For Quick Alerts
ALLOW NOTIFICATIONS  
For Daily Alerts

ಹಳದಿ ಬಣ್ಣಕ್ಕೆ ತಿರುಗಿದ ಹಲ್ಲುಗಳನ್ನು ಬಿಳಿಯಾಗಿಸುವ ಮನೆಮದ್ದುಗಳು

|

ಬಾಯಿಯ ಆರೋಗ್ಯ ಬಹಳ ಮುಖ್ಯ. ಪ್ರತಿದಿನ ಹಲ್ಲು ಉಜ್ಜುವುದು, ಸರಿಯಾಗಿ ಬಾಯಿ ಮುಕ್ಕಳಿಸಿ ತೊಳೆಯುವುದು ಮತ್ತು ನಿಯಮಿತವಾಗಿ ಹಲ್ಲುಗಳ ಪರೀಕ್ಷೆ ನಡೆಸುವುದು ಸೇರಿದಂತೆ ಬಾಯಿಯ ಆರೋಗ್ಯಕ್ಕಾಗಿ ನೀವು ಹಲವು ಕಾಳಜಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ತಪ್ಪಾದ ರೀತಿಯಲ್ಲಿ ಹಲ್ಲುಜ್ಜುವುದರಿಂದಾಗಿ ಹಲ್ಲುಗಳ ಸಂದುಗಳಲ್ಲಿ ಫ್ಲೇಕ್ ಅಥವಾ ಕೊಳೆಯಂತ ಬಿಳಿ ಪದರದ ರಚನೆಯಾಗುತ್ತದೆ. ಇದನ್ನು ನಿರ್ಲಕ್ಷಿಸಿದಾಗ ಹಲ್ಲುಗಳ ಸಂದುಗಳಲ್ಲಿ ಕಂದು ಬಣ್ಣದ ಪದರ ನಿರ್ಮಾಣವಾಗುತ್ತದೆ. ಇದು ಅಂತಿಮವಾಗಿ ಹಲವಾರು ಹಲ್ಲು ಹಾಗೂ ಒಸಡಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.

home remedies

ಹಲ್ಲುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವುದರಿಂದಾಗಿ ಕೆಲವೇ ತಿಂಗಳಲ್ಲಿ ಹಲ್ಲುಗಳ ಮೇಲೆ ಟಾರ್ಟರ್ ಅಥವಾ ಕಂದುಬಣ್ಣದ ಪದರ ನಿರ್ಮಾಣವಾಗುತ್ತದೆ. ಹಾಗಾದ್ರೆ ಈ ಸಮಸ್ಯೆಯಿಂದ ದೂರವಾಗುವುದು ಹೇಗೆ? ಯಾವುದೇ ರೀತಿಯ ಹಲ್ಲುಗಳ ಸಮಸ್ಯೆ ಬಾರದೇ ಇರುವಂತೆ ನೋಡಿಕೊಳ್ಳುವುದು ಹೇಗೆ? ಅದಕ್ಕಾಗಿ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

ಹಲ್ಲುಗಳ ಕಂದು ಮತ್ತು ಹಳದಿ ಬಣ್ಣದ ನಿವಾರಣೆಗೆ ನೈಸರ್ಗಿಕ ವಿಧಾನಗಳು:

1. ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡಿ

1. ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡಿ

ಸರಿಯಾದ ರೀತಿಯಲ್ಲಿ ಹಲ್ಲುಗಳನ್ನು ಉಜ್ಜುವುದರಿಂದಾಗಿ ಹಲ್ಲುಗಳ ಮೇಲೆ ಕುಳಿತುಕೊಳ್ಳುವ ಟಾರ್ಟರ್ ಅನ್ನು ತಡೆಯಬಹುದು. ಮೃದುವಾಗಿರುವ ಮುಳ್ಳುಗಳಿರುವಂತಹ ಬ್ರಷ್ ಅನ್ನು ಬ್ರಷ್ಶಿಂಗ್ ಗೆ ಬಳಕೆ ಮಾಡಿ ಮತ್ತು ಎಲ್ಲಾ ಹಲ್ಲುಗಳ ಪ್ರತಿಯೊಂದು ಭಾಗವನ್ನು ಸ್ವಚ್ಛವಾಗಿಸಬೇಕು. ಯಾವಾಗಲೂ ಕೂಡ ನಿಮ್ಮ ಬ್ರಷ್ ಅನ್ನು ಹಲ್ಲಿನ ವಸಡಿನ ಭಾಗಕ್ಕೆ 45 ಡಿಗ್ರಿ ಕೋನದಲ್ಲಿ ಹಿಡಿದುಕೊಂಡು ಹಲ್ಲುಜ್ಜಬೇಕು.

2. ಫ್ಲೋರೈಡ್ ಟೂತ್ ಪೇಸ್ಟ್ ಬಳಸಿ

2. ಫ್ಲೋರೈಡ್ ಟೂತ್ ಪೇಸ್ಟ್ ಬಳಸಿ

ಫ್ಲೋರೈಡ್ ಟೂತ್ ಪೇಸ್ಟ್ ಗಳು ಹಲ್ಲುಗಳಲ್ಲಿನ ಫ್ಲೋರೈಡ್ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅವುಗಳನ್ನು ಬಲಪಡಿಸುತ್ತದೆ ಮತ್ತು ಹಲ್ಲಿನ ಹುಳುಕನ್ನು ತಡೆಯುವುದಕ್ಕೆ ನೆರವು ನೀಡುತ್ತದೆ. ಫ್ಲೋರೈಡ್ ಟೂತ್ ಪೇಸ್ಟ್ ಬಳಕೆ ಮಾಡುವುದರಿಂದಾಗಿ ಹಲ್ಲುಗಳಲ್ಲಿ ಕೊಳೆಯುವಿಕೆಯಿಂದ ಬಳಲುತ್ತಿರುವ ಪ್ರದೇಶಗಳನ್ನು ಮರುಹೊಂದಿಸಲು ಸಹಾಯ ಮಾಡುತ್ತದೆ ಮತ್ತು ಟಾರ್ಟರ್ ಗಳ ರಚನೆಗೆ ಕಾರಣವಾದ ಬ್ಯಾಕ್ಟೀರಿಯಾದಿಂದ ಅವುಗಳನ್ನು ರಕ್ಷಿಸುತ್ತದೆ. ನೀವೇನು ಮಾಡಬೇಕು?

ನಿಮ್ಮ ಟೂತ್ ಬ್ರಷ್ ನಲ್ಲಿ ಅಗತ್ಯ ಪ್ರಮಾಣದಷ್ಟು ಪ್ಲೋರೈಡ್ ಟೂತ್ ಪೇಸ್ಟ್ ಅನ್ನು ತೆಗೆದುಕೊಳ್ಳಿ ಮತ್ತು ಸರಿಯಾದ ಮಾರ್ಗದಲ್ಲಿ ಎಲ್ಲಾ ಹಲ್ಲುಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ದಿನಕ್ಕೆ ಎರಡು ಬಾರಿಯಾದರೂ ಮಾಡಿ.

