For Quick Alerts
ALLOW NOTIFICATIONS  
For Daily Alerts

ಸೂರ್ಯಗ್ರಹಣ ನಿಮ್ಮ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ ಗೊತ್ತೆ?

|

ವರ್ಷದ ಮೊದಲ ಸೂರ್ಯಗ್ರಹಣ ಜೂನ್‌ 10ರಂದು ಘಟಿಸಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬರಲಿದ್ದು ಸೂರ್ಯನನ್ನು ಗ್ರಹಣ ಮಾಡಲಿದ್ದಾನೆ, ಈ ವೇಳೆ ಆಕಾಶದಲ್ಲಿ ಸೂರ್ಯನ ಅಂಚುಗಳಿಂದ "ಬೆಂಕಿಯ ಉಂಗುರ" ಮೂಡಲಿದೆ. ಭೌಗೋಳಿಕವಾಗಿ ನಡೆಯುವ ಈ ವಿಸ್ಮಯವನ್ನು ನೋಡಲು ಇಡೀ ವಿಶ್ವವೇ ಕಾತುರವಾಗಿದೆ.

ಆದರೆ, ಸೂರ್ಯಗ್ರಹಣ ಎಂಬುದು ಭೂಗೋಳದಲ್ಲಿ ನಡೆಯುವಂಥ ಒಂದು ನೈಸರ್ಗಿಕ ವಿದ್ಯಾಮಾನವಾಗಿದ್ದರೂ ಇದು ಮಾನವನ ದೇಹದ ಮೇಲೆ ಕೆಲವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ವೈದ್ಯಕೀಯವಾಗಿ ದೃಢವಾಗಿದೆ, ಇನ್ನಷ್ಟು ಧಾರ್ಮಿಕವಾಗಿ ಅಥವಾ ಸಿದ್ಧಾಂತಗಳನ್ನು ಸಹ ನಂಬಲಾಗಿದೆ.

ಸೂರ್ಯಗ್ರಹಣವು ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಮುಂದೆ ನೋಡೋಣ:

ಸೂರ್ಯಗ್ರಹಣವು ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಮುಂದೆ ನೋಡೋಣ:

ಗರ್ಭಿಣಿಯರು

ಗರ್ಭಿಣಿ ಮಹಿಳೆಯರಿಗೆ ಸೂರ್ಯ ಗ್ರಹಣ ಉತ್ತಮವಲ್ಲ. ಕೆಲವು ಪೌರಾಣಿಕ ಸಿದ್ಧಾಂತಗಳ ಪ್ರಕಾರ ಸಹ, ಗರ್ಭಿಣಿಯರು ಗ್ರಹಣ ಸಮಯದಲ್ಲಿ ತಮ್ಮ ಮನೆಯಿಂದ ಹೊರಗೆ ಹೋಗಬಾರದು, ಏಕೆಂದರೆ ಸೂರ್ಯ ಗ್ರಹಣದ ವೇಳೆ ಭೂಮಿಗೆ ಬೀಳುವ ಕಿರಣಗಳು ಅವಳ ಅಥವಾ ಮಗುವಿಗೆ ಹಾನಿಕಾರಕ, ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ಗ್ರಹಣದ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವ ಮಹಿಳೆಯರು ಹೆರಿಗೆಯ ಸಮಯದಲ್ಲಿ ತೊಂದರೆ ಅನುಭವಿಸುತ್ತಾರೆ ಅಥವಾ ಅವರ ಅಸಹಜ ಮಗುವಿನ ಜನನಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಕಣ್ಣಿನ ಸಮಸ್ಯೆ

