For Quick Alerts
ALLOW NOTIFICATIONS  
For Daily Alerts

ಮೆನೋಪಾಸ್‌ ಖಿನ್ನತೆ ಕಾಣಿಸಿದರೆ ಏನು ಮಾಡಬೇಕು?

|

ವಯಸ್ಸು 40 ದಾಟಿದ ಬಳಿಕ ಮಹಿಳೆಯರು ಎದುರಿಸಬೇಕಾದ ಪ್ರಮುಖವಾದ ಹಂತವೆಂದರೆ ಮೆನೋಪಾಸ್. ಕೆಲವರಿಗೆ 40ರ ಬಳಿಕ ಮೆನೋಪಾಸ್ ಬಂದರೆ ಇನ್ನು ಕೆಲವರಿಗೆ 50ರ ಬಳಿಕ ಮೆನೋಪಾಸ್ ಹಂತ ಪ್ರಾರಂಭವಾಗುವುದು. ಮೆನೋಪಾಸ್ ಹಂತ ಎಂದರೆ ಅವಳ ಋತುಚಕ್ರ ನಿಲ್ಲುವ ಹಂತವಾಗಿದೆ. ಆ ಬಳಿಕ ಅವಳಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಇರಲ್ಲ.

ಮೆನೋಪಾಸ್‌ ಹಂತವೆಂದರೆ ತುಂಬಾ ಕಷ್ಟಕರವಾದ ಹಂತವಾಗಿದೆ. ಏಕೆಂದರೆ ಈ ಹಂತದಲ್ಲಿ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅವಳ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಕಂಡು ಬರುವುದು. ಮೆನೋಪಾಸ್‌ ಸಮಯದಲ್ಲಿ ತುಂಬಾ ಬೆವರುವ ಸಮಸ್ಯೆ ಕಂಡು ಬರುವುದು ಇದನ್ನು ಹಾಟ್‌ಫ್ಲ್ಯಾಷ್‌ ಎನ್ನಲಾಗುವುದು. ತುಂಬಾ ಸೆಕೆ ಅನಿಸಿ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಮಾನಸಿಕವಾಗಿ ಈ ಹಂತದಲ್ಲಿ ತುಂಬಾ ದುರ್ಬಲರಾಗುತ್ತಾರೆ. ಖಿನ್ನತೆಗೆ ಒಳಗಾಗುತ್ತಾರೆ. ನಮ್ಮನ್ನು ಯಾರೂ ಪ್ರೀತಿಸುತ್ತಿಲ್ಲ ಎಂದು ಅನಿಸಲಾರಂಭಿಸುತ್ತದೆ. ಈ ಹಂತದಲ್ಲಿ ಅವಳಿಗೆ ಸರಿಯಾದ ಕಾಳಜಿ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಕೂಡ ಇದೆ. ಆದ್ದರಿಂದ ಮೆನೋಪಾಸ್‌ ಹಂತದಲ್ಲಿರುವವರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ.

ಮೆನೋಪಾಸ್‌ ಹಂತದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಖಿನ್ನತೆಯ ಲಕ್ಷಣಗಳು

ಮೆನೋಪಾಸ್‌ ಹಂತದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಖಿನ್ನತೆಯ ಲಕ್ಷಣಗಳು

* ತುಂಬಾಕೋಪಗೊಳ್ಳುವುದು, ತುಂಬಾ ಕಿರಿಕಿರಿ ಅನಿಸುವುದು

* ಮಾನಸಿಕ ಒತ್ತಡ ಹೆಚ್ಚುವುದು, ಒಂದು ಬಗೆಯ ಹಿಂಜರಿಕೆ ಕಾಡುವುದು

* ಒಂಥರಾ ಅಪರಾದಿ ಭಾವನೆ ಅಥವಾ ನನ್ನಿಂದ ಪ್ರಯೋಜನವೇ ಇಲ್ಲ ಎಂದನಿಸುವುದು

* ಯಾವುದೇ ಚಟುವಟಿಕೆಯಲ್ಲಿ ನಿರ್ಲಕ್ಷ್ಯ ತೋರುವುದು

* ಏನಾದರೂ ನಿರ್ಧಾರ ತೆಗೆದುಗೊಳ್ಳುವಾಗ ಗೊಂದಲ

* ಮರೆವು

* ಸುಸ್ತು

* ನಿದ್ದೆ ಸರಿಯಾಗಿ ಇಲ್ಲದಿರುವುದು

* ಹಸಿವು ಕಡಿಮೆ

* ಮೈಕೈ ನೋವು

ಈ ಕೆಳಗಿನ ಕಾರಣಗಳಿಂದ ಮೆನೋಪಾಸ್‌ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು

