For Quick Alerts
ALLOW NOTIFICATIONS  
For Daily Alerts

ಕುಡಿಯುವ ನೀರಿಗೆ ಎಕ್ಸ್‌ಪೆರಿ ಡೇಟ್‌ ಇದೆಯೇ?

|

ನಾವು ತಿನ್ನುವ ಅಹಾರ, ತೆಗೆದುಕೊಳ್ಳುವ ಮಾತ್ರೆ ಇವುಗಳಿಗೆಲ್ಲಾ ಎಕ್ಸ್‌ಪೆರಿ ಡೇಟ್ (ಸೇವಿಸಲು ಯೋಗ್ಯವಾದ ಕೊನೆಯ ದಿನ) ಎಂಬುವುದು ಇರುತ್ತದೆ. ಎಕ್ಸ್‌ಪೆರಿ ಡೇಟ್‌ ಮುಗಿದ ಆಹಾರ ತಿಂದರೆ ಆ ಆಹಾರ ವಿಷವಾಗುವುದು, ಸೇವಿಸಿದ ಮಾತ್ರೆ ವಿಷವಾಗುವುದು. ಆಹಾರ, ಮಾತ್ರೆಗಳಿಗೆ ಇರುವಂತೆ ನಾವು ಕುಡಿಯುವ ನೀರಿಗೆ ಎಕ್ಸ್‌ಪೆರಿ ಡೇಟ್‌ ಎಂಬುವುದು ಇದೆಯೇ? ನೀರನ್ನು ಸಂಗ್ರಹಿಸಿಟ್ಟು ಬಳಸುವುದಾದರೆ ಎಷ್ಟು ಸಮಯದವರೆಗೆ ನೀರು ಕುಡಿಯಲು ಯೋಗ್ಯವಾಗಿರುತ್ತದೆ ಎಂಬುವುದು ನೋಡೋಣ ಬನ್ನಿ:

ಇಲ್ಲಿ ನಾವು ನಲ್ಲಿಯ ಬರುವ ನೀರನ್ನು ಎಷ್ಟು ಸಮಯದವರೆಗೆ ಬಳಸಬಹುದು, ಬಾಟಲಿನಲ್ಲಿ ಸಂಗ್ರಹಿಸಿದ ಶುದ್ಧೀಕರಿಸಿದ ನೀರು ಎಷ್ಟು ಸಮಯದವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ? ಇನ್ನು ನೀರನ್ನು ಕುಡಿಯಲು ಯೋಗ್ಯವಾಗಿರುವಂತೆ ಸಂಗ್ರಹಿಸುವುದು ಹೇಗೆ ಎಂದು ನೋಡೋಣ ಬನ್ನಿ:

ಸಂಗ್ರಹಿಸಿಟ್ಟ ನಲ್ಲಿ ನೀರು

ಸಂಗ್ರಹಿಸಿಟ್ಟ ನಲ್ಲಿ ನೀರು

ನಲ್ಲಿಯಲ್ಲಿ ಬಂದಂತಹ ಕುಡಿಯಲು ಯೋಗ್ಯವಾದ ನೀರನ್ನು ಸಂಗ್ರಹಿಸಿಟ್ಟರೆ ಆರು ತಿಂಗಳವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ ಎಂಬುವುದು ಸಂಶೋಧನೆಯಿಂದ ಕೂಡ ದೃಢಪಟ್ಟಿದೆ. ಆದರೆ ಕಾರ್ಬೋನೇಟ್ ನಲ್ಲಿ ನೀರುನ್ನು ಸ್ವಲ್ಪ ದಿನ ಇಟ್ಟರೆ ಅದರ ರುಚಿಯಲ್ಲಿ ಬದಲಾವಣೆ ಉಂಟಾಗುವುದು. ಆದರೆ ಕಾರ್ಬೋನೇಟ್‌ನಿಂದಾಗಿ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಅನಿಸಿದರೂ ಈ ನೀರು ಆರು ತಿಂಗಳವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ. ನೀರನ್ನು ದೀರ್ಘಕಶಲದವರೆಗೆ ಸಂಗ್ರಹಿಸಿಡಲು ಶುದ್ಧವಾದ ಡಬ್ಬ ಅಥವಾ ಡ್ರಮ್‌ನಲ್ಲಿ ಸಂಗ್ರಹಿಸಿಡಬೇಕು, ಹಾಗೂ ನೀರು ಸಮಗ್ರಹಿಸಿಟ್ಟ ಸ್ಥಳ ತಂಪಾಗಿರಬೇಕು, ಬೆಳಕು ಬೀಳುವಂತಿರಬಾರದು, ಹಾಗಿದ್ದರೆ ತುಂಬಾ ದಿನಗಳವರೆಗೆ ನಲ್ಲಿ ನೀರು ಕುಡಿಯಲು ಯೋಗ್ಯವಾಗಿರುತ್ತದೆ.

