For Quick Alerts
ALLOW NOTIFICATIONS  
For Daily Alerts

ಡೆಲ್ಮಿಕ್ರಾನ್‌ ಒಮಿಕ್ರಾನ್‌ಗಿಂತ ಹೇಗೆ ಭಿನ್ನವಾಗಿದೆ? ಭಾರತದಲ್ಲಿಯೂ ಕಾಣಿಸಿಕೊಂಡಿದೆಯೇ?

|

ದೇಶಕ್ಕೆ ಈಗ ಒಮಿಕ್ರಾನ್‌ ಭೀತಿ ಎದುರಾಗಿದೆ, ವಾರಗಳ ಹಿಂದೆ ಬೆರಳೆಣಿಕೆಯಷ್ಟು ಇದ್ದ ಕೇಸ್‌ಗಳು ಈಗ 300ರ ಗಟಿ ದಾಟಿದೆ. ಕೆಲವರು ವಿದೇಶದಿಂದ ಬಂದವರು ಆದರೆ ಇನ್ನು ಕೆಲವರಿಗೆ ಎಲ್ಲಿಂದ ತಗುಲಿತು ಎಂಬುವುದೇ ತಿಳಿದು ಬಂದಿಲ್ಲ. ವಿದೇಶದಿಂದ ಬಂದವರ ಸಂಪರ್ಕದಲ್ಲಿ ಇಲ್ಲದವರಲ್ಲೂ ಒಮಿಕ್ರಾನ್ ಕಂಡು ಬಂದಿದೆ.

Delmicron

ತಜ್ಞರು ಭಾರತದಲ್ಲಿ 3ನೇ ಅಲೆಗೆ ಒಮಿಕ್ರಾನ್‌ ಕಾರಣವಾಗಲಿದೆ ಎಂದು ಹೇಳಿದ್ದಾರೆ. 2022 ಫೆಬ್ರವರಿಯಲ್ಲಿ ಕೊರೊನಾ 3ನೇ ಅಲೆ ಕಂಡು ಬರಲಿದೆ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವುಗಳ ಜೊತೆಗೆ ಇದೀಗ ಮತ್ತೊಂದು ಹೊಸ ರೂಪಾಂತರ ಕಂಡು ಬಂದಿದೆ, ಇದಕ್ಕೆ ಡೆಲ್ಮಿಕ್ರಾನ್‌ ಎಂದು ಹೆಸರಿಡಲಾಗಿದೆ.

ಈ ಡೆಲ್ಮಿಕ್ರಾನ್‌ ಎಂದರೇನು? ಇದು ಕೂಡ ಅಪಾಯಕಾರಿಯೇ ಎಂದು ನೋಡೋಣ ಬನ್ನಿ:

ಡೆಲ್ಮಿಕ್ರಾನ್‌ ಎಂದರೇನು?

ಡೆಲ್ಮಿಕ್ರಾನ್‌ ಎಂದರೇನು?

ಡೆಲ್ಮಿಕ್ರಾನ್‌ ಡಬಲ್ ರೂಪಾಂತರವಾಗಿದ್ದು ಪಶ್ಚಿಮದಲ್ಲಿ ಈ ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಇದು ಡೆಲ್ಟಾ ಹಾಗೂ ಒಮಿಕ್ರಾನ್‌ನ ಮಿಶ್ರರೂಪವಾಗಿದೆ. ಈ ರೂಪಾಂತರ ಭಾರತ ಸೇರಿ ವಿಶ್ವದ ಎಲ್ಲೆಡೆ ಪತ್ತೆಯಾಗಿದ. ಭಾರತದಲ್ಲಿ ಡೆಲ್ಟಾ ಹೆಚ್ಚಿನವರಿಗೆ ತಗುಲಿತ್ತು. ಆದ್ದರಿಂದ ಒಮಿಕ್ರಾನ್‌ ಭಾರತದಲ್ಲಿ ಯಾವ ರೀತಿ ಪ್ರಭಾವ ಬೀರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಡೆಲ್ಟಾಕ್ಕಿಂತ ಒಮಿಕ್ರಾನ್‌ ಹೆಚ್ಚು ಕಾಣಲಾರಂಭಿಸಿದರೆ 3ನೇ ಅಲೆ ಉಂಟಾಗುವುದು, ಅಲ್ಲದೆ ಡೆಲ್ಮಿಕ್ರಾನ್‌ ಯಾವ ರೀತಿ ಪ್ರಭಾವ ಬೀರುವುದು ಎಂದು ಹೇಳಲು ಸಾಧ್ಯವಿಲ್ಲ.

