For Quick Alerts
ALLOW NOTIFICATIONS  
For Daily Alerts

ಮೂಗು ಕಟ್ಟಿದ್ದರೆ ಮಾತ್ರೆ, ಮನೆಮದ್ದೇ ಯಾಕೆ? ಅಕ್ಯುಪ್ರೆಶರ್ ಬಳಸಿ ನೋಡಿ

|

ಮೂಗು ಕಟ್ಟಿದ ಅನುಭವವಾಗಿ ಉಸಿರಾಡುವುದೇ ಕಷ್ಟವಾಗುವ ಸನ್ನಿವೇಶ ಮಾತ್ರ ಯಾವ ಶತ್ರುಗೂ ಬರಬಾರದು ಅಂದುಕೊಳ್ಳುತ್ತೀವಿ. ಯಾಕೆಂದರೆ ಶೀತ ಅನ್ನೋ ಕಾಯಿಲೆಯೇ ಹಾಗೆ. ಉಸಿರಾಟಕ್ಕೆ ತೊಂದರೆ ನೀಡಿ ನಮ್ಮನ್ನ ಹೈರಾಣು ಮಾಡುತ್ತದೆ. ಅಲರ್ಜಿ, ವಾತಾವರಣದ ಬದಲಾವಣೆ ಮತ್ತು ಅತಿಯಾದ ತಂಪು ನಿಮ್ಮ ಸೈನಸ್ ನ್ನು ಮುಚ್ಚುವಂತೆ ಮಾಡುತ್ತದೆ. ಆಗ ಕೇವಲ ಔಷಧ ಅಥವಾ ಮನೆಮದ್ದನ್ನು ಬಳಸಿ ಪರಿಹಾರ ಮಾಡಿಕೊಳ್ಳುತ್ತೇವೆ. ಆದರೆ ಯಾವುದೆ ಬಾಹ್ಯ ಔಷಧ, ಮನೆಮದ್ದು ಬಳಸದೆಯೂ ಶೀತವನ್ನು ನಿವಾರಿಸಬಹುದು.

Stuffy Nose

ಹೌದು ಇದು ಸಾಧ್ಯ, ಆದರೆ ಇದಕ್ಕೆ ನಿಮ್ಮ ಆತ್ಮವಿಶ್ವಾಸ ಸಹ ಅಷ್ಟೇ ಮುಖ್ಯ. ಕಟ್ಟಿದ ಮೂಗು, ಭಾರವಾದ ತಲೆ ಮತ್ತು ಕಟ್ಟಿದ ಕಿವಿಯ ಸಮಸ್ಯೆಯನ್ನು ಕೇವಲ ಕೆಲವು ಒತ್ತಡದ ಬಿಂದುಗಳನ್ನು ಒತ್ತುವ (ಅಕ್ಯುಪ್ರೆಶರ್) ಮೂಲಕ ಪರಿಹರಿಸಿಕೊಳ್ಳಬಹುದು.

ಔಷಧಿಗೂ ಮುನ್ನ ಅಕ್ಯುಪ್ರೆಶರ್ ಪ್ರಯತ್ನಿಸಿ

ಶೀತವಾಗಿರುವ ವೇಳೆ ನಾವು ಪ್ರತಿ ಬಾರಿ ಮೂಗನ್ನು ಸ್ವಚ್ಛಗೊಳಿಸುವ ಅಥವಾ ಅಲರ್ಜಿಯನ್ನು ಪರಿಹರಿಸಿಕೊಳ್ಳುವ ಪ್ರಯತ್ನಗಳಿಗೆ ಮುಂದಾಗುತ್ತೇವೆಯೋ ಆಗ ನಮ್ಮ ಮುಂದೆ ಕಣ್ಣಿಗೆ ಕಾಣುವ ಮೊದಲ ಆಯ್ಕೆ ಎಂದರೆ ಅದು ಲೋಳೆಯನ್ನು ಮಾಯಗೊಳಿಸುವಂತಹ ಮಾತ್ರೆಗಳ ಸೇವನೆ. ಆದರೆ ಈ ಮಾತ್ರೆಗಳು ಸೈನಸ್ ನ್ನು ಸಂಪೂರ್ಣ ಶುಷ್ಕಗೊಳಿಸಿ ಮತ್ತಷ್ಟು ನೋವಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ನೇರವಾಗಿ ಔಷಧಗಳ ಸೇವನೆಗೆ ಮುಂದಾಗುವ ಬದಲು ಮೊದಲಿಗೆ ಕೆಲವು ಅಕ್ಯುಪ್ರೆಶರ್ ಬಳಸಿ ತಲೆಯಿಂದ ದ್ರವಾಂಶವನ್ನು ಹೊರಹಾಕುವುದಕ್ಕೆ ಪ್ರಯತ್ನಿಸುವುದು ಬಹಳ ಸೂಚ್ಯ. ಹಾಗಿದ್ದರೆ ಅಕ್ಯುಪ್ರೆಶರ್ ನ ವಿಧಾನಗಳು ಯಾವುದು ಎಂದು ಮುಂದೆ ವಿವರಿಸಲಾಗಿದೆ.

