For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಕಂಕುಳ ದುರ್ವಾಸನೆ ತಡೆಯಲು ಸಲಹೆಗಳು

|

ಕಂಕುಳ ಭಾಗದಲ್ಲಿ ಹೆಚ್ಚಿನ ಬೆವರು ಗ್ರಂಥಿಗಳೂ, ಸ್ವೇದಗ್ರಂಥಿಗಳೂ ಇರುವ ಕಾರಣ ಇಲ್ಲಿ ಬೆವರುವುದು ಇತರ ಭಾಗಕ್ಕಿಂತಲೂ ಹೆಚ್ಚೇ ಇರುತ್ತದೆ ಹಾಗೂ ಗಾಳಿಯಾಡುವಿಕೆ ಕಡಿಮೆ ಇರುವ ಕಾರಣ ಸಂಗ್ರಹವಾಗಿದ್ದ ಕಲ್ಮಶ ತೋಯ್ದು ದುರ್ವಾಸನೆ ಉಂಟಾಗುತ್ತದೆ. ಇದು ಬಹುತೇಕ ಎಲ್ಲರಿಗೂ ಎದುರಾಗುವ ಸಮಸ್ಯೆಯಾಗಿದೆ. ಕೊಂಚ ತಾಪಮಾನ ಹೆಚ್ಚಿದರೂ ಕಂಕುಳ ಭಾಗದಲ್ಲಿ ತೊಟ್ಟಿರುವ ಬಟ್ಟೆ ತೋಯುವುದು ಮತ್ತು ಇಲ್ಲಿಂದ ಕೊಂಚ ಕಮಟು ವಾಸನೆ ಹೊಮ್ಮುವುದು ಕೊಂಚ ಮುಜುಗರಕ್ಕೆ ಕಾರಣವಾಗಬಹುದು. ಈ ಬೆವರುವಿಕೆ ಪ್ರತಿ ವ್ಯಕ್ತಿಗೂ ಭಿನ್ನವಾಗಿದ್ದು ಕೆಲವರಿಗೆ ಕೊಂಚ ಸೆಖೆಯಾದರೂ ಕಂಕುಳ ಭಾಗದಿಂದ ಧಾರಾಕಾರವಾಗಿ ಬೆವರು ಹರಿಯುತ್ತದೆ. ಎಷ್ಟೇ ಸ್ನಾನ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಿದರೂ ಈ ಭಾಗದಲ್ಲಿ ಬೆವರು ಹರಿಯುವುದು ತಪ್ಪುವುದಿಲ್ಲ.

How To Get Rid Of Underarm Odour Naturally in Kannada

ದುರ್ಗಂಧ ನಿವಾರಕ ಅಥವಾ ಡಿಯೋಡರೆಂಟ್‌ಗಳು ಈ ನಿಟ್ಟಿನಲ್ಲಿ ಹೆಚ್ಚಿನ ಸಹಾಯಕ್ಕೆ ಬರುತ್ತವೆ ಮತ್ತು ದಿನವಿಡೀ ಕಂಕುಳ ಭಾಗದಿಂದ ದುರ್ವಾಸನೆ ಬೀರುವುದನ್ನು ಸಾಕಷ್ಟು ಕಡಿಮೆ ಮಾಡಿದರೂ, ಅವುಗಳನ್ನು ಬಳಸುವುದು ಶಾಶ್ವತ ಪರಿಹಾರವಲ್ಲ. ಏಕೆಂದರೆ ಇವುಗಳಲ್ಲಿರುವ ರಾಸಾಯನಿಕಗಳು ತ್ವಚೆಗೆ ಕ್ರಮೇಣ ಹಾನಿಯುಂಟು ಮಾಡಬಹುದು. ರಾಸಾಯನಿಕ ಆಧಾರಿತ ಡಿಯೋಡರೆಂಟ್‌ಗಳಿಗೆ ವಿರುದ್ಧವಾಗಿ ನೀವು ನೈಸರ್ಗಿಕ ಪರ್ಯಾಯಗಳನ್ನು ಹುಡುಕುತ್ತಿದ್ದರೆ ಮತ್ತು ದೀರ್ಘಕಾಲೀನ ಫಲಿತಾಂಶಗಳನ್ನು ಸಾಧಿಸಲು ಬಯಸಿದರೆ, ಈ ಲೇಖನವು ನಿಮಗೆ ಬೇಕಾಗಿರುವುದು. ಕಂಕುಳ ಭಾಗದ ದುರ್ವಾಸನೆಯನ್ನು ಕಡಿಮೆ ಮಾಡಲು ನೆರವಾಗುವ ಕೆಳಗಿನ ಪರಿಹಾರಗಳನ್ನು ನೀವು ಅನುಸರಿಸಬಹುದು.

