For Quick Alerts
ALLOW NOTIFICATIONS  
For Daily Alerts

ಯೋನಿ ಸ್ವಚ್ಛತೆಗೆ ಈ ಮನೆಮದ್ದುಗಳೇ ಬೆಸ್ಟ್

|

ಉತ್ತಮ ಆರೋಗ್ಯಕ್ಕೆ ನೈರ್ಮಲ್ಯ ಅತ್ಯಮೂಲ್ಯ. ಅದರಲ್ಲೂ ದೇಹದ ಕೆಲವು ಖಾಸಗೀ ಪ್ರದೇಶಗಳ ಸ್ವಚ್ಛತೆ ನಿಮ್ಮ ಇಡೀ ದೇಹದ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರುತ್ತದೆ.

Check Out These Home Remedies For Vaginal Hygiene

ಅಂಥಾ ಕೆಲವು ಖಾಸಗೀ ಅಂಗಾಂಗಗಳಲ್ಲಿ ಯೋನಿ ಬಹಳವೇ ಪ್ರಮುಖವಾದದ್ದು ಎಂದರೆ ತಪ್ಪಾಗಲಾರದು. ಮಹಿಳೆಯರ ಆರೋಗ್ಯವು ಯೋನಿ ನೈರ್ಮಲ್ಯವನ್ನು ಒಳಗೊಂಡಿದೆ, ಆದ್ದರಿಂದ ನಿಮ್ಮ ಜನನಾಂಗ ಪ್ರದೇಶವನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ.

ಯೋನಿಯನ್ನು ನೀವು ಸ್ವಚ್ಛವಾಗಿ ಮತ್ತು ಆರೋಗ್ಯವಾಗಿರಿಸಿಕೊಳ್ಳದಿದ್ದರೆ ಬೆವರು ಮತ್ತು ಬ್ಯಾಕ್ಟೀರಿಯಾಗಳು ಯೋನಿಯ ಭಾಗದಲ್ಲಿ ಹೆಚ್ಚಾಗಿ ತುರಿಕೆ, ಕಿರಿಕಿರಿ ಮತ್ತು ಹುಣ್ಣುಗಳಿಗೆ ಕಾರಣವಾಗಬಹುದು. ಇವೆಲ್ಲವೂ ಹೆಚ್ಚಾಗಿ ಲೈಂಗಿಕವಾಗಿ ಹರಡುವ ರೋಗಗಳು, ಯೀಸ್ಟ್ ಸೋಂಕು, ಶುಷ್ಕತೆ, ಬ್ಯಾಕ್ಟೀರಿಯಾದ ಸೋಂಕು, ಟ್ಯಾಂಪೂನ್ ಅಥವಾ ಸ್ಯಾನಿಟರಿ ಪ್ಯಾಡ್‌ಗಳನ್ನು ದೀರ್ಘಕಾಲದವರೆಗೆ ಬದಲಾಯಿಸದ ಕಾರಣ ಈ ಸಮಸ್ಯೆ ಎದುರಾಗಬಹುದು.

ಯೋನಿಯ ಸ್ವಚ್ಛತೆಗೆ ಅನೇಕ ಮಹಿಳೆಯರು ಮಾರುಕಟ್ಟೆಗಳಲ್ಲಿ ಲಭ್ಯವಿರುವ ಯೋನಿ ತೊಳೆಯುವಿಕೆಯನ್ನು ಬಳಸಲು ಬಯಸುತ್ತಾರೆ, ಆದರೆ ಇದೆಲ್ಲಾ ಅಂತಿಮವಾಗಿ ರಾಸಾಯನಿಕಗಳಿಂದ ಮಾಡಿರುವುದರಿಂದ ಎಷ್ಟು ಸರಿ ಎಂಬುದು ಪ್ರಶ್ನಾರ್ಹ?.

ಅದಕ್ಕಾಗಿಯೇ ನಾವಿಂದು ಈ ಲೇಖನದಲ್ಲಿ ಮನೆಯಲ್ಲಿ ಇರುವ ಅತ್ಯುತ್ತಮ ನೈಸರ್ಗಿಕ ಮನೆಮದ್ದುಗಳಿಂದ ಯೋನಿಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಸಲಿದ್ದೇವೆ:

1. ತೆಂಗಿನ ಎಣ್ಣೆ

1. ತೆಂಗಿನ ಎಣ್ಣೆ

ನಿಮ್ಮ ದೇಹದ ಪ್ರತಿಯೊಂದು ಭಾಗದಲ್ಲೂ ತೆಂಗಿನ ಎಣ್ಣೆಯನ್ನು ಹಚ್ಚುವುದು ನಿಮಗೆ ಪ್ರಯೋಜನಕಾರಿ. ಇದು ನಿಮ್ಮ ಚರ್ಮವನ್ನು ತೇವವಾಗಿರಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸುವ ಅಂಶಗಳನ್ನು ಸಹ ಹೊಂದಿದೆ. ಇದಲ್ಲದೆ, ಯೋನಿ ನೈರ್ಮಲ್ಯವನ್ನು ಕಾಪಾಡಲು ಸಹ ತೆಂಗಿನ ಎಣ್ಣೆ ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುವ ಮತ್ತು ಯೀಸ್ಟ್ ಸೋಂಕನ್ನು ತಡೆಯುವ ಅಂಶಗಳನ್ನು ಹೊಂದಿದೆ.