ಬಾಟಲಿ ನೀರಿಗೆ ಎಕ್ಸ್‌ಪೆರಿ ಡೇಟ್ ಇದೆಯೇ?

ಬಾಟಲಿ ನೀರಿಗೆ ಎಕ್ಸ್‌ಪೆರಿ ಡೇಟ್ ಇದೆಯೇ?

ನ್ಯೂ ಜೆರ್ಸಿಯಲ್ಲಿ 1987ರಲ್ಲಿ ಒಂದು ಕಾನೂನು ಮಾಡಲಾಯಿತು. ಅದರ ಪ್ರಕಾರ ಕುಡಿಯುವ ಬಾಟಲಿ ನೀರಿಗೂ ಎಕ್ಸ್ಪೆರಿ ಡೇಟ್‌ ಹಾಕಲಾಯಿತು. ಸಾಮಾನ್ಯವಾಗಿ ನೀರನ್ನು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟರೆ ಆ ನೀರನ್ನು ಎರಡು ವರ್ಷದವರೆಗೆ ಬಳಸಬಹುದು. ಆದರೆ ಪ್ಲಾಸ್ಟಿಕ್ ಬಾಟಲಿನ ನೀರನ್ನು ಆರು ತಿಂಗಳ ಬಳಿಕ ಬಳಸುವುದು ಅಷ್ಟೊಂದು ಆರೋಗ್ಯಕರವಲ್ಲ. ಏಕೆಂದರೆ ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವುದಕ್ಕಿಂತ ಪ್ಲಾಸ್ಟಿಕ್‌ ಬಾಟಲಿನ ರಾಸಾಯನಿಕಗಳು ನೀರಿನ ಜೊತೆ ಬೆರೆಯುವ ಸಾಧ್ಯತೆ ಇರುವುದರಿಂದ ನೀರು ಕುಡಿಯಲು ಯೋಗ್ಯವಾಗುವುದಿಲ್ಲ. ಪ್ರತಿನತ್ಯ ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುವುದು ಆರೋಗ್ಯಕ್ಕೂ ಒಳ್ಳೆಯದಲ್ಲ.

ಶುದ್ಧೀಕರಿಸಿದ ಬಾಟಲಿ ನೀರು ಆರೋಗ್ಯಕರವಲ್ಲ

ಶುದ್ಧೀಕರಿಸಿದ ಬಾಟಲಿ ನೀರು ಆರೋಗ್ಯಕರವಲ್ಲ

ನಾವೆಲ್ಲಾ ಬಾಟಲಿನಲ್ಲಿ ಸಿಗುವ ನೀರು ಆರೋಗ್ಯಕರವೆಂದೇ ಭಾವಿಸುತ್ತೇವೆ. ಆದರೆ ಪ್ರತಿನಿತ್ಯ ಬಾಟಲಿ ನೀರು ಕುಡಿಯುವುದು ಆರೋಗ್ಯಕರವಲ್ಲ. ಆಟಲಿ ನೀರು ಕುಡಿಯುವುದರಿಂದ ದೇಹಕ್ಕೆ ರಾಶಾಯನಿಕಗಳು ಸೇರಿ ರೋಗ ಬರುತ್ತದೆ ಎಂದು ಬಾಬಾ ಅಟೋಮಿಕ್ ರಿಸರ್ಚ್‌ ಸೆಂಟರ್ ಹೇಳಿದೆ. ನಾವು ಶುದ್ಧ ನೀರೆಂದು ಪ್ರತಿದಿನ ಕುಡಿಯುವುದರಿಂದ ಆರೋಗ್ಯ ಹಾಳಾಗುವುದು. ಏಕೆಂದರೆ ಬಾಟಲಿ ನೀರನ್ನು ಶುದ್ಧೀಕರಿಸುವ ವೇಳೆ ರಾಸಾಯನಿಕಗಳನ್ನು ಬೆರೆಸುತ್ತಾರೆ. ಆ ನೀರಿನಲ್ಲಿ ಆರೋಗ್ಯಕ್ಕಿಂತ ಅನಾರೋಗ್ಯಕರ ಅಂಶವೇ ಹೆಚ್ಚಿರುತ್ತದೆ.