ಅಷ್ಟಕ್ಕೂ ಇತರ ಭಾಗದಲ್ಲಿ ಬೆವರಿದ ಬಳಿಕ ಇಲ್ಲದಿರುವ ವಾಸನೆ ಕಂಕುಳ ಭಾಗದಲ್ಲೇಕೆ?

ಅಷ್ಟಕ್ಕೂ ಇತರ ಭಾಗದಲ್ಲಿ ಬೆವರಿದ ಬಳಿಕ ಇಲ್ಲದಿರುವ ವಾಸನೆ ಕಂಕುಳ ಭಾಗದಲ್ಲೇಕೆ?

ದೇಹದ ಇತರ ಭಾಗದಲ್ಲಿ ಎದುರಾಗುವ ವಾಸನೆಯಂತೆಯೇ ಕಂಕುಳ ಭಾಗದ ವಾಸನೆ ಮುಖ್ಯವಾಗಿ ಅಪೊಕ್ರೈನ್ ಗ್ರಂಥಿಗಳಿಗೆ ಸಂಬಂಧಿಸಿದೆ. ಈ ಗ್ರಂಥಿಗಳು ಹೆಚ್ಚಾಗಿ ಜನನಾಂಗದ ಪ್ರದೇಶ, ಮೊಲೆತೊಟ್ಟುಗಳು, ಕಂಕುಳು, ಸ್ತನಗಳು ಮತ್ತು ಕಿವಿಗಳಲ್ಲಿ ಕಂಡುಬರುತ್ತವೆ. ಅಲ್ಲದೇ ಸ್ತನಗಳಲ್ಲಿ ಹಾಲು ತುಂಬಿಕೊಳ್ಳಲು ಮತ್ತು ಕಿವಿಯಲ್ಲಿ ಮೇಣ ಸ್ರವಿಸಲೂ ಅವು ಕಾರಣವಾಗಿದ್ದರೂ, ಅವು ನಿಮ್ಮ ಜನನಾಂಗದ ಪ್ರದೇಶ, ಮೊಲೆತೊಟ್ಟುಗಳು ಮತ್ತು ಕಂಕುಳ ಭಾಗಗಳಲ್ಲಿ ಬೆವರು ಸ್ರವಿಸಲು ಸಹಾಯ ಮಾಡುತ್ತದೆ. ಈ ಗ್ರಂಥಿಗಳಿಂದ ಉತ್ಪತ್ತಿಯಾಗುವ ಬೆವರು ವಾಸನೆಯಿಂದ ಕೂಡಿರುತ್ತದೆ.