3. ಕಂದು ಬಣ್ಣ ಕಂಟ್ರೋಲ್ ಮಾಡುವ ಟೂತ್ ಪೇಸ್ಟ್

3. ಕಂದು ಬಣ್ಣ ಕಂಟ್ರೋಲ್ ಮಾಡುವ ಟೂತ್ ಪೇಸ್ಟ್

ಟಾರ್ಟರ್ ಅನ್ನು ಅಥವಾ ಹಲ್ಲಿನ ಮೇಲಾಗುವ ಕಂದು ಬಣ್ಣವನ್ನು ಕಂಟ್ರೋಲ್ ಮಾಡುವ ಟೂತ್ ಪೇಸ್ಟ್ ಗಳಲ್ಲಿ ರಾಸಾಯನಿಕ ಪದಾರ್ಥಗಳಿರುತ್ತದೆ ಉದಾಹರಣೆಗೆ ಫೈರೋಫಾಸ್ಪೇಟ್, ಝಿಂಕ್ ಸಿಟ್ರೇಟ್, ಫ್ಲೋರೈಡ್ ಇತ್ಯಾದಿಗಳು. ಈ ಪದಾರ್ಥಗಳು ಹಲ್ಲಿನ ಮೇಲೆ ನಿರ್ಮಾಣವಾಗುವ ಟಾರ್ಟರ್ ಅನ್ನು ತಡೆಯುತ್ತದೆ ಮತ್ತು ನಿಮ್ಮ ಹಲ್ಲುಗಳ ಮೇಲೆ ಪರಿಣಾಮ ಬೀರುವ ಹುಳುಕುಗಳ ತಡೆಗೆ ಸಹಕರಿಸುತ್ತದೆ. ಕೆಲವು ಟಾರ್ಟರ್ ಕಂಟ್ರೋಲ್ ಟೂತ್ ಪೇಸ್ಟ್ ಗಳಲ್ಲಿ ಆಂಟಿಬಯೋನಿಕ್ ಅಂಶವಾಗಿರುವ ಟ್ರೈಕ್ಲೋಸನ್ ಇರುತ್ತದೆ. ಇದು ಕೆಲವು ಹಲ್ಲುಗಳಿಗೆ ತೊಂದರೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಸಾಯಿಸುವುದಕ್ಕೆ ನೆರವಾಗುತ್ತದೆ.

ನೀವೇನು ಮಾಡಬೇಕು?

ನಿಮ್ಮ ಹಲ್ಲುಗಳನ್ನು ಟಾರ್ಟರ್ ಕಂಟ್ರೋಲ್ ಟೂತ್ ಪೇಸ್ಟ್ ಬಳಸಿ ಉಜ್ಜಬೇಕು. ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ಮಾಡಬೇಕು.

4. ಬೇಕಿಂಗ್ ಸೋಡಾ ಮಿಶ್ರಣ

4. ಬೇಕಿಂಗ್ ಸೋಡಾ ಮಿಶ್ರಣ

ಬೇಕಿಂಗ್ ಸೋಡಾ ನಿಮ್ಮ ಹಲ್ಲು ಮತ್ತು ವಸಡುಗಳಲ್ಲಿ ನಿರ್ಮಾಣವಾಗುವ ಕೀಟಾಣುಗಳನ್ನು ಮತ್ತು ಟಾರ್ಟರ್, ಫ್ಲೇಕ್ ಗಳ ಆಂಟಿಬ್ಯಾಕ್ಟೀರಿಯಲ್ ಪರಿಣಾಮವನ್ನು ತಡೆಯುವುದಕ್ಕೆ ನೆರವು ನೀಡುತ್ತದೆ. ಇದು ನಿಮ್ಮ ಹಲ್ಲುಗಳಲ್ಲಿ ಕಂದು ಬಣ್ಣವನ್ನು ಹೊಡೆದೋಡಿಸಿ ಬಿಳಿಯಾಗಿಸುವುದಕ್ಕೆ ನೆರವು ನೀಡುತ್ತದೆ.

ನೀವೇನು ಮಾಡಬೇಕು?

ಉಪ್ಪು ಮತ್ತು ಬೇಕಿಂಗ್ ಸೋಡಾವನ್ನು ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಟೂತ್ ಬ್ರಷ್ ಮೂಲಕ ಬಳಸಿ ಹಲ್ಲುಗಳನ್ನು ಸ್ಕ್ರಬ್ ಮಾಡಿ. ಹದವಾಗಿ ಬೆಚ್ಚಗಿರುವ ನೀರನ್ನು ಬಳಸಿ ಬಾಯಿಯನ್ನು ತೊಳೆಯಿರಿ.

