For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ಕುರಿತು ಕೆಲ ಆಸಕ್ತಿಕರ ಸಂಗತಿಗಳು

|

ಕೊಲೆಸ್ಟ್ರಾಲ್ ಎಂದರೆ ಅದು ದೇಹಕ್ಕೆ ಹಾನಿಕಾರಕ ಎಂದೇ ಅನೇಕರು ಭಾವಿಸಿರುತ್ತಾರೆ, ಆದರೆ ಕೊಲೆಸ್ಟ್ರಾಲ್‌ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಎರಡೂ ಇರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾದರೆ ಆಗ ದೇಹದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಇನ್ನು ನಮ್ಮ ದೇಹದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಮೂರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.

ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿರುವ ಲೈಂಗಿಕ ರಸದೂತಗಳ ಉತ್ಪಾದನೆಗೆ ನೆರವಾಗುತ್ತದೆ
ನಮ್ಮ ದೇಹದ ಅಂಗಾಂಶಗಳ ನಿರ್ಮಾಣದ ತಳಹದಿಯಾಗಿದೆ.
ಯಕೃತ್ ನಲ್ಲಿ ಪಿತ್ತರಸದನೆಗೆ ನೆರವಾಗುತ್ತದೆ

ಕೊಲೆಸ್ಟ್ರಾಲ್ ಅನ್ನು ಎಲ್ ಡಿ ಎಲ್ ಮತ್ತು ಹೆಚ್ ಡಿ ಎಲ್ ಎಂದು ವಿಂಗಡಿಸಲಾಗಿದೆ. ಈ ಕೊಲೆಸ್ಟ್ರಾಲ್‌ಗಳಲ್ಲಿ ಯಾವುದು ಒಳ್ಳೆಯದು? ಕೊಲೆಸ್ಟ್ರಾಲ್ ಎಷ್ಟು ಪ್ರಮಾಣದಲ್ಲಿ ಇದ್ದರೆ ಒಳ್ಳೆಯದು, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಗಟ್ಟುವುದು ಹೇಗೆ ಎಂಬ ಮಾಹಿತಿ ಈ ಲೇಖನದಲ್ಲಿದೆ:

ಎಲ್ ಡಿ ಎಲ್ ಮತ್ತು ಹೆಚ್ ಡಿ ಎಲ್ ನಡುವಣ ವ್ಯತ್ಯಾಸ

ಎಲ್ ಡಿ ಎಲ್ ಮತ್ತು ಹೆಚ್ ಡಿ ಎಲ್ ನಡುವಣ ವ್ಯತ್ಯಾಸ

ಕೊಲೆಸ್ಟ್ರಾಲ್ ಬಗ್ಗೆ ಮಾತನಾಡುವವರು LDL ಮತ್ತು HDL ಎಂಬ ಪದಗಳನ್ನು ಬಳಸಿಯೇ ಬಳಸುತ್ತಾರೆ. ಇವೆರಡೂ ಪದಗಳ ಎರಡನೆಯ ಎಲ್ ಎಂಬುದು ಲಿಪೋಪ್ರೋಟೀನ್ ಎಂಬ ಪದವನ್ನು ಪ್ರತಿನಿಧಿಸುತ್ತವೆ. ಉಳಿದಂತೆ LD ಅಂದರೆ ಲೋ ಡೆನ್ಸಿಟಿ ಅಥವಾ ಕಡಿಮೆ ಸಾಂದ್ರತೆಯ, HD ಅಂದರೆ ಹೈ ಡೆನ್ಸಿಟಿ ಅಥವಾ ಅಧಿಕ ಸಾಂದ್ರತೆಯ ಲಿಪೋಪ್ರೋಟೀನ್ ಎಂದು ಕರೆಯಬಹುದು. ಈ ಲಿಪೋಪ್ರೋಟೀನುಗಳು ಕೊಬ್ಬುಗಳ ಕಣಗಳಿಂದ ತಯಾರಾದ ಸಂಯುಕ್ತಗಳಾಗಿವೆ ಹಾಗೂ ರಕ್ತದ ಮೂಲಕ ನಮ್ಮ ದೇಹದಲ್ಲೆಲ್ಲಾ ಪ್ರವಹಿಸಿ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ.