ಈ ವಾಸನೆಯ ಪ್ರಾಬಲ್ಯ ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಕಡಿಮೆಯಾಗಿರುತ್ತದೆ ಮತ್ತು ಕೆಲವರಲ್ಲಿ ಹೆಚ್ಚು ದುರ್ವಾಸನೆ ಬೀರಬಹುದು. ಕಂಕುಳ ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳು ಈ ಬೆವರಿನಲ್ಲಿರುವ ಪ್ರೋಟೀನ್ ಗಳನ್ನು ಒಡೆದು ಕೊಳೆಯುವಂತೆ ಮಾಡುವುದೇ ಈ ದುರ್ವಾಸನೆಗೆ ಕಾರಣ. ಮಕ್ಕಳಲ್ಲಿ ಈ ಗ್ರಂಥಿಗಳು ಪೂರ್ಣವಾಗಿ ಬೆಳೆದಿರದ ಕಾರಣ ಇಲ್ಲಿ ಬೆವರು ಬರುವ ಸಾಧ್ಯತೆಯೂ ಕಡಿಮೆ. ಆದರೆ ಅಪರೂಪದಲ್ಲಿ ಕೆಲವು ಮಕ್ಕಳಲ್ಲಿ ಕಂಕುಳ ಭಾಗದ ದುರ್ವಾಸನೆ ಕಂಡುಬರುತ್ತದೆ. ಆದರೆ ಈ ದುರ್ವಾಸನೆ ಕಂಡು ಬಂದರೆ, ಅದು ಇತರ ಯಾವುದೋ ಅಂಶಗಳು ಅಥವಾ ಇನ್ನೂ ಪತ್ತೆಯಾಗದಿರುವ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿರಬಹುದು.

ನಿಮ್ಮ ಕಂಕುಳಲ್ಲಿ ಬೆವರುವಿಕೆ ಮತ್ತು ದುರ್ವಾಸನೆಗೆ ಕಾರಣ ಏನೇ ಇರಲಿ, ಕೆಳಗೆ ಚರ್ಚಿಸಿದ ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ನೀವು ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ಪರಿಹರಿಸಿಕೊಳ್ಳಬಹುದು.

ಕಂಕುಳ ಭಾಗದ ದುರ್ವಾಸನೆ ನಿವಾರಿಸಲು ಒಂಭತ್ತು ಸಲಹೆಗಳು:

1. ಸೇಬಿನ ಶಿರ್ಕಾ (Apple Cider Vinegar)

1. ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾದಲ್ಲಿ ಅತಿಸೂಕ್ಷ್ಮಜೀವಿ ನಿವಾರಕ ಗುಣಗಳಿವೆ. ಅಂದರೆ ಈ ದ್ರವ ಇರುವಲ್ಲಿ ಈ ಸೂಕ್ಷ್ಮಜೀವಿಗಳು ಬದುಕಲಾರವು. ಈ ದ್ರವ ಕಂಕುಳ ಭಾಗದಲ್ಲಿನ ಪರಿಸರವನ್ನು ತಟಸ್ಥಗೊಳಿಸುತ್ತದೆ ಮತ್ತು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ನಾಶಕ್ಕೆ ಸಹಾಯ ಮಾಡುತ್ತದೆ. ಸೇಬಿನ ಶಿರ್ಕಾವನ್ನು ನಿಯಮಿತವಾಗಿ ಬಳಸುವುದರಿಂದ ಬ್ಯಾಕ್ಟೀರಿಯಾ ಸಂಗ್ರಹವಾಗುವುದನ್ನೂ ತಡೆಯಬಹುದು.

ಅನುಸರಿಸುವ ವಿಧಾನ:

ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಸೇಬಿನ ಶಿರ್ಕಾ ತೆಗೆದುಕೊಳ್ಳಿ.

ಇದರಲ್ಲಿ ಹತ್ತಿಯ ಉಂಡೆಯೊಂದನ್ನು ಅದ್ದಿ ಮತ್ತು ಅದನ್ನು ನಿಮ್ಮ ಕಂಕುಳ ಭಾಗಕ್ಕೆ ನೇರವಾಗಿ ಹಚ್ಚಿ ಒಣಗುವವರೆಗೆ ಕೈಗಳನ್ನು ಮೇಲೆತ್ತಿ ಇರಿಸಿ.

