For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಕೊರೊನಾ 4ನೇ ಅಲೆ ಶುರುವಾಗಿದೆಯೇ? ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ

|

ಕೆಲವು ತಿಂಗಳವರೆಗೆ ಸೈಲೆಂಟ್‌ ಆಗಿದ್ದ ಕೊರೊನಾ ಮತ್ತೆ ತನ್ನ ಆರ್ಭಟ ಶುರು ಮಾಡಿದೆ. ಕೊರೊನಾ ಇನ್ನೇನು ಸಂಪೂರ್ಣ ಹೋಗಿ ಬಿಡ್ತು ಇನ್ನು ಭಯವಿಲ್ಲ ಎಂದು ಎಲ್ಲಾ ನಿಟ್ಟುಸಿರು ಬಿಟ್ಟಿದ್ದರು, ಆದರೆ ಭಾರತದಲ್ಲಿ ನಿಧಾನಕ್ಕೆ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಇದೀಗ ಅದರ ವೇಗ ಹೆಚ್ಚಿದೆ. ಭಾರತದಲ್ಲಿ ಕೊರೊನಾ ಕೇಸ್‌ ಶೇ. 40ರಷ್ಟು ಹೆಚ್ಚಾಗುತ್ತಿದೆ ಎಂದು ವರದಿ ಹೇಳಿದೆ. ಕಳೆದ 93 ದಿನಗಳಲ್ಲಿಯೇ ಬುಧವಾರ ಮೊದಲ ಬಾರಿಗೆ ಕೊರೊನಾ ಕೇಸ್‌ 5000 ದಾಟಿದೆ.

ಭಾರತದಲ್ಲಿ ಈಗಾಗಲೇ 28,857 ಕೇಸ್‌ಗಳಿದ್ದು ಹೊಸ ಕೇಸ್‌ಗಳಲ್ಲಿ ಮಹಾರಾಷ್ಟ್ರದಲ್ಲಿಯೇ 2000 ಕೇಸ್‌ಗಳು ಪತ್ತೆಯಾಗಿದೆ. ಇದೀಗ ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಕೇಸ್‌ಗಳು ಹೆಚ್ಚಾಗುತ್ತಿದೆ. ಇವೆಲ್ಲಾ ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆಯ ಲಕ್ಷಣವಿರಬಹುದೇ? ಈ ಸಂಶಯ ಈಗ ಹೆಚ್ಚಿನವರಿಗೆ ಕಾಡ್ತಾ ಇದೆ.

ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆಯ ಸಾಧ್ಯತೆ ಇದೆಯೇ?

ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆಯ ಸಾಧ್ಯತೆ ಇದೆಯೇ?

ತುಂಬಾ ತಜ್ಞರ ಪ್ರಕಾರ ಈಗ ಕಂಡು ಬರುತ್ತಿರುವುದು ಕೊರೊನಾ ನಾಲ್ಕನೇ ಅಲೆಯ ಸಾಧ್ಯತೆ ಕಡಿಮೆ. ಭಾರತದಲ್ಲಿ ಈಗ ಒಮಿಕ್ರಾನ್‌ ತಳಿ ಕಂಡು ಬರುತ್ತಿದೆ. ಈ ವೈರಸ್‌ ಭಾರತದಲ್ಲಿ ಈಗಾಗಲೇ ಒಮ್ಮೆ ಹೆಚ್ಚಾಗಿ ಮತ್ತೆ ಕಡಿಮೆಯಾಗಿರುವುರಿಂದ ಈ ರೂಪಾಂತರದಿಂದ ಮತ್ತೊಮ್ಮೆ ಕೊರೊನಾ ಹೆಚ್ಚಾಗಲು ಸಾಧಯನೇ ಇಲ್ಲ ಅಂತಿದ್ದಾರೆ ತಜ್ಞರು.

ಕೋವಿಡ್ 19ನ ಲಕ್ಷಣಗಳು

ಕೋವಿಡ್ 19ನ ಲಕ್ಷಣಗಳು

* ಶೀತ, ಕೆಮ್ಮು, ಅತ್ಯಧಿಕ ಜ್ವರ, ಸುಸ್ತು, ತಲೆನೋವು, ವಾಂತಿ, ಮೈಕೈ ನೋವು ಈ ರೀತಿಯ ಲಕ್ಷಣಗಳು 2-3 ದಿನದಿಂದ ಕಂಡು ಬರುತ್ತಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿ.