ಅಕ್ಯುಪ್ರೆಶರ್ ನ ಯಾವ ವಿಧಾನಗಳು ಶೀತವನ್ನು ನಿವಾರಿಸುತ್ತದೆ

1. ನಾಲಗೆ ಬಳಸಿ ಮತ್ತು ಹುಬ್ಬುಗಳ ನಡುವಿನ ಜಾಗವನ್ನು ಒತ್ತಿ

1. ನಾಲಗೆ ಬಳಸಿ ಮತ್ತು ಹುಬ್ಬುಗಳ ನಡುವಿನ ಜಾಗವನ್ನು ಒತ್ತಿ

ದೇಹದ ನಿರ್ದಿಷ್ಟ ಬಿಂದುಗಳ ಮೇಲೆ ಒತ್ತಡ ಹಾಕುವ ಮೂಲಕ ನಾವು ದ್ರವದ ಹರಿವನ್ನು ಉತ್ತೇಜಿಸಬಹುದು, ಮೂಗಿನ ಉಸಿರಾಟ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಹಾಗೂ ಸೈನಸ್ ಸಮಸ್ಯೆಗಳಿಗೆ ಉತ್ತಮವಾಗಿರುವ ಒತ್ತಡದ ಬಿಂದುವೆಂದರೆ ಅದು ನಮ್ಮ ಬಾಯಿ.

ಬಾಯಿಯ ಮೇಲ್ಬಾಗಕ್ಕೆ ನಿಮ್ಮ ನಾಲಗೆಯನ್ನು ತಳ್ಳುವ ಮೂಲಕ ಮತ್ತು ಅದೇ ಸಮಯದಲ್ಲಿ ಹುಬ್ಬುಗಳ ಚರ್ಮದ ಮೇಲೆ ನಿಮ್ಮ ಬೆರಳುಗಳನ್ನು ಚರ್ಮದ ವಿರುದ್ಧ ದಿಕ್ಕಿಗೆ ತಳ್ಳುವಿಕೆಯನ್ನು ಮಾಡಬೇಕು. ಹೀಗೆ ಒತ್ತಡವನ್ನು ಸುಮಾರು 20 ಸೆಕೆಂಡ್ ಗಳ ಕಾಲ ಮಾಡುವುದರಿಂದ ನಿಮ್ಮ ಶೀತದ ಸಮಸ್ಯೆಯಿಂದ ನೀವು ಸ್ವಲ್ಪ ನಿರಾಳರಾಗುವುದಕ್ಕೆ ಸಾಧ್ಯವಾಗುತ್ತದೆ.

ಈ ವಿಧಾನವನ್ನು ಒಮ್ಮೆ ನೀವು ನಿಧಾನವಾಗಿ ಒತ್ತಡ ಕಡಿಮೆ ಮಾಡುತ್ತಿದ್ದಂತೆ ಗಂಟಲಿನ ಹಿಂಭಾಗಕ್ಕೆ ಚಲನೆಯನ್ನು ಅನುಭವಿಸುವುದಕ್ಕೆ ಪ್ರಾರಂಭಿಸುತ್ತೀರಿ.

ALSO READ:ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?

ಒಂದು ವೇಳೆ ಇದು ಕೆಲಸ ಮಾಡದೇ ಇದ್ದರೆ, ನಾಲಗೆಯಿಂದ ಬಾಯಿಯ ಮೇಲ್ಬಾಗವನ್ನು ಒತ್ತುವುದು ಮತ್ತೊಮ್ಮೆ ಹುಬ್ಬುಗಳ ನಡುವೆ ಒತ್ತುವಿಕೆ ಮಾಡುವುದು ನಿರಂತರವಾಗಿ ಮಾಡಿ ಪ್ರಯತ್ನಿಸಿ. ಹುಬ್ಬುಗಳ ನಡುವಿನ ಒತ್ತಡ ನಿರ್ಮಿಸುವ ಬಿಂದುವನ್ನು ಯಿಂಟಾಂಗ್ ಅಕ್ಯುಪಾಯಿಂಟ್ ಎಂದು ಕರೆಯಲಾಗುತ್ತದೆ. ಇದೇ ಸ್ಥಳದಲ್ಲಿ ನಿಮ್ಮ ಮೂಗಿನ ನರಗಳಿಗೆ ಸಂಬಂಧವಿರುವುದರಿಂದ ಒತ್ತಡ ಹೇರುವಿಕೆಯು ಮೂಗು ಕಟ್ಟುವಿಕೆಯ ನಿವಾರಣೆಗೆ ನೆರವು ನೀಡುತ್ತದೆ.