ಉತ್ತಮ ಫಲಿತಾಂಶಕ್ಕಾಗಿ ದಿನ ಬಿಟ್ಟು ದಿನ ಈ ವಿಧಾನವನ್ನು ಅನುಸರಿಸಿ. ಒಮ್ಮೆ ಹಲ್ಲುಗಳಲ್ಲಿನ ಕಂದು ಬಣ್ಣ ಸಂಪೂರ್ಣ ಹೋದ ಮೇಲೆ ಈ ವಿಧಾನವನ್ನು 7 ರಿಂದ 10 ದಿನಗಳಿಗೊಮ್ಮೆ ಬಳಕೆ ಮಾಡಬಹುದು.

5. ಅಲವೀರಾ ಜೆಲ್

5. ಅಲವೀರಾ ಜೆಲ್

ಅಲವೀರಾ ಜೆಲ್ ನಲ್ಲಿ ಆಂಟಿಮೈಕ್ರೋಬಿಯಲ್ ಗುಣಗಳಿವೆ ಮತ್ತು ಇದು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾಗಳಿಂದ ಉತ್ಪತ್ತಿಯಾಗುವ ಫ್ರೀ ರ್ಯಾಡಿಕಲ್ ಗಳನ್ನು ಸ್ಕ್ಯಾವೆಂಜ್ ಮಾಡುವ ಮೂಲಕ ವಸಡುಗಳ ಗುಣಪಡಿಸುವಿಕೆಯ ಕೆಲಸಕ್ಕೆ ನೆರವು ನೀಡುತ್ತದೆ. ಲಿಂಬೆಯ ಎಸೆನ್ಶಿಯಲ್ ಎಣ್ಣೆಯು ಸಿ ವಿರುದ್ಧ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಬಿಕಾನ್ಸ್ ಎಂದರೆ ನಮ್ಮ ಚರ್ಮ ಮತ್ತು ದೇಹದ ಕೆಲವು ಭಾಗಗಳಲ್ಲಿ ಕಂಡುಬರುವ ಶಿಲೀಂದ್ರಗಳು. ಇದು ಟಾರ್ಟರ್ ಮತ್ತು ಕಂದು ವರ್ಣವನ್ನು ಹಲ್ಲುಗಳಲ್ಲಿ ತಡೆಯುವುದಕ್ಕೆ ನೆರವು ನೀಡುತ್ತದೆ.

ನೀವೇನು ಮಾಡಬೇಕು?

ಎಲ್ಲಾ ಪದಾರ್ಥಗಳನ್ನು ಸೇರಿಸಿ ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಬಳಸಿ ನಿಮ್ಮ ಹಲ್ಲುಗಳನ್ನು ಸ್ಕ್ರಬ್ ಮಾಡಿ. ನಂತರ ಈ ಪೇಸ್ಟ್ ಅನ್ನು ತೆಗೆಯುವುದಕ್ಕಾಗಿ ನಿಮ್ಮ ಬಾಯಿಯನ್ನು ತೊಳೆಯಿರಿ. 3-4 ದಿನಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಿ. ಫ್ಲೇಕ್ ಸಂಪೂರ್ಣ ಹೋಗುವವರೆಗೆ ನೀವು ಈ ವಿಧಾನವನ್ನು ಅನುಸರಿಸಬಹುದು.

ಸೂಚನೆ: ಈ ರೆಮಿಡಿಯನ್ನು ದೀರ್ಘಾವಧಿಗೆ ಬಳಕೆ ಮಾಡಬೇಡಿ ಯಾಕೆಂದರೆ ಇದರಲ್ಲಿರುವ ಗ್ಲಿಸರಿನ್ ಅಂಶವು ನಿಮ್ಮ ಹಲ್ಲುಗಳಲ್ಲಿ ನಡೆಯುವ ಮರುಹೊಂದಿಸುವ ಪ್ರಕ್ರಿಯೆಗೆ ಅಡ್ಡಿಯುಂಟುಮಾಡುವ ಸಾಧ್ಯತೆ ಇರುತ್ತದೆ.