2. ಅಡುಗೆ ಸೋಡಾ

2. ಅಡುಗೆ ಸೋಡಾ

ಅತಿಯಾದ ಬೆವರುವಿಕೆ ಇದ್ದರೆ ಅಡುಗೆ ಸೋಡಾ ಬಳಸುವ ಮೂಲಕ ಬೆವರುವಿಕೆ ಮತ್ತು ದುರ್ವಾಸನೆಯನ್ನು ತಡೆಯಬಹುದು. ಇದರ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಈ ವಾಸನೆಗೆ ಕಾರಣವಾಗಿದ್ದ ಬ್ಯಾಕ್ಟೀರಿಯಾಗಳನ್ನು ತೊಲಗಿಸುವ ಮೂಲಕ ವಾಸನೆಯನ್ನೂ ಇಲ್ಲವಾಗಿಸುತ್ತವೆ.

ಅನುಸರಿಸುವ ವಿಧಾನ:

ಸಮಪ್ರಮಾಣದಲ್ಲಿ ಕೊಂಚ ಅಡುಗೆ ಸೋಡಾ ಮತ್ತು ಈಗತಾನೇ ಹಿಂಡಿ ತೆಗೆದ ಲಿಂಬೆರಸಗಳನ್ನು ಬೆರೆಸಿ ಲೇಪ ತಯಾರಿಸಿ

ಈ ಲೇಪವನ್ನು ಸ್ನಾನಕ್ಕೂ ಮುನ್ನ ಕಂಕುಳ ಭಾಗಕ್ಕೆ ನೇರವಾಗಿ ಅನ್ವಯಿಸಿ ಮತ್ತು ಸುಮಾರು ಎರಡರಿಂದ ಮೂರು ನಿಮಿಷ ಹಾಗೇ ಬಿಡಿ.

ಬಳಿಕ ಎಂದಿನಂತೆ ಸ್ನಾನ ಮಾಡಿ.

3. ಲಿಂಬೆ ರಸ

3. ಲಿಂಬೆ ರಸ

ಲಿಂಬೆ ಆಮ್ಲೀಯವಾಗಿದ್ದು ಹೆಚ್ಚು ಪ್ರಬಲವೂ ಆಗಿದೆ ಹಾಗೂ ಈ ಆಮ್ಲದ ಪ್ರಾಬಲ್ಯ ಬ್ಯಾಕ್ಟೀರಿಯಾಗಳನ್ನು ನಿವಾರಿಸಬಲ್ಲುದು. ಅಲ್ಲದೇ ಲಿಂಬೆರಸ ತ್ವಚೆಯ ಪಿಎಚ್ ಮಟ್ಟ ಅಥವಾ ಆಮ್ಲೀಯ-ಕ್ಷಾರೀಯ ಮಟ್ಟಗಳನ್ನು ತಗ್ಗಿಸಿ ಇಲ್ಲಿ ಬ್ಯಾಕ್ಟೀರಿಯಾಗಳು ಜೀವಸಹಿತ ಉಳಿಯದಂತೆ ಮಾಡುತ್ತವೆ.

ಅನುಸರಿಸುವ ವಿಧಾನ:

ಒಂದು ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿ ಅರ್ಧ ಲಿಂಬೆಯ ಒಳಗಿರುವ ಬೀಜಗಳನ್ನು ನಿವಾರಿಸಿ ಇದನ್ನು ಕಂಕುಳ ಭಾಗಕ್ಕೆ ನೇರವಾಗಿ ಉಜ್ಜಿಕೊಳ್ಳಿ. ಉಜ್ಜುವಾಗ ಕೊಂಚವೇ ಒತ್ತಡದಿಂದ ಲಿಂಬೆಯನ್ನು ಹಿಸುಕಿ ರಸ ಜಿನುಗುವಂತೆ ಮಾಡಿ. ಬಳಿಕ ಕೈಗಳನ್ನು ಮೇಲೆತ್ತಿ ಇರಿಸಿ ರಸ ಒಣಗುವಂತೆ ಮಾಡಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮ ಸಂವೇದಿಯಾಗಿದ್ದರೆ ಅರ್ಧ ಲಿಂಬೆಯ ರಸವನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಈ ನೀರಿನಲ್ಲಿ ಹತ್ತಿಯುಂಡೆಯಲ್ಲಿ ಅದ್ದಿ ಕಂಕುಳ ಭಾಗಕ್ಕೆ ಒರೆಸಿಕೊಳ್ಳಿ.