ಇದರಲ್ಲಿ ಎಲ್ ಡಿ ಎಲ್ ಎಂಬುದು 'ಕೆಟ್ಟ' ಎಂಬ ವಿಶೇಷಣವನ್ನು ಪಡೆದಿದೆ. ಹೆಚ್ ಡಿ ಎಲ್ ಅನ್ನು 'ಒಳ್ಳೆಯ' ಕೊಲೆಸ್ಟ್ರಾಲ್ ಎಂದು ಪರಿಗಣಿಸಲ್ಪಡುತ್ತದೆ.

ಏಕಾಗಿ ಎಲ್ ಡಿ ಎಲ್ ಕೆಟ್ಟದ್ದು?

ಏಕಾಗಿ ಎಲ್ ಡಿ ಎಲ್ ಕೆಟ್ಟದ್ದು?

'ಕೆಟ್ಟ' ಎಂಬ ವಿಶೇಷಣವನ್ನು ಪಡೆಯಲು ಇದರ ಅಂಟಿಕೊಳ್ಳುವ ಗುಣವೇ ಕಾರಣ, ಹೀಗೆ ಎಲ್ಲೆಲ್ಲಿ ಇದು ಅಂಟಿಕೊಳ್ಳುತ್ತದೆಯೋ ಆ ನರವನ್ನು ಪೆಡಸಾಗಿಸುತ್ತದೆ.

ಅಮೇರಿಕನ್ ಹೃದಯ ಸಂಘಟನೆಯ ಪ್ರಕಾರ, ಎಲ್ ಡಿ ಎಲ್ ರಕ್ತದ ಮೂಲಕ ಪ್ರವಹಿಸುವಾಗ ನರಗಳ ಒಳಭಾಗದಲ್ಲೆಲ್ಲಾ ಅಂಟಿಕೊಂಡು ಎರಡು ಬಗೆಯ ತೊಂದರೆಗಳನ್ನು ಉಂಟು ಮಾಡುತ್ತದೆ. ಇವೆರಡೂ ಏಕಸಮಾನವಾಗಿ ಆರೋಗ್ಯಕ್ಕೆ ಮಾರಕವಾಗಿವೆ.

ಮೊದಲನೆಯ ತೊಂದರೆ ಎಂದರೆ ಈ ಮೂಲಕ ನರದ ಒಳಭಾಗದ ವ್ಯಾಸವನ್ನು ಕುಗ್ಗುತ್ತದೆ. ಅಂದರೆ, ಈ ನರದ ಮೂಲಕ ಪ್ರವಹಿಸುವ ರಕ್ತದ ಪ್ರಮಾಣವೂ ಕುಗ್ಗುತ್ತದೆ, ತನ್ಮೂಲಕ ಈ ರಕ್ತದ ಮೂಲಕ ಬರಬೇಕಾಗಿದ್ದ ಆಮ್ಲಜನಕವೂ ಕಡಿಮೆಯಾಗುತ್ತದೆ. ಎರಡನೆಯ ತೊಂದರೆ ಎಂದರೆ ಇದು ನರಗಳ ಒಳಗೆ ರಕ್ತ ಹೆಪ್ಪುಗಟ್ಟಲು ಕಾರಣವಗಬಹುದು. ಹೀಗೆ ಹೆಪ್ಪುಗಟ್ಟಿದ ರಕ್ತ ಅತಿ ಅಪಾಯಕಾರಿಯಾಗಿದೆ. ಇದು ಯಾವಾಗ ರಕ್ತದೊಡನೆ ಪ್ರವಹಿಸುತ್ತಾ ನರ ಕಿರಿದಾಗಿರುವಲ್ಲಿ ರಕ್ತಪ್ರವಾಹಕ್ಕೆ ತಡೆ ಉಂಟು ಮಾಡಬಹುದು. ತನ್ಮೂಲಕ ಹೃದಯಾಘಾತ ಅಥವಾ ಸ್ತಂಭನವೂ ಎದುರಾಗಬಹುದು.

ರಕ್ತದಲ್ಲಿ ಕೊಲೆಸ್ಟಾಲ್ ಮಟ್ಟವನ್ನು ಪರಿಗಣಿಸುವುದಾದರೆ ಇದು ಉತ್ತಮ ಆರೋಗ್ಯಕ್ಕೆ ಪ್ರತಿ ಡೆಸಿಲೀಟರ್ ನಲ್ಲಿ 100 ಮಿಲಿಗ್ರಾಂ (mg/dL) ಗಿಂತಲೂ ಕಡಿಮೆ ಇರಬೇಕು .