ಈ ಕೆಳಗಿನ ಕಾರಣಗಳಿಂದ ಮೆನೋಪಾಸ್‌ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು

* ಮೆನೋಪಾಸ್‌ ಬಗ್ಗೆ ತಪ್ಪಾದ ಕಲ್ಪನೆ ಅಂದರೆ ವಯಸ್ಸಾಗುವುದನ್ನು ಸ್ವೀಕರಿಸಲು ಮನಸ್ಸು ಸಿದ್ಧವಿಲ್ಲದಿರುವುದು

* ವೃತ್ತಿ ಜೀವನ ಅಥವಾ ವೈಯಕ್ತಿಕ ಜೀವನದಲ್ಲಿರುವ ಒತ್ತಡ

* ಮನೆಯ ವಾತಾವರಣ ಅಥವಾ ಆರ್ಥಿಕ ಪರಿಸ್ಥಿತಿ

* ಆತ್ಮವಿಶ್ವಾಸ ಕಡಿಮೆಯಾಗುವುದು

* ನನ್ನನ್ನು ಯಾರೂ ಬೆಂಬಲಿಸುತ್ತಿಲ್ಲ ಎಂಬ ಭಾವನೆ

* ದೈಹಿಕ ವ್ಯಾಯಾಮ ಇಲ್ಲದಿರುವುದು

* ಧೂಮಪಾನ

ಮೆನೋಪಾಸ್‌ ಹಂತದಲ್ಲಿ ಕಾಡುವ ಸಮಸ್ಯೆಯಿಂದ ಹೊರಬರುವುದು ಹೇಗೆ?

ಮೆನೋಪಾಸ್‌ ಹಂತದಲ್ಲಿ ಕಾಡುವ ಸಮಸ್ಯೆಯಿಂದ ಹೊರಬರುವುದು ಹೇಗೆ?

ಮೆನೋಪಾಸ್‌ ಎಂಬುವುದು ನಿಮಗೆ ಮಾತ್ರ ಬರುವ ಸಮಸ್ಯೆಯಲ್ಲ... ವಯಸ್ಸಾಗುತ್ತಿದ್ದಂತೆ ಪ್ರತಿಯೊಬ್ಬ ಮಹಿಳೆಗೂ ಬರುವುದು. ಮೆನೋಪಾಸ್ ಬಂದ ತಕ್ಷಣ ವಯಸ್ಸಾಯ್ತು ಎಂಬ ಭಾವನೆ ಬಿಡಿ. ಅದರ ಬಗ್ಗೆ ಇರುವ ತಪ್ಪಾದ ಕಲ್ಪನೆ ತೆಗೆದುಹಾಕಿ. ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಈ ಬದಲಾವಣೆ ಮೆನೋಪಾಸ್ ಹಂತವನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿ:

ಸರಿಯಾಗಿ ನಿದ್ದೆ ಮಾಡಿ

ಸರಿಯಾಗಿ ನಿದ್ದೆ ಮಾಡಿ

ಮೆನೋಪಾಸ್ ಹಂತದಲ್ಲಿ ನಿದ್ದೆಗೆ ತುಂಬಾ ತೊಂದರೆಯಾಗುವುದು. ತುಂಬಾ ಸೆಕೆಯಾಗುವುದು ಮನಸ್ಸಿನಲ್ಲಿ ಒಂಥರಾ ತಳಮಳ, ಮಾನಸಿಕ ಒತ್ತಡ ಈ ಕಾರಣಗಳಿಂದ ನಿದ್ದೆ ಬರುವುದಿಲ್ಲ. ನೀವು ಬೇಗನೆ ನಿದ್ದೆ ಮಾಡಲು ಹೋಗಿ, ಪಾದಗಳಿಗೆ ಎಣ್ಣೆ ಮಸಾಜ್ ಮಾಡಿ ಇದರಿಂದ ನಿದ್ದೆ ಸರಿಯಾಗಿ ಮಾಡಲು ಸಹಕಾರಿ.

ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿ

ಪ್ರತಿದಿನ ವ್ಯಾಯಾಮ ಮಾಡಿ. ವ್ಯಾಯಾಮ ನಿಮ್ಮಲ್ಲಿನ ಮಾನಸಿಕ ಒತ್ತಡ ಹೊರಹಾಕಲು ಸಹಕಾರಿ. ಕಡಿಮೆಯೆಂದರೂ 30 ನಿಮಿಷ ವ್ಯಾಯಾಮ ಮಾಡಿ. ಯೋಗ, ಧ್ಯಾನ ಮಾಡಿ.

ವಿಶ್ರಾಂತಿಯ ಟೆಕ್ನಿಕ್‌ ಅನುಸರಿಸಿ

ಯೋಗ, ಧ್ಯಾನ, ಟ್ರಿಪ್‌ ಇವೆಲ್ಲಾ ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ನೀಡುವುದು. ಮನಸ್ಸು ನಿರಾಳವಾಗಿದ್ದರೆ ನಿದ್ದೆ ಕೂಡ ಸರಿಯಾಗಿ ಬರುವುದು.

ಧೂಮಪಾನ ಚಟವಿದ್ದರೆ ಅದನ್ನು ಬಿಡಿ

ಧೂಮಪಾನ ಚಟವಿದ್ದರೆ ಈ ಸಮಯದಲ್ಲಿ ಅದು ಕೆಟ್ಟ ಪರಿಣಾಮ ಬೀರುವುದು. ಮಾನಸಿಕ ಒತ್ತಡದ ಕಾರಣದಿಂದಾಗಿ ಹೆಚ್ಚು ಸಿಗರೇಟ್ ಸೇದುತ್ತೀರಿ, ಇದರಿಂದ ಆರೋಗ್ಯ ಸ್ಥಿತಿ ಮತ್ತಷ್ಟು ಕೆಟ್ಟದಾಗುವುದು. ಆದ್ದರಿಂದ ಈ ಸಮಯದಲ್ಲಿ ಧೂಮಪಾನ ಚಟದಿಂದ ಹೊರಬರಲು ಪ್ರಯತ್ನಿಸಿದರೆ ದೈಹಿಕ ಹಾಗೂ ಮಾನಸಿಕ ಸ್ಥಿತಿ ಸುಧಾರಿಸುವುದು.

ಬೇರೆಯವರ ಸಹಾಯ ಪಡೆಯಿರಿ

ಬೇರೆಯವರ ಸಹಾಯ ಪಡೆಯಿರಿ

ಮನೆಯಲ್ಲಿ ಗಂಡ-ಮಕ್ಕಳ ಬೆಂಬಲ ಪಡೆಯಿರಿ. ನಿಮ್ಮ ಸ್ನೇಹಿತರ ಜೊತೆ ಹೆಚ್ಚಾಗಿ ಬೆರೆಯಿರಿ. ಇವೆಲ್ಲಾ ಮೆನೋಪಾಸ್‌ ಹಂತದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತೆ.

ವೈದ್ಯರನ್ನು ಭೇಟಿಯಾಗಿ

ವೈದ್ಯರನ್ನು ಭೇಟಿಯಾಗಿ

ಮೆನೋಪಾಸ್‌ ಸಮಯದಲ್ಲಿ ಸಮಸ್ಯೆಗಳು ಎದುರಾದಾಗ ಸಹಜ ಎಂದು ಸುಮ್ಮನಾಗಬೇಡಿ. ವೈದ್ಯರನ್ನು ಭೇಟಿಯಾಗಿ ಅವರು ನಿಮಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಇದರಿಂದ ನಿಮ್ಮ ಸಮಸ್ಯೆಗಳು ಕಡಿಮೆಯಾಗುವುದು.

English summary

How to Handle Menopause Depression in Kannada

How to Handle Menopause Depression in Kannada, Read on...
X
Desktop Bottom Promotion