ಪ್ರಸಿದ್ಧ ಸೆಲೆಬ್ರಿಟಿ ನ್ಯೂಟಿಷಿಯನ್ ರುಜುತಾ ದಿವೇಕರ್‌ ಬಾಟಲಿ ನೀರಿಗಿಂತ ತಾಮ್ರದ ಬಾಟಲಿನಲ್ಲಿ ಅಥವಾ ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಕುಡಿಯುವುದು ಆರೋಗ್ಯಕರ ಎಂದಿದ್ದಾರೆ.

ನೀರನ್ನು ಸಂಗ್ರಹಿಸಿಡುವುದು ಹೇಗೆ?

ನೀರನ್ನು ಸಂಗ್ರಹಿಸಿಡುವುದು ಹೇಗೆ?

ನೀರು ಆರೋಗ್ಯಕರವಾಗಿರಲು ಅದನ್ನು ಸಂಗ್ರಹಿಸಿಡುವ ವಿಧಾನ ತುಂಬಾ ಮುಖ್ಯ. ನೀರು ಕಲುಷಿತವಾಗಿದ್ದರೆ ಆ ನೀರನ್ನು ಕುಡಿದರೆ ತಲೆಸುತ್ತು, ವಾಂತಿ, ಭೇದಿ ಉಂಟಾಗಬಹುದು. ನೀರನ್ನು ಸಮಗ್ರಹಿಸಿಡುವಾಗ ಮಾಡುವ ಸಾಮಾನ್ಯ ತಪ್ಪೆಂದರೆ ಅದನ್ನು ಬೆಚ್ಚಗಿನ ಸ್ಥಳದಲ್ಲಿ ಅಥವಾ ಬಿಸಿಲು ಬೀಳುವ ಸ್ಥಳದಲ್ಲಿ ಇಡುವುದು. ಬಿಸಿಯಾದ ಜಾಗದಲ್ಲಿ ಇಟ್ಟರೆ ಪ್ಲಾಸ್ಟಿಕ್‌ ಬಿಸಿಯಾದಾಗ ಬಿಡುಗಡೆಯಾಗುವ ರಾಸಾಯನಿಗಳು ನೀರಿನ ಜೊತೆ ಬೆರೆಯುತ್ತದೆ, ಈ ನೀರನ್ನು ಕುಡಿಯುವುದರಿಂದ ಅನಾರೋಗ್ಯ ಉಂಟಾಗುವುದು. ಇನ್ನು ಯಾವುದೇ ಬಗೆಯ ರಾಸಾಯನಿಗಳಿಂದ ನೀರನ್ನು ದೂರವಿಡಿ. ನೀರನ್ನು ಸಂಗ್ರಹಿಸಿಡುವ ಪಾತ್ರೆಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಸಂಗ್ರಹಿಸಿಟ್ಟ ನೀರನ್ನು ಹಾಗೇ ಕುಡಿಯುವುದಕ್ಕಿಂತ ಕುದಿಸಿ ಕುಡಿಯುವುದು ಒಳ್ಳೆಯದು.

English summary

Is There Expiry Date To Drinking Water

Do you know how much time you can store tap water for drinking? Is't bottle water is really healthy to know this read on this article.
Story first published: Wednesday, January 29, 2020, 18:20 [IST]
X
Desktop Bottom Promotion