2. ನಿಮ್ಮ ಹುಬ್ಬಗಳ ಮೇಲೆ ಒತ್ತಡ ಹಾಕಿ

ಒಂದು ವೇಳೆ ನಿಮ್ಮ ಕಟ್ಟಿದ ಸೈನಸ್ ಸಮಸ್ಯೆಯು ಅತಿಯಾಗುತ್ತಿದ್ದು ತಲೆಯ ಭಾರವೆನ್ನಿಸುವುದಕ್ಕೆ ಪ್ರಾರಂಭವಾದರೆ ನೀವು ಬೇರೆ ಒತ್ತಡದ ಬಿಂದುವನ್ನು ಪ್ರಯತ್ನಿಸಬೇಕಾದ ಅಗತ್ಯತೆ ಬೀಳಬಹುದು.

ನಿಮ್ಮ ಬೆರಳನ್ನು ಹುಬ್ಬುಗಳ ಪ್ರಾರಂಭಗೊಳ್ಳುವ ಜಾಗದಲ್ಲಿ ಇಟ್ಟುಕೊಳ್ಳಿ. ಅವುಗಳು ಎಲ್ಲಿ ಸಂಧಿಸುವುದಿಲ್ಲವೋ ಆ ಕೇಂದ್ರವನ್ನು ಕ್ಲೋಸ್ ಮಾಡಿ ಮತ್ತು ಮುಮ್ಮುಖವಾಗಿ ಚಲಿಸಿ. ಈ ಸಂದರ್ಭದಲ್ಲಿ ನೀವು ನಿಮ್ಮ ತಲೆಯನ್ನು ಆರಾಮದಾಯಕವಾಗಿ ಇಟ್ಟುಕೊಳ್ಳಿ ಮತ್ತು ಸಮತಟ್ಟಾದ ಜಾಗದಲ್ಲಿ ನಿಮ್ಮ ತೋಳುಗಳನ್ನು ಇಡಿ. ಅಂದರೆ ನೀವು ಮಲಗಿಕೊಂಡು ಇದನ್ನು ಪ್ರಯತ್ನಿಸುವುದು ಸೂಕ್ತ. ಕೆಲವು ಸೆಕೆಂಡ್ ಗಳಲ್ಲಿ ಒತ್ತಡವು ಬೇರೆ ಜಾಗಕ್ಕೆ ಹೋದಂತೆ ಭಾಸವಾಗುತ್ತದೆ ಮತ್ತು ನಿಮ್ಮ ಬೆರಳನ್ನು ಹುಬ್ಬುಗಳ ನಡುವಿನ ಜಾಗಕ್ಕೆ ತಂದು ಒತ್ತಡ ಹಾಕಿ.

ಸ್ವಲ್ಪ ಆರಾಮ ಅನ್ನಿಸುವವರೆಗೂ ಹಾಗೆಯೇ ಇಟ್ಟುಕೊಳ್ಳಿ ಮತ್ತು ನಂತರ ಹುಬ್ಬಿನ ಕೊನೆಗೆ ನಿಮ್ಮ ಬೆರಳನ್ನು ಚಲಿಸಿ. ಒತ್ತಡ ಹಾಕುತ್ತಲೇ ಚಲಿಸಬಹುದು ಇಲ್ಲವೇ ವೃತ್ತಾಕಾರದಲ್ಲಿ ಬೆರಳುನ್ನು ಹುಬ್ಬಿನ ಮೇಲೆ ಚಲಿಸುತ್ತಾ ಸಾಗಬಹುದು. ಇದು ನಿಮ್ಮ ಹಣೆಯಲ್ಲಿರುವ ಕಫದ ಅಂಶವನ್ನು ಹೊರಹಾಕುವುದಕ್ಕೆ ನೆರವು ನೀಡುತ್ತದೆ. ಒಮ್ಮೆ ಕಫದ ಚಲನೆ ಆರಂಭವಾದರೆ ನಿಮ್ಮ ತಲೆಯ ಭಾರ ಕಡಿಮೆಯಾಗುತ್ತಾ ಸಾಗುತ್ತದೆ.

