For Quick Alerts
ALLOW NOTIFICATIONS  
For Daily Alerts

ದಿನಾ 10 ನಿಮಿಷ ಈ ಯೋಗಾಸನಗಳನ್ನು ಮಾಡಿದರೆ ಹೊಟ್ಟೆ ಬೊಜ್ಜು ಕರಗುವುದು

|

ಮಕ್ಕಳು, ಯುವಕರು, ವಯಸ್ಸಾದವರು ಎಂದು ವಯಸ್ಸಿನ ಬೇಧವಿಲ್ಲದೆ ಎಲ್ಲಾ ಪ್ರಾಯದವರಲ್ಲೂ ಈ ಬೊಜ್ಜಿನ ಸಮಸ್ಯೆ ಕಂಡು ಬರುತ್ತಿದೆ. ಬೊಜ್ಜಿನ ಸಮಸ್ಯೆ ಕೆಲವರಿಗೆ ಹಾರ್ಮೋನ್‌ ಅಸಮತೋಲನದಿಂದ ಉಂಟಾಗಿದ್ದರೆ ಬಹುತೇಕರಿಗೆ ಜೀವನಶೈಲಿಯಿಂದ ಬಂದ ಸಮಸ್ಯೆಯಾಗಿದೆ.

ಬೊಜ್ಜು ಹೊಟ್ಟೆ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ನಿಧಾನಕ್ಕೆ ಹೊಟ್ಟೆ ಬೊಜ್ಜು ಬರುವಾಗ ಅದರತ್ತ ಲಕ್ಷ್ಯ ನೀಡಿ ಆಗಲೇ ಕರಗಿಸುವವರು ತುಂಬಾ ಕಡಿಮೆ, ಬೊಜ್ಜಿನ ಗಾತ್ರ ಅಧಿಕವಾದಾಗ ಅದನ್ನಿ ಕರಗಿಸಲು ಕಸರತ್ತು ಮಾಡುತ್ತಾರೆ, ಆದರೆ ಹೊಟ್ಟೆ ಬೊಜ್ಜು ದೇಹದ ಇತರ ಭಾಗಗಳ ಬೊಜ್ಜಿನಂತಲ್ಲ ತುಂಬಾ ಹಠಮಾರಿ, ಸುಲಭವಾಗಿ ಕರಗುವುದಿಲ್ಲ.

ನೀವು ದಿನ ನಿತ್ಯ ಕೆಲವೊಂದು ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ಹೊಟ್ಟೆ ಬೊಜ್ಜು ಕರಗಿಸಿ ಸುಂದರ ದೇಹದಾಕೃತಿ ಪಡೆಯಬಹುದು. ಈ ಆಸನಗಳು ತುಂಬಾ ಸರಳವಾಗಿದ್ದು ಬನ್ನಿ, ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

1. ನೌಕಾಸಾನ

1. ನೌಕಾಸಾನ

ನೌಕಾಸನ (Boat pose)

ನೌಕಾಸನ ಕಾಲುಗಳು, ಹಿಂಬದಿ, ಕಿಬ್ಬೊಟ್ಟೆಯನ್ನು ಬಲಪಡಿಸುತ್ತದೆ. ಇದು ಪೆಲ್ವಿಕ್ ಸ್ನಾಯುಗಳನ್ನು ಬಿಗಿಯಾಗಿಸುವುದು. ಈ ಆಸನ ಹೊಟ್ಟೆಯ ಬೊಜ್ಜು ಕರಗಿಸುವುದು ಹಾಗೂ ತ್ಮವಿಶ್ವಾಸ ಹೆಚ್ಚಿಸುವುದು. ಈ ಆಸನವನ್ನು ಪ್ರತಿನಿತ್ಯ ಒಂದು ನಿಮಿಷ ಅಭ್ಯಾಸ ಮಾಡಿ.

2. ಅಧೋಮುಖ ಶ್ವಾನಾಸನ

2. ಅಧೋಮುಖ ಶ್ವಾನಾಸನ

ಇದು ಹೆಸರೇ ಸೂಚಿಸುವಂತೆ ನಾಯಿ ಭಂಗಿಯ ಆಸನವಾಗಿದೆ. ಅಧೋಮುಖ ಶ್ವಾನಾಸನ ಅಂದ್ರೆ ನಾಯಿ ಮುಂದೆ ಬಾಗಿದಾಗ ಹೇಗೆ ಕಾಣುತ್ತದೋ ಅಂಥ ಆಸನವಾಗಿದೆ. ಈ ಆಸನ ಕೂಡ ಹಠಮಾರಿ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಸಹಕಾರಿ.

ಮಾಡುವುದು ಹೇಗೆ?

ನಾಯಿಯಂತೆ ನಿಮ್ಮ ಮೊಣಕಾಲು ಅನ್ನು ಮ್ಯಾಟ್‌ ಊರಿ ನಿಧಾನಕ್ಕೆ ಬಾಗಿ ಕೈಗಳನ್ನು ಮ್ಯಾಟ್‌ ಮೇಲಿಡಿ. ಸೊಂಟವನ್ನು ಮೇಲಕ್ಕೆ ಎತ್ತಿ. ಕುತ್ತಿಗೆ ಕೈಗಳ ಒಳಗೆ ಬರುವಂತೆ ಇರಬೇಕು, ಭಾಗಿ ನಿಮ್ಮ ನಾಭಿ ಕಡೆ ನೋಟವನ್ನಡಿ. ಈ ರೀತಿ ಒಂದು ನಿಮಿಷ ಇರಿ. ನಂತರ ವಿಶ್ರಾಂತಿ ತೆಗೆದುಕೊಳ್ಳಿ.