ಹಾಗಾದರೆ ಹೆಚ್ ಡಿ ಎಲ್ ಏಕೆ ಒಳ್ಳೆಯದು?

ಹಾಗಾದರೆ ಹೆಚ್ ಡಿ ಎಲ್ ಏಕೆ ಒಳ್ಳೆಯದು?

ಈ ಕೊಲೆಸ್ಟ್ರಾಲ್ ನಮ್ಮ ರಕ್ತನಾಳ ಪ್ರವಹಿಸುವಿಕೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ ಹಾಗೂ ನಿಜವಾಗಿ ಹೇಳಬೇಕೆಂದರೆ ನರಗಳಲ್ಲಿ ಅಂಟಿಕೊಂಡಿದ್ದ ಎಲ್ ಡಿ ಎಲ್ ಕಣಗಳನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ.

ಹೀಗೆ ಸಡಿಲಗೊಂಡ ಎಲ್ ಡಿ ಎಲ್ ಕಣಗಳು ರಕ್ತದ ಮೂಲಕ ಯಕೃತ್ ತಲುಪಿ ಒಡೆಯಲ್ಪಡುತ್ತವೆ ಹಾಗೂ ದೇಹದಿಂದ ವಿಸರ್ಜಿಸಲ್ಪಡುತ್ತವೆ.

ಹೆಚ್ ಡಿ ಎಲ್ ಮಟ್ಟ ಹೆಚ್ಚಿದ್ದರೆ ಹೃದಯಾಘಾತ ಮತ್ತು ಸ್ತಂಭನದ ವಿರುದ್ದ ರಕ್ಷಣೆಯನ್ನೂ ನೀಡುತ್ತದೆ. ತದ್ವಿರುದ್ದವಾಗಿ, ಹೆಚ್ ಡಿ ಎಲ್ ಮಟ್ಟ ಕಡಿಮೆ ಇರುವ ವ್ಯಕ್ತಿಗಳಿಗೆ ಈ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚೇ ಇರುತ್ತದೆ.

ರಾಷ್ಟ್ರೀಯ ಆರೋಗ್ಯ ವಿದ್ಯಾಲಯದ (National Institutes of Health (NIH) ಪ್ರಕಾರ, ಹೆಚ್ ಡಿ ಎಲ್ ಮಟ್ಟ 60 mg/dL ಅಥವಾ ಇದಕ್ಕೂ ಹೆಚ್ಚು ಇದ್ದರೆ ಇದು ರಕ್ಷಣಾತ್ಮಕವಾಗಿದೆ. ಆದರೆ, ಈ ಮಟ್ಟ 40 mg/dL ಕ್ಕೂ ಕಡಿಮೆ ಇದ್ದರೆ ಹೃದ್ರೋಗಗಳ ಸಾಧ್ಯತೆ ಹೆಚ್ಚುತ್ತದೆ.

ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟಗಳು ಇರಬೇಕಾದ ಗುರಿ

ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟಗಳು ಇರಬೇಕಾದ ಗುರಿ

ರಕ್ತಪರೀಕ್ಷೆ ಮಾಡಿಸಿಕೊಂಡಾಗ ಪ್ರಯೋಗಾಲಯದ ವರದಿಯಲ್ಲಿ ಹೆಚ್ ಡಿ ಎಲ್ ಹಾಗೂ ಎಲ್ ಡಿ ಎಲ್ ಮತ್ತು ಒಟ್ಟಾರೆ ಕೊಲೆಸ್ಟಾಲ್ ಮಟ್ಟಗಳನ್ನು ಹಾಗೂ ಟ್ರೈಗ್ಲಿಸರೈಡ್ ಮಟ್ಟಗಳನ್ನು ಒದಗಿಸಲಾಗುತ್ತದೆ.

ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಎಂದರೆ 200 mg/dLಕ್ಕೂ ಕಡಿಮೆ ಇರಬೇಕು. 200 ಮತ್ತು 239 ರ ನಡುವೆ ಇದ್ದರೆ ಇದು ಅಪಾಯದ ಅಂಚಿನಲ್ಲಿರುವ ಮತ್ತು 240 mg/dLಕ್ಕೂ ಹೆಚ್ಚಿರುವ ಮಟ್ಟ ಅಪಾಯಕರ ಎಂದು ಗುರುತಿಸಲಾಗುತ್ತದೆ.