ಕಣ್ಣಿನ ಸಮಸ್ಯೆ

ಸೂರ್ಯಗ್ರಹಣವನ್ನು ನೇರವಾಗಿ ಬರಿಗಣ್ಣಿನಿಂದ ನೋಡುವುದರಿಂದ ಇದು ನಿಮ್ಮ ರೆಟಿನಾವನ್ನು ಹಾನಿಗೊಳಿಸಬಹುದು ಅಥವಾ ಕಿರಣಗಳ ಪ್ರಭಾವ ಹೆಚ್ಚಿದ್ದರೆ ಕುರುಡುತನಕ್ಕೂ ಕಾರಣವಾಗಬಹುದು. ನೀವು ಸೂರ್ಯಗ್ರಹಣವನ್ನು ವೀಕ್ಷಿಸಲು ಬಯಸಿದರೆ ಅದಕ್ಕಾಗಿ ವಿಶೇಷ ಸೂರ್ಯಗ್ರಹಣದ ಕನ್ನಡಕವನ್ನು ಬಳಸಿ. ಅನೇಕ ಜನರು ಅವೈಜ್ಞಾನಿಕವಾಗಿ ವರ್ತಿಸಿ, ಸನ್‌ಗ್ಲಾಸ್‌ ಅಥವಾ ದೂರದರ್ಶಕಗಳನ್ನು ಬಳಸಲು ನಿರಾಕರಿಸುತ್ತಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಕರ ನೆನಪಿರಲಿ.

ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು

ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು

ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಗ್ರಹಣದ ಸಮಯಲ್ಲಿ ಯಾವುದೇ ರೀತಿಯ ಆಹಾರ ಸೇವಿಸಬೇಡಿ ಎಂದು ಹೇಳುವುದುಂಟು, ಆದರೆ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಗ್ರಹಣದ ಸಮಯದಲ್ಲಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಅದೇ ಕಾರಣಕ್ಕಾಗಿ, ಜನರು ಸೂರ್ಯಗ್ರಹಣ ಮುಗಿಯುವವರೆಗೂ ಏನನ್ನೂ ತಿನ್ನುವುದನ್ನು ಅಥವಾ ಕುಡಿಯುವುದನ್ನು ತಪ್ಪಿಸುತ್ತಾರೆ.

ಆಲಸ್ಯವನ್ನುಂಟು ಮಾಡುತ್ತದೆ

ಆಲಸ್ಯವನ್ನುಂಟು ಮಾಡುತ್ತದೆ

ಕೆಲವು ನಂಬಿಕೆಗಳ ಪ್ರಕಾರ, ಸೂರ್ಯನ ಕಿರಣಗಳು ನಿಮಗೆ ದಣಿವು ಮತ್ತು ಆಲಸ್ಯವನ್ನುಂಟು ಮಾಡುತ್ತದೆ. ಗ್ರಹಣದ ದಿನ ನಿಮಗೆ ಇದ್ದಕ್ಕಿಂದ್ದಂತೆ ನಿದ್ರಾಹೀನತೆ, ಒತ್ತಡ, ಆಯಾಸ ಎದುರಾದರೆ ಭಯ ಬೇಡ, ಬದಲಾಗಿ ಹೆಚ್ಚುವಿಶ್ರಾಂತಿ ಪಡೆಯರಿ ಮತ್ತು ಸೂರ್ಯನ ಕಿರಣಗಳಿಂದ ದೂರವಿರಿ.

ಮನಸ್ಥಿತಿ ಬದಲಾವಣೆ

ಮನಸ್ಥಿತಿ ಬದಲಾವಣೆ

ಸೂರ್ಯ ಗ್ರಹಣದಂಥ ಖಗೋಳ ಘಟನೆಗಳು ನಿಮ್ಮ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ಕಾರಣ ಇಲ್ಲದೆಯೂ ನಿಮ್ಮ ಮನಸ್ಥಿತಿ ಹಾಳಾಗಬಹುದು ಅಥವಾ ಕಿರಿಕಿರಿ, ದುಃಖ ಅನುಭವಿಸಬಹುದು.

English summary

How Solar Eclipse will affect human health? Dos, Don'ts and precautionary measures to take during Surya Grahan in kannada

Here we are discussing about How Solar Eclipse will affect human health? Dos, Don'ts and precautionary measures to take during Surya Grahan in kannada. Read more.
X
Desktop Bottom Promotion