2. ಅಡಿಗೆ ಸೋಡಾ

2. ಅಡಿಗೆ ಸೋಡಾ

ಸ್ನಾನ ಮಾಡುವ ನೀರಿಗೆ ಅಡಿಗೆ ಸೋಡಾ ಹಾಕಿ ಶುದ್ಧಗೊಳ್ಳುವುದರಿಂದ ಯೋನಿ ನೈರ್ಮಲ್ಯವನ್ನು ಕಾಪಾಡಬಹುದು. ಅಧ್ಯಯನದ ಪ್ರಕಾರ, ಅಡಿಗೆ ಸೋಡಾದಲ್ಲಿ ಚರ್ಮ ರಕ್ಷಿಸುವ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಬ್ಯಾಕ್ಟೀರಿಯಾವನ್ನು ನಿಮ್ಮ ಯೋನಿ ಪ್ರದೇಶದಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅಡಿಗೆ ಸೋಡಾ ಮಿಶ್ರಣಗೊಂಡ ನೀರಿನಿಂದ ಸ್ನಾನ ಮಾಡುವುದರಿಂದ ಯೀಸ್ಟ್ ಸೋಂಕು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಸಹಾಯವಾಗುತ್ತದೆ.

3. ಒಣ ಮತ್ತು ಹತ್ತಿ ಒಳ ಉಡುಪು

3. ಒಣ ಮತ್ತು ಹತ್ತಿ ಒಳ ಉಡುಪು

ನಿಮಗೆ ಅಲರ್ಜಿ ಬಂದಾಗಲೆಲ್ಲಾ ನಿಮ್ಮ ಚರ್ಮದೊಂದಿಗೆ ನೇರ ಸಂಪರ್ಕದಲ್ಲಿ ಬಟ್ಟೆಗಳೇ ಪ್ರಮುಖ ಕಾರಣ ಆಗಿರಬಹುದು ಎಚ್ಚರ. ಅದರಲ್ಲೂ ಒದ್ದೆ ಒಳ ಉಡುಪುಗಳು, ಕಾಟನ್‌ ಅಲ್ಲದ ಬಟ್ಟೆಗಳನ್ನುಧರಿಸುವುದರಿಂದ ಇಂಥಾ ಸಮಸ್ಯೆ ಹೆಚ್ಚಾಗುತ್ತದೆ ಎಂಬುದು ನಿಮಗೆ ಗೊತ್ತೆ?. ನಿಮ್ಮ ಯೋನಿಯು ಸೋಂಕು ಮತ್ತು ದದ್ದುಗಳಿಂದ ಸುರಕ್ಷಿತವಾಗಿರಲು, ನೀವು ಯಾವಾಗಲೂ ಸ್ವಚ್ಛವಾದ ಚೆನ್ನಾಗಿ ಒಣಗಿದ ಮತ್ತು ಹತ್ತಿಯ ಒಳ ಉಡುಪುಗಳನ್ನು ಧರಿಸಬೇಕು. ಹತ್ತಿ ಬಟ್ಟೆ ನಿಮಗೆ ಹಿತಕರವಾಗಿರುತ್ತದೆ ಮತ್ತು ತುರಿಕೆ ಕಡಿಮೆಯಾಗುತ್ತದೆ.

4. ಪ್ರೋಬಯಾಟಿಕ್ ಆಹಾರ ಪದಾರ್ಥಗಳನ್ನು ಸೇವಿಸಿ

4. ಪ್ರೋಬಯಾಟಿಕ್ ಆಹಾರ ಪದಾರ್ಥಗಳನ್ನು ಸೇವಿಸಿ

ಪ್ರೋಬಯಾಟಿಕ್ ಆಹಾರಗಳಲ್ಲಿ ಮೊಸರು, ಉಪ್ಪಿನಕಾಯಿ ಮುಂತಾದ ವಸ್ತುಗಳು ಸೇರಿವೆ. ಅವು ನಿಮ್ಮ ಯೋನಿಯ ಭಾಗದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ವಾಸ್ತವವಾಗಿ, ಈ ಆಹಾರ ಪದಾರ್ಥಗಳು ನಿಮ್ಮ ಕರುಳನ್ನು ಸಹ ಬಲಪಡಿಸುತ್ತದೆ. ನೀವು ಯೀಸ್ಟ್ ಸೋಂಕನ್ನು ಹೊಂದಿದ್ದರೆ, ನಿಮ್ಮ ದೇಹವು ಅದರ ವಿರುದ್ಧ ಹೋರಾಡಲು ಸಹಾಯ ಮಾಡುವ ಅತ್ಯುತ್ತಮ ವಿಧಾನವೆಂದರೆ ಪ್ರೋಬಯಾಟಿಕ್ ಆಹಾರವನ್ನು ಸೇವಿಸುವುದು.

ನೀವು ಈ ಮನೆಮದ್ದುಗಳನ್ನು ಬಳಸಿಯೂ ಯೋನಿಯ ಸಮಸ್ಯೆ ಹೊಂದಿದ್ದರೆ ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡಬೇಕು. ದೀರ್ಘಕಾಲದ ಮತ್ತು ತೀವ್ರವಾದ ಸೋಂಕುಗಳನ್ನು ಗುಣಪಡಿಸಲು ಔಷಧಿಗಳನ್ನು ಸೂಚಿಸಲಾಗುತ್ತದೆ.

English summary

Home Remedies For Vaginal Hygiene in Kannada

Here we are discussing about Check Out These Home Remedies For Vaginal Hygiene. Below listed are 4 natural remedies that you can try at home for itching vagina or vaginal hygiene: Read more.
X
Desktop Bottom Promotion