For Quick Alerts
ALLOW NOTIFICATIONS  
For Daily Alerts

ಇಂತಹವರು ಹೀಟ್ ಸ್ಟ್ರೋಕ್ ಗೆ ಒಳಗಾಗುವುದು ಹೆಚ್ಚು!

|

ಬೇಸಿಗೆಯ ಕಾಲದಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಒಂದು ಸಾಹಸವೇ ಸರಿ. ಇದಕ್ಕೆ ನಾನಾ ವಿಧಾನಗಳನ್ನು ಅನುಸರಿಸಿದರೂ ಸಹ, ಈ ಹವಾಮಾನದಿಂದ ಹೆಚ್ಚು ಪರಿಣಾಮ ಬೀರುವ ಅನೇಕ ಜನರು ನಮ್ಮ ನಡುವೆಯೇ ಇದ್ದಾರೆ. ಇಂತಹವರು ಹೀಟ್ ಸ್ಟ್ರೋಕ್ ಅಥವಾ ಶಾಖದ ಹೊಡೆತಕ್ಕೆ ಒಳಗಾಗುವುದು ಹೆಚ್ಚು ವಿಶೇಷವಾಗಿ ಈ ಬೇಸಿಗೆಯಲ್ಲಿ. ಅಂತಹ ಜನರು ಎಷ್ಟೇ ಜಾಗರೂಕರಾಗಿರಲಿ, ಅವರನ್ನು ಹೀಟ್ ಸ್ಟ್ರೋಕ್ ಕಾಡದೇ ಬಿಡದು. ಹಾಗಾದರೆ ಇಲ್ಲಿ ಯಾರು ಇದಕ್ಕೆ ಒಳಗಾಗುವುದು ಎಂಬುದನ್ನು ನೊಡೋಣ.

ಹೀಟ್ ಸ್ಟ್ರೋಕ್ ಗೆ ಒಳಗಾಗುವ ಸಾಧ್ಯತೆ ಯಾರಿಗಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹವಾಮಾನಕ್ಕೆ ತಕ್ಕಂತೆ ದೇಹ ಹೊಂದಿಕೆಯಾಗದವರು:

ಹವಾಮಾನಕ್ಕೆ ತಕ್ಕಂತೆ ದೇಹ ಹೊಂದಿಕೆಯಾಗದವರು:

ಹೌದು, ಇಂತಹ ಸೂಕ್ಷ್ಮ ದೇಹವನ್ನು ಹೊಂದಿರುವವರು ಹೀಟ್ ಸ್ಟ್ರೋಕ್ ಗೆ ಹೆಚ್ಚು ಒಳಗಾಗುತ್ತಾರೆ. ಅವರಿಗೆ ಹವಾಮಾನಕ್ಕೆ ಅನುಗುಣವಾಗಿ ತಮ್ಮನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಸಿಗೆ ಬಂದ ಕೂಡಲೇ ಎಸಿ ಮೊರೆ ಹೋಗುತ್ತಾರೆ. ಇದರಿಂದ ಅವರ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಜೊತೆಗೆ ಇವರಿಗೆ ವಿಪರೀತ ಶಾಖ ಅಥವಾ ಉಷ್ಣಾಂಶವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಆರೋಗ್ಯ ಸಮಸ್ಯೆಯುಳ್ಳವರು:

ಆರೋಗ್ಯ ಸಮಸ್ಯೆಯುಳ್ಳವರು:

ಚರ್ಮದ ಕಾಯಿಲೆಗಳು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸಹ ಶಾಖದ ಹೊಡೆತಕ್ಕೆ ತುತ್ತಾಗುತ್ತಾರೆ. ಮಧುಮೇಹ ಹೊಂದಿರುವ ರೋಗಿಗಳು ಬೇಸಿಗೆಯಲ್ಲಿ ಸನ್‌ಸ್ಕ್ರೀನ್, ಕೊಡೆ ಅಥವಾ ಚರ್ಮ ಕಾಪಾಡುವಂತಹ ಬಟ್ಟೆಗಳಿಲ್ಲದೇ ಹೊರಗೆ ಹೋಗುವುದನ್ನು ತಪ್ಪಿಸಬೇಕು.