4. ಕೊಬ್ಬರಿ ಎಣ್ಣೆ

4. ಕೊಬ್ಬರಿ ಎಣ್ಣೆ

ತ್ವಚೆ ಮತ್ತು ಕೂದಲಿಗೆ ಕೊಬ್ಬರಿ ಎಣ್ಣೆಗಿಂತ ಉತ್ತಮ ತೈಲ ಇನ್ನೊಂದಿಲ್ಲ. ಇದರಲ್ಲಿರುವ ಮಧ್ಯಮ-ಸಂಕಲೆಯ ಕೊಬ್ಬಿನ ಆಮ್ಲಗಳು ಪ್ರಬಲ ಅತಿಸೂಕ್ಷ್ಮಜೀವಿ ನಿವಾರಕಗಳೂ ಆಗಿವೆ. ಈ ಎಣ್ಣೆಯ ವಾತಾವರಣದಲ್ಲಿ ವಾಸನೆ ಬರಿಸುವ ಬ್ಯಾಕ್ಟೀರಿಯಾಗಳು ಬದುಕಲಾರವು. ಅಲ್ಲದೇ ತ್ವಚೆಯ ಪಿಎಚ್ ಸಮತೋಲನವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಅನುಸರಸುವ ವಿಧಾನ:

ಕೊಂಚ ಕೊಬ್ಬರಿ ಎಣ್ಣೆಯನ್ನು ಬೆರಳ ತುದಿಗಳಿಗೆ ಸವರಿ ನೇರವಾಗಿ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ಎಣ್ಣೆಯನ್ನು ತ್ವಚೆ ಹೀರಿಕೊಳ್ಳುವರೆಗೂ ಕೊಂಚ ಹೊತ್ತು ಕೈಗಳನ್ನು ಎತ್ತಿ ಇರಿಸಿ ಒಣಗಲು ಬಿಡಿ.

ಎಷ್ಟು ಬಾರಿ ಹಚ್ಚಿಕೊಳ್ಳಬೇಕು?

ದಿನಕ್ಕೆ ಎರಡು ಬಾರಿ ಹಚ್ಚಿಕೊಂಡರೆ ಬೇಕಾದಷ್ಟಾಯಿತು. ಉತ್ತಮ ಪರಿಣಾಮಕ್ಕಾಗಿ ಸ್ನಾನದ ಬಳಿಕ ಮೈ ಒರೆಸಿಕೊಂಡು ಹಚ್ಚಿಕೊಳ್ಳಿ.

5. ಬೆಳ್ಳುಳ್ಳಿ.

5. ಬೆಳ್ಳುಳ್ಳಿ.

ಬೆಳ್ಳುಳ್ಳಿಯೇ ವಾಸನೆಯಿಂದ ಕೂಡಿದ್ದು ಇದನ್ನು ಸೇವಿಸಿದರೆ ದೇಹದ ವಾಸನೆ ಕಡಿಮೆಯಾಗುತ್ತದೆ ಎಂಬುದೇ ಅಚ್ಚರಿಯ ವಿಷಯ. ಆದರೆ ಇದರ ಅತ್ಯುತ್ತಮವಾದ ಅತಿಸೂಕ್ಷ್ಮಜೀವಿ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಈ ವಾಸನೆಯನ್ನು ತೆಗೆದುಹಾಕಲು ನೆರವಾಗುತದೆ.

