For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್‌ನಿಂದ ಪಾರಾಗಲು, ಸ್ತನದ ಆರೈಕೆ ಹೀಗಿರಲಿ..

|

ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆ ಅಂದ್ರೆ ಅದು ಸ್ತನ ಕ್ಯಾನ್ಸರ್. ಇದನ್ನು ಪತ್ತೆ ಮಾಡುವುದು ಕಷ್ಟವಾದರೂ, ಸ್ತನದ ಸರಿಯಾದ ಆರೈಕೆಯಿಂದ ಕ್ಯಾನ್ಸರ್‌ನ್ನು ದೂರವಿಡಬಹುದು. ಹಾಗಾದರೆ ಆರೋಗ್ಯಕರ ಸ್ತನವನ್ನ ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ, ಈ ಸ್ಟೋರಿ ಓದಿ ನಿಮಗೆ ತಿಳಿಯುತ್ತೆ.

ಆರೋಗ್ಯಕರ ಸ್ತನವನ್ನು ಕಾಪಾಡಿಕೊಳ್ಳಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ನಿಯಮಿತ ವ್ಯಾಯಾಮ:

ನಿಯಮಿತ ವ್ಯಾಯಾಮ:

ನಿಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಯನ್ನು ಸೇರಿಸಿಕೊಳ್ಳುವುದು ನಿಮ್ಮನ್ನು ಆರೋಗ್ಯವಾಗಿಡಲು ಉತ್ತಮ ಮಾರ್ಗವಾಗಿದೆ. ಈ ದೈಹಿಕ ಚಟುವಟಿಕೆಯು ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಜೊತೆಗೆ ನೀವು ಎದುರಿಸುತ್ತಿರುವ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ದೈಹಿಕ ವ್ಯಾಯಾಮಗಳು ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಈಜುವುದು, ಟೆನಿಸ್ ಮತ್ತು ಮುಂತಾದ ಕ್ರೀಡಾ ಚಟುವಟಿಕೆಗಳನ್ನು ಕೂಡ ಒಳಗೊಂಡಿದೆ. ಆದರೆ ಅವುಗಳನ್ನು ರೂಢಿ ಮಾಡಿಕೊಳ್ಳುವುದು ಮುಖ್ಯ. ನಿರಂತರವಾಗಿ ಮಾಡುವುದರಿಂದ ಅದರ ಫಲಿತಾಂಶ ನಿಮ್ಮ ಆರೋಗ್ಯದಲ್ಲಿ ಕಂಡುಬರುತ್ತದೆ.

ಸ್ತನಗಳನ್ನು ಮಸಾಜ್ ಮಾಡಿ:

ಸ್ತನಗಳನ್ನು ಮಸಾಜ್ ಮಾಡಿ:

ನಿಮ್ಮ ಕಾಲುಗಳು ಮತ್ತು ತೋಳುಗಳಂತೆ ಸ್ತನಗಳನ್ನು ನಿಯಮಿತವಾಗಿ ಮಸಾಜ್ ಮಾಡಿ. ಅವು ಕೂಡ ನಿಮ್ಮ ದೇಹದ ಉಳಿದ ಭಾಗದಂತೆಯೇ ಎಂಬುದನ್ನು ಮರೆಯಬೇಡಿ. ಏಕೆಂದರೆ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮಸಾಜ್ ಮಾಡುವುದು ಮುಖ್ಯವಾಗಿದೆ. ಸ್ತನಗಳು ಬಹಳಷ್ಟು ದುಗ್ಧರಸ ಗ್ರಂಥಿಗಳನ್ನು ಹೊಂದಿದ್ದು, ಮಸಾಜ್ ಮಾಡಿದಾಗ ದುಗ್ಧರಸ ಎಂಬ ದ್ರವವನ್ನು ಬಿಡುಗಡೆ ಮಾಡುತ್ತವೆ. ಇವು ಸ್ತನ ಕ್ಯಾನ್ಸರ್ ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಮಸಾಜ್ ಮಾಡುವುದು ಅಗತ್ಯ. ಅನೇಕ ಬಾರಿ, ನಮ್ಮ ಸ್ತನಗಳು ಒಣಗಿ ನೋಯುತ್ತವೆ. ಆದ್ದರಿಂದ ಉತ್ತಮವಾದ ಮಾಯಿಶ್ಚರೈಸರ್ ಹಚ್ಚಿ, ಮಸಾಜ್ ಮಾಡುವುದು ಉತ್ತಮ.

ಆರೋಗ್ಯಕರ ಆಹಾರ ತಿನ್ನುವುದು:

ಆರೋಗ್ಯಕರ ಆಹಾರ ತಿನ್ನುವುದು:

ಆರೋಗ್ಯಕರ ಆಹಾರವು ಪ್ರತಿಯೊಬ್ಬರಿಗೂ ತುಂಬಾ ಮುಖ್ಯ. ಆದ್ದರಿಂದ ಸಲಾಡ್, ಹಣ್ಣು-ತರಕಾರಿ ಬಳಕೆ ಹೆಚ್ಚು ಮಾಡಿ. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ವಿಟಮಿನ್ ಡಿ ಕೂಡ ಅತ್ಯಗತ್ಯ. ಸ್ತನ ಕ್ಯಾನ್ಸರ್ ಪತ್ತೆಯಾದ ನಂತರ ಉತ್ತಮ ಮಟ್ಟದ ವಿಟಮಿನ್ ಡಿ ಪೋಷಕಾಂಶ ನಿಮಗೆ ಬದುಕಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ, ಸಾಧ್ಯವಾದಾಗಲೆಲ್ಲಾ ಸನ್‌ಸ್ಕ್ರೀನ್ ಹಚ್ಚಿ ಏಕೆಂದರೆ ನಿಮ್ಮ ದೇಹಕ್ಕೆ ಇದು ಅಗತ್ಯವಾಗಿರುತ್ತದೆ.

