For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಹಲ್ಲಿಗೂ ಆಗುವುದು ಸಮಸ್ಯೆ! ತಡೆಗಟ್ಟುವುದು ಹೇಗೆ?

|

ನಮ್ಮ ದೇಹದಲ್ಲಿ ಹಾರ್ಮೋನ್ ಬದಲಾವಣೆಯೂ ಸಾಕಷ್ಟು ಏರಿಳಿತಗಳನ್ನು ಮಾಡಬಹುದು. ಅದು ನಮ್ಮ ತೂಕ, ಮನಸ್ಥಿತಿ, ಚರ್ಮ , ಕೂದಲು ಜೊತೆಗೆ ಆರೋಗ್ಯದಲ್ಲಿ ಗೋಚರವಾಗುತ್ತದೆ. ಆದರೆ, ಈ ಹಾರ್ಮೋನ್ ಬದಲಾವಣೆಯು ನಮ್ಮ ಹಲ್ಲುಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಹೌದು, ದೇಹದಲ್ಲಿ ಆಗುವ ಹಾರ್ಮೋನ್ ಏರಿಳಿತದಿಂದ ನಮ್ಮ ಹಲ್ಲಿನ ಆರೋಗ್ಯ ಹದಗೆಡುವುದು. ಈ ಸಮಯದಲ್ಲಿ ಬಾಯಿ, ಹಲ್ಲುಗಳು ಕೆಲವೊಂದು ಲಕ್ಷಣಗಳನ್ನು ಹೊರಹಾಕುತ್ತವೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ, ಸ್ತ್ರೀ ಹಾರ್ಮೋನುಗಳು ವಸಡು ಕಾಯಿಲೆಗಳು, ಹಲ್ಲುಗಳ ಸೂಕ್ಷ್ಮತೆ, ರಕ್ತಸ್ರಾವದಂತಹ ವಿವಿಧ ಹಲ್ಲಿನ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬುದನ್ನು ಪ್ರತಿ ಮಹಿಳೆ ತಿಳಿದಿರಬೇಕು.

ಆದ್ದರಿಂದ ನಾವಿಂದು ಮಹಿಳೆಯರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಆಗುವ ಹಾರ್ಮೋನ್ ಬದಲಾವಣೆಯಿಂದ, ಹಲ್ಲುಗಳಿಗೆ ಆಗುವ ಪರಿಣಾಮವೇನು ಎಂಬುದನ್ನು ವಿವರಿಸಿದ್ದೇವೆ. ಈ ಮೂಲಕ, ಆ ಹಂತಗಳಲ್ಲಿ ನೀವು ಹಲ್ಲಿನ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿಬೇಕು.

ಪ್ರೌಢಾವಸ್ಥೆ:

ಪ್ರೌಢಾವಸ್ಥೆ:

ಹದಿಹರೆಯದ ವಯಸ್ಸಿನ ಹುಡುಗಿಯರು ಹಾರ್ಮೋನ್ ಬದಲಾವಣೆಯಿಂದ, ಸಾಮಾನ್ಯವಾಗಿ ಬಾಯಿ ಕೆಂಪಾಗುವಿಕೆ, ಊದಿಕೊಂಡ ಮತ್ತು ರಕ್ತಸ್ರಾವದ ಒಸಡುಗಳಿಂದ ಬಳಲುತ್ತಾರೆ. ಇನ್ನೂ ಕೆಲವರಲ್ಲಿ ಕ್ಯಾನ್ಸರ್ ಹುಣ್ಣುಗಳು ಸಹ ಬೆಳವಣಿಗೆಯಾಗಬಹುದು. ಅದು ಸಾಮಾನ್ಯವಾಗಿ ಆಮೇಲೆ ವಾಸಿಯಾಗುತ್ತದೆ. ಇದಕ್ಕೆ ಉತ್ತಮ ಚಿಕಿತ್ಸೆ ಅಂದರೆ, ತಡೆಗಟ್ಟುವಿಕೆ ಅಷ್ಟೇ... ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು. ನಿಮ್ಮ ಬಾಯಿಯ ಕುಹರವನ್ನು ಸ್ವಚ್ಛವಾಗಿಡುವುದು, ಸರಿಯಾದ ಹಲ್ಲಿನ ಆರೈಕೆಯನ್ನು ಮಾಡುವುದು, ವರ್ಷಕ್ಕೆ ಒಮ್ಮೆ ಇಡೀ ಬಾಯಿಯನ್ನು ಸ್ವಚ್ಛಗೊಳಿಸುವುದು. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತವೈದ್ಯರನ್ನು ಭೇಟಿ ಮಾಡುವುದು ಸೇರಿಕೊಂಡಿವೆ.

