For Quick Alerts
ALLOW NOTIFICATIONS  
For Daily Alerts

ಕೊರೊನಾ 2ನೇ ಡೋಸ್‌ ಪಡೆದ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಲು ಎಷ್ಟು ದಿನ ಬೇಕು?

|

ಕೊರೊನಾ ಲಸಿಕೆ ಬಂದಾಗ ಇನ್ನು ಕೊರೊನಾ ಕಾಟದಿಂದ ಪಾರಾಗಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು, ಆದರೆ ರೂಪಾಂತರ ಕೊರೊನಾವೈರಸ್‌ನ ದಾಳಿಗೆ ಬೆಚ್ಚಿ ಬೀಳುವಂತಾಗಿದೆ. ವರ್ಷದ ಹಿಂದಿನ ಸ್ಥಿತಿ ಮತ್ತೆ ಮರುಕಳಿಸುತ್ತಿದೆ. ಏಕಾಏಕಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.

ಕೊರೊನಾ ಲಸಿಕೆಯನ್ನು 45 ವರ್ಷದ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ, ಕೆಲವರಲ್ಲಿ ಡೋಸ್‌ ಪಡೆದ ಬಳಿಕ ಕೊರೊನಾ ಸೋಂಕು ಕಂಡು ಬಂದಿವೆ. ಕೊರೊನಾ ಲಸಿಕೆ ಪಡೆದ ತಕ್ಷಣ ನಮ್ಮ ದೇಹವು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಮರ್ಥವಾಗುವುದಿಲ್ಲ, ಅದಕ್ಕೆ ಸ್ವಲ್ಪ ದಿನ ಬೇಕು. ಹಾಗದರೆ ಕೊರೊನಾ ಲಸಿಕೆಯ ಎರಡನೇ ಡೋಸ್‌ ಪಡೆದ ಬಳಿಕ ದೇಹದಲ್ಲಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಲು ಎಷ್ಟು ದಿನಗಳು ಬೇಕಾಗುವುದು, ಕೊರೊನಾ ಲಸಿಕೆಯನ್ನು ಎಷ್ಟು ಅಂತರದ ನಡುವೆ ತೆಗೆದುಕೊಳ್ಳಬೇಕು, ಮೊದಲ ಡೋಸ್‌ ಪಡೆದ ತಕ್ಷಣವೇ ರೋಗ ನಿರೋಧಕ ಶಕ್ತ ಹೆಚ್ಚುವುದೇ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ:

ಕೊರೊನಾ ಲಸಿಕೆಯ ಎರಡನೇ ಡೋಸ್‌ ಪಡೆದ ಬಳಿಕ

ಕೊರೊನಾ ಲಸಿಕೆಯ ಎರಡನೇ ಡೋಸ್‌ ಪಡೆದ ಬಳಿಕ

ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಎಂಬ ಎರಡು ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಕೊರೊನಾ ಲಸಿಕೆ ಪಡೆಯುವವರು ಮೊದಲು ಪಡೆದ ಡೋಸ್‌ ಅನ್ನೇ ಎರಡನೇ ಡೋಸ್‌ನ ಸಮಯದಲ್ಲಿ ಪಡೆಯಬೇಕಾಗುತ್ತದೆ.

ಅಲ್ಲದೆ ನೀವು ಎರಡು ಡೋಸ್‌ ಪಡೆದ ತಕ್ಷಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಎರಡನೇ ಡೋಸ್‌ ಪಡೆದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು 2 ವಾರಗಳು ಬೇಕಾಗುವುದು, ಇದರೊಳಗೆ ಎಚ್ಚರಿಕೆ ವಹಿಸದಿದ್ದರೆ ಕೊರೊನಾ ತಗುಲಬಹುದು.

ಆದ್ದರಿಂದ ಎರಡು ಡೋಸ್‌ ಕೊರೊನಾ ಲಸಿಕೆ ಪಡೆದಿದ್ದೇನೆ ಎಂದು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಹೊರಗಡೆ ಸುತ್ತಾಡುವುದು ಅಪಾಯವನ್ನು ಸ್ವಾಗತಿಸಿದಂತೆ ನೆನಪಿರಲಿ.

ಮೊದಲ ಡೋಸ್‌ ಬಳಿಕ ಎರಡನೇ ಡೋಸ್‌ ತೆಗೆದುಕೊಳ್ಳಲು ಎಷ್ಟು ಸಮಯಬೇಕು?

ಮೊದಲ ಡೋಸ್‌ ಬಳಿಕ ಎರಡನೇ ಡೋಸ್‌ ತೆಗೆದುಕೊಳ್ಳಲು ಎಷ್ಟು ಸಮಯಬೇಕು?

ನೀವು ಕೋವಿಶೀಲ್ಡ್ ಲಸಿಕೆ ಪಡೆದಿದ್ದರೆ ಮೊದಲ ಲಸಿಕೆ ಪಡೆದ ನಂತರ 4-8 ವಾರಗಳ ಒಳಗೆ ಎರಡನೇ ಡೋಸ್‌ ಪಡೆಯಬೇಕು.