ಟ್ರೈಗ್ಲಿಸರೈಡ್ ಎಂಬುದು ನಮ್ಮ ರಕ್ತದಲ್ಲಿರುವ ಇನ್ನೊಂದು ಬಗೆಯ ಕೊಬ್ಬು ಆಗಿದೆ. ಕೊಲೆಸ್ಟ್ರಾಲ್ ನಂತೆಯೇ ಟ್ರೈಗ್ಲಿಸರೈಡ್ ಮಟ್ಟವೂ ಮಿತಿಯೊಳಗೇ ಇರಬೇಕು. ಆದರೆ ಯಾವ ಮಟ್ಟಗಳು ಅಪಾಯಕರ ಎಂದು ತಜ್ಞರು ಖಚಿತವಾಗಿ ಹೇಳಲಾರರು.

ಅಧಿಕ ಟ್ರೈಗ್ಲಿಸರೈಡ್ ಮಟ್ಟದೊಂದಿಗೇ ಕೊಲೆಸ್ಟ್ರಾಲ್ ಮಟ್ಟವೂ ಹೆಚ್ಚೇ ಇದ್ದರೆ ಹೃದ್ರೋಗ ಎದುರಾಗುವ. ಸಾಧ್ಯತೆ ಅಧಿಕ ಇರುತ್ತದೆ. ಆದರೆ, ಅಧಿಕ ಟ್ರೈಗ್ಲಿಸರೈಡ್ ಮಟ್ಟ ಅಪಾಯದ ಸಾಧ್ಯತೆ ಹೆಚ್ಚಿಸುತ್ತದೆಯೇ ಎಂದು ಇನ್ನೂ ಖಚಿತವಾಗಿಲ್ಲ.

ವೈದ್ಯರು ಪ್ರಯೋಗಾಲಯದ ವರದಿಯನ್ನು ಪರಿಗಣಿಸುವಾಗ ಟ್ರೈಗ್ಲಿಸರೈಡ್ ಮಟ್ಟಗಳನ್ನು ಇತರ ಅಂಶಗಳಿಗೆ ಹೋಲಿಸಿ ನೋದುತ್ತಾರೆ. ಅಂದರೆ, ಸ್ಥೂಲಕಾಯ, ಕೊಲೆಸ್ಟ್ರಾಲ್ ಮಟ್ಟಗಳು ಇತ್ಯಾದಿ.

ಈ ಮಟ್ಟಗಳನ್ನು ಸಮತೋಲನದಲ್ಲಿ ಇರಿಸಬೇಕಾದ ಮಹತ್ವ

ಈ ಮಟ್ಟಗಳನ್ನು ಸಮತೋಲನದಲ್ಲಿ ಇರಿಸಬೇಕಾದ ಮಹತ್ವ

ಕೊಲೆಸ್ಟಾಲ್ ಮಟ್ಟಗಳನ್ನು ನಿಯಂತ್ರಣದಲ್ಲಿರಿಸಲು ಕೆಲವೊಂದು ಅಂಶಗಳ ಮೇಲೆ ಮಾತ್ರವೇ ನಿಮಗೆ ಸಾಧ್ಯ. ಉಳಿದಂತೆ, ಅನುವಂಶಿಕ ಕಾರಣಗಳು, ಆಹಾರಕ್ರಮ, ತೂಕ, ವ್ಯಾಯಾಮ ಮೊದಲಾದ ಎಲ್ಲಾ ಅಂಶಗಳೂ ಈ ಮಟ್ಟಗಳ ಮೇಲೆ ಪ್ರಭಾವ ಬೀರುತ್ತವೆ.

ಕಡಿಮೆ ಕೊಲೆಸ್ಟ್ರಾಲ್ ಹಾಗೂ ಸಂತೃಪ್ತ ಕೊಬ್ಬು ಕಡಿಮೆ ಇರುವ ಅಹಾರ ಸೇವನೆ, ಸಾಕಷ್ಟು ನಿಯಮಿತ ವ್ಯಾಯಾಮ ಮತ್ತು ತೂಕವನ್ನು ನಿರ್ವಹಿಸುವುದು ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಣದಲ್ಲಿ ಇರಿಸಲು ನೆರವಾಗುತ್ತವೆ ಹಾಗೂ ಹೃದಯ ಸಂಬಂಧಿ ತೊಂದರೆಗಳನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ.

English summary

Interesting Facts About Cholesterol in Kannada

Here are interesting facts about Cholesterol, read on...
Story first published: Wednesday, March 24, 2021, 12:25 [IST]
X
Desktop Bottom Promotion