ಅನುಸರಿಸುವ ವಿಧಾನ:

ಉತ್ತಮ ವಿಧಾನವೆಂದರೆ ಊಟದ ಜೊತೆಗೇ ಕೆಲವು ಎಸಳುಗಳನ್ನು ಜಗಿದು ನುಂಗುವುದು.

ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸದೇ ಹೋಗಬಹುದು. ಹಾಗಾಗಿ, ಈ ಸಾರವಿರುವ ಹೆಚ್ಚುವರಿ ಔಷಧಿಗಳನ್ನು ಸೇವಿಸುವ ಬಗ್ಗೆ ನಿಮ್ಮ ವೈದ್ಯರಲ್ಲಿ ಸಲಹೆ ಪಡೆಯಿರಿ.

6. ಲೋಳೆಸರ ಅಥವಾ ಆಲೋವೆರಾ

6. ಲೋಳೆಸರ ಅಥವಾ ಆಲೋವೆರಾ

ಲೋಳೆಸರದಲ್ಲಿ ಅಧಿಕ ಮಟ್ಟದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಪ್ರಬಲ ಅತಿಸೂಕ್ಷ್ಮಜೀವಿ ನಿವಾರಕ ಗುಣಗಳೂ ಇವೆ. ಈ ಗುಣಗಳು ಕಂಕುಳ ವಾಸನೆಯ ನಿವಾರಣೆಗೆ ಅತಿ ಸೂಕ್ತವಾಗಿವೆ. ಆಲೋವೆರಾ ರಸದ ಜ್ಯೂಸ್ ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳು ನಿವಾರಣೆಯಾಗುವ ಜೊತೆಗೇ ಇದರ ತಿರುಗಳನ್ನು ಕಂಕುಳ ಭಾಗಕ್ಕೆ ಹಚ್ಚಿಕೊಳ್ಳುವ ಮೂಲಕ ದುರ್ಗಂಧ ಮೂಡಿಸುತ್ತಿದ್ದ ಬ್ಯಾಕ್ಟೀರಿಯಾಗಳೂ ಇಲ್ಲವಾಗುತ್ತವೆ.

ಅನುಸರಿಸುವ ವಿಧಾನ:

ಈಗ ತಾನೇ ತೆರೆದ ಲೋಳೆಸರದ ಕೋಡಿನಿಂದ ಸಂಗ್ರಹಿಸಿದ ತಿರುಗಳನ್ನು ಬೆರಳ ತುದಿಗಳಿಂದ ನೇರವಾಗಿ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ

ಒಣಗುವಷ್ಟೂ ಹೊತ್ತು ಕೈಗಳನ್ನು ಮೇಲಿರಿಸಿ ಬಳಿಕ ರಾತ್ರಿಯಿಡೀ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಎಂದಿನಂತೆ ಸ್ನಾನ ಮಾಡಿ.