ವೈದ್ಯರನ್ನು ಭೇಟಿ ಮಾಡಿ:

ವೈದ್ಯರನ್ನು ಭೇಟಿ ಮಾಡಿ:

ಮಹಿಳೆಯರು 40-50 ವರ್ಷದೊಳಗಿದ್ದರೆ, ರ್ಷಕ್ಕೊಮ್ಮೆಯಾದರೂ ಸ್ತನ ಪರೀಕ್ಷೆಗಾಗಿ ವೈದ್ಯರ ಬಳಿ ಹೋಗಬೇಕು, ಪರಿಗಣಿಸಬೇಕು. 50 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದರೆ, 2 ವರ್ಷಕ್ಕೊಮ್ಮೆ ಸರಿ. ಆದರೆ ಅಂತರ್ಜಾಲದಲ್ಲಿ ನೀವು ನೋಡುವ ಅಥವಾ ಓದುವ ಯಾವುದನ್ನಾದರೂ ಪ್ರಾರಂಭಿಸುವ ಮೊದಲು ಅಥವಾ ನಿಲ್ಲಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಸಲಹೆ ಪಡೆದುಕೊಳ್ಳಿ. ಏಕೆಂದರೆ, ಅವರಿಗೆ ನಿಮ್ಮ ಆರೋಗ್ಯ ಇತಹಾಸದ ಬಗ್ಗೆ ಮಾಹಿತಿ ಇರುತ್ತದೆ.

ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಹೀಗಿವೆ:

ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಹೀಗಿವೆ:

  • ಎದೆಯಲ್ಲಿ ಒಂದು ರೀತಿಯ ಗಡ್ಡೆ
  • ಎದೆಯ ಭಾಗ ಅಥವಾ ಕಂಕುಳಡಿಯಡಿಯಲ್ಲಿ ಊತ
  • ಜೋತುಬಿದ್ದಿರುವ ಅಥವಾ ತಲೆಕೆಳಗಾದ ಮೊಲೆತೊಟ್ಟು
  • ಮೊಲೆತೊಟ್ಟಿನಲ್ಲಿ ನಿರಂತರವಾದ ದದ್ದು
  • ಮೊಲೆತೊಟ್ಟುಗಳಲ್ಲಿ ರಕ್ತ ವಿಸರ್ಜನೆ
  • ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ
  • ಇವುಗಳಲ್ಲಿ ನಿಮ್ಮಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
FAQ's
  • ಸ್ತನ ಕ್ಯಾನ್ಸರ್ ಹೆಚ್ಚಾಗಿ ಎಲ್ಲಿ ಕಂಡುಬರುತ್ತದೆ?

    ಸ್ತನ ಕ್ಯಾನ್ಸರ್ ಸ್ತನದಲ್ಲಿ ಎಲ್ಲಿಯಾದರೂ ಸಂಭವಿಸಬಹುದು, ಆದರೆ ಸಾಮಾನ್ಯ ಸ್ಥಳವೆಂದರೆ ಸ್ತನದ ಮೇಲಿನ, ಹೊರ ಭಾಗದಲ್ಲಿ ಕಾಣಸಿಗುತ್ತದೆ. ಅಂದರೆ ಸ್ತನ ಕ್ಯಾನ್ಸರ್ ಉಂಟಾಗಿದ್ದರೆ, ಯಾವುದಾದರೂ ರೂಪದಲ್ಲಿ ಅದು ನಿಮ್ಮ ಕಣ್ಣಿಗೆ ಗೋಚರವಾಗುತ್ತದೆ.

  • ನಿಮಗೆ ತಿಳಿಯದೇ ಸ್ತನ ಕ್ಯಾನ್ಸರ್ ಎಷ್ಟು ದಿನದಿಂದ ಇರಬಹುದು?

    ಸ್ತನ ಕ್ಯಾನ್ಸರ್ ಅನುಭವಿಸುವ ಮೊದಲು 30 ಬಾರಿ ವಿಭಜಿಸಬೇಕು. 28 ನೇ ಸೆಲ್ ವಿಭಾಗದವರೆಗೆ, ಅದನ್ನು ಕೈಯಿಂದ ಪತ್ತೆ ಮಾಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಪ್ರತಿ ಹಂತವು ಒಂದರಿಂದ ಎರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಕ್ಯಾನ್ಸರ್ ಗಡ್ಡೆಯ ಅನುಭವವಾಗುವ ಹೊತ್ತಿಗೆ, ಕ್ಯಾನ್ಸರ್ ನಿಮ್ಮ ದೇಹದಲ್ಲಿ ಎರಡರಿಂದ ಐದು ವರ್ಷಗಳವರೆಗೆ ಇರುತ್ತದೆ.

     

English summary

How to Take Care of your Breasts at Home in Kannada

Here we talking about How to take care of your breasts at home in Kannada, read on
X
Desktop Bottom Promotion