6. ಎಳ್ಳು ಬೀಜದ ಎಣ್ಣೆ

6. ಎಳ್ಳು ಬೀಜದ ಎಣ್ಣೆ

ಎಳ್ಳು ಬೀಜದ ಎಣ್ಣೆಯು ಉತ್ಕರ್ಷಣ ನಿರೋಧಕ, ನಿರ್ವೀಶಿಕರಣ ಮತ್ತು ಪ್ರತಿಜೀವಕ ಗುಣಲಕ್ಷಣವನ್ನು ಪ್ರದರ್ಶಿಸುವ ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಸಾಂಪ್ರದಾಯಿಕವಾಗಿ ಇದನ್ನು ಹಲ್ಲುಗಳ ಆರೋಗ್ಯ ರಕ್ಷಣೆಯಲ್ಲಿ ಬಳಕೆ ಮಾಡಲಾಗುತ್ತಿತ್ತು.ಇದು ಹಲ್ಲುಗಳಲ್ಲಿ ನಿರ್ಮಾಣವಾಗುವ ಕಂದು ಬಣ್ಣವನ್ನು ತಡೆಯಲು ಸಹಕಾರಿಯಾಗಿದೆ. ವಸಡಿನ ಗಾಯದ ನಿವಾರಣೆಗೂ ಕೂಡ ಇದು ನೆರವು ನೀಡುತ್ತದೆ.

ನೀವೇನು ಮಾಡಬೇಕು?

ಬಾಯಿಗೆ ಎಳ್ಳು ಬೀಜದ ಎಣ್ಣೆಯನ್ನು ಹಾಕಿಕೊಂಡು 15 ನಿಮಿಷ ಬಾಯಿಯಲ್ಲಿಟ್ಟು ಮುಕ್ಕಳಿಸಿ. ನಂತರ ಬಾಯಿ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿಯಾದರೂ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.

7. ನಿಯಮಿತವಾಗಿ ಬಾಯಿಮುಕ್ಕಳಿಸುವಿಕೆ

7. ನಿಯಮಿತವಾಗಿ ಬಾಯಿಮುಕ್ಕಳಿಸುವಿಕೆ

ಹಲ್ಲುಗಳ ನಡುವೆ ಸಿಲುಕಿರುವ ಆಹಾರದ ಕಣಗಳು ಮತ್ತು ಬಿಳಿಪದರದ ನಿವಾರಣೆಗೆ ಬಾಯಿಮುಕ್ಕಳಿಸುವಿಕೆ ಅತ್ಯುತ್ತಮವಾಗಿರುವ ವಿಧಾನವಾಗಿದೆ. ಚೆನ್ನಾಗಿ ಬಾಯಿ ಮುಕ್ಕಳಿಸುವುದರಿಂದಾಗಿ ಟಾರ್ಟರ್ ರಚನೆಯಾಗುವುದು ಕೂಡ ಕಡಿಮೆಯಾಗುತ್ತದೆ ಮತ್ತು ಬಾಯಿಯ ಆರೋಗ್ಯ ಸುಧಾರಿಸುತ್ತದೆ. ಇದು ಕೇವಲ ದಂತಗಳ ನಡುವೆ ಮಾತ್ರ ಸ್ವಚ್ಛತೆ ಕಾಪಾಡುವುದಲ್ಲ ಬದಲಾಗಿ ವಸಡಿನ ಆರೋಗ್ಯ ಕಾಪಾಡುವುದಕ್ಕೂ ಕೂಡ ಸಹಕಾರಿ. ಹಾಗಾಗಿ ಯಾವುದೇ ರೀತಿಯ ಹಲ್ಲುಗಳ ಹುಳುಕು ಮತ್ತು ಬಾಯಿಯ ಅನಾರೋಗ್ಯ ಬಾಧಿಸದೇ ಇರುವಂತೆ ರಕ್ಷಿಸಿಕೊಳ್ಳಬಹುದು.