ALSO READ: ಶೀತ ಮತ್ತು ಕೆಮ್ಮಿಗೆ ಈರುಳ್ಳಿ ರಸದ ಚಿಕಿತ್ಸೆ ಪ್ರಯತ್ನಿಸಿ!

3. ಮಿನಿ ಮಸಾಜ್ ಗಾಗಿ ಕೆಲವು ಸೆಕೆಂಡ್ ಬಳಸಿ

ಮಸಾಜ್ ಯಾವಾಗಲೂ ಕೂಡ ನಿಮ್ಮ ದೇಹಕ್ಕೆ ಆರಾಮದಾಯಕ ಅನುಭವ ನೀಡುತ್ತದೆ. ಶೀತದ ದ್ರವಾಂಶವು ಕೆಳಮುಖವಾಗಿ ಚಲಿಸುವಂತೆ ಮಾಡುವ ನಿಟ್ಟಿನಲ್ಲಿ ನಿಮ್ಮ ಕಾಲರ್ ಮೂಳೆ ಅಂದರೆ ಕುತ್ತಿಗೆಯ ಹಿಂಭಾಗದಲ್ಲಿ ಬೆರಳುಗಳ ತುದಿಯಿಂದ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ ಇಲ್ಲವೇ ಮಾಡಿಸಿಕೊಳ್ಳಿ. ಈ ರೀತಿ ಮಾಡಿಕೊಳ್ಳುವುದರಿಂದ ಅಂದರೆ ಕುತ್ತಿಗೆಯ ಹಿಂಭಾಗಕ್ಕೆ ಸಣ್ಣ ಒತ್ತಡವನ್ನು ಸೃಷ್ಟಿ ಮಾಡುವುದರಿಂದ ನಿಮ್ಮ ಗಂಟಲು, ಕಿವಿಗಳು ಆರಾಮದಾಯಕ ಅನ್ನಿಸುತ್ತದೆ.

ಒಂದು ವೇಳೆ ಕುತ್ತಿಗೆ ಮಸಾಜ್ ನಿಮಗೆ ಅಷ್ಟು ಆರಾಮ ಅನ್ನಿಸದೇ ಇದ್ದಲ್ಲಿ "ವಿ" ಆಕಾರದಲ್ಲಿ ನಿಮ್ಮ ಕೈಗಳನ್ನು ಕ್ರಾಸ್ ಮಾಡಿಕೊಳ್ಳಿ ಮತ್ತು ಮೇಲೆ ತಿಳಿಸಿದ ಅದೇ ಪಂಪಿಂಗ್ ಚಲನೆಯನ್ನು ಕುತ್ತಿಗೆಯ ಭಾಗದಲ್ಲಿ ಬಳಸಿ ದ್ರವವು ಬಿಡುಗಡೆಗೊಳ್ಳುವಂತೆ ಮಾಡಿಕೊಳ್ಳಬಹುದು. ಈ ಎರಡೂ ಕ್ರಿಯೆಗಳು ನಿಮ್ಮ ಲಿಂಫ್ಯಾಟಿಕ್ ಸಿಸ್ಟಮ್ (ದುಗ್ದರಸ ವ್ಯವಸ್ಥೆ) ಯಲ್ಲಿ ಹೀರಿಕೊಳ್ಳುವಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಮತ್ತು ಸೈನಸ್ ನಲ್ಲಿರುವ ಕಫವು ಕೆಳಮುಖವಾಗಿ ಚಲಿಸುವಂತೆ ಮಾಡುತ್ತದೆ, ಜೊತೆಗೆ ತಲೆಯಲ್ಲಿರುವ ಈ ದ್ರವವು ಸಂಪೂರ್ಣವಾಗಿ ಹೊರಹೋಗುವಂತೆ ಮಾಡುತ್ತದೆ. ಹೀಗೆ ಒತ್ತಡ ತಂತ್ರಗಾರಿಕೆಯು ನಿಮ್ಮ ಶೀತದ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದಕ್ಕೂ ಪ್ರಯತ್ನ ಮಾಡಿ ನೋಡಿ, ನಿಮ್ಮ ಅನುಭವವನ್ನು ಕಮೆಂಟ್ ಮಾಡಿ ತಿಳಿಸಿ.

English summary

How to Relieve a Stuffy Nose with Acupressure

Before you attempt to cure your stuffy nose and pressurized head, it's good to know what's causing you such discomfort. when our heads fill with fluid and blockages are created, affecting our breathing, hearing, and mental clarity, it all begins in the nose. When we feel stuffed up, it's likely that the membranes inside our nose are inflamed and irritated. In response to whatever it is that flooded our lymphatic system with fluid, our nasal passages start producing increased amounts of mucus as they try to flush out the source of irritation.
X
Desktop Bottom Promotion