ಡೆಮಿಕ್ರಾನ್‌ ಒಮಿಕ್ರಾನ್‌ಗಿಂತ ಹೇಗೆ ಭಿನ್ನವಾಗಿದೆ?

ಡೆಮಿಕ್ರಾನ್‌ ಒಮಿಕ್ರಾನ್‌ಗಿಂತ ಹೇಗೆ ಭಿನ್ನವಾಗಿದೆ?

ಒಮಿಕ್ರಾನ್‌ ಅತ್ಯಂತ ವೇಗವಾಗಿ ಹರಡುವ ಕೊರೊನಾ ರೂಪಾಂತರವಾಗಿದೆ, ಇದು ಮೊದಲಿಗೆ ದಕ್ಷಿಣ ಆಫ್ರಿಕದಲ್ಲಿ ಕಂಡು ಬಂತು, ಹೀಗೆ ವಿಶ್ವದ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಆದರೆ ಒಮಿಕ್ರಾನ್‌ನಲ್ಲಿ ಡೆಲ್ಟಾಗಿಂತ ಸಾವಿನ ಸಂಖ್ಯೆ ಕಡಿಮೆ ಇದೆ.

ಆದರೆ ಡೆಲ್ಮಿಕ್ರಾನ್‌ ಎಂಬುವುದು ಡೆಲ್ಟಾ ಹಾಗೂ ಒಮಿಕ್ರಾನ್ ಸೇರಿ ಆದ ರೂಪಾಂತರವಾಗಿದೆ, ಆದ್ದರಿಂದ ಇದು ಒಮಿಕ್ರಾನ್‌ಗಿಂತ ಭಿನ್ನವಾಗಿದೆ.

 ಒಮಿಕ್ರಾನ್‌ನ ಲಕ್ಷಣಗಳೇನು?

ಒಮಿಕ್ರಾನ್‌ನ ಲಕ್ಷಣಗಳೇನು?

ಒಮಿಕ್ರಾನ್‌ ರೋಗಿಗಳಲ್ಲಿ ಕಂಡು ಬರುವ 4 ಸಾಮಾನ್ಯ ಲಕ್ಷಣಗಳೆಂದರೆ

* ಕೆಮ್ಮು

* ತಲೆಸುತ್ತು

* ತಲೆನೋವು

* ಶೀತ

ಇದರ ಜೊತೆಗೆ ಮೈಕೈ ನೋವು, ಗಂಟಲು ಕೆರೆತ, ವಾಂತಿ, ಬೇಧಿ ಈ ರೀತಿಯ ಲಕ್ಷಣಗಳು ಕಂಡು ಬರುತ್ತಿವೆ, ಇನ್ನು ಕೆಲವರಲ್ಲಿ ಯಾವ ಲಕ್ಷಣಗಳೂ ಕಂಡು ಬರುವುದು.

ತಜ್ಞರು ಏನು ಹೇಳುತ್ತಿದ್ದಾರೆ?

ತಜ್ಞರು ಏನು ಹೇಳುತ್ತಿದ್ದಾರೆ?

ಒಮಿಕ್ರಾನ್‌ ಭಾರತದಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಈ ವೈರಸ್‌ ತಗುಲದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ.

English summary

Is Delmicron A New Covid Variant? Know symptoms, treatment and how it's different from Omicron in Kannada

What is delmicron: Is Delmicron A New Covid Variant? Know symptoms, treatment and how it's different from Omicron in Kannada. Read on.
Story first published: Thursday, December 23, 2021, 19:54 [IST]
X
Desktop Bottom Promotion