ನೀವೇನು ಮಾಡಬೇಕು?

ಎರಡು ಹಲ್ಲುಗಳ ನಡುವೆ ದಂತದ ಫ್ಲೋಸ್ ಸ್ಟ್ರಿಂಗ್ ನ್ನು ಸೇರಿಸಿ. ನಿಧಾನವಾಗಿ ಸ್ಟ್ರಿಂಗ್ ನ್ನು ಎಳೆಯಿರಿ ಮತ್ತು ಇದು ಹಲ್ಲುಗಳ ನಡುವೆ ಸೇರಿಕೊಂಡಿರುವ ಆಹಾರದ ಕಣಗಳ ನಿವಾರಣೆಗೆ ನೆರವಾಗುತ್ತದೆ. ಸಂಪೂರ್ಣ ಬಾಯಿಯ ಎಲ್ಲಾ ಹಲ್ಲುಗಳು ಸ್ವಚ್ಛವಾಗುವವರೆಗೆ ಈ ವಿಧಾನವನ್ನು ಪುನರಾವರ್ತಿಸಿ. ದಿನಕ್ಕೆ ಎರಡು ಬಾರಿಯಾದರೂ ಇದನ್ನು ಪುನರಾವರ್ತಿಸಿ.

9. ಹಲ್ಲುಗಳ ಕಡ್ಡಿಗಳ ಬಳಕೆ

9. ಹಲ್ಲುಗಳ ಕಡ್ಡಿಗಳ ಬಳಕೆ

ನೀವು ಡೆಂಟಲ್ ಪಿಕ್ ಗಳು ಅಥವಾ ಹಲ್ಲುಗಳ ಕಡ್ಡಿಗಳನ್ನು ಬಳಕೆ ಮಾಡಿ ಹಲ್ಲುಗಳ ಮಧ್ಯೆ ಅಡಗಿ ಕುಳಿತಿರುವ ಬಿಳಿಪದರ ಅಥವಾ ಕಂದು ಪದರದ ನಿವಾರಣೆಗ ಪ್ರಯತ್ನಿಸಬಹುದು. ಈ ಕಡ್ಡಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ನಿಧಾನವಾಗಿ ಪದರವನ್ನು ತೆಗೆಯುವುದಕ್ಕೆ ಇವುಗಳು ನೆರವಾಗುತ್ತದೆ.

ನೀವೇನು ಮಾಡಬೇಕು?

ಕನ್ನಡಿಯ ಮುಂದೆ ನಿಂತುಕೊಂಡು ನಿಮ್ಮ ಹಲ್ಲುಗಳ ನಡುವಲ್ಲಿ ಎಲ್ಲೆಲ್ಲಿ ಟಾರ್ಟರ್ ಅದರ ಪದರದ ನಿರ್ಮಾಣವಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ನಿಧಾನವಾಗಿ ಅದನ್ನು ಕಡ್ಡಿಗಳಿಂದ ಗೀರುತ್ತಾ ತೊಡೆದು ಹಾಕಿ. ನಂತರ ಅದನ್ನು ಉಗಿದು ಶುದ್ಧ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದು ಒಳ್ಳೆಯದು.

ಸೂಚನೆ: ಈ ವಿಧಾನವನ್ನು ನಿಧಾನವಾಗಿ ಮಾಡಬೇಕು ಯಾಕೆಂದರೆ ವಸಡಿಗೆ ನೋವು ಮಾಡಿಕೊಂಡು ಗಾಯ ಮಾಡಿಕೊಂಡರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ.