ಹೆಚ್ಚುವರಿಯಾಗಿ ನಿತ್ಯವೂ ಕಾಲು ಕಪ್ ನಷ್ಟು ಲೋಳೆಸರದ ರಸವನ್ನು ಕುಡಿಯುತ್ತಾ ಬನ್ನಿ

7. ಹರಳೆಣ್ಣೆ

7. ಹರಳೆಣ್ಣೆ

ಹಿಂದಿನ ದಿನಗಳಲ್ಲಿ ಅತಿ ಹೆಚ್ಚಾಗಿ ಹಲವಾರು ಕೆಲಸಗಳಿಗೆ ಬಳಕೆಯಾಗುತ್ತಿದ್ದ ಹರಳೆಣ್ಣೆ ಈಗ ವಿರಳವಾಗಿದೆ. ಅತಿ ಸ್ನಿಗ್ಧತೆಯ ಕಾರಣ ಇದರ ಪಸೆ ಹಚ್ಚಿದಲ್ಲಿ ಉಳಿದುಕೊಂಡು ಇಲ್ಲಿ ಸಂಗ್ರಹವಾಗುವ ಧೂಳು ಕ್ರಮೇಣ ಗಟ್ಟಿಯಾದ ಅಟ್ಟೆಯಾಗುವುದು ಈ ಎಣ್ಣೆಯ ಬಳಕೆ ಕಡಿಮೆಯಾಗಲು ಒಂದು ಕಾರಣ. ಅಂದ ಮಾತ್ರಕ್ಕೆ ಇದರ ಗುಣಗಳೇನೂ ಕಡಿಮೆಯಾಗಿಲ್ಲ. ಈ ಎಣ್ಣೆ ಹಚ್ಚಿಕೊಂಡಾಗಲೂ ದುರ್ಗಂಧ ಮೂಡಿಸುತ್ತಿದ್ದ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತದೆ. ಇದರಲ್ಲಿರುವ ಅತಿಸೂಕ್ಷ್ಮಜೀವಿ ನಿವಾರಕ ಗುಣ ಇದಕ್ಕೆ ಕಾರಣ.

ಅನುಸರಿಸುವ ವಿಧಾನ:

ಕೊಂಚ ಹರಳೆಣ್ಣೆಯನ್ನು ಬೆರಳ ತುದಿಗಳ ಮೂಲಕ ಕಂಕುಳ ಭಾಗಕ್ಕೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ

ಮರುದಿನ ಎಂದಿನಂತೆ ಸ್ನಾನ ಮಾಡಿ.

8. ಎಪ್ಸಂ ಉಪ್ಪು (Epsom salt)

8. ಎಪ್ಸಂ ಉಪ್ಪು (Epsom salt)

ಈ ಉಪ್ಪಿಗೆ ಬೆವರನ್ನು ಹೆಚ್ಚಿಸುವ ಗುಣವಿದೆ ಹಾಗೂ ಈ ಮೂಲಕ ದೇಹದ ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಈ ಕಲ್ಮಶಗಳೂ ಕೆಲವೊಮ್ಮೆ ದೇಹದ ದುರ್ಗಂಧಕ್ಕೆ ಕಾರಣವಾಗಬಹುದು.

ಅನುಸರಿಸುವ ವಿಧಾನ:

ನೀವು ಸ್ನಾನ ಮಾಡುವ ನೀರಿಗೆ ಒಂದು ಕಪ್ ನಷ್ಟು ಎಪ್ಸಂ ಉಪ್ಪನ್ನು ಹಾಕಿ ಕಲಕಿ.

ಈ ನೀರಿನಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ದೇಹವನ್ನು ಮುಳುಗಿಸಿಡಿ.

9. ಆಲೂಗಡ್ಡೆ

9. ಆಲೂಗಡ್ಡೆ

ಆಲುಗಡ್ಡೆ ಕೊಂಚ ಆಮ್ಲೀಯವಾಗಿದ್ದು ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ತ್ವಚೆಯ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಈ ಮೂಲಕ ಕಂಕುಳ ಭಾಗದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ದುರ್ಗಂಧವನ್ನೂ ಇಲ್ಲವಾಗಿಸುತ್ತದೆ.

ಅನುಸರಿಸುವ ವಿಧಾನ:

ಒಂದು ಆಲುಗಡ್ಡೆಯನ್ನು ಸುಲಿದು ತೆಳ್ಳನೆಯ ಬಿಲ್ಲೆಗಳಾಗಿ ಕತ್ತರಿಸಿ

ಒಂದು ಬಿಲ್ಲೆಯನ್ನು ನೇರವಾಗಿ ಕಂಕುಳ ಭಾಗಕ್ಕೆ ಹಚ್ಚಿ ರಸ ಒಸರುವಂತೆ ಮಾಡಿ. ಹೆಚ್ಚು ರಸಕ್ಕಾಗಿ ಹೆಚ್ಚು ಬಿಲ್ಲೆಗಳನ್ನು ಬಳಸಿ

ಈ ರಸ ಒಣಗುವವರೆಗೂ ಕೈಗಳನ್ನು ಮೇಲೆತ್ತಿ ಇರಿಸಿ.

