲಿ 1-2 ಸಲ ಹೀಗೆ ಮಾಡಿ.

8. ಆಲೂಗಡ್ಡೆ
ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಆಲೂಗಡ್ಡೆಯು ಒಣ ಹಾಗೂ ತುರಿಕೆ ಉಂಟು ಮಾಡುವ ಕಣ್ಣುಗಳಿಗೆ ಒಳ್ಳೆಯದು. ಆಲೂಗಡ್ಡೆಯಲ್ಲಿ ಇರುವಂತಹ ಗ್ಲೈಕೊಅಲ್ಕಲೈಡ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣ ಹೊಂದಿದೆ. ಆಲೂಗಡ್ಡೆಯನ್ನು ತುರಿಕೆ ಮತ್ತು ಕಣ್ಣಿನ ಊತವಿದ್ದರೆ ಅದರ ಮೇಲೆ ನೇರವಾಗಿ ಇಡಬಹುದು.
ಏನು ಮಾಡಬೇಕು
ಹಸಿ ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿಡಿ.
ಇದನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ ಮತ್ತು ಕಣ್ಣುಗಳ ಮೇಲಿಡಿ.
15 ನಿಮಿಷ ಕಾಲ ಹಾಗೆ ಬಿಡಿ.
ಇದರ ಬಳಿಕ ಇದನ್ನು ತೆಗೆಯಿರಿ.
ದಿನದಲ್ಲಿ 2-3 ಸಲ ಹೀಗೆ ಮಾಡಿ.

9. ರೋಸ್ ವಾಟರ್
ರೋಸ್ ವಾಟರ್ ನಲ್ಲಿ ಉರಿಯೂತ ಶಮನಕಾರಿ ಮತ್ತು ಹೈಡ್ರೇಟ್ ಗುಣಗಳು ಇವೆ. ಇದು ಕಣ್ಣು ಒಣಗುವುದು ಮತ್ತು ಉರಿಯೂತ ಕಡಿಮೆ ಮಾಡುವುದು. ಕಣ್ಣು ತೊಳೆಯಲು ರೋಸ್ ವಾಟರ್ ಬಳಸಬಹುದು.
ಏನು ಮಾಡಬೇಕು
ರೋಸ್ ವಾಟರ್ ನಲ್ಲಿ ಅದ್ದಿದ ಹತ್ತಿ ಉಂಡೆಯನ್ನು ಕಣ್ಣುಗಳ ಮೇಲಿಡಿ.
15-20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೆಗೆಯಿರಿ.
ಕಣ್ಣಿನ ಡ್ರಾಪ್ಸ್ ಆಗಿ ರೋಸ್ ವಾಟರ್ ಬಳಸಬಹುದು.
ದಿನದಲ್ಲಿ 2-3 ಸಲ ಬಳಸಿ.

ಕೆಲವು ಮುನ್ನೆಚ್ಚರಿಕೆ ಕ್ರಮಗಳು
ಸನ್ ಗ್ಲಾಸ್ ಬಳಸಿಕೊಂಡು ನೇರವಾಗಿ ಸೂರ್ಯನ ಬಿಸಿಲು ಮತ್ತು ಅಲರ್ಜಿ ಉಂಟು ಮಾಡಲು ಅಂಶಗಳು ಕಣ್ಣುಗಳಿಗೆ ಬೀಳದಂತೆ ತಡೆಯಿರಿ.
ದೀರ್ಘಕಾಲ ತನಕ ಕಾಂಟೆಕ್ಟ್ ಲೆನ್ಸ್ ಬಳಸಬೇಡಿ.
ಹೈಡ್ರೇಟ್ ಆಗಿರಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ.
ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ.
ಕಣ್ಣುಗಳನ್ನು ನೀರು ಹಾಕಿಕೊಂಡು ತೊಳೆಯುತ್ತಲಿರಿ.
ಕಣ್ಣುಗಳ ಸರಿಯಾದ ಆರೈಕೆ ಮಾಡಿದರೆ ಅದರಿಂದ ತುರಿಕೆ ಮತ್ತು ಊತ ಕಡಿಮೆ ಆಗುವುದು. ತುರಿಕೆ ಹಾಗೆ ಉಳಿದರೆ ನೀವು ನೇತ್ರ ತಜ್ಞರನ್ನು ಭೇಟಿ ಮಾಡಿ.