ಮುಟ್ಟಿನ ಸಮಯ:

ಮುಟ್ಟಿನ ಸಮಯ:

ಮಹಿಳೆಯು ತನ್ನ ಋತುಚಕ್ರದಲ್ಲಿದ್ದಾಗ, ಅವಳ ಬಾಯಿಯಲ್ಲಿ ಬಹಳಷ್ಟು ಬದಲಾವಣೆಗಳು ಸಂಭವಿಸುತ್ತವೆ ಆದರೆ, ಹೆಚ್ಚಿನವರಿಗೆ ಇದು ತಿಳಿದಿರುವುದಿಲ್ಲ. ಊದಿಕೊಂಡ ಒಸಡುಗಳು, ಒಸಡುಗಳಲ್ಲಿ ರಕ್ತಸ್ರಾವ, ಕ್ಯಾಂಕರ್ ಹುಣ್ಣುಗಳು ಅಥವಾ ಊದಿಕೊಂಡ ಲಾಲಾರಸ ಗ್ರಂಥಿಗಳನ್ನು ಹೊಂದಿದ್ದರೆ, ಅದು ಹಾರ್ಮೋನುಗಳ ಬದಲಾವಣೆಯಿಂದ ಸಂಭವಿಸಿರುತ್ತವೆ. ಈ ರೋಗಲಕ್ಷಣಗಳು ಸಾಮಾನ್ಯವಾಗಿ ಮುಟ್ಟು ನಿಂತಾಗ ಕಡಿಮೆಯಾಗುತ್ತವೆ. ಆದರೆ ಅವುಗಳು ಕಡಿಮೆಯಾಗದಿದ್ದರೆ, ಹಲ್ಲಿನ ಸಮಸ್ಯೆಗೆ ದಾರಿಮಾಡಿಕೊಡಬಹುದು. ಅಂತಹ ಸಂದರ್ಭದಲ್ಲಿ, ಮಹಿಳೆಯರು ತಮ್ಮ ದಂತವೈದ್ಯರೊಂದಿಗೆ ಮಾತನಾಡಬೇಕು, ಮಾಸಿಕ ಚಕ್ರವು ಹಲ್ಲಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರೊಂದಿಗೆ ಹಂಚಿಕೊಳ್ಳಬೇಕು.

ಗರ್ಭಾವಸ್ಥೆ:

ಗರ್ಭಾವಸ್ಥೆ:

ಗರ್ಭಾವಸ್ಥೆಯಲ್ಲಿ, ಮಹಿಳೆಯರು ಹಾರ್ಮೋನುಗಳ ಅಪಾರ ಏರಿಳಿತಗಳಿಂದ ಬಳಲುತ್ತಾರೆ ಎಂಬುದು ತಜ್ಞರ ಅಭಿಪ್ರಾಯ. ಬಹಳಷ್ಟು ಮಹಿಳೆಯರು ಗರ್ಭಾವಸ್ಥೆಯಲ್ಲಿ ಜಿಂಗೈವಿಟಿಸ್ ಅನ್ನು ಅಭಿವೃದ್ಧಿಪಡಿಸುತ್ತಾರೆ, ಇದು ವಸಡು ಕಾಯಿಲೆಯ ಸೌಮ್ಯ ರೂಪವಾಗಿದ್ದು, ಒಸಡುಗಳು ಕೆಂಪಾಗುವುದು, ಮೃದು ಹಾಗೂ ನೋವಿನ ಸ್ಥಿತಿಯಾಗಿದೆ. ಇದು ತುಂಬಾ ಸಾಮಾನ್ಯವಾಗಿದೆ ಆದರೆ ಕಾಳಜಿ ವಹಿಸಬೇಕು ಏಕೆಂದರೆ, ಈ ಸಮಯದಲ್ಲಿ ಮಹಿಳೆಯರು ತಮ್ಮ ಹಲ್ಲುಗಳನ್ನು ಕಳೆದುಕೊಳ್ಳಬಹುದು. ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ತಮ್ಮ ದಂತವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ಜೊತೆಗೆ ಉತ್ತಮ ದಂತ ದಿನಚರಿಯನ್ನು ಅನುಸರಿಸಬೇಕು. ಯಾವುದೇ ನೈಸರ್ಗಿಕ ತೈಲವನ್ನು ಬಳಸಿ, ಗರ್ಭಿಣಿಯರು ವಸಡಿನ ಮಸಾಜ್ ಮಾಡಿಕೊಳ್ಳುವುದು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಋತುಬಂಧ ಅಥವಾ ಮುಟ್ಟು ನಿಂತ ಮೇಲೆ:

ಋತುಬಂಧ ಅಥವಾ ಮುಟ್ಟು ನಿಂತ ಮೇಲೆ:

ಋತುಬಂಧವು ಮಹಿಳೆಯ ಜೀವನವನ್ನು ಮತ್ತು ಹಲ್ಲಿನ ಆರೋಗ್ಯವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ರುಚಿ ಬದಲಾವಣೆ, ಬಾಯಿಯಲ್ಲಿ ಸುಡುವ ಸಂವೇದನೆಗಳು ಮತ್ತು ಹೆಚ್ಚಿದ ಜುಮ್ಮೆನ್ನುವಿಕೆ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಅನೇಕ ಮಹಿಳೆಯರಿಗೆ ಬಾಯಿ ಒಣಗುವುದು ಸಹ ಆಗುತ್ತ.ದೆ ಆದ್ದರಿಂದ ಮುಟ್ಟು ನಿಂತ ಮೇಲೆ ಮಹಿಳೆಯರು ಸಾಕಷ್ಟು ನೀರು ಕುಡಿಯಬೇಕು ಮತ್ತು ಸಕ್ಕರೆ ಮುಕ್ತ ಮಿಠಾಯಿಗಳನ್ನು ಸೇವಿಸಬೇಕು.. ಬಾಯಿ ಒಣಗುವ ವಿಚಾರಕ್ಕೆ ಬಂದಾಗ , ನಾವು ತಿನ್ನುವ ಆಹಾರ ಕೂಡ ವ್ಯತ್ಯಾಸವನ್ನುಂಟುಮಾಡುತ್ತದೆ. ಉಪ್ಪು, ಮಸಾಲೆಯುಕ್ತ, ಜಿಗುಟಾದ ಮತ್ತು ಸಕ್ಕರೆಯ ಆಹಾರಗಳು, ಹಾಗೆಯೇ ಮತ್ತು ಅಗಿಯಲು ಕಷ್ಟವಾದ ಒಣ ಆಹಾರಗಳನ್ನು ತಪ್ಪಿಸಿ. ಆಲ್ಕೋಹಾಲ್, ತಂಬಾಕು ಮತ್ತು ಕೆಫೀನ್ ಒಣ ಬಾಯಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಮೌತ್ ವಾಶ್ ಬಳಸುವುದರಿಂದ ಲಾಲಾರಸ ಉತ್ಪಾದನೆಗೆ ಸಹಾಯ ಮಾಡಬಹುದು.

ಜೊತೆಗೆ ಮುಟ್ಟು ನಿಂತ ಮೇಲೆ ಈಸ್ಟ್ರೊಜೆನ್ ಕಡಿಮೆಯಾಗುವುದರಿಂದ ಮೂಳೆ ಸಾಂದ್ರತೆ ಕುಂಠಿತವಾಗುತ್ತದೆ. ಇದು ಹಲ್ಲು ಉದುರುವಿಕೆಗೆ ಕಾರಣವಾಗಬಹುದು ಆದ್ದರಿಂದ ವಿಟಮಿನ್ಗಳು ಮತ್ತು ಖನಿಜಗಳ ಹೆಚ್ಚುವರಿ ಡೋಸ್ಗಾಗಿ ವೈದ್ಯರನ್ನು ಸಂಪರ್ಕಿಸಿ.

English summary

Hormonal Changes Can Lead To Dental Issues, Here Is How To Prevent Them in Kannada

Here we talking about Hormonal Changes Can Lead To Dental Issues, Here Is How To Prevent Them in Kannada, read on
Story first published: Thursday, November 25, 2021, 13:36 [IST]
X
Desktop Bottom Promotion