ಬಳಿಕ ನಿಮ್ಮ ನಿತ್ಯದ ಡಿಯೋಡೋರೆಂಟ್ ಸಿಂಪಡಿಸಿ.

ದೇಹ ದುರ್ಗಂಧ ಇಲ್ಲವಾಗಿಸಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯ

ದೇಹ ದುರ್ಗಂಧ ಇಲ್ಲವಾಗಿಸಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯ

ನಿತ್ಯವೂ ಕನಿಷ್ಟ ಒಮ್ಮೆಯಾದರೂ ಸ್ನಾನ ಮಾಡಿ.

ಉತ್ತಮ ಬ್ಯಾಕ್ಟೀರಿಯಾ ನಿರೋಧಕ ಸೋಪ್ ಬಳಸಿ.

ಪ್ರತಿ ಸ್ನಾನದ ನಂತರ ಒಗೆದು ಇಸ್ತ್ರಿ ಮಾಡಿರುವ ಟವೆಲ್‌ಗಳನ್ನೇ ಬಳಸಿ. ಅಂದರೆ ಒಮ್ಮೆ ಬಳಸಿದ ಟವೆಲ್‌ಗಳನ್ನು ನೇರವಾಗಿ ಒಗೆಯಲು ಹಾಕಿ.

ಉತ್ತಮ ಡಿಯೋಡರೆಂಟ್ ಅಥವಾ ಆಂಟಿಪೆರ್ಸ್ಪಿರಂಟ್ (ಬೆವರು ನಿವಾರಕ) ಉತ್ಪನ್ನಗಳನ್ನೇ ಬಳಸಿ.

ಉಣ್ಣೆ ಅಥವಾ ಹತ್ತಿಯಿಂದ ಮಾಡಿದ ನೈಸರ್ಗಿಕ ಬಟ್ಟೆಗಳನ್ನು ಆರಿಸಿಕೊಳ್ಳಿ.

ಸಡಿಲವಾದ ಮತ್ತು ತೇವಾಂಶ-ಹೀರಿಕೊಳ್ಳುವಂತಹ ಬಟ್ಟೆಗಳನ್ನು ಧರಿಸಿ.

ನಿಮ್ಮ ಕಂಕುಳ ಕೂದಲನ್ನು ಆಗಾಗ ಕತ್ತರಿಸಿಕೊಳ್ಳುತ್ತಿರಿ. ಇದು ಕಂಕುಳ ವಾಸನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮೇಲೋಗರ ಮತ್ತು ಈರುಳ್ಳಿಯಂತಹ ವಾಸನೆ ಮೂಡಿಸುವ ಆಹಾರಗಳಿಂದ ದೂರವಿರಿ.

ಹೆಚ್ಚು ಹಣ್ಣುಗಳು, ತರಕಾರಿಗಳು, ಕೋಳಿ ಮತ್ತು ಮೀನುಗಳನ್ನು ಸೇವಿಸಿ.

ಸಾಕಷ್ಟು ನೀರನ್ನು ದಿನವಿಡೀ ಕುಡಿಯುತ್ತಿರಿ.

English summary

How To Get Rid Of Underarm Odour Naturally in Kannada

Here we are briefing you more about How To Get Rid Of Underarm Odour Naturally in Kannada. If you are looking for natural alternatives as opposed to chemical-based deodorants and want to achieve long-term results, this article is just what you need. You can follow the remedies below to help minimize the armpit odour.Read more.
X
Desktop Bottom Promotion