10. ಸಾಂಗಿನೇರಿಯಾ ಸಾರ

10. ಸಾಂಗಿನೇರಿಯಾ ಸಾರ

ಬ್ಲಡ್ ರೂಟ್ ಟೂತ್ ಪೇಸ್ಟ್‌ಗಳಲ್ಲಿ ಸಾಮಾನ್ಯ ಪದಾರ್ಥವಾಗಿದ್ದು ಆಂಟಿಮೈಕ್ರೋಬಯಾಲ್ ಏಜೆಂಟ್ ಆಗಿದೆ ಮತ್ತು ದಂತಗಳ ಫ್ಲೇಕ್ ಅನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ. ಅದೇ ಕಾರಣಕ್ಕಾಗಿ ಈ ಪದಾರ್ಥವನ್ನು ದಂತಗಳ ಫ್ಲೇಕ್ ನಿವಾರಣೆ ಮತ್ತು ಕೊಳಕು ನಿವಾರಣೆಯಲ್ಲಿ ಬಳಕೆ ಮಾಡಲಾಗುತ್ತದೆ.

ನೀವೇನು ಮಾಡಬೇಕು?

ಬೆಚ್ಚಗಿನ ನೀರಿಗೆ ಬ್ಲಡ್ ರೂಟ್ ಸಾರವನ್ನು ಸೇರಿಸಿ ಮತ್ತು ಈ ಮಿಶ್ರಣದಿಂದ ಬಾಯಿಯನ್ನು ಗೊಳಗೊಳ ಮಾಡಿ. ಪ್ರತಿ ದಿನ ಈ ಮೌತ್ ವಾಷ್ ಅನ್ನು ಬಳಕೆ ಮಾಡಿ. ದಿನಕ್ಕೆ ಎರಡು ಬಾರಿ ಬಳಕೆ ಮಾಡುವುದು ಬಹಳ ಒಳ್ಳೆಯದು.

11. ಎಣ್ಣೆಯಿಂದ ಬಾಯಿ ಮುಕ್ಕಳಿಸುವಿಕೆ

11. ಎಣ್ಣೆಯಿಂದ ಬಾಯಿ ಮುಕ್ಕಳಿಸುವಿಕೆ

ಬಾಯಿ ಸೋಂಕು ಮತ್ತು ಹಲ್ಲುಗಳ ನಡುವಿನ ಪದರದ ನಿವಾರಣೆಗೆ ಎಣ್ಣೆಯಿಂದ ಬಾಯಿ ಮುಕ್ಕಳಿಸುವಿಕೆ ಬಹಳ ಸಾಮಾನ್ಯವಾಗಿರುವ ಒಂದು ವಿಧಾನ. ತೆಂಗಿನ ಎಣ್ಣೆಯು ನಿಮ್ಮ ಬಾಯಿಂಯ ಎಲ್ಲಾ ರೀತಿಯ ಹುಳುಕನ್ನು ಮತ್ತು ಅಶುದ್ಧತೆಯನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿದೆ. ಮೌಖಿಕ ರೋಗಕಾರಕಗಳ ವಿರುದ್ಧ ಪರಿಣಾಮಕಾರಿಯಾಗಿ ವರ್ತಿಸುವ ಗುಣವನ್ನು ಇದು ಹೊಂದಿದೆ.

ನೀವೇನು ಮಾಡಬೇಕು?

ಬಾಯಿಯಲ್ಲಿ ಹಾಕಿಕೊಳ್ಳುವುದಕ್ಕೆ ಸಾಧ್ಯವಾಗುವಷ್ಟು ಎಣ್ಣೆಯನ್ನು ಹಾಕಿ 10-15 ನಿಮಿಷ ಬಾಯಿ ಮುಕ್ಕಳಿಸುತ್ತಿರಬೇಕು. ನಂತರ ಎಣ್ಣೆಯನ್ನು ಉಗಿಯಿರಿ ಮತ್ತು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಬಾಯಿಯನ್ನು ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ.

English summary

Home Remedies To Get Rid From Yellow Teeth

Without knowing we will do some brushing mistakes, that is cause for yellow teeth. Here are home remedies to whiten yellow teeth.
X
Desktop Bottom Promotion