ಕೊವಾಕ್ಸಿನ್ ಲಸಿಕೆಯನ್ನು ಮೊದಲ ಡೋಸ್‌ನಲ್ಲಿ ಪಡೆದಿದ್ದರೆ 28 ದಿನಗಳ ಬಳಿಕ ಎರಡನೇ ಡೋಸ್‌ ಹಾಕಿಸಬೇಕು.

ಎರಡು ಡೋಸ್‌ ಲಸಿಕೆ ಏಕೆ ಪಡೆಯಬೇಕು?

ಎರಡು ಡೋಸ್‌ ಲಸಿಕೆ ಏಕೆ ಪಡೆಯಬೇಕು?

ಅಧ್ಯಯನ ಪ್ರಕಾರ ಮೊದಲ ಡೋಸ್‌ ಪಡೆದಾಗ ದೇಹವು ಹೊರಗಿನಿಂದ ದೇಹವನ್ನು ಪ್ರವೇಶಿಸುವ ಕೊರೊನಾ ಸೋಂಕನ್ನು ಗುರುತಿಸುವ ಸಾಮರ್ಥ್ಯ ಒಡೆಯುತ್ತದೆ, ಆ ವೈರಸ್ ವಿರುದ್ಧ ನಮ್ಮ ದೇಹದ ರೋಗ ನಿರೋಧಕ ಶಕ್ತವಾಗಿ ಹೋರಾಡು ಸಾಮರ್ಥ್ಯ ಎರಡನೇ ಡೋಸ್‌ನ ಬಳಿಕವಷ್ಟೇ ಬರುವುದು.

ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ತೆಗೆಯಲು ತುಂಬಾ ತಡವಾದರೆ?

ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ತೆಗೆಯಲು ತುಂಬಾ ತಡವಾದರೆ?

ಮೊದಲ ಡೋಸ್‌ ಪಡೆದ ಬಳಿಕ ವೈದ್ಯರು ಎರಡನೇ ಡೋಸ್‌ ಯಾವಾಗ ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ. ಆದರೆ ಎರಡನೇ ಡೋಸ್‌ ನಾನಾ ಕಾರಣಗಳಿಂದ ಆ ಸಮಯಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಆತಂಕ ಬೇಡ , ಕೆಲ ದಿನಗಳ ತೆಗೆದುಕೊಳ್ಳಬಹುದು. ಸ್ವಲ್ಪ ತಡವಾದರೆ ಈ ಲಸಿಕೆಯ ಸಾಮರ್ಥ್ಯವೇನು ಕಡಿಮೆಯಾಗುವುದಿಲ್ಲ.

ಲಸಿಕೆ ಬಳಿಕ ರೋಗ ನಿರೋಧಕ ಶಕ್ತಿ ಎಷ್ಟು ಸಮಯ ಇರುತ್ತದೆ?

ಲಸಿಕೆ ಬಳಿಕ ರೋಗ ನಿರೋಧಕ ಶಕ್ತಿ ಎಷ್ಟು ಸಮಯ ಇರುತ್ತದೆ?

ಲಸಿಕೆ ಪಡೆದ ಬಳಿಕ ನಮ್ಮ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಎಷ್ಟು ಸಮಯವಿರುತ್ತದೆ ಎಂದು ನಿಖರವಾಗಿ ಈಗ ಹೇಳಲು ಸಾಧ್ಯವಿಲ್ಲ, ಈ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ.

ಆದರೆ ಲಸಿಕೆ ಲಭ್ಯವಿರುವುದರಿಂದ ಅದನ್ನು ತೆಗೆದುಕೊಂಡು ಕೊರೊನಾ ಹರಡದಂತೆ ತಡೆಗಟ್ಟುವ ಕೆಲಸವನ್ನು ಮೊದಲು ಮಾಡಬೇಕಾಗಿದೆ.

ಲಸಿಕೆ ಪಡೆದ ಬಳಿಕವೂ ನೀವು ಏನೆಲ್ಲಾ ಮುನ್ನೆಚ್ಚರಿಕೆವಹಿಸಬೇಕು?

* ಮಾಸ್ಕ್ ಧರಿಸಬೇಕು

*ಆಗಾಗ ಸೋಪ್ ಹಚ್ಚಿ ಕೈಗಳನ್ನು ತೊಳೆಯುತ್ತಿರಿ.

* ದೈಹಿಕ ಅಂತರ ಕಾಯ್ದುಕೊಳ್ಳಬೇಕು.

* ಜನರು ಗುಂಪು ಇರುವ ಕಡೆ ಹೋಗಬೇಡಿ.

English summary

How Long Does It Take to Develop Immunity After the Second COVID-19 Vaccine?

How long does it take to develop immunity after the second COVID-19 vaccine, read on,
X
Desktop Bottom Promotion