* ಹೊಟ್ಟೆ ಹಾಳಾದರೆ, ಯಾವುದಕ್ಕೂ ಗಮನ ನೀಡಲು ಸಾಧ್ಯವಾಗದಿರುವುದು, ಕಿರಿಕಿರಿ, ಎದೆಯಲ್ಲಿ ನೋವು, ಮೈಯಲ್ಲಿ ಕಜ್ಜಿ, ಕೈ-ಕಾಲುಗಳಲ್ಲಿ ತುಂಬಾ ನೋವು ಇವೆಲ್ಲಾ ಕೋವಿಡ್‌ನ ಲಕ್ಷಣವಾಗಿದೆ.

* ಕೋವಿಡ್‌ 19 ಪಾಸಿಟಿವ್‌ ಬಂದ್ರೆ ಅದನ್ನು ಮುಚ್ಚಿಡಬೇಡಿ, ನಿಮ್ಮ ಕಾಂಟ್ಯಾಕ್ಟ್‌ಗೆ ಬಂದವರಿಗೆ ತಿಳಿಸಿ, ನೀವು ಐಸೋಲೇಟ್‌ ಆಗಿದ್ದು ಚಿಕಿತ್ಸೆ ಪಡೆಯಿರಿ.

ಕೇಸ್‌ ಬರುತ್ತಿದೆ ಎಂದ ಮಾತ್ರ ಕೋವಿಡ್‌ 4ನೇ ಅಲೆಯಲ್ಲ ಏಕೆ?

ಕೇಸ್‌ ಬರುತ್ತಿದೆ ಎಂದ ಮಾತ್ರ ಕೋವಿಡ್‌ 4ನೇ ಅಲೆಯಲ್ಲ ಏಕೆ?

ಇದ್ದಕ್ಕಿದ್ದಂತೆ ಕೊರೊನಾ ಕೇಸ್‌ ಹೆಚ್ಚುತ್ತಿರುವುದರ ಬಗ್ಗೆ ಡಾ. ಸಂಜಯ್‌ ರೈ , ಏಮ್ಸ್‌ನ ಪ್ರೊಫೆಸರ್‌( Centre for Community Medicine dept) ಮಾತನಾಡುತ್ತಾಕೊರೊನಾ ಕೇಸ್‌ಗಳು ಹೆಚ್ಚಾಗಬಹುದು ಆದರೆ ಅದು ದೊಡ್ಡ ವಿಷಯವಲ್ಲ, ಏಕೆಂದರೆ ಕೊರೊನಾವೈರಸ್‌ ರೂಪಾಂತರ ತಾಳುತ್ತಿರುತ್ತದೆ, ಆದರೆ ಸಾವು ಹಾಗೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ಮಾತ್ರ ಕೊರೊನಾ ನಾಲ್ಕನೇ ಅಲೆ ಬಗ್ಗೆ ಗಮನ ಹರಿಸಬೇಕಾಗಿದೆ.

ಈ ಬಗೆಯ ವೈರಸ್‌ ಬೇಗನೆ ಇಲ್ಲವಾಗಲ್ಲ, ಬರುತ್ತಲೇ ಇರುತ್ತದೆ ಆದರೆ ಅದನ್ನು ನಿಭಾಯಿಸಿಕೊಂಡು ಹೋಗುವುದನ್ನು ಕಲಿಯಬೇಕಾಗಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಕೊರೊನಾಎರಡನೇ ಅಲೆಗೆ ಹೋಲಿಸಿದರೆ 3ನೇ ಅಲೆಯಲ್ಲಿ ಹಾಗೂ ಈಗ ಭಾರತದಲ್ಲಿ ಪರಿಸ್ಥಿತಿ ಕೆಟ್ಟದಾಗಿಲ್ಲ ಎಂಬುವುದೇ ಸಮಧಾನಕರ. ಆದರೆ ನಿರ್ಲಕ್ಷ್ಯ ಬೇಡ, ಕೊರೊನಾ ನಿಯಮಗಳನ್ನು ಪಾಲಿಸಿ.

English summary

Is India Looking Towards The COVID 4th Wave: Check Covid-19 Symptoms in Kannada

Is India looking towards the COVID 4th wave: Check Covid-19 symptoms in Kannada Read on...
Story first published: Thursday, June 9, 2022, 17:28 [IST]
X
Desktop Bottom Promotion