3. ಪವನ ಮುಕ್ತಾಸನ

3. ಪವನ ಮುಕ್ತಾಸನ

ಈ ಆಸನ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಈ ಆಸನ ಸೊಂಟದ ನೋವು ಕಡಿಮೆ ಮಾಡಲು ಕೂಡ ಸಹಕಾರಿ. ಅಲ್ಲದೆ ಹಿಂಬದಿ ಹಾಗೂ ತೊಡೆಗಳ ಮಾಂಸ ಖಂಡಗಳನ್ನು ಕೂಡ ಬಿಗಿಯಾಗಿಸುತ್ತದೆ.

ಮಾಡುವುದು ಹೇಗೆ?

ಮ್ಯಾಟ್‌ ಮೇಲೆ ನೇರವಾಗಿ ಮಲಗಿ ಕಾಲುಗಳನ್ನು ಮಡಚಿ, ಎರಡೂ ಕೈಗಳಿಂದ ಕಾಲುಗಳನ್ನು ಎಳೆದು ಎದೆಭಾಗಕ್ಕೆ ತನ್ನಿ. ತಲೆಯನ್ನು ಕಾಲುಗಳ ನಡುವೆ ಇಡಲು ಅಥವಾ ಸಮೀಪಕ್ಕೆ ತರಲು ಪ್ರಯತ್ನಿಸಿ. ಈ ಭಂಗಿ ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರಿಗೆ ಕೂಡ ತುಂಬಾನೇ ಸಹಕಾರಿ. ಈ ವ್ಯಾಯಾಮ ಕೂಡ 1 ನಿಮಿಷ ಮಾಡಿದರೆ ಸಾಕು.

4. ಉತ್ಥಾನಾಸನ

4. ಉತ್ಥಾನಾಸನ

ಈ ಆಸನ ಕೂಡ ಹೊಟ್ಟೆಯನ್ನು ಬಿಗಿಯಾಗಿಸುವುದು, ಬೊಜ್ಜು ಕರಗಿಸುವಲ್ಲಿ ಸಹಕಾರಿ ಹಾಗೂ ತುಂಬಾ ಸರಳವಾದ ಆಸನವಾಗಿದೆ. ಮ್ಯಾಟ್‌ ಮೇಲೆ ನೇರವಾಗಿ ನಿಂತು, ನಿಧಾನಕ್ಕೆ ಉಸಿರು ಎಳೆಯುತ್ತಾ ಕೈಗಳನ್ನು ಮೇಲೆಕ್ಕೆ ಎತ್ತಿ ಹಿಂದೆಕ್ಕೆ ಭಾಗಿ. ಈ ಭಂಗಿ ಕೂಡ 1 ನಿಮಿಷ ಅಭ್ಯಾಸ ಮಾಡಿ ನಂತರ ಸಮಸ್ಥಿತಿಗೆ ಅಂದ್ರೆ ಮೊದಲಿನ ಸ್ಥಿತಿಗೆ ಬನ್ನಿ.

5. ಪಶ್ಚಿಮತ್ತೋಸಾನ

5. ಪಶ್ಚಿಮತ್ತೋಸಾನ

ಈ ಆಸನ ಕೂಡ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗಿದೆ. ಈ ಆಸನದಲ್ಲಿ ಕಾಲುಗಳನ್ನು ಮುಂದೆಕ್ಕೆ ಚಾಚಿ ಕೂರಬೇಕು, ನಂತರ ನಿಧಾನಕ್ಕೆ ಬಾಗಿ ಹೆಬ್ಬರಳನ್ನು ಹಿಡಿಯಬೇಕು, ತಲೆ ಮಂಡಿಗೆ ತಾಗುವಂತಿದ್ದರೆ ಒಳ್ಳೆಯದು.

ಇದನ್ನು ಕೂಡ ಒಂದು ನಿಮಿಷ ಅಭ್ಯಾಸ ಮಾಡಿ.

ಸಲಹೆ: ಈ ಆಸನಗಳನ್ನು ನೀವು ಪ್ರತೀದಿನ ಅಭ್ಯಾಸ ಮಾಡಿ. ಪ್ರತೀ ಆಸನ ಮಾಡಿದ ಮೇಲೆ 1 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ಈ ಆಸನಗಳು ದೇಹಕ್ಕೆ ಪ್ಲಕ್ಸಿಬಿಲಿಟಿ ನೀಡುವುದರ ಜೊತೆಗೆ ಬೊಜ್ಜು ಕರಗಿಸಿ ಸಮತಟ್ಟಾದ ಹೊಟ್ಟೆ ನಿಮ್ಮದಾಗಿಸುವುದು. ಇನ್ನು ಆ ಆಸನಗಳು ಕ್ಲಿಷ್ಟಕರವಲ್ಲದ ಕಾರಣ ನೀವು ಯೂಟ್ಯೂಬ್‌ ನೋಡಿಯೂ ಕೂಡ ಕಲಿಯಬಹುದಾಗಿದೆ.

English summary

International Yoga Day 2021 : Yoga poses to reduce belly fat

International Yoga Day 2021 : Yoga poses to reduce belly fat, read on...
X
Desktop Bottom Promotion