ಆಲ್ಕೋಹಾಲ್ ಸೇವಿಸುವವರು:

ಆಲ್ಕೋಹಾಲ್ ಸೇವಿಸುವವರು:

ಆಲ್ಕೊಹಾಲ್ ಕುಡಿಯುವವರು ಸಹ ಶಾಖದ ಹೊಡೆತಕ್ಕೆ ಗುರಿಯಾಗುತ್ತಾರೆ ಏಕೆಂದರೆ ಆಲ್ಕೋಹಾಲ್ ಯಕೃತ್ತು ಮತ್ತು ಹೃದಯವನ್ನು ಸುಡುತ್ತದೆ. ತಾಪಮಾನ ಹೆಚ್ಚಾದಾಗ, ತನ್ನ ದುರ್ಬಲ ರೋಗನಿರೋಧಕ ಶಕ್ತಿಯಿಂದ ಅದನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಇದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾನೆ.

ತೇವಾಂಶದ ಕೊರತೆಯಿರವವರು:

ತೇವಾಂಶದ ಕೊರತೆಯಿರವವರು:

ತೇವಾಂಶದ ಕೊರತೆಯಿಂದ ದೇಹ ಒಣಗಿದವರು ಸಹ ಹೀಟ್ ಸ್ಟ್ರೋಕ್ ಗೆ ಗುರಿಯಾಗುತ್ತಾರೆ. ದೇಹದಲ್ಲಿ ನೀರಿನಾಂಶದ ಕೊರತೆಯಿರುವುದರಿಂದ ಹೀಟ್ ಸ್ಟ್ರೋಕ್ ಬರುವ ಸಾಧ್ಯತೆಗಳು ಹೆಚ್ಚು. ಎಣ್ಣೆಯುಕ್ತ ಚರ್ಮವುಳ್ಳವರು, ಡ್ರೈ ಸ್ಕಿನ್ ಇರುವವರಿಗಿಂತ ಹೆಚ್ಚು ಶಾಖದ ಹೊಡೆತಕ್ಕೆ ಒಳಗಾಗುತ್ತಾರೆ.

ಹೀಟ್‌ಸ್ಟ್ರೋಕ್ ತಪ್ಪಿಸಲು ಅತ್ಯಂತ ಪರಿಣಾಮಕಾರಿ ಮನೆಮದ್ದು ಇಲ್ಲಿದೆ:

ಹೀಟ್‌ಸ್ಟ್ರೋಕ್ ತಪ್ಪಿಸಲು ಅತ್ಯಂತ ಪರಿಣಾಮಕಾರಿ ಮನೆಮದ್ದು ಇಲ್ಲಿದೆ:

ಹೀಟ್ ಸ್ಟ್ರೋಕ್ ತಡೆಗಟ್ಟಲು ಮಾವಿನ ಹಣ್ಣಿನ ಪಚ್ಚೆ ಸಹಾಯ ಮಾಡಲಿದೆ. ಇದನ್ನು ತಯಾರಿಸಲು ಮಾವಿನಹಣ್ಣುಗಳನ್ನು ನೀರಿನಲ್ಲಿ ಕುದಿಸಿ. ನಂತರ ಸ್ವಲ್ಪ ಸಮಯದವರೆಗೆ ತಣ್ಣೀರಿನಲ್ಲಿ ಇರಿಸಿ. ಅದು ತಣ್ಣಗಾದಾಗ, ಅವುಗಳ ಸಿಪ್ಪೆ ತೆಗೆಯಿರಿ. ತದನಂತರ ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ. ಇದಕ್ಕೆ ಬೆಲ್ಲ, ಕೊತ್ತಂಬರಿ, ಕರಿಮೆಣಸು, ಉಪ್ಪು ಇತ್ಯಾದಿಗಳನ್ನು ರುಚಿಗೆ ತಕ್ಕಂತೆ ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ. ಇದನ್ನು ತಣ್ಣಗಾಗಿಸಿ ಮತ್ತು ದಿನಕ್ಕೆ 2 ರಿಂದ 3 ಬಾರಿ ಕುಡಿಯಿರಿ. ಹೀಟ್‌ಸ್ಟ್ರೋಕ್ ತಡೆಗಟ್ಟುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.

English summary

Home Remedies to Prevent Heatstroke in Kannada

Here we are talking about Home Remedies to Prevent Heatstroke in Kannada, read on
X
Desktop Bottom Promotion